ಪವರ್ ಫುಲ್ ಔಷಧ: ಒಂದೇ ದಿನದಲ್ಲಿ ಮೊಡವೆ ಮಂಗಮಾಯ!

Posted By: Deepu
Subscribe to Boldsky

ಹದಿಹರೆಯದಲ್ಲಿ ಸಾಮಾನ್ಯವಾಗಿರುವ ಮೊಡವೆಗಳು ಮುಜುಗರಕ್ಕೆ ಕಾರಣವಾಗುತ್ತವೆ. ಕೆಲವರಿಗಂತೂ ನಡುವಯಸ್ಸು ದಾಟುವವರೆಗೂ ಮೊಡವೆಗಳ ಕಾಟ ಇದ್ದೇ ಇರುತ್ತದೆ. ಇವುಗಳನ್ನು ನಿಗ್ರಹಿಸಲು ಹಲವಾರು ಮದ್ದುಗಳಿವೆಯಾದರೂ ಸತತವಾಗಿ ಮತ್ತೆ ಮತ್ತೆ ಮೂಡುವ ಮೊಡವೆಗಳು ಇನ್ನಷ್ಟು ಚಿಂತೆಯನ್ನು ಹಚ್ಚಿಸುತ್ತವೆ. ಅದರಲ್ಲೂ ಯಾವುದಾದರೂ ಕಾರ್ಯಕ್ರಮಕ್ಕೆ ಹೊರಟಿರುವಾಗ ಬೆಳಿಗ್ಗೆ ಇರದಿದ್ದ ಮೊಡವೆ ಮಧ್ಯಾಹ್ನದ ಹೊತ್ತಿನಲ್ಲಿ ಧುತ್ತನೇ ಎದ್ದುಬಿಟ್ಟಿರುವುದಂತೂ ಅತೀವ ದುಃಖ ತರಿಸುತ್ತದೆ.

ಅಷ್ಟೇ ಏಕೆ ಇಡಿಯ ದಿನ ನೋವನ್ನೂ, ಉರಿಯನ್ನೂ ನೀಡುತ್ತಾ ನೆಮ್ಮದಿಯನ್ನು ಕೆಡಿಸುತ್ತವೆ. ಈಗಲೇ ಚಿವುಟಿ ತೆಗೆಯುವ ಎಂದು ಮನ ಹೇಳಿದರೆ ಬೇಡ, ಬಳಿಕ ಕಲೆ ಉಳಿಯುತ್ತದೆ ಎಂದು ವಿವೇಕ ಹೇಳುತ್ತದೆ. ಇವೆರಡರ ನಡುವಣ ಕಲಹದಲ್ಲಿ ಮನ ಮುದುಡುತ್ತದೆ. ಮೊಡವೆಗಳ ನಿವಾರಣೆಗೆ ಮಾರುಕಟ್ಟೆಯಲ್ಲಿ ನೂರಾರು ಔಷಧಿ, ಕ್ರೀಮ್‌ಗಳು ಲಭ್ಯವಿವೆ. ಆದರೆ ಮೊಡವೆಗಳಿಗೆ ಖಡಾಖಂಡಿತವಾದ ಔಷಧಿ ಇದುವರೆಗೆ ಲಭ್ಯವಿಲ್ಲ.

ಮೊಡವೆ ಸಮಸ್ಯೆಗೆ ಯಾಕೆ ಚಿಂತೆ? ಮನೆಯಲ್ಲಿಯೇ ಇದೆ ಪರಿಹಾರ!

ಅಲ್ಲದೇ ಈ ಔಷಧಿಗಳಲ್ಲಿರುವ ಪ್ರಬಲ ರಾಸಾಯನಿಕಗಳು ಕೆಲವರಿಗೆ ಅಲರ್ಜಿಕಾರಕವಾಗಿದ್ದು ಚರ್ಮದ ಮೇಲೆ ಶಾಶ್ವತವಾದ ಹಾನಿಯನ್ನೂ ಮಾಡಬಹುದು. ಇಂತಹ ಸಮಯದಲ್ಲಿ ಕೆಲವು ಮನೆಮದ್ದುಗಳು ನಿಮ್ಮ ನೆರವಿಗೆ ಬರಲಿವೆ. ಇವು ಮೊಡವೆಯನ್ನು ಬೇಗನೇ ಹಣ್ಣಾಗುವಂತೆ ಮಾಡಿ ಒಳಗಿನ ಕೀವು ಸುಲಭವಾಗಿ ಹೊರಬರುವಂತೆ ಮಾಡುತ್ತದೆ ಹಾಗೂ ಬಳಿಕ ಹುಟ್ಟುವ ಹೊಸ ಚರ್ಮದಲ್ಲಿ ಕಲೆಯಿಲ್ಲದಂತೆಯೂ ನೋಡಿಕೊಳ್ಳುತ್ತದೆ. ಕೆಳಗಿನ ಮನೆಮದ್ದುಗಳನ್ನು ಕೇವಲ ಹದಿನೈದೇ ನಿಮಿಷದಲ್ಲಿ ಮಾಡಿ ಮುಗಿಸುವಂತಹದ್ದಾಗಿದ್ದು ನಿಮಗೆ ಅತಿ ಸೂಕ್ತ ಎನ್ನಿಸಿದ್ದನ್ನು ಆರಿಸಿಕೊಳ್ಳಿ...

