For Quick Alerts
ALLOW NOTIFICATIONS  
For Daily Alerts

ಹಣ್ಣು ಹಣ್ಣಾದ ಬಾಳೆಹಣ್ಣು, ಸೌಂದರ್ಯದ ಗಣಿ

By Super
|

ಬಾಳೆಹಣ್ಣು ಚೆನ್ನಾಗಿ ಹಣ್ಣಾಗಿದೆಯೇ ಎಂದು ಪರೀಕ್ಷಿಸುವುದು ಹೇಗೆ? ಇದರ ಸಿಪ್ಪೆಯಲ್ಲಿ ಚಿಕ್ಕ ಚುಕ್ಕೆಗಳಿದ್ದರೆ ಇದು ತಿನ್ನಲು ಸಕಾಲ ಎಂದು ತಿಳಿಯಬೇಕು. ಒಂದು ವೇಳೆ ಈ ಚುಕ್ಕೆಗಳು ಮಚ್ಚೆಗಾತ್ರಕ್ಕೆ ಬಂದಾಗ ಬಾಳೆಹಣ್ಣಿನ ಒಳಭಾಗ ಕೊಳೆಯಲು ಆರಂಭಿಸಿರುತ್ತದೆ. ತೀರಾ ದೊಡ್ಡದಾಗಿದ್ದರೆ ಒಳಗಿನ ತಿರುಳು ಅತಿಯಾಗಿ ಹಣ್ಣಾಗಿ ಇನ್ನೇನು ಕೊಳೆತು ಹೋಗುವಂತಿರುತ್ತದೆ. ಆದರೆ ಈಗ ಈ ಹಣ್ಣು ನಿಮ್ಮ ಸೌಂದರ್ಯವನ್ನು ಹಲವು ರೀತಿಯಲ್ಲಿ ಸಿದ್ಧವಾಗಿದೆ ಎಂಬುದು ನಿಮಗೆ ಗೊತ್ತಿತ್ತೇ? ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಹೌದು, ಕಳಿತ ಬಾಳೆಹಣ್ಣು ಚರ್ಮವನ್ನು ತಾಜಾ ಹಾಗೂ ಕಾಂತಿಯುಕ್ತವಾಗಿರಿಸಲು ಸಕ್ಷಮವಾಗಿದೆ. ಚರ್ಮಕ್ಕೆ ವಿಶೇಷ ಆರೈಕೆ ನೀಡುವುದು ಮಾತ್ರವಲ್ಲ, ಚರ್ಮದ ಕಲೆ ನಿವಾರಣೆ ಹಾಗೂ ಗುಂಗುರು ಕೂದಲಿನ ಸಿಕ್ಕುಗಳನ್ನು ಬಿಡಿಸಲೂ ನೆರವಾಗುತ್ತದೆ. ಆದ್ದರಿಂದ ಮುಂದಿನ ಬಾರಿ ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಎಸೆಯುವ ಮುನ್ನ ಇದರ ಆರೋಗ್ಯಕಾರಿ ಗುಣಗಳನ್ನು ಪಡೆಯುವ ಬಗ್ಗೆ ಯೋಚಿಸಿ. ಬಾಳೆಹಣ್ಣು: ಆರೋಗ್ಯಕ್ಕೂ ಸೈ, ಕೂದಲಿನ ಸೌಂದರ್ಯಕ್ಕೂ ಜೈ

