For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತ್ವಚ್ಛೆಯ ಆರೈಕೆ

By Hemanth Amin
|

ತ್ವಚೆಯ ಆರೈಕೆಯ ವಿಷಯಕ್ಕೆ ಬಂದರೆ ಪುರುಷನು ಬಹಿಷ್ಕೃತನಲ್ಲ. ಇಂದಿನ ದಿನಗಳಲ್ಲಿ ಹೊಳೆಯುವ ಮತ್ತು ಉತ್ತಮವಾಗಿ ಕಾಣುವ ತ್ವಚೆ ಪುರುಷರಿಗೆ ಹೆಮ್ಮೆಯೆನಿಸುತ್ತದೆ. ಚಳಿಗಾಲ ಬರುತ್ತಿರುವಂತೆ ತ್ವಚೆಗೆ ಹಲವಾರು ಸಮಸ್ಯೆಗಳು ಬರಬಹುದು. ಚಳಿಗಾಲದಲ್ಲಿ ಒಣ ಮತ್ತು ಶೀತ ಗಾಳಿಯಿಂದಾಗಿ ತ್ವಚೆ ಒಣಗಿ ಹೋಗುವ ಕಾರಣ ಪುರುಷರು ತ್ವಚೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ದೇಹದಲ್ಲಿ ತೇವಾಂಶದ ಕೊರತೆಯಿಂದ ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಬಿಳಿ ನವೆ ತೇಪೆಗಳು ಕಾಣಿಸಿಕೊಳ್ಳುತ್ತವೆ.
ತೇವಾಂಶವುಳ್ಳ ಲೋಶನ್ ಗಳನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ತ್ವಚೆಯಲ್ಲಿ ತೇವಾಂಶ ಕಾಪಾಡಿಕೊಳ್ಳಬಹುದು. ಮಹಿಳೆಯರಿಗಿಂತ ಪುರುಷರ ಚರ್ಮವು ತುಂಬಾ ಗಡುಸಾಗಿರುವ ಕಾರಣ ಪುರುಷರಿಗಾಗಿ ತಯಾರಿಸುವ ಫಾರ್ಮುಲಾಗಳನ್ನು ಆಯ್ಕೆ ಮಾಡಿದೆ. ಮಹಿಳೆಯರಿಗಾಗಿ ಮಾಡಿರುವಂತಹ ಮೊಶ್ಚಿರೈಸರ್ ಕ್ರೀಮ್ ಅಥವಾ ಲೋಶನ್ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ನಿಮ್ಮ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಮುಖದ ಚರ್ಮವು ಭಿನ್ನವಾಗಿರುವ ಕಾರಣ ಮುಖ ಮತ್ತು ದೇಹದ ಇತರ ಭಾಗಕ್ಕೆಂದು ಎರಡು ಬಗೆಯ ಲೋಶನ್ ಗಳನ್ನು ಆಯ್ಕೆ ಮಾಡಬೇಕು.
ತುಟಿಗೆ ಮೊಶ್ಚಿರೈಸರ್ ಮುಲಾಮ್ ಹಚ್ಚಿಕೊಳ್ಳಲು ನಾಚಬೇಡಿ. ಇದರಿಂದ ನಿಮ್ಮ ತುಟಿಯಲ್ಲಿ ತೇವಾಂಶ ಉಳಿಯುತ್ತದೆ ಮತ್ತು ಮೃದುವಾಗುತ್ತದೆ. ಒಡೆದಿರುವ ತುಟಿಗಳಿರುವ ನಿಮ್ಮನ್ನು ಮಹಿಳೆಯರು ಇಷ್ಟಪಡುತ್ತಾರೆಂದು ನಿರೀಕ್ಷಿಸಬೇಡಿ. ಚಳಿಯಿಂದಾಗಿ ತ್ವಚೆ ಒಣಗದಿರಲು ನೀವು ರಾತ್ರಿ ವೇಳೆ ಮೊಶ್ಚಿರೈಸರ್ ನ್ನು ಹಚ್ಚಿಕೊಳ್ಳಿ. ಚಳಿಗಾಲದಲ್ಲಿ ಶೀತದಿಂದಾಗಿ ದೇಹವು ಒಣಗಿ ಹೋಗುವ ಕಾರಣ ಹೆಚ್ಚಿನ ನೀರನ್ನು ಸೇವಿಸಬೇಕೆನ್ನುವುದನ್ನು ನಾವು ಮರೆಯುತ್ತೇವೆ. ಇದರಿಂದ ಹೆಚ್ಚಿನ ಚರ್ಮ ಸಮಸ್ಯೆ ಕಂಡುಬರುತ್ತದೆ.

