ಹಾಗಲಕಾಯಿ ಕಹಿಯಾದರೂ, ಸೌಂದರ್ಯದ ಪಾಲಿಗೆ ಸಿಹಿ!

By: manu
Subscribe to Boldsky

ಕಹಿ ತಿನ್ನಲು ಯಾರು ಇಷ್ಟಪಡುತ್ತಾರೆ ಹೇಳಿ? ಯಾರಿಗೂ ಕಹಿ ಬೇಕಿಲ್ಲ, ಪ್ರತಿಯೊಬ್ಬರಿಗೂ ಸಿಹಿಯೇ ಬೇಕಾಗಿದೆ. ಅದರಲ್ಲೂ ಹಾಗಲಕಾಯಿಯನ್ನು ದ್ವೇಷ ಮಾಡುವವರೇ ಹೆಚ್ಚಾಗಿದ್ದಾರೆ. ಇದನ್ನು ಕಂಡರೆ ದೂರ ಓಡುವವರಿದ್ದಾರೆ. ಹಾಗಲಕಾಯಿ ಕಹಿಯಾದರೂ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಕಹಿಯಾದರೂ ಇದರಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಸಮೃದ್ಧವಾಗಿದೆ. ಅಲ್ಲದೆ ಹಲವಾರು ರೀತಿಯಿಂದ ನಿಮ್ಮ ಆರೋಗ್ಯವನ್ನು ರಕ್ಷಿಸುತ್ತದೆ. ಮಧುಮೇಹಿಗಳಿಗೆ ಹೇಳಿಮಾಡಿಸಿದಂತಹ ತರಕಾರಿ ಇದಾಗಿದೆ.

ಅದರಲ್ಲೂ ಹಾಗಲಕಾಯಿಯಲ್ಲಿ ಇರುವಂತಹ ಪೋಷಕಾಂಶಗಳು ಕೂದಲು ಹಾಗೂ ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೊಟಾಶಿಯಂ, ಮೆಗ್ನಿಶಿಯಂ, ವಿಟಮಿನ್ ಸಿ ಮತ್ತು ಇತರ ನಾರಿನಾಂಶಗಳು ತುಂಬಾ ಪ್ರಯೋಜನವನ್ನು ಉಂಟು ಮಾಡಲಿದೆ. ಹಾಗಲಕಾಯಿಯನ್ನು ಯಾವ ರೀತಿಯಿಂದ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳಬಹುದು ಎಂದು ತಿಳಿಯಲು ಮುಂದಕ್ಕೆ ಓದಿ... 

ಚರ್ಮದ ಕಾಂತಿಗೆ

ಚರ್ಮದ ಕಾಂತಿಗೆ

ಹಾಗಲಕಾಯಿಯು ಮುಖದಲ್ಲಿರುವ ಧೂಳು ಹಾಗೂ ಕಲ್ಮಷವನ್ನು ತೆಗೆದುಹಾಕುತ್ತದೆ. ಇದರಿಂದ ಆರೋಗ್ಯಕರ ಹಾಗೂ ಹೊಳೆಯುವ ಚರ್ಮವು ನಿಮ್ಮದಾಗುತ್ತದೆ.ಹಲವಾರು ರೀತಿಯ ವಿಟಮಿನ್ ಮತ್ತು ಪ್ರೋಟೀನ್ ಇದರಲ್ಲಿ ಇರುವ ಕಾರಣದಿಂದ ಮುಖದಲ್ಲಿರುವ ಕಲ್ಮಷವನ್ನು ಹೊರಹಾಕುತ್ತದೆ. ಹಾಗಲಕಾಯಿ ಜ್ಯೂಸ್ ಮಾಡಿಕೊಂಡು ಅದರಿಂದ ಮುಖ ತೊಳೆಯಿರಿ. ಐದು ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಪ್ರತೀ ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ

ಹೊಳೆಯುವ ಚರ್ಮವು ನಿಮ್ಮದಾಗುವುದು.

ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು

ಚರ್ಮದ ತುರಿಕೆ ಕಡಿಮೆಯಾಗುವುದು

ಚರ್ಮದ ತುರಿಕೆ ಕಡಿಮೆಯಾಗುವುದು

ಹಾಗಲಕಾಯಿಯ ಕೆಲವು ತುಂಡುಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ½ ಚಿಟಿಕೆ ಅರಶಿನ ಮತ್ತು ಒಂದು ಚಮಚ ಅಲೋವೆರಾ ಜ್ಯೂಸ್ ನ್ನು ಹಾಕಿ. ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿಕೊಂಡು ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆದರೆ ತುರಿಕೆ ಕಡಿಮೆಯಾಗವುದು.

ಚೋಟುದ್ದ ಹಾಗಲಕಾಯಿ-ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ

ಮೊಡವೆಗಳ ನಿವಾರಣೆ

ಮೊಡವೆಗಳ ನಿವಾರಣೆ

ಅರ್ಧ ಹಾಗಲಕಾಯಿಯನ್ನು ತೆಗೆದುಕೊಂಡು ಅದನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಒಂದು ಚಮಚ ಜಾಯಿಕಾಯಿ ಹುಡಿ ಮತ್ತು ಒಂದು ಚಮಚ ಮೊಸರನ್ನು ಇದಕ್ಕೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ.

