For Quick Alerts
ALLOW NOTIFICATIONS  
For Daily Alerts

ಪುರುಷರ ಮುಖದ ಅಂದ ಚಂದ ಹೆಚ್ಚಿಸಲು, ಒಂದಿಷ್ಟು ಬ್ಯೂಟಿ ಟಿಪ್ಸ್

By Hemanth
|

ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ತಾವು ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲ ಇದ್ದೇ ಇರುತ್ತದೆ. ಇದರಲ್ಲಿ ಯಾವುದೇ ಲಿಂಗಭೇದವಿಲ್ಲ. ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹಲವಾರು ರೀತಿಯ ಮೇಕಪ್ ಸಾಮಗ್ರಿಗಳನ್ನು ಬಳಸಿಕೊಳ್ಳುವರು.

ಇದರಿಂದ ಮುಖದ ಮೇಲೆ ಮೂಡುವಂತಹ ಮೊಡವೆ ಹಾಗೂ ಇನ್ನಿತರ ಕಲೆಗಳನ್ನು ಸ್ವಲ್ಪ ಮಟ್ಟಿಗೆ ಅಡಗಿಸಿಡಬಹುದು. ಮಹಿಳೆಯರಂತೆ ಪುರುಷರ ಮುಖದಲ್ಲೂ ಕಲೆಗಳು ಮೂಡುವುದು. ಇಂತಹ ಕಲೆಗಳನ್ನು ತೆಗೆಯಲು ಪುರುಷರು ಇನ್ನಿಲ್ಲದಂತೆ ಶ್ರಮ ವಹಿಸುತ್ತಾರೆ. ಆದರೆ ಯಾವುದೇ ಪ್ರಯೋಜನವಾಗಲ್ಲ. ಪುರುಷರು ಹೊರಗಡೆ ಹೆಚ್ಚು ತಿರುಗಾಡುವ ಕಾರಣದಿಂದ ಬಿಸಿಲಿನಿಂದಲೂ ಮುಖದ ಮೇಲೆ ಕಲೆಗಳು ಮೂಡುವುದು.

ಶ್...! ಈ ಬ್ಯೂಟಿ ಸೀಕ್ರೆಟ್ ಪುರುಷರಿಗೆ ಮಾತ್ರ..!

ಇಂತಹ ಕಲೆಗಳ ನಿವಾರಣೆ ಮಾಡಲು ಹಲವಾರು ರೀತಿಯ ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಿಂದೆ ಮಹಿಳೆಯರಿಗಾಗಿ ಮಾತ್ರವೇ ಕ್ರೀಮ್ ಗಳು ಬರುತ್ತಲಿದ್ದವು. ಕೆಲವು ಪುರುಷರು ಇದನ್ನೇ ಬಳಸುತ್ತಾ ಇದ್ದರು. ಆದರೆ ಈಗ ಮಾರುಕಟ್ಟೆಗೆ ಪುರುಷರಿಗಾಗಿಯೇ ಕ್ರೀಮ್‌ಗಳು ಬರುತ್ತಿದೆ. ಇದಕ್ಕೆ ಕಾರಣವೆಂದರೆ ಪುರುಷರ ಚರ್ಮವು ಮಹಿಳೆಯರ ಚರ್ಮಕ್ಕಿಂತ 25 ಪಟ್ಟು ದಪ್ಪಗೆ ಇರುವುದು. ಪುರುಷರಲ್ಲಿ ಟೆಸ್ಟೊಸ್ಟೇರನ್ ಮಟ್ಟವು ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಇದರಿಂದಾಗಿಯೇ ಮಹಿಳೆಯರಿಗೆ ಮಾಡಿದಂತಹ ಕ್ರೀಮ್‌ಗಳು ಪುರುಷರ ಚರ್ಮಕ್ಕೆ ಕೆಲಸ ಮಾಡುವುದಿಲ್ಲ.


ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!

