Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಮನೆಯಲ್ಲೇ ಸ್ಪಾ ಸೌಂದರ್ಯ ಚಿಕಿತ್ಸೆ ಪಡೆಯಿರಿ

ಮನೆಯಲ್ಲಿಯೇ ಸ್ಪಾ ಸೌಂದರ್ಯ ಚಿಕಿತ್ಸೆ ಪಡೆಯುವ ವಿಧಾನ:
* ಪೆಡಿಕ್ಯೂರ್ ಮತ್ತು ಮೆನಿಕ್ಯೂರ್: ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಮತ್ತು ಸೋಪನ್ನು ಬೆರೆಸಿ 5 ನಿಮಿಷ ಕಾಲುಗಳನ್ನು ನೆನೆಯಲು ಬಿಡಬೇಕು. ನಂತರ ಹಳೆಯ ಟೂಥ್ ಬ್ರಶ್ ನಿಂದ ಹಿಮ್ಮಡಿ, ಉಗುರು ಸಂಧಿಗಳನ್ನು ಮೃದುವಾಗಿ ಉಜ್ಜಬೇಕು. ಕಾಲುಗಳನ್ನು ಟವಲ್ ನಿಂದ ಒರೆಸಿಕೊಂಡು ನಿಮ್ಮ ಮೆಚ್ಚಿನ ನೇಲ್ ಪಾಲಿಶ್ ಹಚ್ಚಿಕೊಳ್ಳಿ.
ಮೆನಿಕ್ಯೂರ್ ಮಾಡಿಕೊಳ್ಳಲು ಮೊದಲು ಉಗುರುಗಳಿಗೆ ಶೇಪ್ ನೀಡಿ ಇದೇ ರೀತಿ ಉಗುರು ಬೆಚ್ಚಗಿನ ಸೋಪ್ ನೀರಿಗೆ ಕೈಗಳನ್ನು ಅದ್ದಿ, ನಂತರ ಒರೆಸಿಕೊಳ್ಳಬೇಕು. ಬೇಕೆಂದರೆ ಪ್ಯಾರಾಫಿನ್ ವ್ಯಾಕ್ಸ್ ಬಳಸಬಹುದು. ಇದರಿಂದ ಕೈ ಮತ್ತು ಕಾಲಿನ ಚರ್ಮ ಮೃದುಗೊಳ್ಳುತ್ತದೆ.
* ಬಾಡಿ ಮಸಾಜ್: ಮೊದಲು ಕೈ ಕಾಲುಗಳಲ್ಲಿರುವ ಕೂದಲನ್ನು ಬೀಸ್ ವ್ಯಾಕ್ಸ್ ಸಹಾಯದಿಂದ ತೆಗೆದು ನಿಮಗೆ ಇಷ್ಟವೆನಿಸಿದ ಮಸಾಜ್ ಎಣ್ಣೆಯನ್ನು ಬಳಸಿ ಇಡೀ ದೇಹಕ್ಕೆ ಮಸಾಜ್ ಮಾಡಿಕೊಳ್ಳಬಹುದು.
* ನೈಸರ್ಗಿಕ ಫೇಶಿಯಲ್: ಪಪ್ಪಾಯ ಹಣ್ಣಿನಿಂದ ಮೊದಲು ಮುಖವನ್ನು ಕ್ಲೆನ್ಸ್ ಮಾಡಿಕೊಂಡು ನಂತರ ನಿಂಬೆ ಮತ್ತು ವಿನೆಗರ್ ಮಿಶ್ರಣವನ್ನು ತ್ವಚೆಗೆ ಟೋನರ್ ಮಾಡಲು ಬಳಸಬಹುದು. ಇದಾದ ನಂತರ ನಿಮ್ಮ ತ್ವಚೆಗೆ ಹೊಂದುವ ಯಾವುದಾದರೂ ಫೇಸ್ ಪ್ಯಾಕ್ ಹಾಕಿಕೊಳ್ಳಬಹುದು. ಈ ಪ್ಯಾಕ್ ಒಣಗುವವರೆಗೂ ಕಾದು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು. ಅಗತ್ಯವಿದ್ದರೆ ಬ್ಲೀಚ್ ಕೂಡ ಮಾಡಿಕೊಳ್ಳಬಹುದು.
* ಬೆಚ್ಚಗಿನ ಸ್ನಾನ: ಸ್ನಾನ ಮಾಡುವ ನೀರಿಗೆ ಕೆಲವು ಹನಿ ಬಾದಾಮಿ ಎಣ್ಣೆ, ಗುಲಾಬಿ ಹೂವಿನ ದಳ ಮತ್ತು ಸ್ನಾನಕ್ಕೆಂದು ದೊರೆಯುವ ಉಪ್ಪನ್ನು ಬೆರೆಸಿ ಸ್ನಾನ ಮಾಡಬಹುದು. ಬಾತ್ ಟಬ್ ಇದ್ದರೆ ಒಂದಿಷ್ಟು ಹೊತ್ತು ರಿಲ್ಯಾಕ್ಸ್ ಮಾಡಿಕೊಳ್ಳಬಹುದು.



Click it and Unblock the Notifications
