For Quick Alerts
ALLOW NOTIFICATIONS  
For Daily Alerts

ಮೊಡವೆಯ ಹುಟ್ಟಡಗಿಸುವ-ಅರಿಶಿನದ ಫೇಸ್ ಪ್ಯಾಕ್

|

ಯುವಕ ಮತ್ತು ಯುವತಿಯರೆಂಬ ಭೇದ ಭಾವವಿಲ್ಲದೆ, ತಾರುಣ್ಯದಲ್ಲಿರುವ ಎಲ್ಲರಿಗು ಮೊಡವೆಗಳು ಅತ್ಯಂತ ದೊಡ್ಡ ತಲೆನೋವಾಗಿರುತ್ತವೆ. ಇವುಗಳು ವೈಯುಕ್ತಿಕ ಮತ್ತು ಸಾಮಾಜಿಕ ಜೀವನದ ಮೇಲೆ ಹಲವಾರು ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಈ ಉರಿಯೂತಗಳು, ಮೊಡವೆಗಳಿಂದ ಮುಕ್ತರಾಗಲು ಹಲವಾರು ಮನೆ ಮದ್ದುಗಳು ಮತ್ತು ವಿಧಾನಗಳು ಇರುತ್ತವೆ. ಈ ಸ್ವಾಭಾವಿಕ ಪದಾರ್ಥಗಳನ್ನು ಎಲ್ಲರೂ ಬಳಸುತ್ತಾರೆ. ಅಂತಹ ಸ್ವಾಭಾವಿಕ ಉತ್ಪನ್ನಗಳಲ್ಲಿ ಅರಿಶಿನ, ಪುದಿನಾ ಮತ್ತು ತುಳಸಿಗಳು ಸೇರಿವೆ.

ಮೊಡವೆಗಳು ಅಸ್ಯಕರವಾದ ಒಂದು ತ್ವಚೆಯ ಸಮಸ್ಯೆಯಾಗಿದ್ದು, ಇವುಗಳು ಈ ವಯಸ್ಸಿನ ಹೆಣ್ಣು ಮತ್ತು ಗಂಡುಗಳಿಗೆ ವಿಶ್ವದಾದ್ಯಂತ ಕಂಡು ಬರುತ್ತವೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ ತ್ವಚೆಯಲ್ಲಿರುವ ಸೆಬಾಸಿಯಸ್ ಗ್ರಂಥಿಗಳು ಬ್ಯಾಕ್ಟೀರಿಯಾದಿಂದ ಅಥವಾ ಮಾಲಿನ್ಯದಿಂದ ಕಟ್ಟಿಕೊಂಡಾಗ ಆಗ ಮೊಡವೆಗಳು ಬೆಳೆಯಲು ಆರಂಭಿಸುತ್ತವೆ. ಸಾಮಾನ್ಯವಾಗಿ, ಮೊಡವೆಗಳು ಮುಖ, ಎದೆ ಮತ್ತು ಬೆನ್ನಿನ ಮೇಲೆ ಕಾಣಿಸಿಕೊಳ್ಳುತ್ತವೆ. ಅರಿಶಿನದಿಂದ ಅಧಿಕ ಪ್ರಯೋಜನಗಳನ್ನು ಪಡೆಯಲು ಈ ಕೆಳಕಂಡ ವಿಧಾನಗಳನ್ನು ಬಳಸಿ: ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ

Simple home remedies Of Using Turmeric To Cure Acne

1. 4 ಟೇಬಲ್ ಚಮಚ ಅರಿಶಿನವನ್ನು 1 ಟೇಬಲ್ ಚಮಚ ಹಾಲಿನೊಂದಿಗೆ ಬೆರೆಸಿ, ಪೇಸ್ಟ್ ಮಾಡಿಕೊಳ್ಳಿ. ನಿಮಗೆ ಅಗತ್ಯವಾದಲ್ಲಿ, ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸಹ ಸೇರಿಸಿ. ಈ ಮಿಶ್ರಣವನ್ನು ಸ್ವಚ್ಛವಾದ ಕಂಟೇನರ್‌ನಲ್ಲಿ ಹಾಕಿಟ್ಟುಕೊಂಡು ಪ್ರತಿದಿನ ಬಳಸುತ್ತ ಬನ್ನಿ. ನಿಮಗೆ ಅಗತ್ಯವಾದಲ್ಲಿ, ಇದನ್ನು ರೆಫ್ರಿಜಿರೇಟರಿನಲ್ಲಿ ಸಹ ಇಟ್ಟು ಬಳಸಬಹುದು.

