ಒಂದೆರಡು ವಾರದಲ್ಲಿ ಮುಖವನ್ನು ಬೆಳ್ಳಗಾಗಿಸುವ ಸರಳ ಫೇಸ್ ಪ್ಯಾಕ್

By: manu
Subscribe to Boldsky

ಕಾಸ್ಮೆಟಿಕ್ಸ್ ಪ್ರಪಂಚ ಇಲ್ಲದ ಕಾಲದಲ್ಲಿ ಮನುಷ್ಯರು ತಮ್ಮ ಸೌಂದರ್ಯ ವರ್ಧನೆಗೆ ನೈಸರ್ಗಿಕವಾಗಿ ಸಿಗುವ ಉತ್ಪನ್ನಗಳನ್ನೇ ಬಳಸ್ತಾ ಇದ್ದರು. ಅನಾದಿ ಕಾಲದಿಂದಲೂ ತರಕಾರಿ, ಸೊಪ್ಪು, ಹಣ್ಣು, ಹೀಗೆ ಪ್ರಕೃತಿ ಕೊಡುಗೆಯಾಗಿ ನೀಡುವ ಮತ್ತು ನೀಡಿರುವ ವಸ್ತುಗಳೇ ಮನುಷ್ಯನ ಸೌಂದರ್ಯ ಸಾಧನಗಳಾಗ್ತಾ ಇದ್ದವು.

ಆದ್ರೆ ಕಾಲ ಉರುಳಿದಂತೆ, ಮನುಷ್ಯ ಕೆಮಿಕಲ್ ಮಯವಾಗಿದ್ದಾನೆ. ಆತನ ದಿನನಿತ್ಯದ ಚಟುವಟಿಕೆಯ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕೆಮಿಕಲ್ ಗಳ ದಾಸನಾಗಿದ್ದಾನೆ. ಆದ್ರೆ ಸ್ವಲ್ಪ ತಮ್ಮ ಸೌಂದರ್ಯ ವರ್ಧನೆಗೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಕೆ ಮಾಡಿಕೊಂಡ್ರೆ ಹೆಚ್ಚು ಕಾಲ ಆರೋಗ್ಯವಾಗಿರಲು ಸಾಧ್ಯವಾಗುತ್ತೆ... ಬನ್ನಿ ಅಂತಹ ಕೆಲವೊಂದು ಸಿಂಪಲ್ ಟಿಪ್ಸ್ ಅನ್ನು ನಿಮಗೆ ಪರಿಚಯಿಸುತ್ತಿದ್ದೇವೆ ಮುಂದೆ ಓದಿ... 

Beauty Tips and Remedies at Home

ಆಲೂಗಡ್ಡೆಯನ್ನು ಸಿಪ್ಪೆ

ಸಹಿತ ತೊಳೆದುಕೊಳ್ಳಿ. ನಂತ್ರ ಹೇಗಿದ್ರೂ ಅಡುಗೆಗೆ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದೇ ಬಳಸ್ತೀರ. ನಂತ್ರ ಆ ಸಿಪ್ಪೆಯನ್ನು ಎಸೀಬೇಡಿ. ಬದಲಾಗಿ ಅದನ್ನು ಸಪರೇಟ್ ಆಗಿ ಕೆಲವು ನಿಮಿಷ ನೀರಿನಲ್ಲಿ ಕುದಿಸಿ ಬೇಯಿಸಿ. ನಂತ್ರ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಸ್ವಲ್ಪ ಮೊಸರು ಮತ್ತು ಒಂದೆರಡು ಹನಿ ಬಾದಾಮಿ ಎಣ್ಣೆ ಮತ್ತು ಒಂದೆರಡು ಹನಿ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.. ಅದನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಮುಖದ ಕಾಂತಿ ಹೆಚ್ಚಿಸಿ, ಹೊಳಪು ನೀಡಲು ಈ ಪೇಸ್ಟ್ ನಿಮಗೆ ನೆರವಾಗಲಿದೆ. 

