For Quick Alerts
ALLOW NOTIFICATIONS  
For Daily Alerts

ಮೊಡವೆ ನಿವಾರಣೆಗೆ ಇಲ್ಲಿದೆ ಸರಳ ಉಪಾಯ

By jayasubramanya
|

ಸುಂದರವಾದ ನಿಮ್ಮ ಮುಖದಲ್ಲಿ ಮೊಡವೆ ಎನ್ನುವುದು ಕಪ್ಪು ಚುಕ್ಕೆಯಾಗಿದೆ. ಮೊಡವೆ ಇರುವ ಮುಖ ನಿಮ್ಮಲ್ಲಿ ಕೀಳರಿಮೆಯನ್ನು ಉಂಟುಮಾಡುವುದು ಮಾತ್ರವಲ್ಲದೆ ನಿಮ್ಮಲ್ಲಿ ಹಿಂಜರಿಕೆಯನ್ನು ಉಂಟುಮಾಡಬಹುದು. ಮೊಡವೆ ಎನ್ನುವುದು ಒಂದು ಸಾಮಾನ್ಯ ತ್ವಚೆಯ ಸಮಸ್ಯೆಯಾಗಿದ್ದು ತ್ವಚೆಯ ರಂಧ್ರಗಳು ತೈಲ ಮತ್ತು ಸತ್ತ ಚರ್ಮದ ಜೀವಕೋಶಗಳಿಂದ ಮುಚ್ಚಿ ಹೋದಾಗ ಮೊಡವೆ ಉಂಟಾಗುತ್ತದೆ. ಮೊಡವೆ ಸಾಮಾನ್ಯವಾಗಿ ಮುಖ, ಕುತ್ತಿಗೆ, ಎದೆ ಮತ್ತು ಹಿಂಭಾಗದಲ್ಲಿ ಕಾಣಿಸಿಕೊಳ್ಳಲಿದ್ದು ಇದನ್ನು ಬಿಳಿ ಕಲೆ, ಕಪ್ಪು ಕಲೆ ಮತ್ತು ಮೊಡವೆ ಮುಂತಾಗಿ ಕರೆಯುತ್ತಾರೆ. ಹದಿಹರೆಯದಲ್ಲಿ ಕಾಡುವ ಮೊಡವೆಗೆ ಅದ್ಭುತ ಜ್ಯೂಸ್

ತಳಿಶಾಸ್ತ್ರದಂತಹ ಹೆಚ್ಚಿನ ಅಂಶಗಳು, ಹಾರ್ಮೋನಲ್ ಚಟುವಟಿಕೆ (ವಿಶೇಷವಾಗಿ ಮುಟ್ಟಿನ ಚಕ್ರಗಳು ಮತ್ತು ಪ್ರೌಢಾವಸ್ಥೆಯಲ್ಲಿ), ವೈದ್ಯಕೀಯ ಪರಿಸ್ಥಿತಿಗಳು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇತರೆ. ಬ್ಯಾಕ್ಟೀರಿಯಾ ಹರಡುವ ಸೋಂಕುಗಳು, ಆಹಾರದಲ್ಲಿನ ಅನಿಯಂತ್ರತೆ, ಧೂಮಪಾನ ಮತ್ತು ಒತ್ತಡ ಮೊದಲಾದವು ಮೊಡವೆಗೆ ಕಾರಣವಾಗಿವೆ. ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ಕೆಲವೊಮ್ಮೆ ನಾವು ಮೊಡವೆಗಳನ್ನು ಸಿಡಿಸಲು ಪ್ರಯತ್ನಿಸುತ್ತೇವೆ ಮತ್ತು ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ. ಇದಕ್ಕೆ ರಾಸಾಯನಿಕ ಔಷಧಗಳನ್ನು ನೀವು ಬಳಸಿದರೂ ಇದು ಪ್ರಯೋಜನಕಾರಿಯಾಗಲಾರದು ಅಂತೆಯೇ ನಿಮ್ಮ ಹಣವನ್ನು ಇದು ವ್ಯರ್ಥಮಾಡುತ್ತದೆ. ಇದಕ್ಕಿರುವ ಒಂದೇ ಮಾರ್ಗವೆಂದರೆ ನೈಸರ್ಗಿಕ ವಿಧಾನಗಳ ಮೂಲಕ ಪ್ರಯೋಜನ ಕಂಡುಕೊಳ್ಳುವುದಾಗಿದೆ. ಇಂದಿನ ಲೇಖನದಲ್ಲಿ ನಾವು ಕೆಲವೊಂದು ನೈಸರ್ಗಿಕ ಪರಿಹಾರಗಳನ್ನು ಇದಕ್ಕಾಗಿ ನೀಡುತ್ತಿದ್ದು ಅವುಗಳ ಪ್ರಯೋಜನಗಳನ್ನು ಕೆಳಗಿನ ಸ್ಲೈಡರ್‎ಗಳಲ್ಲಿ ನೀಡುತ್ತಿದ್ದೇವೆ.

