For Quick Alerts
ALLOW NOTIFICATIONS  
For Daily Alerts

ವಿಶ್ವ ವಿದ್ಯಾರ್ಥಿಗಳ ದಿನ: ಕಾಲೇಜು ಯುವತಿಯರು 5 ನಿಮಿಷಗಳಲ್ಲಿ ಮೇಕಪ್ ಮಾಡಿಕೊಳ್ಳಲು ಟಿಪ್ಸ್

|

ವಿದ್ಯಾರ್ಥಿ ಜೀವನ ಎಂದರೆ ಅದೊಂದು ಸುವರ್ಣ ಸಮಯ ಎಂದು ಹೇಳಲಾಗುವುದು. ವಿದ್ಯಾರ್ಥಿಗಳಾಗಿರುವಾಗ ಓದುವ ವಿಷಯವನ್ನು ಬಿಟ್ಟರೆ ಬೇರೆ ಯಾವುದೇ ವಿಷಯಗಳ ಬಗ್ಗೆ ಅತಿಯಾದ ಚಿಂತನೆ ಅಥವಾ ಒತ್ತಡ ಇರುವುದಿಲ್ಲ. ಮನಸ್ಸು ಸ್ವಚ್ಚಂದವಾಗಿ ಹಾರಾಡುತ್ತವೆ. ಬಣ್ಣ ಬಣ್ಣದ ಜೀವನದ ಕಲ್ಪನೆಗಳು, ಅದರ ಸಾಧನೆ ತುಡಿತಗಳು ಹಾಗೂ ಸ್ನೇಹಿತರೊಂದಿಗೆ ತುಂಟಾಟ ಹಾಗೂ ತಮಾಷೆಯ ವಿಷಯಗಳನ್ನು ಬಣ್ಣಿಸುತ್ತಾ ಆನಂದವನ್ನು ಅನುಭವಿಸುತ್ತಾರೆ. ಅದರಲ್ಲೂ ಕಾಲೇಜು ಜೀವನ, ಹದಿ ಹರೆಯದ ವಯಸ್ಸು ಎಂದರೆ ಎಲ್ಲಿಲ್ಲದ ಹುಮ್ಮಸ್ಸು, ಸೌಂದರ್ಯದ ಬಗ್ಗೆ ಒಂದಿಷ್ಟು ಕಾಳಜಿಯ ಭಾವನೆಗಳು ಇರುತ್ತವೆ.

ಅನ್ಯ ಲಿಂಗದವರನ್ನು ಆಕರ್ಷಿಸುವುದು, ಹೊಸ-ಹೊಸ ವಿನ್ಯಾಸದ ಉಡುಗೆಯನ್ನು ತೊಡುವುದು, ಎಲ್ಲರ ನಡುವೆ ಕೇಂದ್ರ ವ್ಯಕ್ತಿಯಾಗಿ ಆಕರ್ಷಿಸುವುದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಸ್ನೇಹಿತರೊಂದಿಗೆ ವಿಷಯಗಳನ್ನು ಹಂಚಿಕೊಂಡು ಸಂತೋಷವನ್ನು ಅನುಭವಿಸುವುದು ಎಂದರೆ ಅದೇನೋ ಒಂದು ಬಗೆಯ ಸಂಭ್ರಮ ಸಡಗರ. ಹಾಗಾಗಿ ಹುಡುಗಿಯರು ತಮ್ಮ ವ್ಯಕ್ತಿತ್ವ, ಉಡುಗೆ, ಮೇಕಪ್ ಗಳ ಬಗ್ಗೆ ಸಾಕಷ್ಟು ಕಾಳಜಿ ಹಾಗೂ ಮುನ್ನೆಚ್ಚರಿಕೆಯನ್ನು ತೋರುತ್ತಾರೆ. ಈ ನಿಟ್ಟಿನಲ್ಲಿಯೇ ಮುಖದ ಸೌಂದರ್ಯ ಹಾಗೂ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸುತ್ತಾರೆ. ನೂತನವಾಗಿ ಬಂದ ಸೌಂದರ್ಯ ಉತ್ಪನ್ನಗಳ ಬಳಕೆ ಮಾಡುವುದರ ಮೂಲಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಹುತೇಕ ಸಂದರ್ಭದಲ್ಲಿ ಕಾಲೇಜಿಗೆ ಸಿದ್ಧವಾಗಲು ಸಮಯಗಳ ಅಭಾವ ಎದುರಾಗುವುದು. ಅಂತಹ ಸಮಯದಲ್ಲಿ ಮೇಕಪ್ ಮಾಡಿಕೊಳ್ಳುವುದನ್ನು ಕೈ ಬಿಡಬೇಕಾಗುವುದು.