Beauty Tips and Remedies at Home

ಅಕ್ಕಿ ತೊಳೆದ ನೀರು

ಇನ್ನು ಅಕ್ಕಿ ತೊಳೆದ ನೀರನ್ನು ಈಗಾಗಲೇ ಹೇಳಿದಂತೆ ಬಾಡಿ ಕ್ಲೆನ್ಸರ್ ಆಗಿ ಕೂಡ ಬಳಕೆ ಮಾಡ್ಬಹುದು. ಅದಕ್ಕಾಗಿ ಸ್ವಲ್ಪ ಲಿಂಬೆಯ ರಸ, ಲ್ಯಾವೆಂಡರ್ ಮಿಕ್ಸ್ ಮಾಡಿರುವ ಎಸೆನ್ಶಿಯಲ್ ಆಯಿಲ್ ಮಿಕ್ಸ ಮಾಡಿ ಮುಖ ಮತ್ತು ದೇಹವನ್ನು ವಾಷ್ ಮಾಡಿಕೊಳ್ಳಬಹುದು. ಚರ್ಮದಲ್ಲಿರುವ ರಂಧ್ರಗಳಿಗೆ ಅಕ್ಕಿ ತೊಳೆದ ನೀರು ಒಂದು ಅದ್ಭುತ ಮೆಡಿಸಿನ್ ಅಂತಲೇ ಹೇಳ್ಬಹುದು. ನೈಸರ್ಗಿಕವಾಗಿ ತಯಾರಿಸುವ ಯಾವುದೇ ಫೇಸ್ ಸ್ಕ್ರಬ್, ಫೇಸ್ ಮಾಸ್ಕ್ ತಯಾರಿಸುವಾಗ ಕೇವಲ ನೀರು ಬಳಸುವ ಬದಲು ಅಕ್ಕಿ ತೊಳೆದ ನೀರನ್ನು ಬಳಸಿ ಪೇಸ್ಟ್ ತಯಾರಿಸಿಕೊಳ್ಳಬಹುದು.

Beauty Tips and Remedies at Home

ಜೇನುತುಪ್ಪ ಮತ್ತು ಬಾದಾಮಿ ಫೇಸ್ ಪ್ಯಾಕ್

ಸ್ವಲ್ಪ ಬಾದಾಮಿ(ಸಣ್ಣಗೆ ತುಂಡು ಮಾಡಿರುವುದು) ಮತ್ತು ಎರಡು ಚಮಚ ಜೇನುತುಪ್ಪ, ಒಂದು ಚಮಚ ಮೊಸರು ತೆಗೆದುಕೊಳ್ಳಿ. ಈ ಮೂರನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ತ್ವಚೆಗೆ ಪುನಶ್ವೇತನ ನೀಡುವಂತಹ ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿದ ಬಳಿಕ ನೀವು ಕೂಡ ಇದರ ರುಚಿ ನೋಡಬಹುದು. 

papaya face pack

ಪಪ್ಪಾಯಿ ತಿರುಳಿನ ಪೇಸ್ಟ್

ಸ್ವಲ್ಪ ಪಪ್ಪಾಯಿ ತಿರುಳಿನ ಪೇಸ್ಟ್ ಮಾಡಿಕೊಳ್ಳಿ. ಮೂರು ಚಮಚ ಪೇಸ್ಟ್ ಗೆ ಒಂದು ಚಮಚ ಲಿಂಬೆರಸ ಹಾಕಿ. ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಇದನ್ನು ದಪ್ಪ ಮಾಡಿಕೊಳ್ಳಿ. ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಿದ ಬಳಿಕ ನೀವು ಇದನ್ನು ತಿನ್ನಬಹುದು.

ಪಪ್ಪಾಯಿ ಹಣ್ಣಿನಲ್ಲಿದೆ 'ಸೌಂದರ್ಯದ' ಮಾಂತ್ರಿಕ ಶಕ್ತಿ!

