Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಹಿಳೆಯರು ಎಂದೆಂದಿಗೂ ಬಳಸಲೇ ಬಾರದ ವಿಷಕಾರಿ ಕಾಸ್ಮೆಟಿಕ್ ಉತ್ಪನ್ನಗಳು
ಮೇಕ್ ಅಪ್ ಎಂದರೆ ಹೆಂಗಸರು . ಹೆಂಗಸರೆಂದರೆ ಮೇಕ್ ಅಪ್ . ಇದು ಈಗಿನ ಪ್ರಪಂಚ . ಕೆಲವು ವಿಶ್ಲೇಷಣೆಯ ಪ್ರಕಾರ ಅಮೆರಿಕಾದ ಶೇಖಡಾ 40 ರಷ್ಟು ಹೆಂಗಸರು ಮೇಕ್ ಅಪ್ ಇಲ್ಲದೆ ಮನೆ ಹೊರಗೆ ಬರುವುದೇ ಇಲ್ಲ . ಅದಕ್ಕೆ ಕಾರಣ ಇದೆ . ಏನೆಂದರೆ ಮೇಕ್ ಅಪ್ ಮಾಡಿಕೊಳ್ಳುವುದೇ ಹೊರಜಗತ್ತಿಗೆ ಚಂದ ಕಾಣಲು . ಮುಖದ ಮೇಲಿನ ಸಣ್ಣ ಸಣ್ಣ ಮಚ್ಚೆಗಳನ್ನು ಅದು ಮರೆಮಾಚುತ್ತದೆ . ಮೊದಲು ಇರುವುದಕ್ಕಿಂತ ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ . ಎಲ್ಲೇ ಹೋದರು ಧೈರ್ಯದಿಂದ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಕೆಲಸವನ್ನು ಯಶಸ್ವಿಯಾಗಿ ಸಾಧಿಸಲು ಅದು ನೆರವಾಗುತ್ತದೆ.
ಇಂತಹ ಮೇಕ್ ಅಪ್ ಸಾಮಗ್ರಿಗಳಲ್ಲಿ ಅನೇಕ ರೀತಿಯ ವಸ್ತುಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ . ಎಲ್ಲವೂ ಕೆಮಿಕಲ್ ಯುಕ್ತವೇ . ಅದರಲ್ಲೂ ಕೆಲವೊಂದರಲ್ಲಿ ನಂಬಲು ಅಸಾಧ್ಯವಾದ ವಿಷಕಾರಿ ಅಂಶಗಳು ಸಂಶೋಧನೆಯಿಂದ ಪತ್ತೆಯಾಗಿವೆ . ಎಷ್ಟು ವಿಷಕಾರಿ ಎಂದರೆ ಅವುಗಳು ಕೇವಲ ನಿಮ್ಮ ಚರ್ಮಕ್ಕೆ ಹಾನಿ ಮಾಡುವುದಷ್ಟೇ ಅಲ್ಲದೆ ಮುಂದೊಮ್ಮೆ ನಿಮ್ಮ ಜೀವಕ್ಕೆ ಆಪತ್ತು ತರುವಷ್ಟು !! ನಾವು ಇಲ್ಲಿ ಕೆಲವೊಂದು ವಿಷಕಾರಿ ಕೆಮಿಕಲ್ ಗಳ ಬಗ್ಗೆ ಮಾಹಿತಿ ನೀಡಿದ್ದೇವೆ . ಹೆಂಗೆಳೆಯರು ಇಂತಹ ಕಾಸ್ಮೆಟಿಕ್ ಉತ್ಪನ್ನಗಳನ್ನು ಉಪಯೋಗಿಸುವುದಕ್ಕೆ ಮುಂಚೆ ಆದಷ್ಟು ಅದರ ಬಗ್ಗೆ ಮತ್ತು ಅದರಲ್ಲಿರುವ ಕೆಮಿಕಲ್ ಅಂಶಗಳ ಬಗ್ಗೆ ತಿಳಿದುಕೊಂಡು ಮುನ್ನಡೆಯಬೇಕೆಂದು ನಮ್ಮ ಮನವಿ

ಪರಾಬೆನ್ಸ್ : ಇದನ್ನು " ಎಂಡೋಕ್ರೈನ್ ಡಿಸ್ರಪ್ಟಾರ್ " ಎಂದು ಕರೆಯುತ್ತಾರೆ . ಇದರ ಮುಖೇನ ನಿಮ್ಮ ದೇಹದಲ್ಲಿನ ಲೈಂಗಿಕ ಹಾರ್ಮೋನ್ ಎಂದೇ ಹೆಸರಾಗಿರುವ ' ಈಸ್ಟ್ರೋಜೆನ್ ' ಮೇಲೆ ಇದರ ಪ್ರಭಾವ ಬೀರುತ್ತದೆ . ಈಸ್ಟ್ರೋಜೆನ್ ನಂತೆಯೇ ಕೆಲಸ ಮಾಡುವ ಇದು ಅದರ ಅಂಶ ದೇಹದಲ್ಲಿ ಹೆಚ್ಚಾಗುವಂತೆ ಮಾಡಿ ಹಾರ್ಮೋನ್ ಅಸಮತೋಲನ ಉಂಟಾಗುವಂತೆ ಮಾಡುತ್ತದೆ . ಇದು ಸಾಮಾನ್ಯವಾಗಿ ಶಾಂಪೂ , ಲೋಷನ್ ಹಾಗೆಯೆ ಕಂಡೀಷನರ್ ನಲ್ಲಿ ಉಪಯೋಗಿಸಲ್ಪಡುತ್ತದೆ .
