ಬ್ಯೂಟಿ ಟಿಪ್ಸ್: ಬಾಳೆಹಣ್ಣಿನ ಸಿಪ್ಪೆಯಿಂದ ಮೊಡವೆ ನಿವಾರಣೆ

Posted By: Lekhaka
Subscribe to Boldsky

ಯುವ ಜನತೆಯನ್ನು ಹೆಚ್ಚಾಗಿ ಕಾಡುವಂತಹ ಸಮಸ್ಯೆಯೆಂದರೆ ಅದು ತ್ವಚೆಯಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು. ಇದು ಇಂದಿನ ದಿನಗಳಲ್ಲಿ ಹೆಚ್ಚಾಗಿಯೇ ಇದೆ. ಯಾಕೆಂದರೆ ತಿನ್ನುವ ಆಹಾರ, ಜೀವನಶೈಲಿ ಇತ್ಯಾದಿಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಯಾವುದೇ ಕ್ರೀಮ್ ಅಥವಾ ಲೋಷನ್ ಗಳು ನಿಮ್ಮ ಮೊಡವೆಗಳನ್ನು ನಿವಾರಣೆ ಮಾಡದೇ ಇರುವಂತಹ ಸಮಯದಲ್ಲಿ ಮನೆಮದ್ದುಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ಹಿಂದಿನಿಂದಲೂ ನಮ್ಮ ಹಿರಿಯರು ಮನೆಮದ್ದುಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡುತ್ತಿದ್ದರು. ಆದರೆ ಈಗ ಸಮಯದ ಅಭಾವದಿಂದ ಇದೆಲ್ಲವೂ ಮೂಲೆಗುಂಪಾಗುತ್ತಾ ಇದೆ. ಮೊಡವೆಗಳನ್ನು ನಿವಾರಿಸುವಂತಹ, ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ ಇರುವ ಮನೆಮದ್ದು ಎಂದರೆ ಅದು ಬಾಳೆಹಣ್ಣಿನ ಸಿಪ್ಪೆ. ಬಾಳೆಹಣ್ನಿನ ಸಿಪ್ಪೆಯಿಂದ ಮುಖದ ಮೇಲೆ ಮೂಡುವಂತಹ ಮೊಡವೆಗಳ ನಿವಾರಣೆ ಸುಲಭವಾಗಿ ಮಾಡಬಹುದು.

ಬಾಳೆಹಣ್ಣಿನ ಸಿಪ್ಪೆ ಯಾಕೆ?

ಬಾಳೆಹಣ್ಣು ಮತ್ತು ಅದರ ಸಿಪ್ಪೆ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ಆರೋಗ್ಯಕರ ಚರ್ಮಕ್ಕೆ ತುಂಬಾ ಪ್ರಮುಖವಾದದ್ದು. ಇದರಲ್ಲಿ ಇರುವಂತಹ ವಿಟಮಿನ್ ಬಿ6 ಕೂಡ ಆರೋಗ್ಯಕರ ಹಾಗೂ ಕಾಂತಿಯುತ ಚರ್ಮ ನೀಡುವುದು. ಬಾಳೆಹಣ್ಣಿನ ಸಿಪ್ಪೆಯಲ್ಲೂ ವಿಟಮಿನ್ ಬಿ6 ಇದೆ. ಲುಟೇನ್ ಎಂದು ಕರೆಯಲ್ಪಡುವಂತಹ ಆ್ಯಂಟಿಆಕ್ಸಿಡೆಂಟ್ ಕೂಡ ಇದರಲ್ಲಿದೆ. ಇದು ಬಿಸಿಲಿನಿಂದ ಆಗುವಂತಹ ಹಾನಿಯಿಂದ ತಪ್ಪಿಸುವುದು. ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಬಾಳೆಹಣ್ಣಿನ ಸಿಪ್ಪೆಯು ಮೊಡವೆಗೆ ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ಮೊಡವೆ ನಿವಾರಣೆ ಮಾಡಲು ಬಾಳೆಹಣ್ಣಿನ ಸಿಪ್ಪೆಯನ್ನು ಯಾವ ರೀತಿ ಬಳಸಬಹುದು ಎಂದು ತಿಳಿಯುವ.

