For Quick Alerts
ALLOW NOTIFICATIONS  
For Daily Alerts

ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ

By C.M.Prasad
|

ಬೇವಿನ ಮರವೆಂದರೆ ನಮಗೆಲ್ಲಾ ತಕ್ಷಣಕ್ಕೇ ಹೊಳೆಯುವ ಸುಲಭವಾಗಿ ಸಿಗುವ ಸಿದ್ಧೌಷದ ಮಾರ್ಗ. ಹಿಂದಿನ ದಿನಗಳಲ್ಲಿ ಹಳ್ಳಿಗಾಡಿನ ಜನರು ಬೇವನ್ನು ಹಲವಾರು ಕಾರಣಗಳಿಗೆ ಹೆಚ್ಚು ಉಪಯೋಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಗರಪ್ರದೇಶದ ಜನರೂ ಸಹ ಬೇವನ್ನು ಉಪಯೋಗಿಸಲು ಪ್ರಾರಂಭಿಸಿದ್ದಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರೂ ಬಳಸಬಹುದಾದ ಪ್ರಾಕೃತಿಕ ವಿಧಾನವೆಂದರೆ ಅದು ಬೇವು ಮಾತ್ರ ಎಂದರೆ ತಪ್ಪಾಗಲಾರದು. ಹಬ್ಬ-ಹರಿದಿನಗಳಲ್ಲಿ ಬೇವನ್ನು ಜನ ತಮ್ಮ ಜೀವನಕ್ಕೆ ಹೋಲಿಸಿ ಬೇವು-ಬೆಲ್ಲದ ರೂಪದಲ್ಲಿ ಸವಿಯುತ್ತಾರೆ ಹಾಗೂ ಅಕ್ಕಪಕ್ಕದ ಮನೆಯವರಿಗೆ ಹಂಚುತ್ತಾರೆ.

ಬೇವನ್ನು ಜೀವನದ ಕಹಿ ಅನುಭವಕ್ಕೆ ಹೋಲಿಕೆ ಮಾಡಿದ್ದಾರೆ. ಬೇವು ವಾಸ್ತವಿಕವಾಗಿ ಕಹಿಯಾಗಿದ್ದರೂ ಅದರ ಗುಣ ಆರೋಗ್ಯಕ್ಕೆ ಸಿಹಿಯನ್ನು ನೀಡುತ್ತದೆ. ಇದರಿಂದ ಅನೇಕ ಆರೋಗ್ಯ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಬಹುದು. ಆಯುರ್ವೇದದಲ್ಲಿ ಬೇವಿಗೆ ಅದರ ಗುಣವೈಶಿಷ್ಟ್ಯಗಳನ್ನು ಅರಿತು ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ. ಬೇವು ಚರ್ಮ ಹಾಗೂ ತ್ವಚೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಿಜಕ್ಕೂ ಮಾಯಾವಿಯಿದ್ದಂತೆ. ಬೇವಿಗೆ ಎಲ್ಲ ರೀತಿಯ ಚರ್ಮಗಳಿಗೆ ಹೊಂದಿಕೊಳ್ಳುವಂತಹ ವಿಶಿಷ್ಟ ಗುಣವಿದೆ. ಜಿಡ್ಡಾದ ಚರ್ಮ ಹಾಗೂ ಮೊಡವೆಗಳಿಗೆ ಬೇವು ನಿಜಕ್ಕೂ ವರವೇ ಸರಿ. ಬೇವಿನಲ್ಲಿರುವ ವಿಟಮಿನ್ ಸಿ ಸತ್ವದಿಂದ ಚರ್ಮ ಸಂಬಂಧಿತ ಸಮಸ್ಯೆಗಳು, ಮೊಡವೆಗಳು, ಮಂದ ಬುದ್ಧಿ ಹಾಗೂ ವಯಸ್ಸಾಗುವಿಕೆಯನ್ನು ಸುಲಭವಾಗಿ ನಿಯಂತ್ರಿಸಬಹುದು. ಇದರ ಬಳಕೆಯಿಂದ ನಿಮ್ಮ ಚರ್ಮ ಕಾಂತಿಯುತವಾಗಿ ಮಿರಮಿರನೆ ಮಿಂಚುತ್ತದೆ. ಆಶ್ಚರ್ಯ:ವೈದ್ಯ ಲೋಕವನ್ನೇ ತಲ್ಲಣಗೊಳಿಸಿದ ಬೇವಿನ ಬೀಜ!

