For Quick Alerts
ALLOW NOTIFICATIONS  
For Daily Alerts

ಪುರುಷರ ಉದ್ದ ಕೂದಲಿನ ಆರೈಕೆ- ಇಲ್ಲಿದೆ ಸರಳ ಟಿಪ್ಸ್

By Hemanth
|

ಮಹಿಳೆಯರಲ್ಲಿ ಉದ್ದಗಿನ ಕೂದಲು ಅವರ ಸೌಂದರ್ಯವನ್ನು ಹೆಚ್ಚಿಸುವುದು. ಉದ್ದ ಕೂದಲು ಮಹಿಳೆಯರ ಸೌಂದರ್ಯದ ಪ್ರತೀಕವೆನ್ನಬಹುದು. ಹಿಂದಿನ ಕಾಲದಿಂದಲೂ ಮಹಿಳೆಯರು ಉದ್ದಗಿನ ಕೂದಲು ಬೆಳೆಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ಕೂದಲಿಗೆ ಕತ್ತರಿ ಹಾಕಿಸಿಕೊಳ್ಳುವುದು ಹೆಚ್ಚಾಗಿದೆ. ಪುರುಷರ ಕೂದಲಿನ ಸುರಕ್ಷತೆಗೆ 20 ಮನೆಮದ್ದುಗಳು

ಅದೇ ಗಿಡ್ಡ ಕೂದಲು ಇಟ್ಟುಕೊಳ್ಳುತ್ತಿದ್ದ ಪುರುಷರು ಈಗ ಉದ್ದ ಕೂದಲು ಬಿಡಲು ಆರಂಭಿಸಿದ್ದಾರೆ. ಇದೊಂದು ಫ್ಯಾಷನ್ ಆಗಿಬಿಟ್ಟಿದೆ. ಪುರುಷರು ಉದ್ದ ಕೂದಲು ಬಿಡುವಾಗ ಅದರ ಆರೈಕೆ ಕೂಡ ಚೆನ್ನಾಗಿ ಮಾಡಿಕೊಳ್ಳಬೇಕು. ಇಲ್ಲವೆಂದಾದರೆ ಕೂದಲು ಅಪಹಾಸ್ಯಕ್ಕೆ ಗುರಿಯಾಗುತ್ತದೆ. ಉದ್ದ ಕೂದಲು ಬಿಡುವ ಪುರುಷರು ಯಾವ ರೀತಿಯಲ್ಲಿ ಕೂದಲಿನ ಆರೈಕೆ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಇದನ್ನು ತಿಳಿದುಕೊಂಡು ಕೂದಲು ಬೆಳೆಸಿ.

#ಟಿಪ್ಸ್ 1

#ಟಿಪ್ಸ್ 1

ಉದ್ದ ಕೂದಲು ಬಿಡಲು ಬಯಸುವ ಪುರುಷರು ಮೊದಲು ತಮ್ಮ ಕೂದಲನ್ನು ತಿಳಿದುಕೊಳ್ಳಬೇಕು. ಕೂದಲು ಅಲೆಅಲೆಯಾಗಿ, ನೇರ ಅಥವಾ ಗುಂಗುರು ಇದ್ದರೆ ಅದನ್ನು ಭಿನ್ನವಾಗಿ ಆರೈಕೆ ಮಾಡಿಕೊಳ್ಳಬೇಕಾಗುತ್ತದೆ.

#ಟಿಪ್ಸ್2

#ಟಿಪ್ಸ್2

ಕೂದಲಿಗೆ ಹಾಕಿಕೊಳ್ಳುವ ತೈಲವು ಕೂದಲನ್ನು ನೇರವಾಗಿಸಲು ನೆರವಾಗುವುದು. ಇದರಿಂದಾಗಿ ಆಗಾಗ ಕೂದಲನ್ನು ತೊಳೆಯಬೇಡಿ. ಕೂದಲಿನ ಜಿಡ್ಡನ್ನು ನೋಡಿಕೊಂಡು ಕಂಡೀಷರ್ ಅಥವಾ ಕಂಡೀಷನರ್ ಇಲ್ಲದೆ ಶಾಂಪೂ ಬಳಸಿ. ಕೂದಲಿನಲ್ಲಿರುವ ನೀರನ್ನು ಹಾಗೆಯೇ ಒಣಗಲು ಬಿಡಿ ಅಥವಾ ಟವೆಲ್ ಬಳಸಿಕೊಳ್ಳಿ.