A Quick 5 Minute Make-up Routine For College Girls

ವಿಶ್ವ ವಿದ್ಯಾರ್ಥಿಗಳ ದಿನದ ಪ್ರಯುಕ್ತ ನಾವು ಇಂದು ನಿಮಗೆ ಕೆಲವು ಮೇಕಪ್ ವಿಧಾನಗಳನ್ನು ತಿಳಿಸುತ್ತಿದ್ದೇವೆ. ಈ ಮಾದರಿಯು ಬಹಳ ಸುಲಭ ಹಾಗೂ ಸರಳವಾಗಿವೆ. ಕೇವಲ ಐದು ನಿಮಿಷದಲ್ಲಿ ನೀವು ಬಯಸುವಂತಹ ಮೇಕಪ್ ಮಾಡಿಕೊಳ್ಳಬಹುದು. ಕಡಿಮೆ ಸಮಯದಲ್ಲಿ ಆಕರ್ಷಕ ಮುಖ ಚರ್ಯೆಯನ್ನು ಪಡೆದುಕೊಳ್ಳಬಹುದು. ಜೊತೆಗೆ ಸೌಂದರ್ಯ ವರ್ಧಕ ಉತ್ಪನ್ನಗಳಿಂದ ಮುಖದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ಕಾಳಜಿಯನ್ನು ವಹಿಸಬಹುದು.

1. ಮಾಯ್ಚುರೈಸ್ ನಿಂದ ಪ್ರಾರಂಭಿಸಿ

1. ಮಾಯ್ಚುರೈಸ್ ನಿಂದ ಪ್ರಾರಂಭಿಸಿ

ಮೊದಲು ಮುಖವನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಒಣಗಿದ ಟವೆಲ್ ನಿಂದ ಮುಖವನ್ನು ಮೆತ್ತಗೆ ಒತ್ತುವುದರ ಮೂಲಕ ಒಣಗಿಸಿ. ನಂತರ ಉತ್ತಮ ಮಾಯ್ಚುರೈಸ್ ಅನ್ನು ಮುಖಕ್ಕೆ ಅನ್ವಯಿಸಿ. ವೃತ್ತಾಕಾರದಲ್ಲಿ ಮಸಾಜ್ ಮಾಡುವ ಮೂಲಕ ಎಲ್ಲಾ ಭಾಗಗಳಿಗೂ ಸರಿಯಾಗಿ ಅನ್ವಯಿಸಿ. ಮೇಕಪ್ ಮಾಡುವ ಮೊದಲು ಮಾಯ್ಚುರೈಸರ್ ಅನ್ನು ಅನ್ವಯಿಸುವುದು ಚರ್ಮಕ್ಕೆ ಉತ್ತಮ ಆರೈಕೆ ಮಾಡಿದಂತಾಗುವುದು. ಅದು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುವುದು. ಜೊತೆಗೆ ಮೇಕಪ್ ಮಾಡಲು ಸಹ ಅನುಕೂಲವಾಗುವುದು. ಹಾಗಾಗಿ ನಿಮ್ಮ ಬಳಿ ಟಿಂಟೆಡ್ ಮಾಯ್ಚುರೈಸರ್ ಇಲ್ಲವಾದರೆ ಸಂದೇಹ ವಿಲ್ಲದೆ ಮೊದಲು ಖರೀದಿಸಿ.