ಸೆಖೆ ಬೊಕ್ಕೆಗಳ ನಿವಾರಣೆ

ಸೆಖೆ ಬೊಕ್ಕೆಗಳ ನಿವಾರಣೆ

ಸ್ವಲ್ಪ ಹಾಗಲಕಾಯಿ ತುಂಡುಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಬೇಯಿಸಿ. ನೀರು ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವಾಗ ಕುದಿಸುವುದನ್ನು ನಿಲ್ಲಿಸಿ. ನೀರು ತಣ್ಣಗಾಗಲು ಬಿಡಿ. ಹತ್ತಿ ಉಂಡೆಯನ್ನು ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತೊಳೆಯಿರಿ. ಬೇಸಿಗೆಯಲ್ಲಿ ಇದನ್ನು ನಿಯಮಿತವಾಗಿ ಬಳಸಿಕೊಳ್ಳಬಹುದು.

ಕಿರಿಕಿರಿ ಉಂಟುಮಾಡುವ ಚರ್ಮಕ್ಕಾಗಿ

ಕಿರಿಕಿರಿ ಉಂಟುಮಾಡುವ ಚರ್ಮಕ್ಕಾಗಿ

ಅರ್ಧ ಹಾಗಲಕಾಯಿ ತೆಗೆದುಕೊಳ್ಳಿ ಮತ್ತು ಇದನ್ನು ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ. ಸ್ವಲ್ಪ ಕರಿಬೇವಿನ ಎಲೆ ತೆಗೆದುಕೊಂಡು ಅದನ್ನು ಒಣಗಿಸಿ. ಇದನ್ನು ಹುಡಿ ಮಾಡಿಕೊಂಡು ಎರಡು ಚಮಚ ಹುಡಿಯನ್ನು ಹಾಗಲಕಾಯಿ ಪೇಸ್ಟ್ ಗೆ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ.ಸ್ವಲ್ಪ ಸಮಯ ಹಾಗೆ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ. ಇದರಿಂದ ಚರ್ಮದ ಕಿರಿಕಿರಿ ಕಡಿಮೆಯಾಗುವುದು.

 ಬಿಳಿ ಕೂದಲಿನ ಸಮಸ್ಯೆಗಳಿಗೆ...

ಬಿಳಿ ಕೂದಲಿನ ಸಮಸ್ಯೆಗಳಿಗೆ...

ಕೂದಲಿಗೆ ಸ೦ಬ೦ಧ ಪಟ್ಟ ಹಾಗೆ ನಿಜಕ್ಕೂ ಇದೊ೦ದು ಅತ್ಯ೦ತ ಕಿರಿಕಿರಿಯ ವಿಷಯವಾಗಿರುತ್ತದೆ. ಏಕೆ೦ದರೆ, ಇಪ್ಪತ್ತರ ಹರೆಯದಲ್ಲಿಯೇ ಯಾರೊಬ್ಬರಿಗೂ ವಯಸ್ಸಾದವರ೦ತೆ ಕಾಣಿಸಿಕೊಳ್ಳಲು ಇಷ್ಟವಿರುವುದಿಲ್ಲ.....ಅಲ್ಲವೇ ?! ಒಳ್ಳೆಯದು.......ಕೂದಲು ಅಕಾಲಿಕವಾಗಿ ಬೂದುಬಣ್ಣಕ್ಕೆ ತಿರುಗುವುದನ್ನು ತಡೆಗಟ್ಟಲು ಹಾಗಲಕಾಯಿಯು ಒ೦ದು ಪರಿಹಾರೋಪಾಯವಾಗಿದೆ. ಹಾಗಲಕಾಯಿಯನ್ನು ಚೆನ್ನಾಗಿ ಜಜ್ಜಿ, ಅದರಿ೦ದ ದಪ್ಪ ರಸವನ್ನು ಪಡೆದುಕೊ೦ಡು, ಆ ರಸವನ್ನು ಬೂದುಬಣ್ಣದ ಕೂದಲುಗಳಿಗೆ ಹಚ್ಚಿರಿ ಹಾಗೂ ಅದನ್ನು ಒ೦ದೆರಡು ತಾಸುಗಳ ಕಾಲ ಕೂದಲಲ್ಲಿ ಹಾಗೆಯೇ ಒಣಗಗೊಡಿರಿ. ಬಳಿಕ ಕೇಶರಾಶಿಯನ್ನು ಚೆನ್ನಾಗಿ ತೊಳೆದುಕೊಳ್ಳಿರಿ. ಕೂದಲು ಸಹಜವಾಗಿಯೇ ಒಣಗಲಿ. ಕೇಶರಾಶಿಯ ಬೂದುಬಣ್ಣವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತೀ ಹತ್ತು ದಿನಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿರಿ.

ಹಾಗಲಕಾಯಿ-ಈರುಳ್ಳಿ ಮಿಶ್ರಿತ ಜ್ಯೂಸ್‌ನಲ್ಲಿದೆ ಆರೋಗ್ಯದ ಪವರ್

English summary

Beauty Benefits Of Bitter Gourd

Bitter gourd, better known as Karela in India, is one among the least consumed vegetables. Like the name says, bitter gourd is bitter in taste and hence most of them don't prefer including this veggie in their diet. Well, keeping the taste aside, bitter gourd is extremely rich in proteins and vitamins and it helps benefit your health in several ways. Also, when applied topically, it is known to boost skin health, thereby proving to have a hot of beauty benefits as well.
Subscribe Newsletter