ಮುಖಕ್ಕೆ ಕಳಿತ ಬಾಳೆಹಣ್ಣನ್ನು ಬಳಸುವ ಮೂಲಕ ಅಪಾಯಕಾರಿ ಹಾಗೂ ದುಬಾರಿ ರಾಸಾಯನಿಕಗಳನ್ನು ಬಳಸುವುದು ತಪ್ಪುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸಲು, ಚರ್ಮ ಕಳೆದುಕೊಂಡ ಜೀವಕೋಶಗಳನ್ನು ಮರುನಿರ್ಮಿಸಲು ಹಾಗೂ ಕಲೆಗಳನ್ನು ನಿವಾರಿಸಲು ಬಾಳೆಹಣ್ಣಿನಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ನೆರವಾಗುತ್ತವೆ. ಬಾಳೆಹಣ್ಣನ್ನು ಕಿವುಚಿ ನೇರವಾಗಿ ಮುಖದ ಮೇಲೆ ಹಚ್ಚಿಕೊಳ್ಳುವ ಮೂಲಕ ಚರ್ಮದ ಹೊರಗೆ ಹಾಗೂ ಚರ್ಮದ ಆಳಕ್ಕೆ ಉತ್ತಮ ಪ್ರಮಾಣದ ಪೋಷಕಾಂಶಗಳು ದೊರೆತು ಸಹಜಕಾಂತಿ ವೃದ್ದಿಸುತ್ತದೆ. ಏಕೆಂದರೆ

ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಬಾಳೆಹಣ್ಣಿನ ಪೋಷಕಾಂಶಗಳು ಸುಲಭವಾಗಿ ಇಳಿಯುತ್ತವೆ. ಇದರಿಂದ ಚರ್ಮದ ಸೆಳೆತ ಹೆಚ್ಚುತ್ತದೆ. ಪರಿಣಾಮವಾಗಿ ನೆರಿಗೆಗಳು ಇಲ್ಲವಾಗುತ್ತವೆ. ಚರ್ಮದ ಸೂಕ್ಷ್ಮರಂಧ್ರಗಳು ಕಿರಿದಾಗಿ ಇದರೊಳಗೆ ಧೂಳು ಮತ್ತು ಇತರ ಕಲ್ಮಶಗಳು ತುಂಬಿಕೊಳ್ಳುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಬನ್ನಿ ಬಾಳೆಹಣ್ಣಿನ ಅತ್ಯುತ್ತಮ ಉಪಯೋಗ ಪಡೆಯಲು ಇದನ್ನು ಬಳಸುವ ರೀತಿಯನ್ನು ಅರಿಯುವುದು ಅಗತ್ಯ. ಬಾಳೆಹಣ್ಣನ್ನು ಹೇಗೆ ಹಚ್ಚಿಕೊಳ್ಳಬೇಕು ಹಾಗೂ ಇದರ ಉಪಯೋಗ ಯಾವ ರೀತಿ ಎಂಬ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಎಣ್ಣೆಚರ್ಮದ ಜಿಡ್ಡು ನಿವಾರಿಸಲು

ಎಣ್ಣೆಚರ್ಮದ ಜಿಡ್ಡು ನಿವಾರಿಸಲು

ಒಂದು ಕಳಿತ ಬಾಳೆಹಣ್ಣನ್ನು ಕಿವುಚಿ ಮೂರು ದೊಡ್ಡಚಮಚ ಲಿಂಬೆರಸವನ್ನು ಸೇರಿಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಣ್ಣೆಚರ್ಮದ ಜಿಡ್ಡು ನಿವಾರಿಸಲು

ಎಣ್ಣೆಚರ್ಮದ ಜಿಡ್ಡು ನಿವಾರಿಸಲು

ಈ ಮುಖಲೇಪದಿಂದ ಚರ್ಮದಲ್ಲಿರುವ ಹೆಚ್ಚಿನ ಎಣ್ಣೆಯನ್ನು ನಿವಾರಿಸುತ್ತದೆ. ಆದರೆ ಇದು ಅಗತ್ಯವಿದ್ದಷ್ಟು ಎಣ್ಣೆಯನ್ನು ಅಲ್ಲಿಯೇ ಬಿಡುವ ಕಾರಣ ಚರ್ಮ ಒಣಗದಿರುವಂತೆ ನೋಡಿಕೊಳ್ಳುವುದು ಈ ಮುಖಲೇಪದ ವೈಶಿಷ್ಟ್ಯವಾಗಿದೆ.