1. ಮುಖದ ಮೇಲೆ ಉಜ್ಜಿ

1. ಮುಖದ ಮೇಲೆ ಉಜ್ಜಿ

ತುಂಬಾ ಸುಲಭವಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಉಪಯೋಗಿಸುವ ವಿಧಾನವೆಂದರೆ ಇದರ ಒಳಗಿನ ಭಾಗವನ್ನು ಮುಖದ ಮೇಲೆ ಉಜ್ಜಿಕೊಳ್ಳುವುದು.

ಬೇಕಾಗುವ ಸಾಮಗ್ರಿಗಳು

*ಲಘು ಸೋಪ್ ನಿಂದ ಮುಖ ತೊಳೆಯಿರಿ.

*ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಬಾಳೆಹಣ್ಣಿನ ಸಿಪ್ಪೆಯ ಒಳಗಿನ ಭಾಗದಿಂದ ಸುಮಾರು ಹತ್ತು ನಿಮಿಷ ಕಾಲ ಮಸಾಜ್ ಮಾಡಿಕೊಳ್ಳಿ.

*ಈ ವೇಳೆ ಸಿಪ್ಪೆ ಕಂದು ಬಣ್ಣಕ್ಕೆ ತಿರುಗಿದರೆ ಆಗ ಬೇರೆ ಸಿಪ್ಪೆ ತೆಗೆದುಕೊಳ್ಳಿ.

*ಅರ್ಧ ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ನೀರಿನಿಂದ ಮುಖ ತೊಳೆಯಿರಿ.

ಎಷ್ಟು ಸಲ

ದಿನದಲ್ಲಿ ಒಂದು ಸಲ ಹೀಗೆ ಮಾಡಿದರೆ ಫಲಿತಾಂಶ ಖಚಿತ.

ಓಟ್ಸ್ ಮತ್ತು ಬಾಳೆಹಣ್ಣಿನ ಸಿಪ್ಪೆ

ಓಟ್ಸ್ ಮತ್ತು ಬಾಳೆಹಣ್ಣಿನ ಸಿಪ್ಪೆ

ಮೊದಲ ದಿನದಿಂದಲೇ ಫಲಿತಾಂಶ

ಬೇಕಾಗುವ ಸಾಮಗ್ರಿಗಳು

1 ಬಾಳೆಹಣ್ಣಿನ ಸಿಪ್ಪೆ

ಅರ್ಧ ಚಮಚ ಓಟ್ ಮೀಲ್

3 ಚಮಚ ಸಕ್ಕರೆ

ವಿಧಾನ

*ಎಲ್ಲವನ್ನು ಜತೆಯಾಗಿ ರುಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ.

*ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ ವೃತ್ತಾಕಾರದಲ್ಲಿ ಹತ್ತು ನಿಮಿಷ ಕಾಲ ಮಸಾಜ್ ಮಾಡಿ.

*ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಮತ್ತು ಮುಖ ಹಾಗೆ ಒಣಗಲಿ.

*ಎಣ್ಣೆಯಿಲ್ಲದ ಮೊಶ್ಚಿರೈಸರ್ ನ್ನು ಮುಖಕ್ಕೆ ಹಚ್ಚಿ.

ಪ್ರತಿನಿತ್ಯ ಬಳಸಿ.

3. ಬಾಳೆಹಣ್ಣಿನ ಸಿಪ್ಪೆ ಮತ್ತು ಅಡುಗೆ ಸೋಡಾ

3. ಬಾಳೆಹಣ್ಣಿನ ಸಿಪ್ಪೆ ಮತ್ತು ಅಡುಗೆ ಸೋಡಾ

ಬೇಕಾಗುವ ಸಾಮಗ್ರಿಗಳು

0.5 ಚಮಚ ಅಡುಗೆ ಸೋಡಾ

1 ಚಮಚ ಹಿಚುಕಿದ ಬಾಳೆಹಣ್ಣಿನ ಸಿಪ್ಪೆ

ವಿಧಾನ

ಎಲ್ಲವನ್ನು ಜತೆಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ.

