Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದಿನನಿತ್ಯ ಮೇಕಪ್ ಮಾಡಿದರೆ, ಖಂಡಿತ ಚರ್ಮದ ಸಮಸ್ಯೆ ಕಾಡಲಿದೆ!
ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಪ್ರತಿಯೊಬ್ಬ ಮಹಿಳೆಯೂ ಮೇಕಪ್ ಬಳಕೆ ಮಾಡುವುದು ಸಾಮಾನ್ಯ ಸಂಗಾತಿಯಾಗಿದೆ. ಹೊರಗಡೆ ಹೋಗುವಾಗ ಸ್ವಲ್ಪ ಮೇಕಪ್ ಮಾಡಿಕೊಂಡು ಹೋಗುವುದು ಮಹಿಳೆಯರ ದಿನನಿತ್ಯದ ಹವ್ಯಾಸ. ಕೆಲವರಿಗೆ ಇಂತಹದ್ದೇ ಉತ್ಪನ್ನ ಹಾಗೂ ಬಣ್ಣ ಬೇಕಿರುತ್ತದೆ. ಇನ್ನು ಕೆಲವರೇ ಒಂದೇ ಕಂಪನಿಯ ಉತ್ಪನ್ನ ಬಳಕೆ ಮಾಡುವರು.
ಕೆಲವು ಮೇಕಪ್‌ಗಳು ಸೌಂದರ್ಯ ಹೆಚ್ಚಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಪ್ರತಿನಿತ್ಯ ಮೇಕಪ್ ಬಳಸಿಕೊಂಡರೆ ಅದರಿಂದ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇಂತಹ ಕೆಲವೊಂದು ಮೇಕಪ್ ಉತ್ಪನ್ನಗಳನ್ನು ದಿನನಿತ್ಯ ಬಳಸಿದರೆ ಅದರಿಂದ ಕೆಟ್ಟ ಪರಿಣಾಮವಾಗಬಹುದು ಎಂದು ಹೇಳಲಾಗುತ್ತಿದೆ. ಇಂತಹ ಉತ್ಪನ್ನಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಓದಿಕೊಂಡು ಮೇಕಪ್ ಬಳಸುವಾಗ ಎಚ್ಚರ ವಹಿಸಿ...

ಒಣ(ಡ್ರೈ) ಶಾಂಪೂ
ಕೂದಲನ್ನು ತೊಳೆಯಲು ಸಮಯ ಸಿಗದೆ ಇರುವಂತಹ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಒಣ ಶಾಂಪೂ ಬಳಸಿಕೊಳ್ಳುವುದು. ಆದರೆ ಅತಿಯಾಗಿ ಇದನ್ನು ಬಳಸುವುದನ್ನು ನಿಲ್ಲಿಸಲೇಬೇಕು. ಇದನ್ನು ಪ್ರತೀದಿನ ಬಳಸುವ ಕಾರಣದಿಂದ ಚರ್ಮವು ಒಣಗಿಹೋಗಬಹುದು. ಇದರಿಂದ ಕೂದಲಿಗೆ ಹಾನಿಯಾಗಿ ಉದುರಲು ಆರಂಭವಾಗಬಹುದು.

ಕಂಡೀಷನರ್
ಕೂದಲಿಗೆ ಆಳವಾದ ಕಂಡೀಷನರ್ ಹಾಕಿಕೊಳ್ಳುವುದರಿಂದ ಕೂದಲು ತುಂಬಾ ಆರೋಗ್ಯವಾಗಿ ಕಾಣಿಸಿಕೊಳ್ಳುವುದು. ಇದನ್ನು ಅತಿಯಾಗಿ ಬಳಸುವ ಕಾರಣದಿಂದ ಕೂದಲು ತುಂಬಾ ಒಣಗುವುದು ಮತ್ತು ತಲೆಬುರುಡೆಯಲ್ಲಿನ ನೈಸರ್ಗಿಕ ಪಿಎಚ್ ಮಟ್ಟವು ಕಳೆದುಹೋಗುವುದು. ಇದನ್ನು ಪ್ರತೀ ದಿನ ಬಳಸಲೇಬಾರದು.

ತುಟಿಯ ಮಲಾಮ್
ತುಟಿಗಳು ಒಡೆದು ಹೋಗುವುದರಿಂದ ಈ ಮಲಾಮ್ ತಡೆಯಬಹುದು. ಆದರೆ ಇದನ್ನು ಅತಿಯಾಗಿ ಬಳಸುವುದರಿಂದ ಒಡೆದ ತುಟಿಯ ಸಮಸ್ಯೆ ಮತ್ತಷ್ಟು ಹದಗೆಡಬಹುದು.

ಮೇಕಪ್ ಪ್ರೈಮರ್
ಪ್ರತಿಯೊಬ್ಬರು ಪ್ರೈಮರ್ ನ್ನು ಬಳಸುವುದರಿಂದ ಮುಖದ ಕಾಂತಿಯು ಚೆನ್ನಾಗಿರುವುದು. ಆದರೆ ಇದರಲ್ಲಿ ಇರುವಂತಹ ಸಿಲಿಕಾನ್ ಚರ್ಮದಲ್ಲಿನ ರಂಧ್ರಗಳನ್ನು ತೈಲದಿಂದ ತುಂಬಿಸಬಹುದು ಇದರಿಂದ ಮೊಡವೆಗಳು ಉಂಟಾಗಬಹುದು.

ವಾಟರ್ ಪ್ರೂಫ್ ಮಸ್ಕಾರ
ಇದು ಕಣ್ಣುಗಳಿಗೆ ಒಳ್ಳೆಯ ಹೊಳಪು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ವಾಟರ್ ಪ್ರೂಫ್ ಮಸ್ಕಾರವನ್ನು ನಿಯಮಿತವಾಗಿ ಬಳಸುವುದರಿಂದ ಕಣ್ಣಿನ ರೆಪ್ಪೆಗಳು ಒಣಗಿ ಹೋಗಬಹುದು. ಈ ಮೇಕಪ್ ನ್ನು ಪ್ರತಿನಿತ್ಯ ಬಳಸಲೇಬಾರದು.

ಟ್ಯಾನರ್
ಪ್ರತಿಯೊಬ್ಬರಿಗೂ ಹೊಳೆಯುವ ಮೈಕಾಂತಿ ಬೇಕು. ಇದಕ್ಕಾಗಿ ಟ್ಯಾನರ್ ಬಳಸಿಕೊಳ್ಳುವರು. ಇದನ್ನು ಪ್ರತಿನಿತ್ಯ ಬಳಸಿದರೆ ಅದರಿಂದ ಸಮಸ್ಯೆಯಾಗಬಹುದು. ಈ ಮೇಕಪ್ ಸಾಮಗ್ರಿಯನ್ನು ಪ್ರತಿನಿತ್ಯ ಬಳಸುವುದರಿಂದ ದೂರವಿರಬೇಕು.



Click it and Unblock the Notifications
