For Quick Alerts
ALLOW NOTIFICATIONS  
For Daily Alerts

ನುಗ್ಗೆಕಾಯಿ ಎಲೆಗಳ ಸೌಂದರ್ಯವರ್ಧಕ ಗುಣಗಳು

|

ಸಾಮಾನ್ಯವಾಗಿ ಸಾಂಬಾರಿನಲ್ಲಿ ನುಗ್ಗೆಕಾಯಿಯನ್ನು ಕೊಂಚವಾದರೂ ಬಳಸಲಾಗುತ್ತದೆ. ಪಡ್ಡೆ ಯುವಕರಿಂದ 'ಟಿಂಬರ್' ಎಂದು ಕರೆಯಲ್ಪಡುವ ಈ ನುಗ್ಗೆಕಾಯಿ ಆರೋಗ್ಯಕ್ಕೆ ಎಷ್ಟು ಉತ್ತಮವೋ ಅಷ್ಟೇ ಇದರ ಎಲೆಗಳು ಸೌಂದರ್ಯಕ್ಕೂ ಉಪಯುಕ್ತವಾಗಿವೆ. ಆಯುರ್ವೇದದಲ್ಲಿ ನುಗ್ಗೆಗಿಡದ ಎಲ್ಲಾ ಭಾಗಗಳು- ಅಂದರೆ ಎಲೆ, ಕಾಂಡ, ತೊಗಟೆ, ಬೇರು ಎಲ್ಲವೂ ವಿವಿಧ ಔಷಧೀಯ ಗುಣಗಳನ್ನು ಹೊಂದಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ನಮ್ಮ ದೇಹದ ಬಾಹ್ಯ ಅಂಗಗಳಾದ ಚರ್ಮ ಮತ್ತು ಕೂದಲು ಪರಿಸರಕ್ಕೆ ಮುಕ್ತವಾಗಿ ತೆರೆದಿರುವ ಕಾರಣ ಹೆಚ್ಚಿನ ಆರೈಕೆಯ ಅಗತ್ಯವಿದೆ. ಗಾಳಿಯಲ್ಲಿರುವ ವಿವಿಧ ಕ್ರಿಮಿ, ಪರಾಗರೇಣು, ಕಲುಷಿತ ಗಾಳಿ ಮತ್ತಿತರ ಕಣಗಳಿಗೆ ಸತತವಾಗಿ ಒಡ್ಡುವ ಈ ಅಂಗಗಳು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ನುಗ್ಗೆ ಎಲೆಗಳಲ್ಲಿ ವಿವಿಧ ವಿಟಮಿನ್ ಗಳು, ಖನಿಜಗಳು ಮತ್ತು ಮುಖ್ಯವಾಗಿ ಕ್ಯಾಲ್ಸಿಯಂ ಇದೆ. ಮ್ಯಾಂಗನೀಸ್, ಸಿಲಿಕಾ, ಮೆಗ್ನೀಶಿಯಂ, ಸತು, ಕಬ್ಬಿಣ, ತಾಮ್ರದಂತಹ ಲೋಹಗಳೂ ಹೇರಳ ಪ್ರಮಾಣದಲ್ಲಿವೆ. ಈ ಪುಟ್ಟ ಎಲೆಗಳಲ್ಲಿ ಚರ್ಮಕ್ಕೆ ಆರ್ದ್ರತೆ ನೀಡುವ ದೊಡ್ಡ ಗುಣವಿದೆ. ಆರೋಗ್ಯಕರ ರುಚಿಕರ ನುಗ್ಗೆಕಾಯಿ ಸಾಂಬಾರ್

ಇದೇ ಕಾರಣಕ್ಕೆ ನುಗ್ಗೆ ಎಲೆಯನ್ನು ಅರೆದು ಮನೆಯಲ್ಲಿಯೇ ಸೌಂದರ್ಯವರ್ಧಕವಾಗಿ ಹಚ್ಚಿಕೊಳ್ಳಬಹುದು. ಎಷ್ಟೋ ಮೂಲಿಕೆ ಆಧಾರಿಕ ಸೌಂದರ್ಯಪ್ರಸಾದನಗಳಲ್ಲಿ ನುಗ್ಗೆ ಎಲೆಗಳನ್ನು ಪ್ರಮುಖವಾಗಿ ಬಳಸಲಾಗಿದೆ. ಇಂದು ನುಗ್ಗೆಮರದ ಎಲೆಗಳ ಗುಣಗಳು ಹೇಗೆ ಸೌಂದರ್ಯವರ್ಧಕವಾಗಿ ಉಪಯೋಗವಾಗುತ್ತದೆ ಎಂಬುದನ್ನು ನೋಡೋಣ...

