For Quick Alerts
ALLOW NOTIFICATIONS  
For Daily Alerts

ದಾಳಿಂಬೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು

By Arshad
|

ಸಾಮಾನ್ಯವಾಗಿ ಸುಂದರವಾದ ಹಲ್ಲುಗಳನ್ನು ದಾಳಿಂಬೆಯ ಕಾಳುಗಳಿಗೆ ಹೋಲಿಸುವುದುಂಟು. ದಾಳಿಂಬೆ ಒಂದು ಪೋಷಕಾಂಶಗಳ ಆಗರವಾಗಿದ್ದು ಅತ್ಯಂತ ಉತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಕೆ ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಹೇರಳ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ. ಕೇವಲ ಕಾಳುಗಳು ಮಾತ್ರವಲ್ಲ, ಇದರ ಸಿಪ್ಪೆ ಸಹಾ ಹಲವು ಆರೋಗ್ಯಕರ ಮತ್ತು ಸೌಂದರ್ಯವರ್ಧಕ ಗುಣಗಳನ್ನು ಹೊಂದಿದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು
ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಹಲವು ತೊಂದರೆಗಳಿಂದ ಮುಕ್ತಿ ಪಡೆಯಬಹುದು. ಹೃದಯದ ತೊಂದರೆ, ಕ್ಯಾನ್ಸರ್ ಮೊದಲಾದ ತೊಂದರೆಗಳಿಂದ ರಕ್ಷಣೆ ನೀಡುವುದರ ಜೊತೆಗೇ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಉಲ್ಲಾಸದ ಮನೋಭಾವನ್ನು ಹೆಚ್ಚಿಸುವುದು, ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುವುದು ಮೊದಲಾದ ಆರೋಗ್ಯಕರ ಗುಣಗಳಿವೆ.

ಅಲ್ಲದೆ ಸೌಂದರ್ಯವರ್ಧಕವಾಗಿಯೂ ದಾಳಿಂಬೆ ವಿವಿಧ ರೀತಿಯಲ್ಲಿ ಉಪಯುಕ್ತವಾಗಿದೆ. ಇಂದು ಇದರ ಸೌಂದರ್ಯವರ್ಧಕ ಗುಣಗಳಲ್ಲಿ ಪ್ರಮುಖವಾದವುಗಳನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ:

ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುತ್ತದೆ

ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುತ್ತದೆ

ದಾಳಿಂಬೆಯ ಸಿಪ್ಪೆಯಲ್ಲಿ ಸೂರ್ಯನ ಪ್ರಖರ ಕಿರಣಗಳಿಂದ ಕಳೆಗುಂದಿದ ಚರ್ಮಕ್ಕೆ ಮರುಚೈತನ್ಯ ನೀಡುವ ಗುಣವಿದೆ. ಅಲ್ಲದೇ ಸೂರ್ಯರಶ್ಮಿಯಲ್ಲಿರುವ ಯು.ವಿ. (ಅತಿನೇರಳೆ) ಕಿರಣಗಳಿಗೆ ತಡೆಯೊಡ್ಡುವ ಕ್ಷಮತೆಯೂ ಇದೆ. ಇದರ ಸಿಪ್ಪೆಯ ಲೇಪನವನು ಸನ್ ಸ್ಕ್ರೀನ್ ಆಗಿಯೂ ಬಳಸಬಹುದು.

ಮುಪ್ಪನ್ನು ಮುಂದೂಡುತ್ತದೆ

ಮುಪ್ಪನ್ನು ಮುಂದೂಡುತ್ತದೆ

ದಾಳಿಂಬೆಯಲ್ಲಿರುವ ವಿಟಮಿನ್ ಎ,ಇ, ಮತ್ತು ಸಿ ಮುಪ್ಪಿಗೆ ಕಾರಣವಾಗುವ ಹಲವು ಕ್ರಿಯೆಗಳಿಗೆ ತಡೆಯೊಡ್ಡುವ ಮೂಲಕ ಮುಪ್ಪು ಶೀಘ್ರವೇ ಆವರಿಸುವುದನ್ನು ತಡೆಯುತ್ತದೆ. ಅಲ್ಲದೇ ಚರ್ಮದ ಬೆಳವಣಿಗೆಗೆ ಅಗತ್ಯವಿರುವ ಕೊಲಾಜೆನ್ ಎಂಬ ಪೋಷಕಾಂಶದ ಉತ್ಪತ್ತಿಗೂ ಸಹಕರಿಸುತ್ತದೆ.