ಆಸ್ಟ್ರೇಲಿಯನ್ ಟೀ ಟ್ರಿ ಆಯಿಲ್ ಬಳಸಿ

ಆಸ್ಟ್ರೇಲಿಯನ್ ಟೀ ಟ್ರಿ ಆಯಿಲ್ ಬಳಸಿ

ಸಂಶೋಧನೆಗಳ ಪ್ರಕಾರ, 100% ನೈಸರ್ಗಿಕ ಅಂಶಗಳನ್ನು ಒಳಗೊಂಡಿರುವ ಟೀ ಟ್ರೀ ಆಯಿಲ್ ಮೊಡವೆ ಇರುವ ತ್ವಚೆಯ ಭಾಗಗಳನ್ನು ಉಪಚರಿಸಲು ಪ್ರಯೋಜನಕಾರಿಯಂತೆ ಕೆಲಸ ಮಾಡುತ್ತದೆ. ಫೇಶಿಯಲ್ ಮೊಡವೆ ಮಾಸ್ಕ್ ಒಳಗೊಂಡಿರುವ ಟೀ ಟ್ರಿ ಆಯಿಲ್ (4 ಹನಿಗಳು) ಮತ್ತು ಮೊಟ್ಟೆಯ ಬಿಳಿಭಾಗ (1) ವನ್ನು ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಮಾತ್ರ ಇದನ್ನು ಬಳಸಿ ಇಲ್ಲದಿದ್ದರೆ ಇದು ನಿಮ್ಮ ತ್ವಚೆಯನ್ನು ಸುಟ್ಟು ಹಾಕುತ್ತದೆ.

ಹಸಿ ಜೇನು ಮತ್ತು ಹಾಲು

ಹಸಿ ಜೇನು ಮತ್ತು ಹಾಲು

ಹಸಿ ಜೇನು ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ ಮತ್ತು ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.ಜೇನು (2 ಚಮಚ) ತಾಜಾ ಲಿಂಬೆ ರಸ (1 ಚಮಚ) ವನ್ನು ಬೆರಳುಗಳ ಸಹಾಯದಿಂದ ಮುಖಕ್ಕೆ ಮಸಾಜ್ ಮಾಡಿ. ಇದು ಒಣಗಿದ ನಂತರ, ನೀರಿನಿಂದ ಮುಖವನ್ನು ತೊಳೆದುಕೊಳ್ಳಿ ಮತ್ತು ಒರೆಸಿಕೊಳ್ಳಿ.

ಜೊಜೊಬಾ ಆಯಿಲ್

ಜೊಜೊಬಾ ಆಯಿಲ್

ಇದೊಂದು ನೈಸರ್ಗಿಕ ಎಣ್ಣೆ ಎಂದೆನಿಸಿದ್ದು ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ ಅಂತೆಯೇ ಹೆಚ್ಚುವರಿ ಎಣ್ಣೆಯ ಉತ್ಪಾದನೆಯನ್ನು ತಡೆಹಿಡಿದು ತ್ವಚೆಯ ರಂಧ್ರಗಳ ಅಡಚಣೆಯನ್ನು ನಿವಾರಿಸುತ್ತದೆ. ಜೊಜೊಬಾ ಆಯಿಲ್ (5-6 ಹನಿಗಳು) ಅನ್ನು ಹತ್ತಿಯ ಉಂಡೆಯಲ್ಲಿ ಮುಳುಗಿಸಿ ಮೊಡವೆ ಇರುವ ಭಾಗಕ್ಕೆ ಸವರಿ. ಇದನ್ನು ಹಚ್ಚುವ ಮುನ್ನ ಚರ್ಮರೋಗ ತಜ್ಞರ ಬಳಿ ಸಮಾಲೋಚಿಸಿ.

ಜುನಿಪರ್ ಆಯಿಲ್

ಜುನಿಪರ್ ಆಯಿಲ್

ಜುನಿಪರ್ ಆಯಿಲ್ ನೈಸರ್ಗಿಕ ಆಂಟಿಸೆಪ್ಟಿಕ್ ಆಸ್ಟ್ರಿಜೆಂಟ್ ಎಂದೆನಿಸಿದ್ದು ಇದನ್ನು ಫೇಶಿಯಲ್ ಕ್ಲೆನ್ಸರ್‎ನಂತೆ ಕಾರ್ಯನಿರ್ವಹಿಸಿ ಮತ್ತು ಟೋನರ್‎ನಂತೆ ಕಾರ್ಯನಿರ್ವಹಿಸಿ ಮುಚ್ಚಿದ ರಂಧ್ರಗಳನ್ನು ನಿವಾರಿಸಿ ಮೊಡವೆಯನ್ನು ಉಪಚರಿಸುತ್ತದೆ (ಹೆಚ್ಚು ಪ್ರಮಾಣದಲ್ಲಿ ಬಳಸಬೇಡಿ) ನಿಮ್ಮ ಮುಖವನ್ನು ತೊಳೆದುಕೊಂಡು 1-2 ಹನಿಗಳಷ್ಟು ಎಣ್ಣೆಯನ್ನು ಹತ್ತಿಯ ಉಂಡೆ ಬಳಸಿ ಹಚ್ಚಿಕೊಳ್ಳಿ.