2. ಮತ್ತೊಂದು ಬದಲಿ ವಿಧಾನವೆಂದರೆ, 8 ಟೇಬಲ್ ಚಮಚ ಅರಿಶಿನವನ್ನು 5 ಟೇಬಲ್ ಚಮಚ ಆಲೀವ್ ಎಣ್ಣೆಯ ಜೊತೆಗೆ ಬೆರೆಸಿಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಆಲೀವ್ ಎಣ್ಣೆಯ ಬದಲಿಗೆ ಎಳ್ಳೆಣ್ಣೆಯನ್ನು ಸಹ ಬೆರೆಸಿಕೊಳ್ಳಬಹುದು. ಇದರ ತೆಳುವಾದ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಅದನ್ನು ಸ್ವಚ್ಛವಾದ ಬಟ್ಟಲಿನಲ್ಲಿ ಹಾಕಿಕೊಂಡು, ಮೊಡವೆಗಳು ಇರುವ ಭಾಗದಲ್ಲಿ ಲೇಪಿಸಿ.

3. ಅರಿಶಿನವನ್ನು ಮೊಡವೆಗಳ ಮೇಲೆ ಬಳಸಲು ಮತ್ತೊಂದು ವಿಧಾನವಿದೆ, ಅದೇನೆಂದರೆ 2 ಟೀಚಮಚ ಮೊಸರಿನ ಜೊತೆಗೆ 1 ಟೀ ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸಹ ಬೆರೆಸಿ. ಇದನ್ನು ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಇದನ್ನು ಮುಖದ ಮೇಲೆ ಲೇಪಿಸಿಕೊಂಡು, ಒಣಗಲು ಬಿಡಿ. ಈ ಮಾಸ್ಕನ್ನು ವಾರಕ್ಕೆ ಎರಡು ಬಾರಿ ಬಳಸಿ. ಆಗ ಮೊಡವೆಗಳು ನಿವಾರಣೆಯಾಗಲು ನೆರವಾಗುತ್ತವೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಅಧಿಕವಾಗಿರುತ್ತದೆ, ಮತ್ತು ಇದು ಒಳ್ಳೆಯ ಎಕ್ಸ್‌ಫೋಲಿಯೇಟರ್ ಆಗಿ ಸಹ ಕೆಲಸ ಮಾಡುತ್ತದೆ.

4. 2 ಟೀ ಚಮಚ ಅರಿಶಿನ ಪುಡಿಯ ಜೊತೆಗೆ 1 ಟೀ ಚಮಚ ಓಟ್ಸ್ ಬೆರೆಸಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಂಡು, ಅದನ್ನು ಮಲಗುವ ಮುನ್ನ ಮೊಡವೆಗಳಿರುವ ಭಾಗಕ್ಕೆ ಲೇಪಿಸಿ. ಇದನ್ನು ಮೃದುವಾಗಿ 7-10 ನಿಮಿಷಗಳ ಕಾಲ ಮಸಾಜ್ ಮಾಡಿ, ರಾತ್ರಿಯಿಡೀ ಒಣಗಲು ಬಿಡಿ. ಈ ಅರಿಶಿನದ ಪೇಸ್ಟ್ ನಿಯಮಿತವಾಗಿ ಬಳಸುವುದರಿಂದ ಮೊಡವೆಗಳ ಗಾತ್ರವನ್ನು ಕುಗ್ಗಿಸಲು ನೆರವಾಗುತ್ತದೆ.

