For Quick Alerts
ALLOW NOTIFICATIONS  
For Daily Alerts

ಸೊಂಟದ ಹಿಂಭಾಗದಲ್ಲಿ ಕಾಡುವ 'ಕುರು' ಸಮಸ್ಯೆಗೆ ಮನೆಮದ್ದು

By Hemanth
|

ಮುಖ, ಕೂದಲು ಹೀಗೆ ಪ್ರತಿಯೊಂದರ ಕಡೆಗೂ ನಾವು ಹೆಚ್ಚಿನ ಗಮನಹರಿಸಿ ಆರೈಕೆ ಮಾಡುತ್ತಾ ಇರುತ್ತೇವೆ. ಮುಖದಲ್ಲಿ ಒಂದು ಸಣ್ಣ ಗುಳ್ಳೆ ಕಾಣಿಸಿಕೊಂಡರೂ ಗಾಬರಿ ಬೀಳುತ್ತೇವೆ. ಆದರೆ ನಮ್ಮದೇ ದೇಹದ ಭಾಗವಾಗಿರುವ ಸೊಂಟದ ಹಿಂಬದಿಯ ಕೆಳಭಾಗ(ಕುಂಡೆ)ದಲ್ಲಿ ಕಾಣಿಸಿಕೊಳ್ಳುವಂತಹ ಕುರು ಅಥವಾ ಗುಳ್ಳೆಗಳ ಬಗ್ಗೆ ನಾವು ಯಾವತ್ತಾದರೂ ಗಮನಹರಿಸಿದ್ದೇವೆಯಾ? ಇದು ಹಿಂಬದಿಯಲ್ಲಿ ಇರುವ ಕಾರಣದಿಂದ ನೋಡುವುದು ಕೂಡ ಕಷ್ಟ. ಕುರು (ಕಜ್ಜಿ) ಸಮಸ್ಯೆ ಹೋಗಲಾಡಿಸುವ 11 ಮನೆಮದ್ದು

ಆದರೆ ಅಧ್ಯಯನಗಳ ಪ್ರಕಾರ ಐದರಲ್ಲಿ ಒಬ್ಬ ವ್ಯಕ್ತಿ ಇದರಿಂದ ಬಳಲುತ್ತಾ ಇರುತ್ತಾನೆ. ಇದು ತುಂಬಾ ನೋವನ್ನು ಉಂಟುಮಾಡುವುದು. ಚರ್ಮದ ಸತ್ತ ಕೋಶ ಮತ್ತು ಬ್ಯಾಕ್ಟೀರಿಯಾಗಳಿಂದಾಗಿ ಇದು ಕಾಣಿಸಿಕೊಳ್ಳುವುದು. ಇದರಿಂದ, ಅತೀಯಾಗಿ ನೋವು ನೀಡುವ ಕುರು ಉತ್ಪತ್ತಿಯಾಗಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದರ ಬಗ್ಗೆ ಚಿಂತೆ ಮಾಡಬೇಡಿ. ಯಾಕೆಂದರೆ ಇದನ್ನು ನಿವಾರಿಸಲು ಇಲ್ಲಿ ಕೆಲವೊಂದು ಮದ್ದುಗಳನ್ನು ತಿಳಿಸಲಾಗಿದೆ. ಬಳಸಿಕೊಂಡು ಪ್ರಯೋಜನ ಪಡೆಯಿರಿ....

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಒಣ ಚರ್ಮ, ಕೂದಲಿನ ಸಮಸ್ಯೆ, ತಲೆಹೊಟ್ಟು ಮುಂತಾದವುಗಳಿಗೆ ರಾಮಬಾಣವಾಗಿರುವ ತೆಂಗಿನಕಾಯಿ ಉಪಚರಿಸದ ಸಮಸ್ಯೆಯೇ ಇಲ್ಲ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಫಂಗಲ್ ವಿರೋಧಿ ಗುಣಗಳು ಕುಂಡೆಯ ಕುರುಗಳನ್ನು ಶಮನ ಮಾಡಲು ನೆರವಾಗುವುದು. ಹತ್ತಿಯನ್ನು ತೆಂಗಿನ ಎಣ್ಣೆಯಲ್ಲಿ ಅದ್ದಿಕೊಂಡು ಭಾದಿತ ಸ್ಥಳಕ್ಕೆ ಹಚ್ಚಿಕೊಳ್ಳಿ. ರಾತ್ರಿಯಿರಿ ಹಾಗೆ ಬಿಡಿ. ಬೆಳಗ್ಗೆ ಇದರ ಮ್ಯಾಜಿಕ್ ನೋಡಿ.