ಮಹಿಳೆಯರ ಚರ್ಮಕ್ಕಿಂತ ಪುರುಷರ ಚರ್ಮಕ್ಕೆ ಹೆಚ್ಚಿನ ಕಾಲಜನ್ ಬಿಡುಗಡೆ ಮಾಡುವುದು. ಇದರಿಂದ ಚರ್ಮವು ತುಂಬಾ ಗಡುಸಾಗಿರುವುದು. ಚರ್ಮದಲ್ಲಿನ ಸ್ಥಿತಿಸ್ಥಾಪಕತ್ವ ಮತ್ತು ವಯಸ್ಸಾಗುವ ಲಕ್ಷಣಗಳನ್ನು ಇದು ನಿವಾರಣೆ ಮಾಡುವುದು. 40ರ ವಯಸ್ಸಿಗೆ ಬರುತ್ತಾ ಇರುವಂತೆ ಪುರುಷರಲ್ಲಿ ವಯಸ್ಸಾಗುವ ಲಕ್ಷಣಗಳು ಕಾಣಿಸಿಕೊಳ್ಳುವುದು. ವಯಸ್ಸಾಗುವ ಲಕ್ಷಣಗಳನ್ನು ತೋರಿಸುವ ಕಲೆಗಳನ್ನು ಲಿವರ್ ಸ್ಪಾಟ್ ಎಂದೂ ಕರೆಯಲಾಗುವುದು. ಚರ್ಮದಲ್ಲಿ ಮೂಡುವಂತಹ ಕಪ್ಪು ಹಾಗೂ ಕಂದು ಕಲೆಗಳು ಯಾವುದೇ ಹಾನಿಯುಂಟು ಮಾಡುವುದಿಲ್ಲ.

ಸೌಂದರ್ಯ ಹೆಣ್ಣಿಗೆ ಮಾತ್ರವಲ್ಲ, ಪುರುಷರಿಗೂ ಬೇಕು!

ಆದರೆ ಇದರಿಂದ ವಯಸ್ಸಾದಂತೆ ಕಾಣುವುದು ನಿಶ್ಚಿತ. ವಯಸ್ಸಾಗುವಂತಹ ಲಕ್ಷಣಗಳನ್ನು ನಿವಾರಣೆ ಮಾಡಲು ಹಲವಾರು ರೀತಿಯ ಚಿಕಿತ್ಸೆಗಳು ಲಭ್ಯವಿದೆ. ಆದರೆ ಕೆಲವೊಂದು ನೈಸರ್ಗಿಕ ಚಿಕಿತ್ಸೆಗಳು ಇದನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಪುರುಷರಲ್ಲಿ ಮೂಡುವಂತಹ ವಯಸ್ಸಾಗುವ ಲಕ್ಷಣಗಳನ್ನು ನಿವಾರಣೆ ಮಾಡಲು ಬೋಲ್ಡ್ ಸ್ಕೈ ನೈಸರ್ಗಿಕವಾಗಿರುವ ಚಿಕಿತ್ಸೆಯನ್ನು ನಿಮಗೆ ಹೇಳಿಕೊಡಲಿದೆ. ಇದು ಯಾವುದೆಂದು ಮುಂದೆ ಓದುತ್ತಾ ತಿಳಿಯಿರಿ....

ಮೊಸರು ಮತ್ತು ಲಿಂಬೆರಸ

ಮೊಸರು ಮತ್ತು ಲಿಂಬೆರಸ

ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುವಂತಹ ನಿಂಬೆರಸವು ಚರ್ಮದ ಬಣ್ಣವನ್ನು ತಿಳಿಗೊಳಿಸುವುದು. ಮೊಸರಿನಲ್ಲಿ ಒಳ್ಳೆಯ ಬ್ಲೀಚಿಂಗ್ ಗುಣಗಳು ಇವೆ ಮತ್ತು ಇದು ಚರ್ಮದ ಬಣ್ಣವು ಕುಂದುವುದನ್ನು ಇದು ತಡೆಯುವುದು.

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಒಂದು ಲಿಂಬೆ

*ಒಂದು ಚಮಚ ಮೊಸರು

ವಿಧಾನ

1.ಲಿಂಬೆಯಿಂದ ಅದರ ರಸವನ್ನು ತೆಗೆಯಿರಿ.

2.ಒಂದು ಪಾತ್ರೆಗೆ ಹಾಕಿ ಮೊಸರಿನೊಂದಿಗೆ ಮಿಶ್ರಣ ಮಾಡಿ.

3.ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 20-25 ನಿಮಿಷ ಕಾಲ ಹಾಗೆ ಬಿಡಿ.

4.ಮುಖ ತೊಳೆಯಿರಿ. ವಾರದಲ್ಲಿ ಮೂರು ಸಲ ಬಳಸಿದರೆ ಫಲಿತಾಂಶ ಸಿಗುವುದು.

ಆಲಿವ್ ತೈಲ ಮತ್ತು ವಿನೇಗರ್

ಆಲಿವ್ ತೈಲ ಮತ್ತು ವಿನೇಗರ್

ವಯಸ್ಸಾಗುವ ಲಕ್ಷಣ ತೋರಿಸುವ ಕಲೆಗಳನ್ನು ನಿವಾರಿಸಲು ಇದು ತುಂಬಾ ಪ್ರಬಲ ಚಿಕಿತ್ಸೆಯಾಗಿದೆ. ಪುರುಷರ ಚರ್ಮವು ಗಡುಸಾಗಿರುವ ಕಾರಣ ಇದು ತುಂಬಾ ಪರಿಣಾಮಕಾರಿ.