1. ಮೊಡವೆ

1. ಮೊಡವೆ

ಮೊಡವೆ ಸಮಸ್ಯೆಯಿಂದ ಬಳಲುವ ಪುರುಷರು ಚಳಿಗಾಲದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಒಣ ಮತ್ತು ಶೀತ ವಾತಾವರಣದಿಂದಾಗಿ ಈ ಸಮಸ್ಯೆ ಹೆಚ್ಚಾಗಬಹುದು. ಶುಷ್ಕತೆಯಿಂದಾಗಿ ತೈಲಗ್ರಂಥಿಗಳು ಮುರಿದು ಹೆಚ್ಚಿನ ತೈಲ ಹೊರಬರುತ್ತದೆ.

2. ಫ್ಲಾಕಿ ಸ್ಕಿನ್

2. ಫ್ಲಾಕಿ ಸ್ಕಿನ್

ಶೀತಲ ವಾತಾವರಣದಿಂದಾಗಿ ನಿಮ್ಮ ತ್ವಚೆ ಬೇಗನೆ ಒಣಗಿ, ಚರ್ಮದ ಮೇಲೆ ಫ್ಲಾಕಿ ಮತ್ತು ನವೆ ತೇಪೆಗಳು ಕಂಡುಬರುತ್ತದೆ. ಸತ್ತ ಚರ್ಮವನ್ನು ಸ್ವಚ್ಛಗೊಳಿಸಲು ನೀವು ಹೆಚ್ಚು ನೀರನ್ನು ಸೇವಿಸುವುದು ತುಂಬಾ ಮುಖ್ಯ.

3. ಒಣಗಿದ ತುಟಿಗಳು

3. ಒಣಗಿದ ತುಟಿಗಳು

ಶೀತಲ ವಾತಾವರಣದಿಂದಾಗಿ ಚಳಿಗಾಲದಲ್ಲಿ ನಿಮ್ಮ ತುಟಿ ಬಹಳಷ್ಟು ಸಮಸ್ಯೆ ಎದುರಿಸುತ್ತದೆ. ಇದರಿಂದಾಗಿ ತುಟಿ ಒಡೆದು ಹೋಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಮೊಶ್ಚಿರೈಸಿಂಗ್ ಮುಲಾಮ್ ನ್ನು ಹಚ್ಚಲು ನಾಚಿಕೆ ಅಥವಾ ಹಿಂಜರಿಕೆ ಬೇಡ.

4. ಕೈಗಳು

4. ಕೈಗಳು

ಕೈಯ ಹಿಂದಿನ ಭಾಗದ ಚರ್ಮವು ತುಂಬಾ ಮೃದು ಮತ್ತು ತೆಳುವಾಗಿರುತ್ತದೆ. ಒಣ ಹಾಗೂ ಶೀತ ಹವಾಮಾನದಿಂದ ನಿಮ್ಮ ಕೈಯಲ್ಲಿ ಬಿರುಕು ಕಾಣಿಸಿಕೊಂಡು ನೆರಿಗೆ ಉಂಟುಮಾಡಬಹುದು. ಕೈಯಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ ಮತ್ತು ಗ್ಲೌಸ್ ಧರಿಸಿ.

5. ಸನ್ ಸ್ಕ್ರೀನ್

5. ಸನ್ ಸ್ಕ್ರೀನ್

ಎಸ್ ಪಿಎಫ್ ಲೋಶನ್ ಗಳನ್ನು ತೆಗೆದಿಡಲು ಚಳಿಗಾಲ ಸಮಯವಲ್ಲ. ಒಣ ಹಾಗೂ ಶೀತ ವಾತಾವರಣದಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಸುಡುವುದನ್ನು ಎಸ್ ಪಿಎಫ್ ಲೋಶನ್ ಗಳಿಂದ ರಕ್ಷಿಸಬಹುದು.

6. ಹಬೆ ಸ್ನಾನ ತಪ್ಪಿಸಿ

6. ಹಬೆ ಸ್ನಾನ ತಪ್ಪಿಸಿ

ಬಿಸಿ ಹಬೆಯ ಬಾತ್ ಟಬ್ ಅಥವಾ ಷವರ್ ನಲ್ಲಿ ಬೆಚ್ಚಗಿನ ನೀರನಲ್ಲಿ ಸ್ನಾನ ಮಾಡಲು ತುಂಬಾ ಖುಷಿಯಾಗುತ್ತದೆ. ಆದರೆ ಈಗಾಗಲೇ ಒಣಗಿರುವ ಚರ್ಮದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಅರಿವಾಗುವ ಹೊತ್ತಿಗೆ ತುಂಬಾ ತಡವಾಗಿರುತ್ತದೆ. ತ್ಚಚೆಯಲ್ಲಿ ತೇವಾಂಶ ಉಳಿಸಿಕೊಳ್ಳಲು ಹದಬೆಚ್ಚಗಿನ ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ.