ಟ್ರೀ ಟ್ರೀ ಎಣ್ಣೆ

ಟ್ರೀ ಟ್ರೀ ಎಣ್ಣೆ

ಇದು ಸತ್ತ ಕೋಶಗಳನ್ನು ತೆಗೆದು ಹಾಕಿ ಕಲೆಗಳನ್ನು ದೂರ ಮಾಡಿ ಚರ್ಮದ ಪಿಎಚ್ ಸಮತೋಲನವನ್ನು ಕಾಪಾಡುತ್ತದೆ. ಹತ್ತಿಯ ಪ್ಯಾಡ್ ಅನ್ನು ಬಿಸಿ ನೀರಿನಲ್ಲಿ ಅದ್ದಿಕೊಂಡ ಬಳಿಕ ಅದಕ್ಕೆ ಕೆಲವು ಹನಿ ಟ್ರೀ ಟ್ರೀ ಎಣ್ಣೆ ಹಾಕಿ ಮತ್ತು ಭಾದಿತ ಪ್ರದೇಶವನ್ನು ಅದರಿಂದ ಉಜ್ಜಿಕೊಳ್ಳಿ. ಇದು ಮೊಡವೆಯನ್ನು ಒಣಗಿಸುತ್ತದೆ.

ನಿಂಬೆರಸ

ನಿಂಬೆರಸ

ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ನಿಂಬೆರಸವು ಹಿಂದಿನ ಬದಿಯಲ್ಲಿ ಕಾಣಿಸಿಕೊಂಡ ಕುರುಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನಿಂಬೆರಸವನ್ನು ನೇರವಾಗಿ ಮೊಡವೆಗೆ ಹಾಕಿಕೊಂಡು 30 ನಿಮಿಷಗಳ ಬಳಿಕ ತೊಳೆಯಿರಿ. ಒಂದು ವೇಳೆ ಕುರು ಒಡೆದುಹೋಗಿದ್ದರೆ, ನಿಂಬೆರಸ ಹಾಕಲು ಹೋಗಬೇಡಿ. ಇದು ತುಂಬಾ ನೋವುಂಟು ಮಾಡಬಹುದು.

ಅಕ್ಕಿಯ ಸ್ಕ್ರಬ್

ಅಕ್ಕಿಯ ಸ್ಕ್ರಬ್

ಕುಂಡೆಯಲ್ಲಿ ಮೊಡವೆಗಳು ಮತ್ತೆ ಕಾಣಿಸಿಕೊಳ್ಳಬಾರದು ಎಂದಾದರೆ ಕಿತ್ತುಹಾಕುವುದು ತುಂಬಾ ಒಳ್ಳೆಯ ಉಪಾಯ. ಅಕ್ಕಿಯ ಹುಡಿ, ಮೊಸರು ಮತ್ತು ಜೇನಿನಿಂದ ಮಾಡಿದಂತಹ ಮಿಶ್ರಣದಿಂದ ಸ್ಕ್ರಬ್ ಮಾಡಿಕೊಳ್ಳಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಕ್ಕಿಯ ಸ್ಕ್ರಬ್

ಅಕ್ಕಿಯ ಸ್ಕ್ರಬ್

ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ರಂಧ್ರಗಳು ತೆರೆಯುವಂತೆ ಮಾಡುವುದು. ನೆನಪಿಡಿ ಆದಷ್ಟು ಸ್ವಚ್ಛತೆಯನ್ನು ಕಾಯ್ದುಕೊಳ್ಳಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಲು ಮರೆಯದಿರಿ....

English summary

Grandma Approved Tips For Acne-Free Butt

While we spend hours prepping our skin, taming our wild frizzy hair and perfecting our manicure, not many of us give the same attention to our derrière. If you run your hand along your backside and notice tiny painful bumps scarring the area, you are not the only one!
X
Desktop Bottom Promotion