2. ಸ್ಪಾಟ್ ಕನ್ಸೆಲಿಂಗ್ ಬಳಸಿ

2. ಸ್ಪಾಟ್ ಕನ್ಸೆಲಿಂಗ್ ಬಳಸಿ

ಮೇಕಪ್ ಮಾಡಿದ ನಂತರ ಮುಖದಲ್ಲಿ ಕಪ್ಪು ಕಲೆ ಅಥವಾ ಕುಳಿಗಳು ಕಾಣಬಾರದು. ಅದಕ್ಕಾಗಿ ನೀವು ಸ್ಪಾಟ್ ಕನ್ಸೆಲಿಂಗ್ ಬಳಸಿ. ಇದನ್ನು ಮುಖಕ್ಕೆ ಅನ್ವಯಿಸುವುದರ ಮೂಲಕ ಮುಖದ ಮೇಲಿರುವ ಕಲೆಗಳನ್ನು ಸುಲಭವಾಗಿ ಮರೆಮಾಚಬಹುದು. ಅದು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದು. ಜೊತೆಗೆ ಮೇಕಪ್ ಮಾಡಲು ಸುಲಭವಾಗಿಸುವುದು. ಇದನ್ನು ಮುಖಕ್ಕೆ ಅನ್ವಯಿಸಲು ಕೆಲವು ಸೆಕೆಂಡ್ ಗಳು ಸಾಕಾಗುವುದು.

3. ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಬ್ಲಶ್ ಮಾಡಿ

3. ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಬ್ಲಶ್ ಮಾಡಿ

ಮುಖವು ಹೆಚ್ಚು ಆಕರ್ಷಣೆಯಿಂದ ಕೂಡಿರಲು ಹಾಗೂ ಅನ್ವಯಿಸಿದ ಸೌಂದರ್ಯ ಉತ್ಪನ್ನವು ತ್ವಚೆಯೊಂದಿಗೆ ಹೊಂದಿಕೊಳ್ಳಲು ಬ್ಲಶ್ ಮಾಡುವುದು ಅತ್ಯಗತ್ಯ. ಸೂಕ್ತ ರೀತಿಯಲ್ಲಿ ಬ್ಲಶ್ ಮಾಡಿಕೊಂಡರೆ ಮುಖವು ಹೆಚ್ಚು ಆಕರ್ಷಣೆಯೊಂದಿಗೆ ಕಂಗೊಳಿಸುವುದು. ಕೆನ್ನೆಯ ಭಾಗದಲ್ಲಿ ಲಘುವಾಗಿ ಅನ್ವಯಿಸಿ. ಅದು ನಿಮ್ಮ ಮುಖವನ್ನು ತಾಜಾತನದಿಂದ ಶೋಭಿಸುವಂತೆ ಮಾಡುವುದು. ಜೊತೆಗೆ ದಿನವಿಡೀ ಮುಖವನ್ನು ಕಾಂತಿಯಿಂದ ಕೂಡಿರುವಂತೆ ಮಾಡುವುದು. ನಿಮಗೆ ಅದು ಗಾಢವಾಗಿ ಕೂಡಿರುವಂತೆ ಕಂಡು ಬಂದರೆ ಮಾಯ್ಚುರೈಸ್ ನಿಂದ ಸ್ವಲ್ಪ ಬ್ಲಶ್ ಮಾಡಿ. ಆಗ ಅದು ನಿಮ್ಮ ತ್ವಚೆಗೆ ಸೂಕ್ತವಾಗಿ ಹೊಂದಿಕೊಳ್ಳುವುದು.