ಸಮುದ್ರದ ಉಪ್ಪಿನ ಮಿಶ್ರಣ

ಸಮುದ್ರದ ಉಪ್ಪಿನ ಮಿಶ್ರಣ

ಸಮುದ್ರ ಉಪ್ಪಿನ ಮಿಶ್ರಣವನ್ನು ಮೊಡವೆ ನಿವಾರಣೆಗಾಗಿ ನಿಮಗೆ ಬಳಸಬಹುದು.

ಅರಿಶಿನ ಫೇಸ್ ಮಾಸ್ಕ್ ಹಚ್ಚಿ

ಅರಿಶಿನ ಫೇಸ್ ಮಾಸ್ಕ್ ಹಚ್ಚಿ

ಅರಶಿನವು ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್‎ಫ್ಲಾಮೇಟರಿ ಅಂಶಗಳನ್ನು ಒಳಗೊಂಡಿದ್ದು ಇದು ಮೊಡವೆ ಉಂಟುಮಾಡುವ ನೋವನ್ನು ನಿವಾರಿಸಿ ಬ್ಯಾಕ್ಟೀರಿಯಾವನ್ನು ತಡೆಗಟ್ಟುತ್ತದೆ. ಅರಶಿನದ ಹುಡಿ, ಮೊಸರು ಮತ್ತು ಜೇನು ಇರುವ ಫೇಸ್ ಮಾಸ್ಕ್ ಅನ್ನು ತಯಾರಿಸಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ಸಂಪೂರ್ಣ ಒಣಗುವವರೆಗೆ 30 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮೊಡವೆಗಳ ಮೇಲೆ ಟೊಮೇಟೊ ಪ್ರಯೋಗ

ಮೊಡವೆಗಳ ಮೇಲೆ ಟೊಮೇಟೊ ಪ್ರಯೋಗ

ಟೊಮೇಟೋಗಳು ವಿಟಮಿನ್ ಎ, ಸಿ, ಕೆ ಮತ್ತು ಬಿ, ಇ ಯನ್ನು ಒಳಗೊಂಡಿದ್ದು ಉತ್ಕರ್ಷನ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಮೊಡವೆ ಸಮಸ್ಯೆಗಳ ವಿರುದ್ಧ ಇದು ಹೋರಾಡುತ್ತದೆ. ಟೊಮೇಟೊವನ್ನು ಕತ್ತರಿಸಿ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ಸೆಕೆಂಡ್‎ಗಳವರೆಗೆ ಇದನ್ನು ಹಾಗೆಯೇ ಬಿಡಿ ಮತ್ತು ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಆರೋಗ್ಯಪೂರ್ಣ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ

ಆರೋಗ್ಯಪೂರ್ಣ ಆಹಾರ ಸೇವಿಸಿ ಮತ್ತು ಸಾಕಷ್ಟು ನೀರು ಕುಡಿಯಿರಿ

ವಿಟಮಿನ್ ಅಂಶವುಳ್ಳ ಎ,ಸಿ,ಇ ಆಹಾರವನ್ನು ಸೇವಿಸಿ ಮತ್ತು ಜಿಂಕ್ ಅಂಶವುಳ್ಳ ಪಾಲಾಕ್, ಸಿಹಿ ಆಲೂಗಡ್ಡೆ, ಕುಂಬಳಕಾಯಿ, ಮಾವಿನ ಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಸೇವಿಸಿ. ಉರಿಯೂತ ನಿರೋಧಕ ಅಂಶಗಳನ್ನು ಒಳಗೊಂಡಿರುವ ಆಹಾರಗಳು ಮೊಡವೆ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಸಾಕಷ್ಟು ನೀರು ಕುಡಿಯುವುದರ ಮೂಲಕ ನಿಮ್ಮನ್ನು ಪುನರ್ಜಲೀಕರಿಸಿ ಇದು ಮೊಡವೆಗಳ ಉತ್ಪಾದನೆಯನ್ನು ನಿಲ್ಲಿಸುತ್ತದೆ.

English summary

Ways To Treat Acne Naturally

What would you do if suddenly, your mirror points out hideous-looking acne spots on your face just before attending a party or a social gathering? You would freak out and panick. Right? Well, most of us have faced such skin problems and we, do panick at times. But, what exactly are the causes of acne ? therefore, certain natural remedies, as listed below can come to our rescue:
X
Desktop Bottom Promotion