 ವೃದ್ಧಾಪ್ಯವನ್ನು ದೂರವಿಸಿರುತ್ತದೆ

ವೃದ್ಧಾಪ್ಯವನ್ನು ದೂರವಿಸಿರುತ್ತದೆ

ವೃದ್ಧಾಪ್ಯದ ಸೂಚನೆಯನ್ನು ಚರ್ಮದ ನೆರಿಗೆಗಳು ಪ್ರಚುರಪಡುಸುತ್ತವೆ ಚರ್ಮ ತನ್ನ ಸಹಜ ಸೆಳೆತವನ್ನು ಕಳೆದುಕೊಂಡು ಜೋಲುಬೀಡುವುದೇ ಇದಕ್ಕೆ ಪ್ರಮುಖ ಕಾರಣ. ನುಗ್ಗೆ ಎಲೆಯಲ್ಲಿರುವ ವಿವಿಧ ಪೋಷಕಾಂಶಗಳು ಚರ್ಮ ಸೆಳೆತ ಕಳೆದುಕೊಳ್ಳದಿರಲು ನೆರವಾಗುತ್ತದೆ. ಇದು ಚರ್ಮವನ್ನು ಶುದ್ದಗೊಳಿಸಿ ಚರ್ಮಕ್ಕೆ ಅಂಟಿರಬಹುದಾದ ಬ್ಯಾಕ್ಟೀರಿಯಾಗಳನ್ನು ತೊಲಗಿಸಿ ಸೋಂಕಾಗುವುದರಿಂದ ರಕ್ಷಿಸುತ್ತದೆ. ಹಾಗೂ ಚರ್ಮ ಜೋಲು ಬೀಳಲು ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣದ ವಿರುದ್ಧ ಹೋರಾಡುತ್ತದೆ. ನುಗ್ಗೆ ಎಲೆಗಳನ್ನು ನಯವಾಗಿ ಅರೆದು ನುಣ್ಣನೆಯ ಲೇಪನವನ್ನಾಗಿ ಮಾಡಿ ಮುಖ, ಕುತ್ತಿಗೆ ಮತ್ತು ಕೈಗಳಿಗೆಹಚ್ಚಿ ಕೊಂಚ ಸಮಯ ಬಿಟ್ಟು ತಣ್ಣೀರಿನಲ್ಲಿ ತೊಳಿದುಕೊಳ್ಳುವ ಮೂಲಕ ಚರ್ಮ ಉತ್ತಮ ಪೋಷಣೆಯನ್ನು ಪಡೆಯುತ್ತದೆ.

ಮೊಡವೆಗಳನ್ನು ದೂರವಿರಿಸುತ್ತದೆ

ಮೊಡವೆಗಳನ್ನು ದೂರವಿರಿಸುತ್ತದೆ

ಹದಿಹರೆಯದಲ್ಲಿ ಕಾಡುವ ಮುಖದ ಮೊಡವೆಗಳನ್ನು ನಿವಾರಿಸಲು ಹಾಗೂ ಇನ್ನಷ್ಟು ಬರದಂತೆ ತಡೆಯಲು ನುಗ್ಗೆ ಎಲೆಗಳನ್ನು ಕೊಂಚ ಲಿಂಬೆರಸದೊಂದಿಗೆ ಅರೆದು ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಮೊಡವೆಗಳ ಕಾಟದಿಂದ ಮುಕ್ತರಾಗಬಹುದು.