ಚರ್ಮಕ್ಕೆ ಯಾವುದೇ ರೀತಿಯ ಹಾನಿ ಮಾಡಬಾರದು ಎನ್ನುವ ಕಾರಣಕ್ಕಾಗಿ ಈ ವಿಧಾನಗಳನ್ನು ಹೇಳಲಾಗುತ್ತಿದೆ. ಮನೆಯಲ್ಲೇ ತಯಾರಿಸಿದ ಇಂತಹ ಫೇಸ್ ಪ್ಯಾಕ್ ನ್ನು ನೀವು ಪ್ರಯತ್ನಿಸಿದ್ದರೆ ಕಮೆಂಟ್ ಬಾಕ್ಸ್ ನಲ್ಲಿ ಅದರ ಬಗ್ಗೆ ತಿಳಿಸಿ.

ಹುಣಸೆ ಹುಳಿ

ಚರ್ಮದ ಕಾಂತಿ ವೃದ್ಧಿಗೆ ಹುಣಸೆ ಹುಳಿ

ಕೊಂಚ ಬಿಸಿನೀರಿನಲ್ಲಿ ಮುಳುಗುವಷ್ಟು ಹುಣಸೆ ಹುಳಿಯನ್ನು ನೆನೆಸಿಡಿ. ಕೊಂಚ ಹೊತ್ತಿನ ಬಳಿಕ ನೀರು ತಣ್ಣಗಾಗುತ್ತದೆ. ಈ ಹುಳಿಯನ್ನು ಚೆನ್ನಾಗಿ ಕಿವುಚಿ ತಿರುಳು ಹೊರಬರುವಂತೆ ಮಾಡಿ. ತದನಂತರ ಇದಕ್ಕೆ ಕೊಂಚ ಅರಿಶಿನದ ಪುಡಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗ ತಾನೇ ತೊಳೆದ ಮುಖ, ಕುತ್ತಿಗೆ ಕೈ ಮತ್ತು ಕಾಲುಗಳಿಗೆ ತೆಳುವಾಗಿ ಸವರಿ ಅಂತೆಯೇ ಸ್ವಲ್ಪ ಹೊತ್ತು ಒಣಗಲು ಬಿಡಿ. ಸುಮಾರು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವುದರಿಂದ ಶೀಘ್ರವೇ ಚರ್ಮದ ಕಾಂತಿ ಹೆಚ್ಚುತ್ತದೆ.

green grams

ತ್ವಚೆಯನ್ನು ಇನ್ನಷ್ಟು ಅಂದಗೊಳಿಸುವ ಹೆಸರುಕಾಳು

50 ಗ್ರಾಂನಷ್ಟು ಹೆಸರುಕಾಳನ್ನು ಒಂದು ರಾತ್ರಿ ನೀರಿನಲ್ಲಿ ಹಾಕಿ ನೆನಸಿಡಿ. ಮಾರನೇ ದಿನ ಬೆಳಿಗ್ಗೆ ಅದನ್ನು ಮಿಕ್ಸಿ ಅಥವಾ ಗ್ರೈಂಡರ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟಿಗೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು 1 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.. ಮಿಕ್ಸ್ ಮಾಡಿದ ಕೂಡಲೇ ಮುಖಕ್ಕೆ ಅಪ್ಲೈ ಮಾಡಿ., ಸುಮಾರು ಹದಿನೈದರಿಂದ ಇಪತ್ತು ನಿಮಿಷ ಹಾಗೆಯೇ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಪ್ರತಿ ಎರಡು ದಿನಗಳಿಗೊಮ್ಮೆ ಈ ಪ್ಯಾಕ್ ಅಪ್ಲೈ ಮಾಡಿ ಮತ್ತು ಕಾಂತಿಯುತವಾದ ಹೊಳಪಿನ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.