#ಟಿಪ್ಸ್ 3

#ಟಿಪ್ಸ್ 3

ಒದ್ದೆ ಕೂದಲು ತುಂಡಾಗುವುದು ಹೆಚ್ಚು. ಕೂದಲು ಒಣಗಿದ ಬಳಿಕವಷ್ಟೇ ಅದನ್ನು ಬಾಚಿಕೊಳ್ಳಿ. ಕೂದಲು ಒಂದಕ್ಕೊಂದು ಸುತ್ತುಬಿದ್ದಿದ್ದರೆ ಅದನ್ನು ನಿಧಾನವಾಗಿ ಬೆರಳಿನಿಂದ ತೆಗೆಯಿರಿ. ಒಮ್ಮೆಲೇ ಎಳೆದರೆ ಕೂದಲಿಗೆ ಹಾನಿಯಾಗುವುದು.

#ಟಿಪ್ಸ್ 4

#ಟಿಪ್ಸ್ 4

ಕೂದಲು ಬೆಳೆಯುತ್ತಿರುವಂತೆ ಒಂದು ಹಂತದಲ್ಲಿ ಅದು ವಿಚಿತ್ರವಾಗಿ ಕಾಣಿಸಬಹುದು. ಸಲೂನಿಗೆ ಭೇಟಿ ನೀಡಿ ಅದನ್ನು ಸರಿಪಡಿಸಿಕೊಳ್ಳಿ. ಆದರೆ ಅತಿಯಾಗಿ ಅದನ್ನು ಟ್ರಿಮ್ ಮಾಡಿಕೊಳ್ಳಬೇಡಿ. ನಿಮಗೆ ಹೊಂದಿಕೊಳ್ಳುವ ಕೂದಲಿನ ವಿನ್ಯಾಸ ಮಾಡಿಕೊಳ್ಳಿ ಮತ್ತು ಇತರ ಉದ್ದ ಕೂದಲಿನ ವಿನ್ಯಾಸವನ್ನು ಪ್ರಯತ್ನಿಸಿ ನೋಡಿ.

#ಟಿಪ್ಸ್ 5

#ಟಿಪ್ಸ್ 5

ಉದ್ದ ಕೂದಲನ್ನು ಬೆಳೆಸುವಂತಹ ಪುರುಷರು ಸರಿಯಾದ ಆಹಾರ ಕ್ರಮವನ್ನು ಅನುಸರಿಸಬೇಕು. ಆಹಾರದಲ್ಲಿ ಪ್ರಮುಖವಾಗಿ ವಿಟಮಿನ್ ಗಳಿರಬೇಕು. ಇದು ಕೂದಲನ್ನು ಬೆಳೆಸುತ್ತದೆ. ಯಾವಾಗಲಾದರೂ ಒಮ್ಮೆ ಹೇರ್ ಸ್ಪಾಗೆ ಭೇಟಿ ನೀಡಿ ಇದರಿಂದ ಕೂದಲಿನ ಕಾಂತಿ ನಿರ್ವಹಣೆ ಮಾಡಲು ಸುಲಭವಾಗುವುದು.

#ಟಿಪ್ಸ್ 6

#ಟಿಪ್ಸ್ 6

30 ದಿನಗಳಲ್ಲಿ ಕೂದಲು ಅರ್ಧ ಇಂಚಿಗಿಂತಲೂ ಹೆಚ್ಚು ಬೆಳೆಯುತ್ತದೆ. ಒಂದು ಸಲ ಸಲೂನಿಗೆ ಹೋಗದಿದ್ದರೆ ನಿಮ್ಮ ಕೂದಲು ತುಂಬಾ ಉದ್ದಗೆ ಬೆಳೆದುಬಿಡುತ್ತದೆ ಎನ್ನುವ ನಂಬಿಕೆ ಬೇಡ. ತಾಳ್ಮೆಯಿಂದ ಇದ್ದು, ಆರೈಕೆ ಮಾಡುತ್ತಲಿದ್ದರೆ ಕೂದಲು ತನ್ನಷ್ಟಕ್ಕೆ ಬೆಳೆದು ನಿಲ್ಲುವುದು.

English summary

7 Easy Tips For Men To Grow Long Hair

Flaunting long hair is a very trendy fashion statement among men. Men growing long hair should maintain a good appearance. And most importantly, your long hair style should not invite comments like 'you look girlish' etc. Men with long hair are well liked by many girls. So, here are a men hair care tips that will help you grow your hair, and help you look handsome too. Tips for men to grow long hair
X
Desktop Bottom Promotion