Surprising Beauty Benefits Of Neem

ಚರ್ಮ ಸಂಬಂಧಿತ ಸಮಸ್ಯೆಗಳನ್ನು ನಿವಾರಣೆ ಮಾಡಲು ಬಳಸುವ ಅನೇಕ ವಿಧದ ಸೌಂದರ್ಯವರ್ಧಕಗಳಲ್ಲಿ ಬೇವನ್ನು ಬಳಸಲಾಗುತ್ತದೆ. ಅದರಲ್ಲಿ ರೋಗ ನಿರೋಧಕ ಶಕ್ತಿ ಮತ್ತು ದೇಹದ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯು ಸಂಪೂರ್ಣವಾಗಿ ಅಡಗಿದೆ. ಬೇವಿನಲ್ಲಿ ಸಕ್ರಿಯವಾಗಿ ನಿರ್ವಹಿಸುವ ಸಂಯುಕ್ತ ಸತ್ವಗಳು ಹೆಚ್ಚಾಗಿರುವುದರಿಂದ ಶಾರೀರಕ್ಕೆ ಹಾಗೂ ಚರ್ಮಕ್ಕೆ ರಾಮಬಾಣವಿದ್ದಂತೆ. ಬೇವಿನ ಎಲೆಗಳು ವರ್ಷಪೂರ್ತಿ ಸುಲಭವಾಗಿ ಸಿಗುವಂತಿದ್ದು, ಅದರ ಅಂಶದಿಂದ ತೇವಾಂಶ ಹೆಚ್ಚಿಸುವ ಸಾಧನಗಳಿಗೆ ಹಾಗೂ ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತಿದೆ. ಬೋಲ್ಡ್ ಸ್ಕೈ ತಾಣವು ಈಗಾಗಲೇ ನಿಮಗೆ ಬೇವಿನ ಮಹತ್ವದ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಿದೆ. ಈ ಲೇಖನದಲ್ಲಿಯೂ ಸಹ ನಿಮಗೆ ಬೇವಿನ ವಿಶಿಷ್ಟವಾದ ಸೌಂದರ್ಯವರ್ದಿಕ ಉಪಯೋಗಗಳ ಬಗ್ಗೆ ಬೆಳಕು ಹರಿಸಲಾಗಿದೆ. ವಿವರಗಳಿಗೆ ಮುಂದೆ ಓದಿ. . ಬೇವು: ಆರೋಗ್ಯದ ಪಾಲಿಗೆ ಸಿಹಿ ಸಂಜೀವಿನಿ!

ಚರ್ಮದ ಸೋಂಕಿನ ಸಮಸ್ಯೆ ನಿವಾರಣೆಗೆ
ಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ನಿರೋಧಕ ಮತ್ತು ರೋಗನಿರೋಧಕ ಸತ್ವಗಳು ಸಾಕಷ್ಟಿದೆ. ಆದ್ದರಿಂದ ಚರ್ಮದ ಸೋಂಕಿನ ನಿವಾರಣೆಗೆ ಪರಿಣಾಮಕಾರಿಯಾಗಿದೆ. ಚರ್ಮವನ್ನು ಒಣಗಿಸದೆ ಒಳಗಿನಿಂದ ತೇವಾಂಶ ನೀಡಿ, ಚರ್ಮದ ನವೆಯನ್ನು ಹಾಗೂ ಸೋಂಕನ್ನು ತ್ವರಿತವಾಗಿ ನಿವಾರಿಸುತ್ತದೆ.