coconut milk
 

ತೆಂಗಿನ ಹಾಲು

ಚರ್ಮದ ಹೊಳಪು ಹೆಚ್ಚಿಸುವ ತೆಂಗಿನ ಹಾಲಿನ ಫೇಸ್ ಪ್ಯಾಕ್ ಸ್ವಲ್ಪ ತೆಂಗಿನಹಾಲಿಗೆ, ಗಂಧದ ಪುಡಿಯನ್ನು ಸೇರಿಸಿ. ಅದಕ್ಕೆ ಸ್ವಲ್ಪ ಕೇಸರಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಸಿ ಮತ್ತು ಮುಖಕ್ಕೆ ಅಪ್ಲೈ ಮಾಡ್ಕೊಳ್ಳಿ. ಇದು ಪ್ಯಾಕ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ಹೊಳಪು ಬರುವಂತೆ ಮಾಡುತ್ತೆ. ನೈಸರ್ಗಿಕವಾಗಿ ಮುಖದ ಹೊಳಪು ಹೆಚ್ಚಿಸಲು ಇದು ಸಹಕಾರಿ.

ನೆನಪಿಡಿ: ಈಗೆಲ್ಲ ತೆಂಗಿನ ಹಾಲು ಕೂಡ ಪ್ಯಾಕೆಟ್ ರೂಪದಲ್ಲಿ ಮಾರ್ಕೆಟ್ ನಲ್ಲಿ ಲಭ್ಯವಿದೆ, ಇಂತಹ ಪ್ರಿಸರ್ವ್ ತೆಂಗಿನ ಹಾಲನ್ನು ಯಾವುದೇ ಕಾರಣಕ್ಕೂ ಬಳಸ್ಬೇಡಿ. ಇದ್ರಲ್ಲಿ ಪ್ರಿಸರ್ವೇಟಿವ್ ಅಂಶವನ್ನು ಬಳಸಿದ್ದು, ಅವು ನಿಮ್ಮ ಚರ್ಮಕ್ಕೆ ಅಲರ್ಜಿ ಮಾಡುವ ಸಾಧ್ಯತೆಗಳಿರುತ್ತೆ. 

pomegranate

ದಾಳಿಂಬೆ ಮತ್ತು ಲಿಂಬೆಯ ಫೇಸ್ ಪ್ಯಾಕ್

ವಿಟಮಿನ್ ಸಿಯಿಂದ ಕೂಡಿರುವ ಒಂದು ಬೆಸ್ಟ್ ಫೇಸ್ ಪ್ಯಾಕ್ ಇದು. ದಾಳಿಂಬೆ ಬೀಜದ ಪೇಸ್ಟಿಗೆ ಫ್ರೆಶ್ ಆಗಿರುವ ಒಂದೆರಡು ಹನಿ ಲಿಂಬೆಯ ರಸವನ್ನು ಸೇರಿಸಿ ಮಿಕ್ಸ್ ಮಾಡಿ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಹಚ್ಚಿ. 30 ನಿಮಿಷದ ನಂತ್ರ ಕಾಟನ್ ಬಟ್ಟೆಯಿಂದ ಒರೆಸಿ, ತಣ್ಣನೆಯ ನೀರಿನಿಂದ ವಾಷ್ ಮಾಡಿದ್ರೆ ಚರ್ಮದಲ್ಲಿ ಟ್ಯಾನ್ ಆಗಿದ್ರೆ ರಿಮೂವ್ ಮಾಡಲು ಇದು ನೆರವಾಗುತ್ತೆ. ಅಷ್ಟೇ ಅಲ್ಲ ಫ್ರೆಸ್ ಚರ್ಮವನ್ನು ಪಡೆಯಲು ಕೂಡ ಇದು ಸಹಕಾರಿಯಾಗಿರುವ ಫೇಸ್ ಪ್ಯಾಕ್.

ದಾಳಿಂಬೆ ಪೇಸ್ಟ್ ತಯಾರಿಸಿಕೊಳ್ಳೋದು ಕಷ್ಟ ಅಂತ ಪ್ರಿಸರ್ವ್ ಮಾಡಿರುವ ದಾಳಿಂಬೆ ಜ್ಯೂಸ್ ಬಳಸ್ಬೇಡಿ.ನೀವೇ ನಿಮ್ಮ ಕೈಯಾರೆ ದಾಳಿಂಬೆ ಬೀಜಗಳನ್ನು ಬಿಡಿಸಿ ಪೇಸ್ಟ್ ತಯಾರಿಸಿಕೊಂಡು ಅಪ್ಲೈ ಮಾಡಿಕೊಂಡ್ರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಅನ್ನೋದು ನೆನಪಿರಲಿ..

