For Quick Alerts
ALLOW NOTIFICATIONS  
For Daily Alerts

ತ್ವಚೆಯ ಸರ್ವ ರೋಗಕ್ಕೂ- ಹುಣಸೆ ಹಣ್ಣಿನ ಫೇಸ್ ಪ್ಯಾಕ್

By Super
|

ಹುಣಸೆ ಮರದಲ್ಲಿ ದೆವ್ವ ಇರುತ್ತದೆ ಎಂಬ ಕಟ್ಟುಕಥೆ ನಂಬುವ ಜನ ಹುಣಸೆ ಮರದತ್ತ ಸುಳಿಯುವುದನ್ನು ನಿಲ್ಲಿಸುತ್ತಾರೆಯೇ ವಿನಃ ಹುಣಸೆಹಣ್ಣಿನ ಬಳಕೆಯನ್ನಲ್ಲ. ಏಕೆಂದರೆ ಭಾರತೀಯ ಅಡುಗೆಗಳಲ್ಲಿ ಹುಣಸೆ ಹಣ್ಣು ಪಾತ್ರ ಮಹತ್ವದ್ದಾಗಿದೆ. ಹುಣಸೆ ಹುಳಿ ಇಲ್ಲದ ಸಾಂಬಾರ್ ಅಥವಾ ಪಾನಿಪೂರಿ ಮೊದಲಾದ ತಿಂಡಿಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಹುಣಸೆ ಹಣ್ಣಿಗೆ ಹುಳಿಯಾದ ರುಚಿ ನೀಡಲು ಕಾರಣವಾದ ಟಾರ್ಟಾರಿಕ್ ಆಮ್ಲದ ಜೊತೆಗೇ ಹುಳಿಯಲ್ಲಿ ಹಲವು ವಿಟಮಿನ್‌ಗಳು, ಆಂಟ್ ಆಕ್ಸಿಡೆಂಟುಗಳು ಮತ್ತು ಖನಿಜಗಳಿವೆ.

ಈ ಪೋಷಕಾಂಶಗಳು ಆರೋಗ್ಯಕ್ಕೆ ಹೇಗೆ ಉತ್ತಮವೋ ಹಾಗೆಯೇ ದೇಹದ ಹೊರಗಿನಿಂದ ತ್ವಚೆಯ ಆರೈಕೆಗೂ ಉತ್ತಮವಾಗಿದೆ. ಅಡುಗೆ ಮನೆಯ ಅನಿವಾರ್ಯವಾದ ಈ ಸಾಂಬಾರ ಪದಾರ್ಥ ತ್ವಚೆಯ ಆರೈಕೆಯಲ್ಲಿ ವಿಶ್ವದಾದ್ಯಂತ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ತ್ವಚೆಗೆ ಹುಣಸೆ ಹಣ್ಣು ಹಲವು ರೀತಿಯಲ್ಲಿ ಫಲಕಾರಿಯಾಗಿದೆ. ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು, ಕಾಂತಿ ಹೆಚ್ಚಿಸಲು, ನೆರಿಗೆಗಳನ್ನು ನಿವಾರಿಸಲು, ಕೂದಲುದುರುವುದನ್ನು ತಡೆಯಲು ಮುಂತಾದ ಹಲವು ರೀತಿಗಳಲ್ಲಿ ಉಪಯುಕ್ತವಾಗಿದೆ. ನೈಸರ್ಗಿಕ ಫೇಸ್ ಪ್ಯಾಕ್-ಕಡಿಮೆ ವೆಚ್ಚ ಅಧಿಕ ಲಾಭ!

ಒಂದು ವೇಳೆ ನಿಮ್ಮ ಚರ್ಮ ಸೂಕ್ಷ್ಮವಾಗಿದ್ದರೆ ಯಾವುದೇ ಆರೈಕೆ ಪಡೆಯುವ ಮುನ್ನ ಚರ್ಮವೈದ್ಯರಲ್ಲಿ ಭೇಟಿ ನೀಡಿ ಸಲಹೆ ಪಡೆಯುವುದು ಉತ್ತಮ. ಸಾಮಾನ್ಯವಾಗಿ ಹುಣಸೆ ಹಣ್ಣು ಎಲ್ಲಾ ವಿಧದ ಚರ್ಮದವರಿಗೆ ಸೂಕ್ತವಾಗಿದೆ. ಕೆಳಗಿನ ಸ್ಲೈಡ್ ಶೋ ಹುಣಸೆ ಹಣ್ಣಿನ ಉಪಯೋಗ ಮತ್ತು ಪ್ರಯೋಜನಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ನೀಡುತ್ತದೆ.

ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಹುಣಸೆಹಣ್ಣಿನ ತಿರುಳು ಚರ್ಮದ ಕಾಂತಿ ಹೆಚ್ಚಿಸಲು ಸಮರ್ಥವಾಗಿದೆ. ಇದಕ್ಕಾಗಿ ಕೊಂಚ ಬಿಸಿನೀರಿನಲ್ಲಿ ಮುಳುಗುವಷ್ಟು ಹುಣಸೆ ಹುಳಿಯನ್ನು ನೆನೆಸಿಡಿ. ಕೊಂಚ ಹೊತ್ತಿನ ಬಳಿಕ ನೀರು ತಣ್ಣಗಾಗುತ್ತದೆ. ಈ ಹುಳಿಯನ್ನು ಚೆನ್ನಾಗಿ ಕಿವುಚಿ ತಿರುಳು ಹೊರಬರುವಂತೆ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಇದಕ್ಕೆ ಕೊಂಚ ಅರಿಶಿನದ ಪುಡಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗ ತಾನೇ ತೊಳೆದ ಮುಖ, ಕುತ್ತಿಗೆ ಕೈ ಮತ್ತು ಕಾಲುಗಳಿಗೆ ತೆಳುವಾಗಿ ಸವರಿ ಒಣಗಲು ಬಿಡಿ. ಸುಮಾರು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವುದರಿಂದ ಶೀಘ್ರವೇ ಚರ್ಮದ ಕಾಂತಿ ಹೆಚ್ಚುತ್ತದೆ.

ಚರ್ಮದ ಗುಳಿಗಳನ್ನು ನಿವಾರಿಸಲು (Cellulite)

ಚರ್ಮದ ಗುಳಿಗಳನ್ನು ನಿವಾರಿಸಲು (Cellulite)

ಸಾಮಾನ್ಯವಾಗಿ ನಡುವಯಸ್ಸಿಗೆ ಬರುತ್ತಿದ್ದಂತೆಯೇ ಮಹಿಳೆಯರ ಸೊಂಟದ ಮತ್ತು ತೊಡೆಗಳಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಶೇಖರವಾಗತೊಡಗುತ್ತದೆ. ಕೆಲವು ಕಾರಣಗಳಿಂದ ವಿಶೇಷವಾಗಿ ತೊಡೆ ಮತ್ತು ನಿತಂಬಗಳ ಭಾಗದಲ್ಲಿ ಚಿಕ್ಕ ಚಿಕ್ಕ ಕುಳಿಗಳು ಬೀಳತೊಡಗುತ್ತವೆ. ಕೆನ್ನೆಯ ಮೇಲೆ ಬಿದ್ದಿದ್ದರೆ ಸಂತೋಷಪಡುತ್ತಿದ್ದ ಮಹಿಳೆಯರಿಗೆ ಈ ಕುಳಿಗಳು (Cellulite) ಚಿಂತೆ ಮೂಡಿಸುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಗುಳಿಗಳನ್ನು ನಿವಾರಿಸಲು (Cellulite)

ಚರ್ಮದ ಗುಳಿಗಳನ್ನು ನಿವಾರಿಸಲು (Cellulite)

