For Quick Alerts
ALLOW NOTIFICATIONS  
For Daily Alerts

ಮೊಡವೆಯು ಒಡೆದರೆ ಆತಂಕ ಪಡಬೇಡಿ, ಈ ವಿಧಾನ ಅನುಸರಿಸಿ

By Super
|

ದೇಹದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಮುಖದ ತ್ವಚೆಯು ಮುಖ್ಯ ಪಾತ್ರ ವಹಿಸುತ್ತದೆ. ಮುಖವು ಅಂದವಾಗಿದ್ದರೆ ದೇಹದ ಸೌಂದರ್ಯ ತಾನಾಗಿಯೇ ಹೆಚ್ಚುತ್ತದೆ. ಒಟ್ಟಾರೆಯಾಗಿ ದೇಹವು ಲಕ್ಷಣದಿಂದಿರುತ್ತದೆ. ಆದ್ದರಿಂದ ಮುಖದ ತ್ವಚೆಯ ಆರೈಕೆಯನ್ನು ಉದಾಸೀನ ಮಾಡಬಾರದು. ಇದರಿಂದ ನಿಮ್ಮ ದೇಹದ ಸೌಂದರ್ಯಕ್ಕೆ ಆಪತ್ತು. ಹೌದು, ಮುಖದ ಅಂದವನ್ನು ಹಾಳುಮಾಡಲು ಇರುವುದೇ ಮೊಡವೆಗಳು. ಮೊಡವೆಗಳು ಬರುವಂತೆ ಯಾರೂ ಅಂದುಕೊಳ್ಳುವುದಿಲ್ಲ.

ಮೊಡವೆಗಳು ಉಂಟಾಗಲು ನಾನಾ ರೀತಿಯ ಕಾರಣಗಳಿವೆ. ಮೊಡವೆಗಳು ಬಂದರಂತೂ ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚಿನ ಆತಂಕ ಉಂಟುಮಾಡುತ್ತದೆ. ಜೀವನವೇ ಮುಗಿದ ಹಾಗೆ ಎಂದುಕೊಂಡುಬಿಡುತ್ತಾರೆ. ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಾರೆ. ಮೊಡವೆಗಳನ್ನು ನಿವಾರಿಸಲು ಈ ಹಿಂದೆ ಹಲವಾರು ನೈಸರ್ಗಿಕ ವಿಧಾನಗಳನ್ನು ಈ ತಾಣದಲ್ಲಿ ನೀಡಲಾಗಿದೆ. ಈ ಲೇಖನದಲ್ಲಿಯೂ ಸಹ ಕೆಲವು ವಿಶಿಷ್ಟ ಅನುಸರಣೆಗಳನ್ನು ನಿಮಗಾಗಿ ನೀಡಲಾಗಿದೆ. ಇವುಗಳ ಅನುಸರಣೆಯಿಂದ ಮೊಡವೆಗಳು ಮಾಯವಾಗುವುದು ನಿಶ್ಚಿತ. ವಿವರಗಳಿಗೆ ಮುಂದೆ ಓದಿ...

Acne breakout? Don't panic and follow these tips

ಮೊಡವೆಯನ್ನು ಕಿತ್ತುಕೊಳ್ಳದಿರಿ
ಮೊಡವೆಗಳನ್ನು ಬೆರಳುಗಳಿಂದ ಕಿತ್ತುಕೊಂಡರೆ ಕಲೆಯು ಹಾಗೆಯೇ ಉಳಿಯುತ್ತದೆ. ಆದ್ದರಿಂದ ಈ ಕ್ರಿಯೆಯನ್ನು ಮಾಡಬೇಡಿ. ಹೀಗೆ ಮಾಡಿದರೆ ಮೊಡವೆಯಲ್ಲಿನ ಕೀವು ಆಚೆ ಬಂದು ಅದು ಹರಡಿಕೊಂಡು ಮೊಡವೆಗಳು ಹೆಚ್ಚಾಗುವ ಅಪಾಯವಿರುತ್ತದೆ.

