For Quick Alerts
ALLOW NOTIFICATIONS  
For Daily Alerts

ಋತುಮಾನಕ್ಕೆ ತಕ್ಕಂತೆ ತ್ವಚೆಯ ಆರೈಕೆಗೂ ಆದ್ಯತೆ ನೀಡಿ

By ಡಾ.ಕಿರಣ್ ಜೋಶಿ
|

ದೇಶದ ಕೆಲವು ಭಾಗಗಳಲ್ಲಿ ಮುಂಗಾರು ತನ್ನ ಆಟವನ್ನು ತೋರಿಸಿದೆ, ಇನ್ನು ಕೆಲವೆಡೆ ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ. ಈ ಮಳೆಯ ಋತುವಿನಲ್ಲಿ, ತ್ವಚೆಯ ರಕ್ಷಣೆಯ ಕಾರ್ಯವನ್ನು ಮಾಡಬೇಕಿದೆ. ಇದು ಈ ಸಮಯದಲ್ಲಿ ಅಗತ್ಯವಾಗಿ ಆಗಬೇಕಾಗಿರುವ ಕಾರ್ಯವಾಗಿದೆ.

ತೇವ ಮತ್ತು ಒದ್ದೆಯ ಹವಾಮಾನವು ಸಾಮಾನ್ಯವಾಗಿ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವುದೇ ರೀತಿಯ ಚರ್ಮವನ್ನು ಹೊಂದಿದ್ದರೂ ಕೂಡ, ಕೆಲವೊಂದು ಟಿಪ್ಸ್ ಅನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಅದರಿಂದ ನೀವು ಬಯಸುವ ಸ್ವಚ್ಛ ಹಾಗೂ ಆರೋಗ್ಯಕರ ಮೈಬಣ್ಣವನ್ನು ನೀವು ಹೊಂದಬಹುದು:

ಮುಖಕ್ಕೆ ಸೋಪ್ ಮುಕ್ತ ಕ್ಲೆನ್ಸರ್‌ಗಳನ್ನು ಉಪಯೋಗಿಸಿ ಮತ್ತು ದೇಹಕ್ಕೆ ಸೌಮ್ಯ ಸ್ಕ್ರಬ್ ಅನ್ನು ಉಪಯೋಗಿಸಿ. ನಿಮಗೆ ಯಾವ ಕ್ಲೆನ್ಸರ್ ಸೂಕ್ತವಾಗುತ್ತದೆ ಎಂಬುದುನ್ನು ಅರಿಯಲು ಟ್ರಯಲ್ ಆಂಡ್ ಎರರ್ ಪ್ರಕ್ರಿಯೆಯನ್ನು ಅನುಸರಿಸಬೇಕು. ನಿಮ್ಮ ಮುಖವನ್ನು ತೊಳೆದ ಬಳಿಕ ಸ್ವಚ್ಛವಾದಂತೆ ಅನ್ನಿಸಿದರೆ ಹಾಗೂ ಒಣ ತ್ವಚೆಯ ಅನುಭವವಾಗಿಲ್ಲದಿದ್ದರೆ, ಸರಿಯಾದ ತ್ವಚೆ ಆರೈಕೆಯ ಉತ್ಪನ್ನ ಆಯ್ದುಕೊಳ್ಳುವಲ್ಲಿ ನೀವು

Tips for skincare during monsoon season

ಚಿನ್ನಕ್ಕೇ ಗುರಿಯಿಟ್ಟಂತಾಯಿತು! ವಿಶೇಷವಾಗಿ ತೇವಾಂಶಯುಕ್ತ ದಿನಗಳಲ್ಲಿ ಆಲ್ಕೋಹಾಲ್ ಮುಕ್ತ ಟೋನರ್ ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಇಡುವಲ್ಲಿ ತುಂಬಾ ಅದ್ಭುತವಾಗಿ ನೆರವಾಗಬಲ್ಲುದು. ಬಹುತೇಕ ಮಂದಿ ತಂಪು ಮತ್ತು ಮೋಡದ ವಾತಾವರಣ ಬಂದ ಕೂಡಲೇ ಸನ್‍ಸ್ಕ್ರೀನ್ ಉಪಯೋಗಿಸುವುದನ್ನು ನಿಲ್ಲಿಸಿಬಿಡುತ್ತಾರೆ.