ಬೇಕಾಗುವ ಸಾಮಗ್ರಿಗಳು

2 ಚಮಚ ಆಲಿವ್ ತೈಲ

1 ಚಮಚ ವಿನೇಗರ್

ವಿಧಾನ

1. ಒಂದು ಪಾತ್ರೆಗೆ ಹಾಕಿ ಇವುಗಳನ್ನು ಮಿಶ್ರಣ ಮಾಡಿ.

2. ಸ್ವಚ್ಛ ಚರ್ಮದ ಮೇಲೆ ಇದನ್ನು ಹಚ್ಚಿಕೊಳ್ಳಿ.

3. ಅರ್ಧ ಗಂಟೆ ಕಾಲ ಇದನ್ನು ಹಾಗೆ ಬಿಟ್ಟು ಬಳಿಕ ತೊಳೆಯಿರಿ. ವಾರದಲ್ಲಿ ಒಂದು ಸಲ ಇದನ್ನು ಪುನರಾವರ್ತಿಸಿ.

ಕಡಲೆಹಿಟ್ಟು ಮತ್ತು ಮಜ್ಜಿಗೆ

ಕಡಲೆಹಿಟ್ಟು ಮತ್ತು ಮಜ್ಜಿಗೆ

ಚರ್ಮದ ಬಣ್ಣವನ್ನು ತಿಳಿಗೊಳಿಸಲು ಕಡಲೆಹಿಟ್ಟು ತುಂಬಾ ಒಳ್ಳೆಯದು. ಮಜ್ಜಿಗೆ ಜತೆ ಸೇರಿಸಿದರೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಬೇಕಾಗುವ ಸಾಮಗ್ರಿಗಳು

2 ಚಮಚ ಕಡಲೆಹಿಟ್ಟು

1 ಚಮಚ ಮಜ್ಜಿಗೆ

1 ಚಮಚ ಟೊಮೆಟೊ ಜ್ಯೂಸ್

½ ಚಮಚ ಅರಿಶಿನ ಹುಡಿ

ವಿಧಾನ

1. ಕಡಲೆಹಿಟ್ಟು ಮತ್ತು ಮಜ್ಜಿಗೆಯನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

2. ಟೊಮೆಟೊ ಜ್ಯೂಸ್ ಮತ್ತು ಅರಿಶಿನ ಹುಡಿಯನ್ನು ಇದಕ್ಕೆ ಹಾಕಿ. ಪೇಸ್ಟ್ ತುಂಬಾ ದಪ್ಪಗಿದ್ದರೆ ಸ್ವಲ್ಪ ಮಜ್ಜಿಗೆ ಹೆಚ್ಚು ಹಾಕಿ.

3. ಇನ್ನು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ.

4. ನಂತರ ಈ ಮಿಶ್ರಣವನ್ನು ಪ್ರತೀ ದಿನ ಬಳಸಿಕೊಳ್ಳಿ. ನಿಯಮಿತವಾಗಿ ಬಳಸಿಕೊಂಡರೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಕಲೆಗಳನ್ನು ನಿವಾರಿಸುವ ಇತರ ವಿಧಾನಗಳು

ಕಲೆಗಳನ್ನು ನಿವಾರಿಸುವ ಇತರ ವಿಧಾನಗಳು

ಬಿಸಿಲಿಗೆ ಹೊರಗಡೆ ಹೋಗುವಾಗ ಮುಖಕ್ಕೆ ರಕ್ಷಣೆ ಹಾಕಿಕೊಳ್ಳಿ. ಬಿಸಿಲಿಗೆ ಚರ್ಮವು ಹೆಚ್ಚು ಒಗ್ಗಿಕೊಳ್ಳದಂತೆ ತಡೆಯುವುದು ತುಂಬಾ ಪರಿಣಾಮಕಾರಿಯಾಗಲಿದೆ.

ಸ್ವಚ್ಛ ಹಾಗೂ ಒಣ ಟೂಥ್ ಬ್ರಶ್‌ ನಿಂದ ಮುಖವನ್ನು ಉಜ್ಜಿಕೊಳ್ಳುವುದರಿಂದ ಕಲೆಗಳು ತುಂಬಾ ಪರಿಣಾಮಕಾರಿಯಾಗಿ ನಿವಾರಣೆಯಾಗಲಿದೆ.

English summary

Ways To Banish Age Spots In Men

Men's skin is 25 times tougher than women's skin because of the increase in testosterone levels. The texture is also tougher. That is why most of the products meant for women may not work on men that effectively. Another thing that differentiates men's skin from that of a woman's is that, men skin produces more collagen. This is the same compound that increases skin elasticity and reduce the appearance of signs of ageing.
X
Desktop Bottom Promotion