ಡಿಬ್ಯುಟೈಲ್ ಪ್ತಾಲೇಟ್ಸ್ : ಇದು ನೇರವಾಗಿ ನಿಮ್ಮ ಜೆನೆಟಿಕ್ ಮ್ಯುಟೇಷನ್ ಮೇಲೆಯೇ ಇದರ ಪ್ರಭಾವ ಬೀರುತ್ತದೆ . ಚರ್ಮದ ಮೂಲಕ ದೇಹದ ಒಳಹೊಕ್ಕು ಅಲ್ಲಿರುವ ಕೆಮಿಕಲ್ ಅಂಶಗಳ ಜೊತೆ ಬೆರೆತು ದೇಹಕ್ಕೆ ಹಾನಿ ಉಂಟು ಮಾಡುತ್ತದೆ . ಡಿಬ್ಯುಟೈಲ್ ಪ್ತಾಲೇಟ್ಸ್ ಸಾಮಾನ್ಯವಾಗಿ ನೈಲ್ ಪೋಲಿಷ್ , ಐ ಶಾಡೋ , ಬ್ಲಶ್ ಮತ್ತು ಇನ್ನಿತರೇ ಹೇರ್ ಕೇರ್ ಉತ್ಪನ್ನಗಳಲ್ಲಿ ಹೇರಳವಾಗಿರುವುದು ಕಂಡುಬರುತ್ತದೆ .
ಟಾಲೀನ್ : ಇದೊಂದು ಪೆಟ್ರೋ ಕೆಮಿಕಲ್ ಸೊಲ್ವೆನ್ಟ್ ಎಂದೇ ಹೆಸರುವಾಸಿ . ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ತಗ್ಗಿಸಿ ಮಕ್ಕಳಾಗುವುದನ್ನು ತಡೆಗಟ್ಟುತ್ತದೆ . ಇದನ್ನು ನೈಲ್ ಪೋಲಿಷ್ ಮತ್ತು ಹೇರ್ ಡೈ ಗಳಲ್ಲಿ ಉಪಯೋಗಿಸಿರುತ್ತಾರೆ .
ಟಾಲ್ಕ್ : ಪೌಡರ್ ನ ಸುವಾಸನೆ ನಿಜಕ್ಕೂ ಗಮಗಮಿಸುತ್ತದೆ . ಹಾಗೆಂದು ಅದರ ಘಮದ ಹಿಂದೆ ಹೋದರೆ ಎಷ್ಟೆಲ್ಲ ಷಡ್ಯಂತ್ರ ಅಡಗಿದೆ ಎಂದು ಕೇಳಿದರೆ ಬೆಚ್ಚಿ ಬೀಳುತ್ತೀರಿ . ಇದೊಂದು ಸುವಾಸನೆಯುಕ್ತ ಸೆಂಟ್ ಆಗಿದ್ದು ಇದರ ವಾಸನೆ ತೆಗೆದುಕೊಂಡರೆ ಮೂಗಿನ ಮುಖಾಂತರ ಶ್ವಾಸಕೋಶದ ಒಳಗೆ ಸೇರಿ ಉಸಿರಾಟದ ತೊಂದರೆ ಉಂಟು ಮಾಡುತ್ತವೆ . ಜೊತೆಗೆ ದೇಹದಲ್ಲಿ ಹರಿಯುವ ರಕ್ತದಲ್ಲೂ ಸೇರಿಕೊಂಡು ನೇರವಾಗಿ ನಿಮ್ಮ ಗರ್ಭಾಶಯದ ಒಳಗೆ ಹೋಗಿ ಅಲ್ಲಿರುವ ಅಂಡಾಶದ ಮೇಲೆ ಕುಳಿತುಕೊಳ್ಳುತ್ತದೆ . ಇದರಿಂದ ನೀವು ಅಂಡಾಶಯದ ಕ್ಯಾನ್ಸರ್ ನಿಂದ ಬಳಲುವ ಹಾಗೆ ಮಾಡುತ್ತದೆ . ಇದನ್ನು ಬೇಬಿ ಪೌಡರ್ , ಐ ಶಾಡೋ ಮತ್ತು ಫೌಂಡೇಶನ್ ಗಳಲ್ಲಿ ಉಪಯೋಗಿಸುತ್ತಾರೆ .