ಸನ್‍ಸ್ಕ್ರೀನ್ ಉಪಯೋಗಿಸುವುದನ್ನು ಒಂದು ಹವ್ಯಾಸವನ್ನಾಗಿಸಿ, ಅದನ್ನು ವರ್ಷಪೂರ್ತಿ ಉಳಿಸಿಕೊಳ್ಳಿ. ಇದು 3 ರೀತಿಯ ಯುವಿ ಕಿರಣಗಳಾದ ಯುವಿಎ, ಯುವಿಬಿ ಮತ್ತು ಯುವಿಸಿಗಳಿಂದ ಆಗುವ ಫೊಟೋ ಹಾನಿಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮುಪ್ಪಿನಂತೆ ತೋರುವುದಕ್ಕೆ ಸೂರ್ಯನು ಒಂದು ಪ್ರಮುಖ ಅಪಾಯವಾಗಿದೆ ಮತ್ತು ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು.

ಮಳೆಯಲ್ಲಿ ಅವಾಂತರವಾಗುವುದನ್ನು ತಪ್ಪಿಸಲು ವಾಟರ್‍ಪ್ರೂಫ್ ಮೇಕಪ್ ಅನ್ನು ಆಯ್ದುಕೊಳ್ಳಿ. ಮಲಗುವ ಮುನ್ನ ಉತ್ತಮ ಕ್ಲೆನ್ಸರ್‍ನಿಂದ ಮೇಕಪ್ ಅನ್ನು ತೆಗೆಯುವುದು ಕೂಡಾ ಅಷ್ಟೇ ಪ್ರಮುಖವಾದ ಸಂಗತಿಯಾಗಿದೆ. ನಿಮ್ಮ ಸ್ನಾನವಾದ ತಕ್ಷಣ ಪೂರ್ತಿ ದೇಹಕ್ಕೆ ಮಾಯಿಶ್ವರೈಸರ್ ಅನ್ನು ಹಚ್ಚಿಕೊಳ್ಳಿ. ಇದು ಚರ್ಮದ ಮೇಲೆ ಒಂದು ತೆಳುವಾದ ತೇವಾಂಶಯುಕ್ತ ಪೊರೆಯನ್ನು ಉಳಿಸುತ್ತದೆ.

ಸೂರ್ಯನಿಗೆ ಅತಿಯಾಗಿ ಒಡ್ಡಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಿ. ವಿಟಮಿನ್ ಎ, ಸಿ, ಇ ಮತ್ತು ಸೆಲೆನಿಯಮ್, ಮ್ಯಾಂಗನೀಸ್ ಮತ್ತ ಮ್ಯಾಗ್ನೀಶಿಯಂ ನಂತಹ ಆಂಟಿ ಆಕ್ಸಿಡೆಂಟ್ ಗಳನ್ನು ಪ್ರತಿದಿನ ಸೇವಿಸಿ. ಲೈಕೋಪೇನ್, ಲ್ಯುಟಿನ್ ಮತ್ತು ಪಾಲಿಫಿನೋಲ್ ನಂತಹ ಕ್ಯಾರೋಟಿನಾಯ್ಡ್ ಹೆಚ್ಚಿರುವ ಆಹಾರ ವಸ್ತುಗಳು ತಟಸ್ಥ ಮುಕ್ತ ಮೂಲಸ್ವರೂಪದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪ್ರತಿದಿನ, ಮೈ ಉಜ್ಜಿ ಸ್ನಾನ, ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಇವು ನಾಲ್ಕು ಸಂಗತಿಗಳನ್ನು ಯಾವಾಗಲೂ ಅನುಸರಿಸಿ!

ಮಳೆಯ ಋತುವು ಯಾವಾಗಲೂ ಒದ್ದೆ ಬಟ್ಟೆ ಮತ್ತು ಚರ್ಮದೊಂದಿಗೆ ಕೊನೆಗೊಳ್ಳುವ ಸಮಯವಾಗಿದೆ. ತೇವಕ್ಕೆ ಈ ರೀತಿ ತೆರೆದುಕೊಳ್ಳುವುದರಿಂದ ಚರ್ಮದ ಸೋಂಕು ಅಥವಾ ಈ ಋತುವಿನಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಹತ್ತಿ ಬಟ್ಟೆಗಳನ್ನು ಧರಿಸುವುದು ಮತ್ತು ಒದ್ದೆಯಾದ್ದನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಬದಲಾಯಿಸುವುದು ಸೂಕ್ತ. ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದು ಕೂಡಾ ಸೋಂಕುಗಳಿಗೆ ಒಳಗಾಗದಂತೆ ಕಾಪಾಡಲು ನೆರಾಗಬಲ್ಲುದು.

