For Quick Alerts
ALLOW NOTIFICATIONS  
For Daily Alerts

ಕಡಲೆ ಹಿಟ್ಟು ಬಳಸಿ 5 ಬಗೆಯ ಫೇಸ್ ಮಾಸ್ಕ್

|

ಕಡಲೆಹಿಟ್ಟು ಬಳಸಿ ತ್ವಚೆ ಆರೈಕೆ ಮಾಡುವ ವಿಧಾನ ಹಿಂದಿನ ಕಾಲದಿಂದಲೂ ಬಳಕೆಯಲ್ಲಿದೆ. ಸೋಪಿನ ಬದಲು ಕಡಲೆ ಹಿಟ್ಟಿನಿಂದ ಮುಖ ತೊಳೆಯುತ್ತಾ ಬಂದರೆ ಮುಖದ ಹೊಳಪು ಹೆಚ್ಚುವುದು ಹಾಗೂ ಮೊಡವೆ ಸಮಸ್ಯೆ ಕಡಿಮೆಯಾಗುವುದು.

ಮುಖದ ಆಕರ್ಷಣೆ ಕಡಿಮೆಯಾಗಬಾರದೆಂದು ಬಯಸುವವರು ವಾರದಲ್ಲಿ ಒಂದು ಅಥವಾ ಎರಡು ಬಾರಿ ಫೇಸ್ ಮಾಸ್ಕ್ ಮಾಡಬೇಕು. ಈ ರೀತಿಯ ಫೇಸ್ ಮಾಸ್ಕ್ ಅನ್ನು ಹೆಚ್ಚಾಗಿ ಹಣ್ಣುಗಳನ್ನು ಬಳಸಿ ಮಾಡಲಾಗುವುದು. ಇವತ್ತು ನಾವು ಕಡಲೆಹಿಟ್ಟು ಬಳಸಿ ಫೇಸ್ ಮಾಸ್ಕ್ ಮಾಡಿ ಮುಖದ ಅಂದ ಹೆಚ್ಚಿಸಿಕೊಳ್ಳುವ ವಿಧಾನ ತಿಳಿಯೋಣ:

5 Face Masks Using Besan

1. ಅರಿಶಿಣ ಮತ್ತು ಕಡಲೆಹಿಟ್ಟು: ಅರಿಶಿಣದಿಂದ ಅಲರ್ಜಿ ಉಂಟಾಗುವವರು ಈ ಫೇಸ್ ಮಾಸ್ಕ್ ಟ್ರೈ ಮಾಡಬೇಡಿ. ಮುಖದಲ್ಲಿರುವ ರೋಮ ಹೋಗಲಾಡಿಸುವ ಬಯಸುವವರಿಗೆ ಬೆಸ್ಟ್ ಫೇಸ್ ಮಾಸ್ಕ್ ಆಗಿದೆ. ಈ ಫೇಸ್ ಮಾಸ್ಕ್ ಮಾಡಿದರೆ ಮೊಡವೆಯನ್ನು ಕೂಡ ಹೋಗಲಾಡಿಸಬಹುದು.

2. ಕಡಲೆಹಿಟ್ಟು, ನಿಂಬೆ ರಸ ಮತ್ತು ಬಾದಾಮಿ: ಬಾದಾಮಿಯನ್ನು ಒಂದು ರಾತ್ರಿ ನೆನೆಹಾಕಿ ನಂತರ ಅದನ್ನು ಪೇಸ್ಟ್ ರೀತಿ ಮಾಡಿ ಕಡಲೆ ಹಿಟ್ಟಿಗೆ ಹಾಕಿ ಕಲೆಸಬೇಕು, ನಂತರ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ಇದನ್ನು ಫೇಸ್ ಮಾಸ್ಕ್ ಆಗಿ ಬಳಸಿದರೆ ಕಪ್ಪುಕಲೆಗಳು ಕಡಿಮೆಯಾಗುವುದು ಹಾಗೂ ಮುಖದ ಬಿಳುಪು ಹೆಚ್ಚಾಗುವುದು.

3. ಕಡಲೆ ಹಿಟ್ಟು ಮತ್ತು ಹಾಲು: ಇದನ್ನು ಪ್ರತಿದಿನ ಕೂಡ ಮಾಡಬಹುದು. ಕಡಲೆ ಹಿಟ್ಟಿಗೆ ಹಾಲು ಹಾಕಿ ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಉತ್ತಮವಾದ ಫಲಿತಾಂಶವನ್ನು ಕಾಣಬಹುದು.

4. ಕಡಲೆ ಹಿಟ್ಟು ಹಾಗೂ ಮೊಟ್ಟೆಯ ಬಿಳಿ: ಕಡಲೆ ಹಿಟ್ಟಿಗೆ ಮೊಟ್ಟೆಯ ಬಿಳಿ ಹಾಕಿ ಚೆನ್ನಾಗಿ ಕಲೆಸಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು. ಈ ರೀತಿಯಲ್ಲಿ ಫೇಸ್ ಮಾಸ್ಕ್ ಮಾಡುವುದಾದರೆ ವಾರದಲ್ಲಿ 2 ಎರಡು ಬಾರಿ ಮಾಡಿ.

5. ಕಡಲೆಹಿಟ್ಟು ಮತ್ತು ಮೊಸರು: ಈ ಫೇಸ್ ಬಳಸಿದರೆ ಮುಖಕ್ಕೆ ತಣ್ಣನೆಯ ಅನುಭವ ಉಂಟಾಗುತ್ತದೆ ಅಲ್ಲದೆ ತ್ವಚೆಯ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಈ ಫೇಸ್ ಮಾಸ್ಕ್ ಗಳಲ್ಲಿ ನಿಮಗೆ ಯಾವುದು ಬೆಟರ್ ಅನಿಸುತ್ತದೆಯೋ ಅದನ್ನು ಬಳಸಿ ಮುಖದ ಅಂದ ಹೆಚ್ಚಿಸಿಕೊಳ್ಳಿ.

English summary

5 Face Masks Using Besan | Tips For skin Care | ಕಡಲೆ ಹಿಟ್ಟು ಬಳಸಿ 5 ಬಗೆಯ ಫೇಸ್ ಮಾಸ್ಕ್ | ತ್ವಚೆ ಆರೈಕೆಗೆ ಕೆಲ ಸಲಹೆಗಳು

Gram flour has a lightening effect on the skin. So if you want to get rid of stubborn tan, apply besan on your skin. Moreover, besan also has an antiseptic effect on the skin. So if you are prone to acne, then too you can try the face mask recipes.
X
Desktop Bottom Promotion