ಲೆಡ್ ಮತ್ತು ಮರ್ಕ್ಯುರಿ : ಈ ಲೋಹಗಳನ್ನು ಹೊಂದಿರುವ ಉತ್ಪನ್ನಗಳನ್ನು ನೀವು ಧೀರ್ಘ ಕಾಲ ಬಳಸಿದ್ದೇ ಆದರೆ ನಿಮ್ಮ ದೇಹದ ಚರ್ಮದ ಮುಖಾಂತರ ಒಳಸೇರಿ ನಿಮಗೆ ಕ್ಯಾನ್ಸರ್ ತಂದೊಡ್ಡುತ್ತವೆ . ಇವು ಸಾಮಾನ್ಯವಾಗಿ ತುಟಿಗೆ ಹಚ್ಚುವ ಉತ್ಪನ್ನಗಳಲ್ಲಿ , ಐ ಲೈನರ್ ಗಳಲ್ಲಿ , ಕನ್ಸೀಲರ್ ಮತ್ತು ಫೌಂಡೇಶನ್ ಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ .
ಅಲ್ಯೂಮಿನಿಯಂ : ಇದು ಚರ್ಮದ ಮೇಲಿನ ಬೆವರು ನಾಳಗಳನ್ನು ತನ್ನದೇ ಆದ ಒಂದು ಪದರ ನಿರ್ಮಿಸಿ ಮುಚ್ಚುತ್ತದೆ . ಇದರಿಂದ ಮೈ ಮೇಲೆ ಬರಬೇಕಿದ್ದ ಬೆವರು ಮತ್ತೆ ರಕ್ತ ನಾಳಕ್ಕೆ ವಾಪಾಸ್ ಹೋಗುತ್ತದೆ . ವಿಷಕಾರಿ ಅಂಶಗಳೆಲ್ಲ ದೇಹದಲ್ಲೇ ಉಳಿಯುವಂತೆ ಮಾಡುತ್ತದೆ . ಡಿಯೋಡ್ರ್ಯಾಂಟ್ ಗಳಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ .
ಮಿನರಲ್ ಆಯಿಲ್ ಗಳು : ಇವುಗಳು ಪೆಟ್ರೋಲಿಯಂ ನಿಂದ ತಯಾರಿಸಲ್ಪಟ್ಟಿರುತ್ತವೆ . ಆದ್ದರಿಂದ ಇವುಗಳನ್ನು ಪಿ ಎ ಹೆಚ್( ಗ್ಯಾಸೊಲೀನ್ ನಿಂದ ಬರುವ ಅಪಾಯಕಾರಿ ಕೆಮಿಕಲ್ ಗಳು ) ನಿಂದ ಕಲುಷಿತಗೊಳಿಸಿರುತ್ತಾರೆ . ಇವುಗಳೂ ಸಹ ಚರ್ಮದ ಮೇಲಿನ ಪದರಕ್ಕೆ ಕಾರಣವಾಗುತ್ತವೆ ಮತ್ತು ವಿಷಕಾರಿ ಅಂಶಗಳು ನಿಮ್ಮ ದೇಹದಲ್ಲೇ ಉಳಿಯುವಂತೆ ಮಾಡುತ್ತವೆ . ಇವು ಸಾಮಾನ್ಯವಾಗಿ ಬೇಬಿ ಲೋಷನ್ ಗಳು , ಬೇಬಿ ಆಯಿಲ್ ಮತ್ತು ಮೇಕ್ ಅಪ್ ರಿಮೂವರ್ ನಲ್ಲಿ ಹೆಚ್ಚಾಗಿ ಅಡಗಿರುತ್ತವೆ .