ಟೊಮೇಟೊ

ಟೊಮೇಟೊ

ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡ ಚಮಚ ಟೊಮೇಟೊ ಜ್ಯೂಸ್ (ಸಿಪ್ಪೆ ಮತ್ತು ಬೀಜ ತೆಗೆದ ತಿರುಳನ್ನು ಮಿಕ್ಸಿಯಲ್ಲಿ ಕಡೆಯುವ ಮೂಲಕ ಪಡೆದ ರಸ), ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ಚಿಕ್ಕಚಮಚ ಅಡುಗೆಸೋಡಾ ಬೆರೆಸಿ ಮಿಶ್ರಣ ಮಾಡಿ. ಇನ್ನು ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ಈ ಮಿಶ್ರಣವನ್ನು ತಣ್ಣಗಿನ ಹಾಲು ಉಪಯೋಗಿಸಿ ತೂಳೆದುಕೊಳ್ಳಿ. ದಿನಕ್ಕೆರಡು ಬಾರಿಯಂತೆ ಒಂದು ವಾರ ಈ ವಿಧಾನವನ್ನು ಅನುಸರಿಸಿದರೆ ಮೊಡವೆಗಳು ಪೂರ್ಣವಾಗಿ ಮಾಯವಾಗುತ್ತವೆ.

ಅರಿಶಿನ

ಅರಿಶಿನ

ಅರಿಶಿನದ ನಂಜುನಿರೋಧಕ ಗುಣ ಮೊಡವೆಗಳನ್ನು ನಿವಾರಿಸುವ ಸಹಿತ ಚರ್ಮಕ್ಕೆ ಹಲವು ವಿಧದಲ್ಲಿ ಅನುಕೂಲಕರವಾಗಿದೆ. ಇದಕ್ಕಾಗಿ

*ಒಂದು ಚಮಚ ಹಾಲು ಮತ್ತು ಒಂದು ಚಮಚ ಗುಲಾಬಿ ನೀರನ್ನು ಬೆರೆಸಿ ಕೊಂಚ ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ.

*ಈ ಲೇಪನ ತಕ್ಕಮಟ್ಟಿಗೆ ಗಾಢವಾಗುವಷ್ಟು ಅರಿಶಿನ ಪುಡಿ ಸೇರಿಸಿ.

*ಈ ಮಿಶ್ರಣವನ್ನು ಮೊಡವೆಯ ಮೇಲೆ ನೇರವಾಗಿ ಹಚ್ಚಿಕೊಳ್ಳಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.ಸಾಸಿವೆ ಮತ್ತು ಜೇನುತುಪ್ಪ

ಸಾಸಿವೆ ಮತ್ತು ಜೇನುತುಪ್ಪ

ಸಾಸಿವೆ ಮತ್ತು ಜೇನುತುಪ್ಪ

ಮೊಡವೆಗಳನ್ನು ಹೋಗಲಾಡಿಸಲು ಸಾಸಿವೆ ಒಂದು ಅತ್ಯುತ್ತಮ ಮನೆ ಮದ್ದು. ಇದರಲ್ಲಿರುವ ಸ್ಯಾಲಿಸಿಲಿಕ್ ಅಮ್ಲ ಎಂಬ ನೈಸರ್ಗಿಕ ಅಂಶ ಮೊಡವೆಗಳನ್ನು ಮತ್ತು ಇತರ ಸೋಂಕನ್ನು ಹೋಗಲಾಡಿಸಲು ಒಂದು ಉತ್ತಮ ಮನೆ ಮದ್ದಾಗಿದೆ. ಕಾಲು ಟೀ ಸ್ಪೂನ್ ಸಾಸಿವೆ ಪುಡಿಯನ್ನು ಒಂದು ಟೀಸ್ಪೂನ್ ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳವರಗೆ ಹಾಗೆ ಬಿಟ್ಟು ನಂತರ ಮುಖ ತೊಳೆಯಬೇಕು.

ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್-

ಕಡಲೆಹಿಟ್ಟು-ತುಳಸಿ ಎಲೆಯ ಪೇಸ್ಟ್-

ಒಂದು ದೊಡ್ಡಚಮಚ ಕಡಲೆಹಿಟ್ಟಿನಲ್ಲಿ ಒಂದು ಹಿಡಿಯಷ್ಟು ತುಳಸಿ ಎಲೆಗಳನ್ನು ಸ್ವಲ್ಪ ನೀರು ಹಾಕಿ ಅರೆಯಿರಿ. ನೀರಿನ ಬದಲು ಗುಲಾಬಿ ನೀರು ಸೇರಿಸಿದರೆ ಈ ಮುಖಲೇಪ ಇನ್ನಷ್ಟು ಉತ್ತಮಗೊಳ್ಳುತ್ತದೆ.ಮುಖಕ್ಕೆ ಹಚ್ಚುವಷ್ಟು ಗಾಢತೆ ಬಂದ ಬಳಿಕ ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಅರ್ಧ ಗಂಟೆ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಲಿಂಬೆ ಹಣ್ಣು

ಲಿಂಬೆ ಹಣ್ಣು

ಈ ಮಿಶ್ರಣವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮೊಡವೆಯ ಮೇಲೆ ನೇರವಾಗಿ, ದಪ್ಪನಾಗಿ ಹಚ್ಚಿ. ಕೊಂಚ ಉರಿಯಾಗುತ್ತದೆ, ಬರೆಯ ಹದಿನೈದು ನಿಮಿಷ ಸಹಿಸಿಕೊಳ್ಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಇನ್ನಾವುದೇ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಬೇಡಿ. ಇದು ಮೊಡವೆಯನ್ನು ಶೀಘ್ರವೇ ಹಣ್ಣಾಗಿಸಿ ಕೀವು ಹೊರಬರುವಂತೆ ನೋಡಿಕೊಳ್ಳುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಕೊಂಚ ಕಮಟುವಾಸನೆಯನ್ನು ಹೊಂದಿರುವುದರಿಂದ ಹೆಚ್ಚಿನವರು ಇದನ್ನು ಇಷ್ಟಪಡುವುದಿಲ್ಲ. ಆದರೆ ಇದು ಚರ್ಮಕ್ಕೆಉತ್ತಮವಾದ ಪೋಷಣೆಯನ್ನು ನೀಡುತ್ತದೆ. ಈ ಎಣ್ಣೆಯನ್ನು ಸಹಾ ಬೆರಳ ತುದಿಗೆ ಕೊಂಚವಾಗಿಯೇ ಹಚ್ಚಿ ನಯವಾಗಿ ಮಸಾಜ್ ಮಾಡಿ, ಒಂದು ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಎಣ್ಣೆ ಸಹಾ ಕೊಂಚ ಉರಿ ತರಿಸಬಹುದು, ಬಿಸಿಯ ಅನುಭವವೂ ಆಗಬಹುದು.

ಬೇವಿನ ಪೇಸ್ಟ್

ಬೇವಿನ ಪೇಸ್ಟ್

ಎಲ್ಲಾ ರೀತಿಯ ಚರ್ಮಗಳಿಗೆ ಹೊಂದಿಕೊಳ್ಳುವ ಪ್ರಮುಖ ಔಷಧಿಯೆಂದರೆ ಬೇವಿನ ಎಲೆಯ ಪೇಸ್ಟ್. ತಾಜಾ ಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ ಮತ್ತು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ಬೇವಿನ ಎಲೆಗಳನ್ನು ನೀರಿನಲ್ಲಿ ಸರಿಯಾಗಿ ಕುದಿಸಿಕೊಂಡು ಈ ನೀರಿನಲ್ಲಿ ಸ್ನಾನ ಮಾಡಬೇಕು.ಇದು ಮೊಡವೆಗಳಿಗೆ ತುಂಬಾ ಸರಳವಾಗಿರುವ ಮನೆಮದ್ದಾಗಿದೆ. ಇದು ಮೊಡವೆಯಿರುವ ಚರ್ಮಕ್ಕೆ ಶಮನ ನೀಡುವುದು ಮತ್ತು ಮೊಡವೆಗಳು ಮೂಡದಂತೆ ತಡೆಯುವುದು.