ಆದರೆ ಹುಣಸೆ ಹುಳಿಯ ಬಳಕೆಯಿಂದ ಇದನ್ನು ನಿವಾರಿಸಲು ಸಾಧ್ಯವಿದೆ. ಸುಮಾರು ಲಿಂಬೆ ಗಾತ್ರದ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿದ ಬಳಿಕ ಕಿವುಚಿ. ಇದಕ್ಕೆ ಒಂದು ಚಿಕ್ಕ ಚಮಚ ಲಿಂಬೆರಸ, ಒಂದು ಚಿಕ್ಕ ಚಮಚ ಸಕ್ಕರೆ ಮತ್ತು ಒಂದು ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ದ್ರವದಲ್ಲಿ ಅದ್ದಿದ ಹತ್ತಿಯುಂಡೆಯನ್ನು ಗುಳಿಗಳಿರುವ ಸ್ಥಳಕ್ಕೆ ತೆಳುವಾಗಿ ಹೆಚ್ಚಿ ಒಣಗಲು ಬಿಡಿ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಸ್ನಾನ ಮಾಡಿ.

ಸತ್ತ ಚರ್ಮದ ಜೀವಕೋಶಗಳನ್ನು ನಿವಾರಿಸಲು

ಸತ್ತ ಚರ್ಮದ ಜೀವಕೋಶಗಳನ್ನು ನಿವಾರಿಸಲು

ಸಾಮಾನ್ಯವಾಗಿ ನಿತ್ಯವೂ ನಮ್ಮ ಚರ್ಮದ ಜೀವಕೋಶಗಳು ಸತ್ತು ಆ ಜಾಗದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಇವು ಹೊರಚರ್ಮಕ್ಕೆ ತೆಳುವಾಗಿ ಅಂಟಿಕೊಂಡಿರುತ್ತವೆ. ಆದರೆ ಬೆವರು ಮತ್ತು ಇತರ ಕಾರಣಗಳಿಂದ ಚರ್ಮಕ್ಕೆ ಅಂಟಿಕೊಂಡೇ ಇರುತ್ತದೆ. ಇದನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಆದರೆ ಹುಣಸೆಹುಳಿಯಲ್ಲಿರುವ ಆಲ್ಫಾ-ಹೈಡ್ರಾಕ್ಸಿ-ಆಮ್ಲ ಈ ಪದರವನ್ನು ಸಡಿಲಗೊಳಿಸುವ ಕ್ಷಮತೆ ಹೊಂದಿದೆ. ಇದಕ್ಕಾಗಿ ತಣ್ಣೀರಿನಲ್ಲಿ ನೆನೆಸಿ ಹಿಚುಕಿದ ಕೊಂಚ ಹುಣಸೆ ಹುಳಿ, ಒಂದು ಚಕ್ಕ ಚಮಚ ಮೊಸರು ಮತ್ತು ಒಂದು ಚಮದ ಕಲ್ಲುಪ್ಪು ಸೇರಿಸಿ ಚೆನ್ನಾಗಿ ಕಲಕಿ. ಈ ದ್ರವವನ್ನು ತೆಳುವಾಗಿ ಮುಖದ ಮೇಲೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಕೆಲವು ನಿಮಿಷಗಳ ಬಳಿಕ ಎಲ್ಲಾ ಸತ್ತ ಜೀವಕೋಶಗಳು ಮತ್ತು ಸೂಕ್ಷ್ಮರಂಧ್ರಗಳ ಒಳಗಿದ್ದ ಕೊಳೆ ಸಹಾ ಕರಗಿ ಹೊರಬರುತ್ತದೆ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮ ಬಿಳಿಚಿಸಲು

ಚರ್ಮ ಬಿಳಿಚಿಸಲು

ಬಿಸಿಲು ಮತ್ತಿತರ ಕಾರಣಗಳಿಂದ ಚರ್ಮ ಸಹಜವರ್ಣದಿಂದ ದೂರವಾಗಿದ್ದರೆ ಇದನ್ನು ಸುಲಭವಾಗಿ ಬಿಳಿಚಿಸಬಹುದು. ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆ ಹುಳಿಯನ್ನು ಹಿಚುಕಿ ತೆಗೆದ ತಿರುಳು, ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಬಿಸಿಲಿಗೆ ಕಪ್ಪಗಾಗಿರುವ ಇತರ ಭಾಗಗಳಿಗೆ ತೆಳುವಾಗಿ ಹಚ್ಚಿ ಸುಮಾರು ಹನ್ನೆರಡು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಶೀಘ್ರವೇ ನಿಮ್ಮ ಚರ್ಮ ಸಹಜವರ್ಣ ಪಡೆಯುತ್ತದೆ.