ಒಣ ಮತ್ತು ಕೂದಲಿನ ಗುಂಗುರು ನಿವಾರಿಸಲು

ಒಣ ಮತ್ತು ಕೂದಲಿನ ಗುಂಗುರು ನಿವಾರಿಸಲು

ಒಂದು ಕಳಿತ ಬಾಳೆಹಣ್ಣನ್ನು ಕಿವುಚಿ ಅರ್ಧ ಕಪ್ ಮೊಸರು ಮತ್ತು ಒಂದು ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ಕೂದಲಿಗೆ ಹಚ್ಚುವಷ್ಟು ಗಾಢವಾಗಿರಬೇಕು. ಈ ಮಿಶ್ರಣವನ್ನು ಸ್ನಾನಕ್ಕೂ ಮೊದಲು ಕೂದಲ ಬುಡದಿಂದ ತುದಿಯವರೆಗೆ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಣ ಮತ್ತು ಕೂದಲಿನ ಗುಂಗುರು ನಿವಾರಿಸಲು

ಒಣ ಮತ್ತು ಕೂದಲಿನ ಗುಂಗುರು ನಿವಾರಿಸಲು

ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಕೂದಲು ಅತ್ಯಂತ ಸೌಮ್ಯ ಮತ್ತು ಕಾಂತಿಯುಕ್ತವಾಗುತ್ತದೆ ಹಾಗೂ ಸುಲಭವಾಗಿ ಬಾಚಲು ಮತ್ತು ಗುಂಗುರುಗಳನ್ನು ನಿವಾರಿಸಲು ನೆರವಾಗುತ್ತದೆ.

ನೈಸರ್ಗಿಕ ಆರ್ದ್ರತೆ ನೀಡಲು (ತೇವಕಾರಕ)

ನೈಸರ್ಗಿಕ ಆರ್ದ್ರತೆ ನೀಡಲು (ತೇವಕಾರಕ)

ಚರ್ಮದ ಆರೈಕೆಗೆ ಆರ್ದ್ರತೆ ಅಗತ್ಯ. ಒಂದು ವೇಳೆ ಆದ್ರತೆಯ ಕೊರತೆಯಾದರೆ ಚರ್ಮ ವಿಪರೀತವಾಗಿ ಒಣಗುತ್ತದೆ. ಇದಕ್ಕಾಗಿ ಉತ್ತಮ ಗುಣಮಟ್ಟದ ತೇವಕಾರಕ (Moisturiser) ಬಳಸಬೇಕು. ಮಾರುಕಟ್ಟೆಯಲ್ಲಿರುವ ದುಬಾರಿ ರಾಸಾಯನಿಕ ಆಧಾರಿತ ತೇವಕಾರಕಗಳು ತಕ್ಷಣಕ್ಕೆ ಉತ್ತಮ ಪೋಷಣೆ ನೀಡಿದರೂ ಸತತ ಬಳಕೆಯಿಂದ ಹಾನಿ ಉಂಟಾಗಬಹುದು.

ನೈಸರ್ಗಿಕ ಆರ್ದ್ರತೆ ನೀಡಲು (ತೇವಕಾರಕ)

ನೈಸರ್ಗಿಕ ಆರ್ದ್ರತೆ ನೀಡಲು (ತೇವಕಾರಕ)

ಕಳಿತ ಬಾಳೆಹಣ್ಣು ಒಂದು ಉತ್ತಮ ನೈಸರ್ಗಿಕ ತೇವಕಾರಕವಾಗಿದೆ. ಒಂದು ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ ನೇರವಾಗಿ ಮುಖ ಮತ್ತು ಒಣಚರ್ಮ ಇರುವ ಬೇರೆ ಅಂಗಗಳಿಗೆಲ್ಲಾ ಹಚ್ಚಿ ಹತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳುವ ಮೂಲಕ ಚರ್ಮಕ್ಕೆ ಉತ್ತಮ ಆರ್ದತೆ ನೀಡುತ್ತದೆ. ಪರಿಣಾಮವಾಗಿ ಮಗುವಿನ ಚರ್ಮದಂತಹ ಕೋಮಲ ಚರ್ಮ ನಿಮ್ಮದಾಗುತ್ತದೆ.