ರಕ್ತವನ್ನು ಶುದ್ಧೀಕರಿಸುವಲ್ಲಿ ನೆರವಾಗುತ್ತದೆ

ರಕ್ತವನ್ನು ಶುದ್ಧೀಕರಿಸುವಲ್ಲಿ ನೆರವಾಗುತ್ತದೆ

ರಕ್ತದಲ್ಲಿ ವಿಷಕಾರಕ ಕಣಗಳಿದ್ದರೆ (ಇದಕ್ಕೆ ಮುಖ್ಯ ಕಾರಣ ಮೂತ್ರವಿಸರ್ಜನೆಯನ್ನು ಹೆಚ್ಚು ಹೊತ್ತು ತಡೆದಿಟ್ಟುಕೊಳ್ಳುವುದು) ದೇಹದ ಇತರ ಅಂಗಗಳ ಜೊತೆಗೇ ಚರ್ಮವೂ ಬಾಧೆಗೊಳಗಾಗುತ್ತದೆ. ಪರಿಣಾಮವಾಗಿ ಚರ್ಮ ಅಲ್ಲಲ್ಲಿ ಕೆಂಪಗಾಗುವುದು, ತುರಿಕೆ ಮೊದಲಾದ ತೊಂದರೆಗಳು ಎದುರಾಗುತ್ತವೆ. ರಕ್ತವನ್ನು ಶುದ್ಧೀಕರಿಸಲು ನುಗ್ಗೆ ಎಲೆಗಳನ್ನು ಜಜ್ಜಿ ಹಿಂಡಿ ತೆಗೆದ ರಸವನ್ನು ಬಿಸಿಹಾಲಿನಲ್ಲಿ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ (ಒಂದು ಲೋಟಕ್ಕೆ ಎರಡು ಚಿಕ್ಕ ಚಮಚ). ಇದು ರಕ್ತವನ್ನು ಶುದ್ಧೀಕರಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಚರ್ಮದ ಕಾಂತಿ ಹೆಚ್ಚಲು ಸಹಕರಿಸುತ್ತದೆ

ಚರ್ಮದ ಕಾಂತಿ ಹೆಚ್ಚಲು ಸಹಕರಿಸುತ್ತದೆ

ನುಗ್ಗೆ ಎಲೆಯ ಪೋಷಕಾಂಶಗಳನ್ನು ಪಟ್ಟಿಮಾಡಿದಾಗ ಸುಮಾರು ಮೂವತ್ತು ವಿಧದ ಆಂಟಿ ಆಕ್ಸೆಡೆಂಟುಗಳು ಇದರಲ್ಲಿರುವುದು ಕಂಡುಬಂದಿದೆ. ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುವ ಈ ಆಂಟಿ ಆಕ್ಸಿಡೆಂಟುಗಳನ್ನು ಪಡೆಯಲು ಹಸಿ ಎಲೆಗಳನ್ನು ಅರೆದು ಚರ್ಮಕ್ಕೆ ಲೇಪಿಸಬಹುದು. ಇಲ್ಲದಿದ್ದರೆ ಇದರ ಎಲೆಗಳನ್ನು ಒಣಗಿಸಿ ಹಿಂಡಿ ತೆಗೆದ ತೈಲವನ್ನೂ ಹಚ್ಚಿಕೊಳ್ಳಬಹುದು.

ಉತ್ತಮ ಮುಖಲೇಪ (facepack) ವನ್ನಾಗಿ ಬಳಸಬಹುದು

ಉತ್ತಮ ಮುಖಲೇಪ (facepack) ವನ್ನಾಗಿ ಬಳಸಬಹುದು

ಚರ್ಮ ಸಹಜ ಕಾಂತಿ ಪಡೆಯಲು ಮಾರುಕಟ್ಟೆಯಲ್ಲಿ ಹಲವು ಮುಖಲೇಪಗಳು ಲಭ್ಯವಿವೆ. ಆದರೆ ದುಬಾರಿಯಾದ ಇವುಗಳ ಬದಲಿಗೆ ಸುಲಭವಾಗಿ ಇನ್ನಷ್ಟು ಪರಿಣಾಮಕಾರಿಯಾದ ಮುಖಲೇಪವನ್ನು ನಾವೇ ತಯಾರಿಸಿಕೊಳ್ಳಬಹುದು. ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.

English summary

Beauty Benefits Of Drumstick Leaves

Most of us use drumsticks in various recipes and enjoy its taste but researchers say that almost every part of that tree (leaves, branches etc) offers some benefits. In this post, let us discuss about the benefits of drumstick leaves for skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more