ಮೊಡವೆಗಳನ್ನು ನಿವಾರಿಸುತ್ತದೆ
ಮೊಡವೆಗಳಿಗೆ ಬೇವು ನಿಜವಾದ ಮನೆಮದ್ದು. ಮೊದಲಿಗೆ ಬೇವಿನ ಎಲೆಗಳನ್ನು ಚೆನ್ನಾಗಿ ಜಜ್ಜಿ ರಸವನ್ನು ತೆಗೆಯಿರಿ. ನಂತರ ಅದಕ್ಕೆ ಮೊಸರನ್ನು ಬೆರೆಸಿ ಮುಖಕ್ಕೆ ನಯವಾಗಿ ಹಚ್ಚಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ನೀರಿನಿಂದ ಸ್ವಚ್ಛಗೊಳಿಸಿ. ಬೇವಿನಲ್ಲಿರುವ ರೋಗನಿರೋಧಕ ಶಕ್ತಿಯು ಮೊಡವೆಯನ್ನು ತ್ವರಿತವಾಗಿ ನಿವಾರಣೆ ಮಾಡಿ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಹಳ್ಳಿ ಮದ್ದು ಬೇವಿನ ಲೇಪನ-ಸೌಂದರ್ಯದ ಕೀಲಿ ಕೈ

ಕಾಂತಿಯುತ ಚರ್ಮಕ್ಕಾಗಿ
ಚರ್ಮದ ಸುಕ್ಕನ್ನು ನಿವಾರಿಸಲು ಬೇವು ನಿಜಕ್ಕೂ ಸಿದ್ಧೌಷದವೇ ಸರಿ. ಇದು ವಯಸ್ಸಾಗುವಿಕೆಯನ್ನು ಮತ್ತು ಆಯಾಸವನ್ನು ನಿಯಂತ್ರಿಸುತ್ತದೆ. ಚರ್ಮವು ಕೀವುಗಟ್ಟುವಿಕೆಯನ್ನು ಸಹ ತಡೆಯುತ್ತದೆ. ಬೇವನ್ನು ಫೇಸ್‍ಪ್ಯಾಕ್ ಆಗಿ ಬಳಸಿ ನಿಮ್ಮ ಸೌಂದರ್ಯದ ಅಂದವನ್ನು ಹೆಚ್ಚಿಸಿಕೊಳ್ಳಿ.

ಚರ್ಮದ ಉರಿಯನ್ನು ತಡೆಯುತ್ತದೆ
ಬೇವು ಒಂದು ಉತ್ತಮ ಉರಿಯೂತ ನಿವಾರಕವಾಗಿದ್ದು ಚರ್ಮದ ಉರಿಯೂತ ಮತ್ತು ಇತರ ತೊಂದರೆಗಳನ್ನು ಸಮರ್ಥವಾಗಿ ಎದುರಿಸಬಲ್ಲ ಕ್ಷಮತೆ ಹೊಂದಿದೆ. ಚರ್ಮದ ಕಲೆ, ಬಿಸಿಲಿಗೆ ಕಪ್ಪಗಾಗಿರುವುದು ಮೊದಲಾದ ತೊಂದರೆಗಳನ್ನು ಬೇವಿನ ಎಲೆಯ ಲೇಪನವನ್ನು ಹಚ್ಚುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

English summary

Surprising Beauty Benefits Of Neem

Neem, also known as Indian Lilac, is a herb that has varied health and beauty benefits. It is also an integral part of Ayurveda due to its high medicinal value. Neem proves to be a miracle for people who are associated with problematic skin issues. Neem has the versatile property of suiting every skin type.
Story first published: Monday, December 21, 2015, 19:20 [IST]
X
Desktop Bottom Promotion