ಮುಖದ ನೆರಿಗೆಗಳನ್ನು ನಿವಾರಿಸಲು

ಮುಖದ ನೆರಿಗೆಗಳನ್ನು ನಿವಾರಿಸಲು

ಒಂದು ವೇಳೆ ನೆರಿಗೆಗಳು ನಿಧಾನವಾಗಿ ಆವರಿಸುತ್ತಿದ್ದು ವೃದ್ದಾಪ್ಯದ ಸೂಚನೆ ನೀಡುತ್ತಿದ್ದರೆ ಕಳಿತ ಬಾಳೆಹಣ್ಣಿಗೆ ಮೊರೆಹೋಗುವುದು ಉಚಿತ. ಏಕೆಂದರೆ ಕಳಿತ ಬಾಳೆಹಣ್ಣನ್ನು ಕಿವುಚಿ ನೇರವಾಗಿ ಹಚ್ಚಿ ಕೊಂಚ ಕಾಲ ನಯವಾಗಿ ಮಸಾಜ್ ಮಾಡಿದ ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಟವೆಲ್ ಒಂದನ್ನು ಮುಖಕ್ಕೆ ಒತ್ತಿ ಒಣಗಿಸುವ ಮೂಲಕ ಚರ್ಮಕ್ಕೆ ಸೆಳೆತ ದೊರೆತು ನೆರಿಗೆಗಳನ್ನು ದೂರವಾಗಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳುವುದು ಉತ್ತಮ.

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಚರ್ಮದ ಹೊರಪದರದ ಜೀವಕೋಶಗಳು ಸತ್ತಬಳಿಕವೂ ಚರ್ಮಕ್ಕೆ ಅಂಟಿಕೊಂಡೇ ಇರುತ್ತವೆ. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಸೌಂದರ್ಯ ಮಳಿಗೆಯಲ್ಲಿ ಇದಕ್ಕೆ ವಿಧಾನ ಲಭ್ಯವಿದೆ (exfoliation). ಆದರೆ ಇದು ದುಬಾರಿ ಹಾಗೂ ಸತತ ಬಳಕೆಯಿಂದ ಚರ್ಮಕ್ಕೆ ಹಾನಿಯೂ ಉಂಟಾಗಬಹುದು. ಆದರೆ ಬಾಳೆಹಣ್ಣು ಇದಕ್ಕಿಂತಲೂ ಉತ್ತಮವಾದ ಆರೈಕೆಯನ್ನು ನೀಡುತ್ತದೆ.

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು

ಇದಕ್ಕಾಗಿ ಒಂದು ಕಳಿತ ಬಾಳೆಹಣ್ಣು, ಮೂರು ದೊಡ್ಡ ಚಮಚ ಓಟ್ಸ್ ಮತ್ತು ಮೂರು ದೊಡ್ಡಚಮಚ ಕೋಕೋ ಪುಡಿ ಸೇರಿಸಿ ಮಿಶ್ರಣ ಮಾಡಿ. ಕೊಂಚ ಹಸಿಹಾಲು ನೇರಿಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ವೃತ್ತಾಕಾರದ ಮಸಾಜ್ ಮೂಲಕ ಚರ್ಮಕ್ಕೆ ಹತ್ತು ನಿಮಿಷಗಳ ಕಾಲ ಹಚ್ಚಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ನಿವಾರಿಸಲು