4. ಹುಬ್ಬನ್ನು ಸ್ವಲ್ಪ ತೀಡಿ

4. ಹುಬ್ಬನ್ನು ಸ್ವಲ್ಪ ತೀಡಿ

ಮುಖವು ಹೆಚ್ಚು ಆಕರ್ಷಣೆಯಿಂದ ಹಾಗೂ ಶುದ್ಧವಾಗಿ ಕಾಣಿಸುವಲ್ಲಿ ಹುಬ್ಬು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖಕ್ಕೆ ಹೊಂದುವಂತೆ ಹುಬ್ಬುಗಳಿಗೆ ಆಕಾರವನ್ನು ನೀಡಿ. ನಿಮ್ಮ ಹುಬ್ಬು ತಿಳಿಯಾಗಿದ್ದರೆ, ಅದನ್ನು ಹುಬ್ಬಿನ ಪೆನ್ಸಿಲ್ ಮೂಲಕ ತೀಡಿ. ಆಗ ಸ್ವಲ್ಪ ಗಾಢತೆಗೆ ಬರುವುದು. ಅತಿಯಾಗಿ ತಿದ್ದುವುದು ಸಹ ಮುಖದ ಸೌಂದರ್ಯವನ್ನು ಹಾಳು ಮಾಡುವುದು. ಹಾಗಾಗಿ ಅದನ್ನು ಅನ್ವಯಿಸುವಾಗ ಸೂಕ್ತ ವಾಗಿ ತೀಡಬೇಕು. ಆಗ ಮುಖದ ಆಕರ್ಷಣೆ ಹೆಚ್ಚುವುದು. ಹುಬ್ಬು ಕಟ್ಟಾದಂತೆ ಇದ್ದರೆ ಅಥವಾ ಆಕಾರವಿಲ್ಲದಂತೆ ಇದ್ದರೆ ನೀವು ಪೆನ್ಸಿಲ್ ಮೂಲಕ ಅದನ್ನು ಸರಿಯಾಗಿ ತೀಡಿ ಆಕಾರವನ್ನು ನೀಡಿ. ಆಗ ಅದು ನೈಸರ್ಗಿಕವಾಗಿ ಸುಂದರವಾಗಿ ಕಾಣುವುದು.

5. ಐ ಲೈನರ್ ಬಳಸಿ

5. ಐ ಲೈನರ್ ಬಳಸಿ

ಮುಖದ ಸೌಂದರ್ಯವನ್ನು ಸುಂದರವಾಗಿ ಕಂಗೊಳಿಸುವಂತೆ ಮಾಡುವುದು ಸುಂದರವಾದ ಕಣ್ಣುಗಳು. ಮೇಕಪ್ ಮಾಡುವಾಗ ಕಣ್ಣಿಗೆ ಕಪ್ಪು ಮತ್ತು ಐ ಲೈನರ್ ಅನ್ನು ಸೂಕ್ತವಾಗಿ ಅನ್ವಯಿಸುವುದರ ಮೂಲಕ ಕಣ್ಣನ್ನು ಸುಂದರವಾಗಿಸಬಹುದು. ಸರಳವಾದ ಮೇಕಪ್ ನೊಂದಿಗೆ ನೀವು ಸುಂದರವಾಗಿ ಕಾಣಲು ಐ ಲೈನರ್ ಬಳಸಿ. ಅದು ಕಣ್ಣಿನ ಆಕರ್ಷಣೆ ಹೆಚ್ಚಿಸುವುದು. ಜೊತೆಗೆ ಉತ್ತಮ ಮೇಕಪ್ ಲುಕ್ ಅನ್ನು ನೀಡುತ್ತದೆ. ಆದರೆ ನೀವು ಆಯ್ಕೆ ಮಾಡುವ ಐ ಲೈನರ್ ನಿಮ್ಮ ತ್ವಚೆಗೆ ಹಾಗೂ ಕಣ್ಣಿಗೆ ಹಾನಿಯನ್ನುಂಟು ಮಾಡಬಾರದು.

6. ಕಣ್ ರೆಪ್ಪೆಗಳಿಗೆ ಮಸ್ಕರ ಬಳಸಿ

6. ಕಣ್ ರೆಪ್ಪೆಗಳಿಗೆ ಮಸ್ಕರ ಬಳಸಿ

ಕಣ್ ರೆಪ್ಪೆಗಳು ದಟ್ಟವಾಗಿದ್ದರೆ ಕಣ್ಣಿನ ಆಕರ್ಷಣೆ ಹೆಚ್ಚುವುದು. ತೆಳುವಾದ ಕಣ್ ರೆಪ್ಪೆಗಳು ಇದ್ದಾಗ ಮಸ್ಕರವನ್ನು ಬಳಸಿ. ಅದು ರೆಪ್ಪೆಗಳು ದಟ್ಟವಾಗಿರುವಂತೆ ತೋರುವುದು. ಆಗ ಕಣ್ಣಿನ ಸೌಂದರ್ಯ ಹೆಚ್ಚುವುದು. ಮುಖದಲ್ಲಿ ಕಣ್ಣುಗಳ ಆಕಾರ ಸುಂದರವಾಗಿ ಕಂಡರೆ ನಿಮ್ಮ ಮುಖದ ಮೇಕಪ್ ಮತ್ತು ಆಕರ್ಷಣೆಯನ್ನು ಹೆಚ್ಚಿಸುವುದು. ಕಣ್ಣಿಗೆ ಯಾವುದೇ ಅಡ್ಡ ಪರಿಣಾಮ ಬೀರದಂತಹ ಉತ್ಪನ್ನಗಳನ್ನು ಆಯ್ಕೆ ಮಾಡಿ.