ತುಳಸಿ ಮತ್ತು ಶ್ರೀಗಂಧದ ಮಾಸ್ಕ್

ತುಳಸಿ ಮತ್ತು ಶ್ರೀಗಂಧದ ಮಾಸ್ಕ್

ಮೊಡವೆಗಳಿಂದ ದೀರ್ಘ ಸಮಯದಿಂದ ನೀವು ಸಮಸ್ಯೆ ಎದುರಿಸುತ್ತಾ ಇದ್ದರೆ ಮೊಡವೆಯ ಈ ಮನೆಮದ್ದು ತುಂಬಾ ಪರಿಣಾಮಕಾರಿಯಾಗಲಿದೆ. ಇದಕ್ಕೆ ಕೇವಲ ಎರಡು ಸಾಮಗ್ರಿ ಮಾತ್ರ ಬೇಕಾಗಿರುವ ಕಾರಣದಿಂದ ತುಂಬಾ ಸರಳ ಹಾಗೂ ಪರಿಣಾಮಕಾರಿ. ತುಳಸಿ ಎಲೆಗಳನ್ನು ಒಣಗಿಸಿಕೊಂಡು ಹುಡಿ ಮಾಡಿ. ತುಳಸಿ ಹುಡಿ ಮತ್ತು ಶ್ರೀಗಂಧದ ಹುಡಿಯನ್ನು ನೀರು ಹಾಕಿ ಮಿಶ್ರಣ ಮಾಡಿ. ಚರ್ಮಕ್ಕೆ ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ರೋಸ್ ವಾಟರ್ ಬಳಸಿ. ದಿನದಲ್ಲಿ ಎರಡು ಸಲ ಇದನ್ನು ಬಳಸಿಕೊಂಡರೆ ಮೊಡವೆ ಇರುವ ಜಾಗವು ಕೆಲವೇ ದಿನಗಳಲ್ಲಿ ಸುಂದರವಾಗಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ.

ಪುದೀನಾ

ಪುದೀನಾ

ಬೇವಿನ ಎಲೆಗಳಂತೆ ಮೊಡವೆಗಳಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವ ಮತ್ತೊಂದು ಸಸ್ಯವೆಂದರೆ ಪುದೀನಾ. ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ. ಇದರ ಪೇಸ್ಟ್ ಮಾಡಿಕೊಂಡು ಮೊಡವೆ ಇರುವ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ಒಣಗಲು ಬಿಡಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಪ್ರತೀ ಸಲ ನೀವು ತಾಜಾ ಪುದೀನಾ ಎಲೆಗಳನ್ನು ಬಳಸಿಕೊಳ್ಳಿ. ಪುದೀನಾದ ದಪ್ಪಗಿನ ಪೇಸ್ಟ್ ಮಾಡಿ ಹಚ್ಚಿಕೊಳ್ಳಬೇಕು.

ಕಾಫಿ ಪುಡಿ

ಕಾಫಿ ಪುಡಿ

ಒಂದು ಪಾತ್ರೆಗೆ ಸ್ವಲ್ಪ ಕಾಫಿ ಹುಡಿಯನ್ನು ಹಾಕಿ. ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ. ಮುಖದಲ್ಲಿ ಮೂಡಿರುವ ಮೊಡವೆ ಕಲೆಗಳ ಮೇಲೆ ಈ ಪೇಸ್ಟ್ ಅನ್ನು ಹಚ್ಚಿಕೊಂಡು, ಸುಮಾರು 15 ನಿಮಿಷ ಇದನ್ನು ಒಣಗಲು ಬಿಡಿ ನಂತರ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ. ಅಡುಗೆ ಮನೆಯ ಸಾಮಾಗ್ರಿ ನಿಮ್ಮ ತ್ವಚೆಯ ಸಮಸ್ಯೆಗೆ ಉತ್ತಮ ಪರಿಹಾರಕವಾಗಿ ಬಂದೊದಗಿದ್ದನ್ನು ನೀವೇ ನೋಡಿ....

English summary

Simple Pimple Treatments to Get Rid of Pimples Easily

Pimple treatment, of course, varies on different skin types. Yet there exist some pimple remedies that work on all skin types universally. Wherever you are located on the planet, these pimple remedies can be tried right at home if you have all the right required ingredients. Without further tension or concern over pimples, here is an array of remedies that you can start experimenting with. These simple pimple remedies work on all skin types and the methods can be started at home.