ಜೀವಕೋಶಗಳ ಉತ್ಪತ್ತಿಗೆ ನೆರವಾಗುತ್ತದೆ

ಜೀವಕೋಶಗಳ ಉತ್ಪತ್ತಿಗೆ ನೆರವಾಗುತ್ತದೆ

ನಮ್ಮ ಚರ್ಮದ ಹೊರಕವಚದ ಜೀವಕೋಶಗಳು ಇತರ ಜೀವಕೋಶಗಳಿಗಿಂತ ಬೇಗನೇ ಸಾಯುತ್ತವೆ. ದಾಳಿಂಬೆಯ ನಿಯಮಿತ ಸೇವನೆಯಿಂದ ಚರ್ಮದ ಹೊರಪದರದ ಜೀವಕೋಶಗಳು ಹೆಚ್ಚು ಕಾಲ ಜೀವಂತವಿರುವಂತೆ ನೋಡಿಕೊಳ್ಳುವ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಚರ್ಮದ ಹೊಸ ಜೀವಕೋಶಗಳು ಬೇಗನೇ ಬೆಳೆಯಲು ನೆರವಾಗುವ ಮೂಲಕ ತಾರುಣ್ಯವನ್ನು ಕಾಪಾಡುತ್ತದೆ.

ಆರ್ದ್ರತೆಯನ್ನು ನೀಡುತ್ತದೆ

ಆರ್ದ್ರತೆಯನ್ನು ನೀಡುತ್ತದೆ

ದಾಳಿಂಬೆಯ ಬೀಜದ ಎಣ್ಣೆಯನ್ನು ಚರ್ಮಕ್ಕೆ ಆಗಾಗ ಸವರಿಕೊಳ್ಳುತ್ತಿರುವ ಮೂಲಕ ಚರ್ಮಕ್ಕೆ ಅಗತ್ಯವಿರುವ ಆರ್ದ್ರತೆಯನ್ನು ಒದಗಿಸಿ ತನ್ಮೂಲಕ ಒಣಚರ್ಮದ ಬಾಧೆಯನ್ನು ಕಡಿಮೆಗೊಳಿಸಬಹುದು. ಚಳಿಗಾಲದಲ್ಲಿ ಇದರ ಅಗತ್ಯ ಬಹಳವೇ ಇದೆ.

ಮೊಡವೆಗಳಿಂದ ರಕ್ಷಿಸುತ್ತದೆ

ಮೊಡವೆಗಳಿಂದ ರಕ್ಷಿಸುತ್ತದೆ

ಹದಿಹರೆಯದವರಿಗೆ ಅತೀವ ತೊಂದರೆ ನೀಡುವ ಮೊಡವೆಗಳ ನಿಗ್ರಹಕ್ಕೆ ದಿನಕ್ಕೊಂದು ಲೋಟ ದಾಳಿಂಬೆಯ ರಸವನ್ನು ಕುಡಿಯುವುದು ಉತ್ತಮ. ಇದರಲ್ಲಿರುವ ವಿಟಮಿನ್ ಸಿ ಮತ್ತು ವಿವಿಧ ಆಂಟಿ ಆಕ್ಸಿಡೆಂಟುಗಳು ಒಳಗಿನಿಂದ ಚರ್ಮಕ್ಕೆ ಪೋಷಣೆ ನೀಡುತ್ತದೆ. ಅಲ್ಲದೇ ಜೀರ್ಣಶಕ್ತಿಯನ್ನೂ ಉತ್ತಮಗೊಳಿಸುತ್ತದೆ.

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ದಾಳಿಂಬೆಯ ಸಿಪ್ಪೆ ಮುಖದ ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು, ಕಪ್ಪುತಲೆ ಮತ್ತು ಬಿಳಿಯ ಚುಕ್ಕೆಗಳನ್ನು ಹೊರತೆಗೆಯಲು ಸಮರ್ಥವಾಗಿದೆ. ಇದಕ್ಕಾಗಿ ಚೆನ್ನಾಗಿ ಒಣಗಿದ ದಾಳಿಂಬೆಯ ಸಿಪ್ಪೆಯನ್ನು ಪುಡಿಮಾಡಿ ಕಂದು ಸಕ್ಕರೆ (ಅಥವಾ ಕಪ್ಪು ಬೆಲ್ಲ) ಮತ್ತು ಕೊಂಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಲೇಪನವನ್ನು ಮಾಡಿಕೊಳ್ಳಿ.

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ

ಈ ಲೇಪನವನ್ನು ಮುಖಕ್ಕೆ ಹಚ್ಚಿ ಕೊಂಚ ಕಾಲ ಬಿಟ್ಟು ತಣ್ಣೀರಿನಿಂದ ಉಜ್ಜಿಕೊಳ್ಳುತ್ತಾ ತೊಳೆದುಕೊಳ್ಳಿ. ಇದರಿಂದ ಮುಖದ ಎಲ್ಲಾ ಕಲ್ಮಶಗಳು ಹೊರಬಂದು ಚರ್ಮ ಉಲ್ಲಸಿತವಾಗುತ್ತದೆ.

English summary

Beauty Benefits Of Pomegranate

Pomegranate is the healthiest and nutritious of all fruits and is known for its taste and flavour. It is a good source of fiber and is rich in vitamin C and K. This wonder fruit is loaded with antioxidants and has endless benefits. Not just the seeds, the peel of pomegranates also has several health and beauty benefits.
X
Desktop Bottom Promotion