ಮನೆಯಲ್ಲಿಯೇ ತಯಾರಿಸಿರುವ ಈ ಪದಾರ್ಥವನ್ನು ಉಪಯೋಗಿಸಿ
ಈ ಸಮಸ್ಯೆಯ ನಿವಾರಣೆಗೆ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಟೋನರ್ ಅನ್ನು ತಯಾರಿಸಬಹುದು. ದೊಡ್ಡ ಲೋಟದ ಗ್ರೀನ್ ಚಹಾಗೆ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿಕೊಳ್ಳಿ. ನಂತರ ಸ್ವಲ್ಪ ಹನಿ ಪುದೀನ ತೈಲವನ್ನು ಬೆರೆಸಿಕೊಳ್ಳಿ. ಅದನ್ನು ಒಂದು ಬಾಟಲ್‌ನಲ್ಲಿ ಶೇಖರಿಸಿಡಿ. ನಂತರ ಪ್ರತಿದಿನ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಮೊಡವೆಗಳ ಭಾಗಕ್ಕೆ ದಿನಕ್ಕೆ 3 ರಿಂದ 4 ಬಾರಿ ಹಚ್ಚಿಕೊಂಡರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ಟ್ರೀ ಟ್ರೀ ತೈಲ ಬಳಸಿ
ಚಹಾ ಮರದ ತೈಲದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ಮೈಕ್ರೋಬ್ ನಿರೋಧಕ ಸತ್ವಗಳು ಹೇರಳವಾಗಿದ್ದು, ಇದು ಚರ್ಮದ ಒಳಹೊಕ್ಕು, ಚರ್ಮದ ರಂಧ್ರಗಳನ್ನು ನಿವಾರಿಸುತ್ತದೆ. ಇದು ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ನಾಶಗೊಳಿಸಿ ಚರ್ಮದ ಧೂಳನ್ನು ಹೊರಹಾಕಿ ಜಿಡ್ಡನ್ನು ಹೊರತೆಗೆಯುತ್ತದೆ. ಈ ತೈಲದ ಜೊತೆಗೆ ಕೆಲ ಹನಿಗಳ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಮೊಡವೆಗಳ ಮೇಲೆ ಹಚ್ಚಿಕೊಳ್ಳಿ. ಒಂದು ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಬೆಳಗ್ಗೆ ಎದ್ದ ಕೂಡಲೇ ಸ್ವಚ್ಛಗೊಳಿಸಿರಿ.

ರಕ್ತ ಶುದ್ಧೀಕರಿಸುವ ವಸ್ತುಗಳು
ಖ್ಯಾತ ಚರ್ಮರೋಗ ತಜ್ಞರಾದ ಡಾ.ಶೆಫಾಲಿ ತ್ರಾಸಿ ನೆರೂರ್ಕರ್ ರವರು ಸಲಹೆ ನೀಡುವ ಪ್ರಕಾರ ರಕ್ತ ಶುದ್ಧೀಕರಿಸುವ ಪಾನೀಯಗಳನ್ನು ಪ್ರತಿ ದಿನ ಸೇವಿಸಿದರೆ ಮೊಡವೆಗಳು ಬರದಂತೆ ನೋಡಿಕೊಳ್ಳುತ್ತದೆ. ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳಾದ ಹಾಗಲಕಾಯಿ, ಬೆಳ್ಳುಳ್ಳಿ, ನೆಲ್ಲಿಕಾಯಿ ಮತ್ತು ಕ್ಯಾಮೊಮೈಲ್ ಚಹಾ ಸೇವಿಸಿದರೆ ಹೆಚ್ಚು ಪ್ರಯೋಜನಕಾರಿ.

ಟೂತ್ ಪೇಸ್ಟ್
ಇದು ಒಂದು ಉತ್ತಮ ವಿಧಾನವಾಗಿದ್ದು, ಮೊಡವೆ ನಿವಾರಣೆಗೆ ಒಳ್ಳೆಯ ಸಾಧನ. ಬಿಳಿಯ ಟೂತ್‌ಪೇಸ್ಟ್ ಅನ್ನು ಮೊಡವೆಯ ಭಾಗಕ್ಕೆ ಹಚ್ಚಿಕೊಳ್ಳಿ. ೈದು ಮೊಡವೆಯ ಗಾತ್ರ ಹೆಚ್ಚಾಗದಂತೆ ತಡೆಯುತ್ತದೆ. ಇನ್ನೆರಡು ದಿನದಲ್ಲಿ ಮೊಡವೆಯು ಮಾಯವಾಗುತ್ತದೆ.

English summary

Acne breakout? Don't panic and follow these tips

Just the sight of a pimple can cause panic! It’s like a blotch on your pretty face and it seems like the end of the world, especially if it is just a day before an important occasion or a date night. The best idea is to keep calm and handle the acne breakout properly. Here are a few tips to help you.
Story first published: Thursday, February 18, 2016, 20:15 [IST]
X
Desktop Bottom Promotion