ಈ ಋತುವಿನಲ್ಲಿ ಬ್ಲೀಚಿಂಗ್ ಮತ್ತು ಆಳವಾದ ಕ್ಲೆನ್ಸಿಂಗ್ ಫೇಶಿಯಲ್ ಮಾಡಿಸಿಕೊಳ್ಳದೇ ಇರುವುದು ಒಳ್ಳೆಯದು. ನಿಮ್ಮ ಚರ್ಮದ ರಂಧ್ರಗಳು ಈ ಸಮಯದಲ್ಲಿ ಸರಿಯಾಗಿ ಪ್ರತಿಸ್ಪಂದಿಸುವುದಿಲ್ಲ. ಅವು ಗಾಳಿಯಲ್ಲಿರುವ ಧೂಳನ್ನು ಹೀರಿಕೊಂಡು ಮೊಡವೆಗೆ ಕಾರಣವಾಗಬಹುದು.

ಮಳೆಯ ವೇಳೆ ಹೈಡ್ರೇಟ್ ಆಗಿ ಇರುವುದು ನಿಮ್ಮ ಚರ್ಮಕ್ಕೆ ಮುಖ್ಯವಾಗುತ್ತದೆ. ಮುಂಗಾರಿನ ಸಮಯದಲ್ಲಿ ಬಾಯಾರಿಕೆಯ ಬಯಕೆ ಅಷ್ಟೊಂದು ಬಲವಾಗಿ ಇರುವುದಿಲ್ಲ. ಹಾಗಾಗಿ ನಾವು ತೆಗೆದುಕೊಳ್ಳುವ ನೀರಿನ ಪ್ರಮಾಣ ಕಡಿಮೆಯಿರುತ್ತದೆ. ನಿಮ್ಮ ಚರ್ಮವನ್ನು ಒಳಗಿನಿಂದಲೇ ಹೈಡ್ರೇಟ್ ಆಗಿ ಇಡುವ ಮೂಲಕ ಮೈಬಣ್ಣದಲ್ಲಿ ಬದಲಾವಣೆಯನ್ನು ತರಲು ಸಾಧ್ಯ.

ಋತುಮಾನಕ್ಕೆ ತಕ್ಕಂಥ ಆರೋಗ್ಯಕರ ಆಹಾರ ಸೇವನೆಯನ್ನು ಕಾಪಾಡಿಕೊಳ್ಳುವುದು ಕೂಡಾ ಮುಖ್ಯ. ಹಣ್ಣು ಮತ್ತು ತರಕಾರಿಗಳನ್ನು ಶುಚಿಗೊಳಿಸುವುದು ತೀರಾ ಅಗತ್ಯ, ಯಾಕೆಂದರೆ, ಅವು ಭಾರಿ ಪ್ರಮಾಣದಲ್ಲಿ ಸೋಂಕಿಗೆ ಕಾರಣವಾಗಬಲ್ಲದ ಕೀಟಗಳನ್ನು ಹೊಂದಿರುತ್ತವೆ. ಉತ್ತಮ ಆಹಾರ, ಜತೆಗೆ ಆರೋಗ್ಯಕರ ಜೀವನಶೈಲಿ ನಿಮಗೆ ಉತ್ತಮವಾಗಿ ಕಾಣುವ ತ್ವಚೆಯನ್ನು ಒದಗಿಸುವಲ್ಲಿ ನೆರವಾಗುತ್ತದೆ.

English summary

Skin care tips for this monsoon season

In the monsoon skin need to be taken care more than the normal days, in the monsoon season our skin reacts with the humidity present in the ambience and turns more dull and flaky. To get over the monsoon skin problems try out these healthy tips
Story first published: Friday, August 21, 2015, 16:02 [IST]
X
Desktop Bottom Promotion