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳನ್ನು ನಿವಾರಿಸಲು

ಕಳಿತ ಬಾಳೆಹಣ್ಣನ್ನು ಕಿವುಚಿ ಕಣ್ಣುಗಳ ಕೆಳಗಿನ ವರ್ತುಲಗಳ ಮೇಲೆ ಐದು ನಿಮಿಷಗಳ ಕಾಲ ನಿತ್ಯವೂ ಒಂದು ಸಮಯದಲ್ಲಿ ಹಚ್ಚಿ. ಇದು ನಿಧಾನವಾಗಿ ಕಣ್ಣಿನ ಕೆಳಗಿನ ಕಪ್ಪುವರ್ತುಲಗಳನ್ನು ನಿವಾರಿಸುತ್ತದೆ. ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ, ಇದು ಕಪ್ಪುವರ್ತುಲಗಳನ್ನು ನಿವಾರಿಸಲು ನೆರವಾಗುತ್ತದೆ.

 ಹಿಮ್ಮಡಿಗಳ ಬಿರುಕುಗಳನ್ನು ನಿವಾರಿಸಲು

ಹಿಮ್ಮಡಿಗಳ ಬಿರುಕುಗಳನ್ನು ನಿವಾರಿಸಲು

ಎರಡು ಕಳಿತ ಬಾಳೆಹಣ್ಣುಗಳನ್ನು ಕಿವುಚಿ ಇಡಿಯ ಪಾದಗಳನ್ನು ಹಿಮ್ಮಡಿ ಸಹಿತ ಆವರಿಸುವಂತೆ ಮಾಡಿ. ಬಳಿಕ ಪಾದವನ್ನು ಅಲ್ಯೂಮಿನಿಯಂ ಫಾಯಿಲ್ ನಿಂದ ಪೂರ್ಣವಾಗಿ ಆವರಿಸುವಂತೆ ಮಾಡಿ ಒಂದು ಗಂಟೆ ಕಾಲ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈಗ ಹಿಮ್ಮಡಿಯ ಬಿರುಕುಗಳ ಭಾಗ ಅತ್ಯಂತ ನಯವಾಗಿರುತ್ತದೆ.

 ಹಿಮ್ಮಡಿಗಳ ಬಿರುಕುಗಳನ್ನು ನಿವಾರಿಸಲು

ಹಿಮ್ಮಡಿಗಳ ಬಿರುಕುಗಳನ್ನು ನಿವಾರಿಸಲು

ಇನ್ನೂ ಒಂದು ಸರಳ ವಿಧಾನವೆಂದರೆ, ಒರಟು ಕಲ್ಲಿನ ಮೇಲೆ ಉಜ್ಜಿಕೊಳ್ಳುವ ಅಥವಾ ಇದಕ್ಕೆಂದೇ ಇರುವ ಉಪಕರಣ ಬಳಸಿ ಈ ಚರ್ಮದ ಹೆಚ್ಚಿನ ಭಾಗವನ್ನು ನಿವಾರಿಸಿ. ಇನ್ನೂ ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಇಡಿಯ ರಾತ್ರಿ ಒಣಗಲು ಬಿಟ್ಟು ಬೆಳಿಗ್ಗೆ ಸ್ನಾನ ಮಾಡಿಕೊಳ್ಳಬೇಕು. ಇದರಿಂದ ಶೀಘ್ರವಾಗಿ ಹಿಮ್ಮಡಿಯ ಬಿರುಕುಗಳು ತುಂಬಿಕೊಳ್ಳುತ್ತವೆ.

English summary

How To Solve Your Beauty Problems With A Ripe Banana

Are you throwing the overripe bananas? This time please don't throw them away, as they can prove to be jewels for your beauty regimen. Overripe or ripe bananas can solve almost all the beauty problems and make your skin look young and radiant. Banana can be a saviour for your skin, as it can treat all your skin-related issues from dark circles to frizzy hair. Hence, do not throw away an 
 overripe banana, as you can make full use out of it to fix your beauty problems. 
Story first published: Wednesday, January 13, 2016, 13:10 [IST]
X
Desktop Bottom Promotion