7. ಮೃದು ನೋಟದ ತುಟಿ ಬಣ್ಣಗಳನ್ನು ಅನ್ವಯಿಸಿ

7. ಮೃದು ನೋಟದ ತುಟಿ ಬಣ್ಣಗಳನ್ನು ಅನ್ವಯಿಸಿ

ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಬಾಯಿ ಮತ್ತು ತುಟಿಗಳ ಪಾತ್ರವು ಅತ್ಯಂತ ಮಹತ್ವವಾದದ್ದು. ನೀವು ಧರಿಸಿದ ಉಡುಗೆಗೆ ಹೊಂದುವಂತಹ ತುಟಿ ಬಣ್ಣವನ್ನು ಅನ್ವಯಿಸಬಹುದು. ಇಲ್ಲವಾದರೆ ನಿಮ್ಮ ತ್ವಚೆಗೆ ಹೊಂದುವಂತಹ ಕೆಂಪು ಬಣ್ಣ ಅಥವಾ ಗುಲಾಬಿ ಬಣ್ಣವನ್ನು ಅನ್ವಯಿಸಿ. ಆಗ ನೀವು ಮಾಡಿಕೊಂಡ ಮೇಕಪ್ ಸಂಪೂರ್ಣವಾಗುವುದು. ಮುಖವು ಸುಂದರ ನೋಟದೊಂದಿಗೆ ಆಕರ್ಷಣೆಯನ್ನು ಪಡೆದುಕೊಳ್ಳುವುದು. ಪಾರ್ಟಿ ಅಥವಾ ಯಾವುದಾದರೂ ಸ್ಟೇಜ್ ಪ್ರದರ್ಶನ ನೀಡಲು ಹೋಗುವುದಾದರೆ ಗಾಢವಾದ ತುಟಿ ಬಣ್ಣಗಳನ್ನು ಅನ್ವಯಿಸಿ. ಅದು ನಿಮ್ಮ ಮೇಕಪ್ ಅನ್ನು ಸುಂದರ ಗೊಳಿಸುವುದು.

ನೀವು ಕೆಲವು ಸರಳ ವಿಧಾನವನ್ನು ಹಂತ-ಹಂತವಾಗಿ ಅನುಸರಿಸುವುದರಿಂದ ಬಹುಬೇಗ ಮೇಕಪ್ ಗಳನ್ನು ಮಾಡಬಹುದು. ಜೊತೆಗೆ ಸದಾ ನೀವು ಆಕರ್ಷಕ ನೋಟಗಳೊಂದಿಗೆ ಕಂಗೊಳಿಸಬಹುದು. ಈ ಮೇಕಪ್ ವಿಧಾನಗಳು ಕಾಲೇಜು ವಿದ್ಯಾರ್ಥಿಗಳಿಗೆ ಸುಲಭವಾಗುವುದು.

English summary

A Quick 5 Minute Make-up Routine For College Girls

Are you someone who is in the habit of snoozing their alarm? And after you have snoozed it enough times, you wake up suddenly and anxiously look at your phone to check the time. And then the panic seeps in as soon as you see it is way past the time you were supposed to wake up. Most of the college students are familiar with this situation. You don't have hours at your disposal while getting ready for college. Most of the times, you are in a hurry while leaving for college. But, you want to look well put-together at the same time. After all, you want to look the best in college, right? To help you with that, today we bring to you a simple 5-minute make-up routine that will glam you up and get you ready for college in a jiffy. Take a look!
X
Desktop Bottom Promotion