ನಿಂಬೆ ಹಣ್ಣು

ನಿಂಬೆ ಇದ್ದಲ್ಲಿ ಸೌಂದರ್ಯವಿದೆ ! ಅದಕ್ಕೆಂದೇ ರಸಿಕರ ರಾಜ ರವಿಚಂದ್ರನ್ ನಿಂಬೆಹಣ್ಣಿಗೆ ಹೋಲಿಸಿರುವುದು. ನೋಡಲು ಮಿರಿ-ಮಿರಿ ಮಿಂಚುವ ನಿಂಬೆ ಹಣ್ಣಿನಲ್ಲಿ "ಸಿ" ಜೀವಸತ್ವವು ಅಪಾರವಾಗಿದೆ. ನಿಂಬೆಯ ರಸವನ್ನು ಚರ್ಮದ ಮೇಲೆ ಲೇಪಿಸಿದಾಗ ತ್ವಚೆಯ ರಂದ್ರಗಳ ಆಳಕ್ಕೆ ತಲುಪುವ ಸಿ ಜೀವಸತ್ವವು ಅಲ್ಲಿನ ಕಲ್ಮಶಗಳನ್ನೆಲ್ಲಾ ಹೊರತೆಗೆದು ತ್ವಚೆಗೆ ಗೌರವರ್ಣ ನೀಡುತ್ತದೆ. ನಿಂಬೆಯನ್ನು ತ್ವಚೆಯ ನೈಸರ್ಗಿಕ ಸ್ವಚ್ಛತೆಗಾಗಿ ಬಳಸುವರು. ನಿಂಬೆಯ ಜೊತೆ ಇತರ ನೈಸರ್ಗಿಕ ಉತ್ಪನ್ನಗಳಾದ ಜೇನುತುಪ್ಪ, ಹೆಸರುಹಿಟ್ಟು, ಮೊಟ್ಟೆ, ಮೊಸರು ಮುಂತಾದವುಗಳನ್ನು ಬೆರಸಿ ತ್ವಚೆಗೆ ಲೇಪಿಸುವದರಿಂದ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು.

ಮೊಟ್ಟೆಯ ಬಿಳಿಯ ಭಾಗ + ಮೊಸರು

ಮೊಟ್ಟೆಯ ಬಿಳಿಯ ಭಾಗ ನಿಮ್ಮ ದೇಹಕ್ಕೆ ಮಾತ್ರವಲ್ಲ, ನಿಮ್ಮ ತ್ವಚೆಗೂ ಅಷ್ಟೇ ಒಳ್ಳೆಯದು. ತ್ವಚೆಗೆ ಅತ್ಯಗತ್ಯವಾದ ಜೀವಸತ್ವ ಮತ್ತು ಖನಿಜಾಂಶಗಳು ಮೊಟ್ಟೆಯಲ್ಲಿ ಸಮೃದ್ಧವಾಗಿದೆ. ಮೊಟ್ಟೆ ಹಾಗೂ ಮೊಸರಿನ ಮಿಶ್ರಣ ಒಂದು ಉತ್ತಮ ಸೌಂದರ್ಯವರ್ಧಕ. ಮೊಟ್ಟೆಯ ಬೆಳಿಯ ಭಾಗ ಮತ್ತು ಮೊಸರನ್ನು ಮಿಶ್ರಣಮಾಡಿ. ಇದನ್ನು ಪೇಸ್ಟ್ ನಂತೆ ಮಾಡಿ ಮುಖಕ್ಕೆ ಹಚ್ಚಿ 15 -20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿ.