ಬಿ ಹೆಚ್ ಎ ಅಥವಾ ಬಿ ಹೆಚ್ ಟಿ :
ಬ್ಯುಟಿಲೇಟೆಡ್ ಹೈಡ್ರಾಕ್ಸಿ ಅನಿಸೋಲ್ ( ಬಿ ಹೆಚ್ ಎ ) ಮತ್ತು ಬ್ಯುಟಿಲೇಟೆಡ್ ಹೈಡ್ರಾಕ್ಸಿ ಟಾಲೀನ್ ( ಬಿ ಹೆಚ್ ಟಿ ) ಗಳ ಪ್ರಭಾವ ಸಂಪೂರ್ಣ ದೇಹದ ಮೇಲೆಯೇ ಆಗುತ್ತದೆ . ದೇಹದ ಅಂಗಗಳ ವೈಫಲ್ಯ , ಚರ್ಮದ ತುರಿಕೆ ಮತ್ತು ಹಾರ್ಮೋನ್ ಅಸಮತೋಲನ ಮಾಡುವುದು ಇವುಗಳ ಗುಣ ಲಕ್ಷಣ . ಇವುಗಳು ಸಾಮಾನ್ಯವಾಗಿ ಸನ್ ಸ್ಕ್ರೀನ್ , ತುಟಿಯ ಉತ್ಪನ್ನಗಳು ಮತ್ತು ಕೂದಲಿನ ಉತ್ಪನ್ನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ .
ಪಾಲಿ ಇಥಿಲೀನ್ ಗ್ಲೈಸೋಲ್ (ಪಿ ಈ ಜಿ ) :
ಪಾಲಿ ಇಥಿಲೀನ್ ಗ್ಲೈಸೋಲ್ ಅಂಶ ಹಾಳಾದ ಅಥವಾ ಸೀಳು ಬಿಟ್ಟುಕೊಂಡಿರುವ ಚರ್ಮದ ಮೇಲೆ ಉಪಯೋಗಿಸಿದರೆ ನವೆ ಹಾಗು ಕೆರೆತ ಶುರುವಾಗುತ್ತದೆ . ಇದು ದೇಹದ ಒಳಸೇರಿ ವಿಷಕಾರಿಯಾಗಿ ಬದಲಾಗುವ ಸಾಧ್ಯತೆ ಕೂಡ ಹೆಚ್ಚು . ಪಿ ಈ ಜಿ ಅಂಶವನ್ನು ಹೊಂದಿರುವ ವಸ್ತುಗಳನ್ನು ಅತಿಯಾಗಿ ಉಪಯೋಗಿಸಿದರೆ ದೇಹದ ನರ ಮಂಡಲದ ಮೇಲೂ ಅತಿ ಕೆಟ್ಟ ಪರಿಣಾಮ ಬೀರುತ್ತದೆ . ಇದು ಸಾಮಾನ್ಯವಾಗಿ ಶಾಂಪೂ , ಕಂಡೀಷನರ್ ಮತ್ತು ಮೊಯಿಶ್ಚರೈಸರ್ ನಲ್ಲಿ ಉಪಯೋಗಿಸಲ್ಪಡುತ್ತದೆ .
ಒಕ್ಸಿ ಬೆಂಝೋನ್ : ಒಕ್ಸಿ ಬೆಂಝೋನ್ ಕೂಡ ಒಂದು " ಎಂಡೋಕ್ರೈನ್ ಡಿಸ್ರಪ್ಟಾರ್ " ಆಗಿ ನಿಮ್ಮ ಥೈರೊಯ್ಡ್ ನ ಕಾರ್ಯಕ್ಷಮತೆಯನ್ನು ಕಡಿಮೆ ಮಾಡುತ್ತದೆ .ಇದರಿಂದ ಚರ್ಮದ ಅಲರ್ಜಿ ಕೂಡ ಉಂಟಾಗುತ್ತದೆ . ಇದನ್ನು ಸಾಮಾನ್ಯವಾಗಿ ಕೆಮಿಕಲ್ ಸನ್ ಸ್ಕ್ರೀನ್ , ಲಿಪ್ ಬಾಮ್ ಮತ್ತು ಮೊಯಿಶ್ಚರೈಸರ್ ನಲ್ಲಿ ಹೆಚ್ಚಾಗಿ ಉಪಯೋಗಿಸಿರುತ್ತಾರೆ .



Click it and Unblock the Notifications