* ಬಾಧಿತ ಚರ್ಮದ ಮೇಲೆ ಈ ಮಿಶ್ರಣವನ್ನು ಹಚ್ಚಿ ಮತ್ತು 3-5 ನಿಮಿಷ ಕಾಲ ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ ಮತ್ತು ಮುಖ ಒಣಗಲಿ.

*ಇದರ ಬಳಿಕ ಎಣ್ಣೆಯಿಲ್ಲದ ಮೊಶ್ಚಿರೈಸರ್ ಹಚ್ಚಿ.

ದಿನದಲ್ಲಿ ಒಂದು ಸಲ ಇದನ್ನು ಬಳಸಿ.

4. ಅರಶಿನ ಮತ್ತು ಬಾಳೆಹಣ್ಣಿನ ಸಿಪ್ಪೆ

4. ಅರಶಿನ ಮತ್ತು ಬಾಳೆಹಣ್ಣಿನ ಸಿಪ್ಪೆ

ಅರಶಿನವು ಸೌಂದರ್ಯವರ್ಧಕದಲ್ಲಿ ವಿಶ್ವದೆಲ್ಲೆಡೆಯಲ್ಲಿ ಬಳಸುವಂತಹ ಸಾಮಗ್ರಿಯಾಗಿದೆ. ಇದರಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಎಲ್ಲರಿಗೂ ತಿಳಿದಿದೆ. ಬಾಳೆಹಣ್ನಿನ ಸಿಪ್ಪೆಯ ಜತೆಗೆ ಇದನ್ನು ಬಳಸಿದಾಗ ಮೊಡವೆಗಳನ್ನು ಇದು ತೆಗೆದುಹಾಕುವುದು ಮತ್ತು ಮೊಡವೆಗಳ ಕಲೆಗಳನ್ನು ನಿವಾರಿಸುವುದು.

ಬೇಕಾಗುವ ಸಾಮಗ್ರಿಗಳು

1 ಚಮಚದಷ್ಟು ಬಾಳೆಹಣ್ಣಿನ ಸಿಪ್ಪೆ

1 ಚಮಚ ಅರಶಿನ

ವಿಧಾನ

*ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿಕೊಂಡು ನಯವಾದ ಪೇಸ್ಟ್ ಮಾಡಿಕೊಳ್ಳಿ.

*ಇದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ ಮತ್ತು 10-15 ನಿಮಿಷ ಕಾಲ ಮುಖದ ಮೇಲೆ ನಯವಾಗಿ ಮಸಾಜ್ ಮಾಡಿ.

*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಒಣಗಲು ಬಿಡಿ.

*ಇದರ ಬಳಿಕ ಎಣ್ಣೆಯಂಶವಿಲ್ಲದೆ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಪ್ರತಿನಿತ್ಯ ಇದನ್ನು ಬಳಸಿ.

5. ಬಾಳೆಹಣ್ಣಿನ ಸಿಪ್ಪೆ ಮತ್ತು ಲಿಂಬೆರಸ

5. ಬಾಳೆಹಣ್ಣಿನ ಸಿಪ್ಪೆ ಮತ್ತು ಲಿಂಬೆರಸ

ನಿಂಬೆರಸದ ಬಹುಗುಣಗಳ ಬಗ್ಗೆ ನಿಮಗೆ ತಿಳಿದಿದೆಯಾ? ಇದು ದೇಹದ ಹೊರಗಡೆ ಆಮ್ಲಕಾರಕವಾಗಿ ಕೆಲಸ ಮಾಡಿದರೆ ದೇಹದ ಒಳಗಡೆ ಕ್ಷಾರಕಾರಕವಾಗಿ ಕೆಲಸ ಮಾಡುವುದು. ನಿಂಬೆರಸವನ್ನು ಬ್ಲೀಚಿಂಗ್ ಗೆ ಬಳಸಲಾಗುವುದು. ಇದು ಚರ್ಮಕ್ಕೆ ಬಣ್ಣ ನೀಡಿ ಕಲೆ ನಿವಾರಿಸುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಬಾಳೆಹಣ್ಣಿನ ಸಿಪ್ಪೆ ಹಿಚುಕಿರುವುದು

1 ಚಮಚ ಲಿಂಬೆ ರಸ

ಹತ್ತಿ ಉಂಡೆ

ವಿಧಾನ

*ಒಂದು ಪಿಂಗಾಣಿಗೆ ಹಿಚುಕಿದ ಬಾಳೆಹಣ್ಣಿನ ಸಿಪ್ಪೆ ಮತ್ತು ಲಿಂಬೆ ರಸ ಹಾಕಿ.

* ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ.

*ಮುಖ ತೊಳೆಯಿರಿ ಮತ್ತು ಒಣಗಲು ಬಿಡಿ.

ಪ್ರತಿನಿತ್ಯ ಇದನ್ನು ಬಳಸಿ.

6. ಬಾಳೆಹಣ್ಣಿನ ಸಿಪ್ಪೆ ಮತ್ತು ಜೇನುತುಪ್ಪ

6. ಬಾಳೆಹಣ್ಣಿನ ಸಿಪ್ಪೆ ಮತ್ತು ಜೇನುತುಪ್ಪ

ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಇದನ್ನು ಶತಮಾನಗಳಿಂದಲೂ ಬಳಸಲಾಗುತ್ತಾ ಇದೆ. ನೈಸರ್ಗಿಕ ಮೊಶ್ಚಿರೈಸರ್ ಮತ್ತು ಹಗುರ ಬ್ಲೀಚಿಂಗ್ ಗುಣ ಹೊಂದಿರುವ ಜೇನುತುಪ್ಪವು ಕಡುಗಪ್ಪು ಕಲೆ ಮತ್ತು ಮೊಡವೆಗಳ ಕಲೆಗಳ ನಿವಾರಣೆ ಮಾಡುವುದು.

ಬೇಕಾಗುವ ಸಾಮಗ್ರಿಗಳು

1 ಚಮಚ ಬಾಳೆಹಣ್ಣಿನ ಸಿಪ್ಪೆ ಹಿಚುಕಿರುವುದು.

ಅರ್ಧ ಚಮಚ ಜೇನುತುಪ್ಪ

ವಿಧಾನ

ಎಲ್ಲಾ ಸಾಮಗ್ರಿಗಳನ್ನು ಜತೆಯಾಗಿ ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿ.

*ಇದನ್ನು ಬಾಧಿತ ಜಾಗಕ್ಕೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಎಣ್ಣೆಯಂಶವಿಲ್ಲದೆ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಪ್ರತಿನಿತ್ಯ ಇದನ್ನು ಬಳಸಿ.

7. ಬಾಳೆಹಣ್ಣಿನ ಸಿಪ್ಪೆ ಮತ್ತು ಆ್ಯಪಲ್ ಸೀಡರ್ ವಿನೇಗರ್

7. ಬಾಳೆಹಣ್ಣಿನ ಸಿಪ್ಪೆ ಮತ್ತು ಆ್ಯಪಲ್ ಸೀಡರ್ ವಿನೇಗರ್

ಹಗುರ ಸಂಕೋಚನ ಗುಣ ಹೊಂದಿರುವಂತಹ ಆ್ಯಪಲ್ ಸೀಡರ್ ವಿನೇಗರ್ ಮೇದೋಗ್ರಂಥಿಗಳ ಸ್ರಾವವನ್ನು ನಿಯಂತ್ರಣದಲ್ಲಿ ಇಡುವುದು. ಮೇದೋಗ್ರಂಥಿಗಳ ಸ್ರಾವವು ದೇಹದಲ್ಲಿ ಎಣ್ಣೆಯನ್ನು ಉತ್ಪತ್ತಿ ಮಾಡುವುದು. ಆದರೆ ಇದು ಅತಿಯಾದಾಗ ಅದು ಚರ್ಮ ಮತ್ತು ಕೂದಲಿನ ಮೇಲೆ ಪರಿಣಾಮ ಬೀರುವುದು. ಮೇದೋಗ್ರಂಥಿಗಳ ಸ್ರಾವದಿಂದ ಎಣ್ಣೆಯುಕ್ತ ಚರ್ಮ ಅಥವಾ ಕೂದಲಿನ ಸಮಸ್ಯೆಯಾಗುವುದು. ಬಾಳೆಹಣ್ಣಿನ ಸಿಪ್ಪೆಯ ಜತೆಗೆ ವಿನೇಗರ್ ನ್ನು ಮಿಶ್ರಣ ಮಾಡಿದಾಗ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳುವ.