ಕೂದಲುದುರುವಿಕೆಯನ್ನು ತಡೆಯಲು

ಕೂದಲುದುರುವಿಕೆಯನ್ನು ತಡೆಯಲು

ಕೂದಲ ಉದುರುವಿಕೆಗೆ ಕೂದಲ ಬುಡ ಶಿಥಿಲವಾಗುವುದೇ ಪ್ರಮುಖ ಕಾರಣ. ಇದನ್ನು ಗಟ್ಟಿಗೊಳಿಸಲು ಹುಣಸೆ ಹುಳಿಯ ತಿರುಳಿನಿಂದ ತಲೆಗೂದಲ ಬುಡವನ್ನು ನಯವಾಗಿ ಮಸಾಜ್ ಮಾಡಿ ಬಳಿಕ ಬಿಸಿನೀರಿನಲ್ಲಿ ಅದ್ದಿರುವ ಸ್ವಚ್ಛ ಟವೆಲ್ ಅಥವಾ ದಪ್ಪನಾದ ಬಣ್ಣೆಯನ್ನು ಸುತ್ತಿ. ಸುಮಾರು ಹದಿನೈದು ನಿಮಿಷಗಳ ಬಳಿಕ ಸೌಮ್ಯ ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿರಿ.

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ

ಕೆಲವರಿಗೆ ಕುತ್ತಿಗೆಯ ಕೆಳಭಾಗ ಮತ್ತು ಭುಜದ ಮೇಲ್ಭಾಗದಲ್ಲಿ ಕೊಂಚ ಕಪ್ಪಗಾಗಿರುತ್ತದೆ. ಇದನ್ನು ನಿವಾರಿಸಲು ಸಮಪ್ರಮಾಣದಲ್ಲಿ ಗುಲಾಬಿ ನೀರು ಮತು ಜೇನುತುಪ್ಪ ಮತ್ತು ಹುಣಸೆಹಣ್ಣು ಕಿವುಚಿದ ತಿರುಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಪ್ಪಗಾಗಿರುವ ಭಾಗದ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಚರ್ಮದ ನೆರಿಗೆ ನಿವಾರಿಸಲು

ಚರ್ಮದ ನೆರಿಗೆ ನಿವಾರಿಸಲು

ಹುಳಿಯಲ್ಲಿರುವ ವಿಟಮಿನ್, ಕರಗದ ನಾರು, ಟಾರ್ಟಾರಿಕ್ ಆಮ್ಲ, ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ಚರ್ಮಕ್ಕೆ ವಿಶೇಷವಾದ ಆರೈಕೆ ನೀಡುತ್ತದೆ ಹಾಗೂ ವೃದ್ಧಾಪ್ಯದಿಂದ ದೂರವಿರಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ನೆರಿಗೆ ನಿವಾರಿಸಲು

ಚರ್ಮದ ನೆರಿಗೆ ನಿವಾರಿಸಲು

ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆಹಣ್ಣು ಕಿವುಚಿದ ತಿರುಳು, ಜೇನುತುಪ್ಪ ಮತ್ತು ಕಡಲೆಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ. ಪ್ರತಿದಿನ ರಾತ್ರಿ ನೆರಿಗೆಗಳಿರುವಲ್ಲಿ ತೆಳುವಾಗಿ ಹಚ್ಚುವ ಮೂಲಕ ನೆರಿಗೆಗಳು ದೂರವಾಗುತ್ತವೆ. ಪರಿಣಾಮವಾಗಿ ವೃದ್ಧಾಪ್ಯವೂ ದೂರವೇ ಉಳಿಯುತ್ತದೆ.

English summary

How To Use Tamarind For Skin Care

Tamarind is good for health and is used in many Indian dishes. But have you heard of the benefits of tamarind for skin? Tamarind is good to nourish and cleanse both your skin and hair. It contains vitamins, antioxidants and minerals too. In fact, the use of tamarind for skin has been going on since decades. As it is a kitchen ingredient, it has been the part of beauty routines in many parts of the world.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more