5. ಅರಿಶಿನವನ್ನು ಜೇನು ತುಪ್ಪದ ಜೊತೆಗೆ ಬೆರೆಸಿಕೊಂಡು ಮುಖಕ್ಕೆ ಲೇಪಿಸಿ. ಇದರಿಂದ ನಿಮ್ಮ ತ್ವಚೆಯ ಸಮಸ್ಯೆಗಳು ಮುಕ್ತವಾಗುತ್ತವೆ. ಇದು ನಿಮ್ಮ ತ್ವಚೆಯನ್ನು ಸ್ವಾಭಾವಿಕವಾಗಿ ಮೊಯಿಶ್ಚರೈಸ್ ಮಾಡುತ್ತವೆ ಮತ್ತು ನಿಮ್ಮ ತ್ವಚೆಯನ್ನು ಯಾವುದೇ ಲೋಪಗಳಿಲ್ಲದೆ ಹೊಳೆಯುವಂತೆ ಮಾಡುತ್ತವೆ.

6. ಅರಿಶಿನವನ್ನು ಮೊಟ್ಟೆಯ ಬಿಳಿ ಭಾಗದ ಜೊತೆಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಫೇಸ್ ಮಾಸ್ಕ್ ರೀತಿಯಲ್ಲಿ ಮುಖಕ್ಕೆ ಲೇಪಿಸಿ, ಒಣಗಲು ಬಿಡಿ. 15 ನಿಮಿಷದ ನಂತರ ಇದನ್ನು ತೊಳೆಯಿರಿ. ಒಂದು ವೇಳೆ ನಿಮಗೆ ಕಚ್ಛಾ ಮೊಟ್ಟೆಯ ವಾಸನೆ ಹಿಡಿಸದ ಪಕ್ಷದಲ್ಲಿ, ಇದಕ್ಕೆ ಒಂದೆರಡು ಹನಿ ಲಿಂಬೆರಸವನ್ನು ಬೆರೆಸಿಕೊಳ್ಳಬಹುದು. ಇದರಿಂದ ಮತ್ತಷ್ಟು ಒಳ್ಳೆಯ ಫಲಿತಾಂಶ ಪಡೆಯಬಹುದು.

7. ಅರಿಶಿನ ಪೇಸ್ಟ್ ಜೊತೆಗೆ ಕಡಲೆ ಹಿಟ್ಟು, ಹಾಲನ್ನು ಬೆರೆಸಿಕೊಂಡು ಒಂದು ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಇದನ್ನು ಪ್ರತಿದಿನ ನಿಮ್ಮ ಫೇಸ್ ಪ್ಯಾಕ್ ಆಗಿ ಬಳಸುವ ಮೂಲಕ ಮೊಡವೆಗಳ ಸಮಸ್ಯೆಯನ್ನು ದೂರ
ಮಾಡಿಕೊಳ್ಳಬಹುದು. ಈ ಮೇಲಿನ ಉಪಯೋಗಗಳ ಜೊತೆಗೆ ಅರಿಶಿನದಿಂದ ಹಲವಾರು ಪ್ರಯೋಜನಗಳು ಲಭ್ಯವಿವೆ. ಅದರಲ್ಲಿರುವ ಔಷಧೀಯ ಗುಣಗಳಿಂದಾಗಿ ಇದು ಅತ್ಯುತ್ತಮವಾದ ಮನೆಮದ್ದಾಗಿ ಗುರುತಿಸಲ್ಪಟ್ಟಿದೆ.

English summary

Simple home remedies Of Using Turmeric To Cure Acne

Turmeric is truly a magic spice. It doesn’t just add better flavor to your food but comes with a host of medicinal properties as well. Turmeric works wonders when it comes to improving complexion and fighting common skin problems like acne, pimples, dark sports, redness and many other skin-related problems. Turmeric for pimples is the simplest and one the most effective solutions.
Story first published: Thursday, October 29, 2015, 12:30 [IST]
X
Desktop Bottom Promotion