ಬೇಕಾಗುವ ಸಾಮಗ್ರಿಗಳು

1 ಚಮಚ ಬಾಳೆಹಣ್ಣಿನ ಸಿಪ್ಪೆ ಹಿಚುಕಿರುವುದು.

2 ಚಮಚ ಆ್ಯಪಲ್ ಸೀಡರ್ ವಿನೇಗರ್

ವಿಧಾನ

*ಸರಿಯಾಗಿ ಎರಡು ಮಿಶ್ರಣವಾಗುವ ತನಕ ಕಲಸಿಕೊಳ್ಳಿ.

*ಇದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಹಾಗೆ ಬಿಡಿ.

*ಇದನ್ನು ತೊಳೆಯಿರಿ ಮತ್ತು ಎಣ್ಣೆಯಂಶವಿಲ್ಲದೆ ಮೊಶ್ಚಿರೈಸರ್ ನ್ನು ಹಚ್ಚಿಕೊಳ್ಳಿ.

ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಇದನ್ನು ಬಳಸಿ.

ಗಮನಿಸಬೇಕಾದ ಕೆಲವು ಅಂಶಗಳು

*ಮೊಡವೆ ನಿವಾರಣೆಗೆ ಬಾಳೆಹಣ್ಣಿನ ಸಿಪ್ಪೆ ಬಳಸಬೇಕೆಂದು ನೀವು ನಿರ್ಧರಿಸಿದ್ದರೆ ಆಗ ಹಣ್ಣಾದ ಬಾಳೆಹಣ್ಣನ್ನು ತೆಗೆದುಕೊಳ್ಳಿ. ಸಿಪ್ಪೆಯು ಹಳದಿಯಾಗಿರಲಿ ಮತ್ತು ಕೆಲವು ಕಪ್ಪು ಕಲೆಗಳು ಇರಲಿ.

ಹಸಿ ಅಥವಾ ಹಸಿರು ಬಾಳೆಹಣ್ಣು ಮೊಡವೆ ನಿವಾರಣೆಗೆ ಯಾವುದೇ ರೀತಿಯ ಪರಿಣಾಮ ಬೀರದು.

*ಸಂಪೂರ್ಣವಾಗಿ ನಿವಾರಣೆಯಾಗಲು ಮೇಲೆ ಹೇಳಿರುವ ವಿಧಾನಗಳನ್ನು ದಿನದಲ್ಲಿ ಒಂದು ಸಲ ಬಳಸಿ. ಮನೆಮದ್ದುಗಳು ಫಲಿತಾಂಶವನ್ನು ತುಂಬಾ ನಿಧಾನವಾಗಿ ನೀಡುವುದು.

*ಬಾಳೆಹಣ್ಣಿನ ಸಿಪ್ಪೆಯಿಂದ ಸ್ಕ್ರಬ್ ಮಾಡುವುದಿದ್ದರೆ ವೃತ್ತಾಕಾರದಲ್ಲಿ ಮಾಡಿ. ಸಿಪ್ಪೆ ಬಣ್ಣ ಕಳೆದುಕೊಂಡರೆ ಬೇರೆ ಬಳಸಿ.

English summary

Banana Peel – Miracle Cure For Acne

Both the fruit and peel of the banana are rich in vitamin C, which is vital for healthy skin. Another vital nutrient for healthy, glowing skin is vitamin B6, which banana peel is rich in too. It also contains an antioxidant called lutein, which prevents damage to the skin from the harsh sunlight. All these factors make banana peels one of the most potent home remedies for acne. Here are some ways in which a banana peel can be used to cure acne.