7. ಮಂಡಿ ಮತ್ತು ಮೊಣಕೈ

7. ಮಂಡಿ ಮತ್ತು ಮೊಣಕೈ

ಈ ಎರಡು ಭಾಗಗಳಿಗೆ ಚಳಿಗಾಲದಲ್ಲಿ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಯಾಕೆಂದರೆ ಇವುಗಳು ಈಗಾಗಲೇ ಗಡಸ್ಸಾಗಿರುತ್ತದೆ ಮತ್ತು ನೆರಿಗೆಗಳಿರುತ್ತದೆ. ಇದನ್ನು ತೇವ ಮತ್ತು ಮೃದುವಾಗಿರಿಸಿಕೊಳ್ಳಲು ಶಿಯಾ ಬಟರ್, ಪೆಟ್ರೋಲಾಟಂ, ಖನಿಜಯುಕ್ತ ತೈಲ, ಚಹಾ ಮರದ ತೈಲ ಅಥವಾ ನೈಸರ್ಗಿಕ ಎಣ್ಣೆ ಹೊಂದಿರುವ ಉತ್ಪನ್ನಗಳನ್ನು ಬಳಸಿ.

8. ಪಾದಗಳ ರಕ್ಷಣೆ

8. ಪಾದಗಳ ರಕ್ಷಣೆ

ಚಳಿಗಾಲದಲ್ಲಿ ನಿಮ್ಮ ಪಾದಗಳು ತುಂಬಾ ವೇಗವಾಗಿ ಒಣಗಿ ಬಿರುಕುಬಿಡುತ್ತದೆ. ತುಂಬಾ ಸಮಯದ ತನಕ ಇದನ್ನು ಕಡೆಗಣಿಸುತ್ತಿದ್ದರೆ ನೋವು ತಿನ್ನಬೇಕಾಗುತ್ತದೆ. ಇದಕ್ಕೆ ದಪ್ಪವಾಗಿ ಮೊಶ್ಚಿರೈಸರ್ ಹಚ್ಚಿ ಮತ್ತು ಯಾವಾಗಲೂ ಸಾಕ್ಸ್ ಬಳಸಿ.

9. ನೆತ್ತಿ

9. ನೆತ್ತಿ

ನೆತ್ತಿಯ ಆರೈಕೆ ಕೂದಲಿನ ಆರೈಕೆಗೆ ಸಂಬಂಧಿಸಿದ್ದಾಗಿರುತ್ತದೆ. ಚಳಿಗಾಲದಲ್ಲಿ ನೆತ್ತಿ ಒಣಗಿ ಹೋಗುವ ಪರಿಣಾಮ ತಲೆಹೊಟ್ಟು ಮತ್ತು ತುರಿಕೆ ಹೆಚ್ಚಾಗುತ್ತದೆ. ಮೊಶ್ಚಿರೈಸರ್ ಕಂಡೀಷನರ್ ಉಪಯೋಗಿಸಿ ನಿಮ್ಮ ನೆತ್ತಿ ಒಣಗದಂತೆ ತಡೆಯಿರಿ.

10. ಹೆಚ್ಚು ನೀರು ಕುಡಿಯಿರಿ

10. ಹೆಚ್ಚು ನೀರು ಕುಡಿಯಿರಿ

ಚಳಿಗಾಲವಾಗಿರುವ ಕಾರಣ ಮತ್ತು ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕೆಂದು ನೀರು ಕುಡಿಯುವುದನ್ನು ಕಡೆಗಣಿಸಬೇಡಿ. ಚಳಿಗಾಲದಲ್ಲಿ ಹೆಚ್ಚಿನ ಬೆವರು ಸುರಿಸದಿದ್ದರೂ ನಿಮ್ಮ ಚರ್ಮ ಮತ್ತು ದೇಹಕ್ಕೆ ಹೆಚ್ಚಿನ ನೀರಿನಾಂಶದ ಅಗತ್ಯವಿತ್ತು. ಚಳಿಗಾಲದಲ್ಲಿ ಮೃದು ಮತ್ತು ಸುಲಭವಾಗಿರಲು ಹೆಚ್ಚು ನೀರು ಕುಡಿಯಿರಿ.

English summary

Winter Skin Problems To Avoid

Men no longer are outcast when it comes to skin care. Today's men take pride and care in having a glowing and good looking skin. On set of winter brings its own set of skin care problems.
Story first published: Monday, November 25, 2013, 16:22 [IST]
X
Desktop Bottom Promotion