turmeric and curd

ಅರಿಶಿನ + ಮೊಸರು

ನೀವು ಪರಿಪೂರ್ಣ ಸೌಂದರ್ಯವನ್ನು ಬಯಸಿದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ಇದು! ಅರಿಶಿನ ಮತ್ತು ಮೊಸರನ್ನು ಬೆರೆಸಿದ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಹೊಳಪು ನೀಡುವುದು ಮಾತ್ರವಲ್ಲದೆ, ಕಲೆಮುಕ್ತ ತ್ವಚೆ ನಿಮ್ಮದಾಗುತ್ತದೆ. ಮಯಸ್ಸಾದ ಕಳೆಯನ್ನು ಹೋಗಲಾಡಿಸುವುದರ ಜೊತೆಗೆ ಮುಖದಲ್ಲಿನ ಮೊಡವೆಗಳನ್ನೂ ಕಡಿಮೆಗೊಳಿಸುತ್ತದೆ. ಒಂದು ಚಮಚ ಅರಿಶಿನವನ್ನು ಒಂದು ಚಮಚ ಮೊಸರಿನೊಂದಿಗೆ ಬೆರೆಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆಯಿರಿ. ತ್ವಚೆಯ ಮೃದುತ್ವಕ್ಕಾಗಿ ಜೇನುತುಪ್ಪವನ್ನೂ ಕೂಡ ಬೆರೆಸಬಹುದು. ಹೀಗೆ ಮನೆಯಲ್ಲಿಯೇ ಅಡಗಿರುವ ಪದಾರ್ಥಗಳು ನಿಮ್ಮ ಪರಿಪೂರ್ಣ ಸೌಂದರ್ಯಕ್ಕೆ ಸಹಾಯಕವಾಗಬಲ್ಲವು. ನೀವೆ ಪ್ರಯತ್ನಿಸಿ. ಪರಿಣಾಮ ಗಮನಿಸಿ.

cucumber face pack

ಸೌತೆಕಾಯಿ ಪೇಸ್ ಪ್ಯಾಕ್

ಒಂದು ವೇಳೆ ನಿಮ್ಮ ಚರ್ಮ ಬಿಸಿಲು ಅಥವಾ ಇನ್ನಾವುದೋ ಕಾರಣಕ್ಕೆ ತನ್ನ ಸಹಜ ಕಳೆ ಮತ್ತು ವರ್ಣವನ್ನು ಕಳೆದುಕೊಂಡಿದ್ದರೆ ಸೌತೆಯ ಲೇಪನದ ಸತತ ಬಳಕೆಯಿಂದ ನಿಮ್ಮ ಸಹಜ ವರ್ಣವನ್ನು ಮರಳಿ ಪಡೆಯಬಹುದು. ಇದಕ್ಕಾಗಿ ಅರ್ಧ ಎಳೆಸೌತೆಕಾಯಿಯನ್ನು ಸಿಪ್ಪೆಸಹಿತ ತುರಿದು ಎರಡು ಚಮಚ ಬೆಟ್ಟದ ತಾವರೆ (witch hazel) (ಮರದ ಮೇಲೆ ಬೆಳೆಯುವ ಹಳದಿ ಬಣ್ಣದ ಹೂವುಗಳಂತೆ ತೋರುವ ಗಿಡ) ಮತ್ತು ಎರಡು ಚಮಚ ನೀರು ಸೇರಿಸಿ ಅರೆಯಿರಿ. ಈ ಲೇಪನವನ್ನು ಪ್ರತಿದಿನ ಸ್ವಚ್ಛವಾಗಿ ಮುಖ ತೊಳೆದುಕೊಂಡ ಬಳಿಕ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಲೇಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮ ತನ್ನ ಸಹಜ ವರ್ಣವನ್ನು ಪಡೆಯತೊಡಗುತ್ತದೆ.

English summary

Simple Beauty Tips and Remedies at Home

In this post, we have an exhaustive list of beauty tips for getting fair skin at home. But this isn’t all about just face packs. We have also tried to cover specific foods and other skin care basics that are often ignored or overlooked.
Subscribe Newsletter