For Quick Alerts
ALLOW NOTIFICATIONS  
For Daily Alerts

  ಮಳೆಗಾಲದ ಸೌಂದರ್ಯ: ಈ ಟಿಪ್ಸ್ ಅನುಸರಿಸಿ, ಇನ್ನಷ್ಟು ಸುಂದರಗೊಳ್ಳುವಿರಿ!

  By Jaya Subramanya
  |

  ಮಳೆಗಾಲ ಬಂತೆಂದರೆ ನಾವು ಹಲವು ಬಗೆಯಲ್ಲಿ ಜಾಗರೂಕರಾಗಿರಬೇಕಾಗುತ್ತದೆ. ಪ್ರವಾಸದ ಕುರಿತು ಯೋಜನೆ ಮಾಡುವುದಾಗಿರಬಹುದು, ಸೇವಿಸುವ ಆಹಾರ ಕ್ರಮದ ಬಗ್ಗೆ, ಹೊರಗೆ ಹೋಗುತ್ತೇವೆ ಎಂದಾದರೆ ಉಡುಗೆ-ತೊಡುಗೆ, ತ್ವಚೆಯ ಆರೋಗ್ಯ, ಕೂದಲುಗಳ ರಕ್ಷಣೆ ಹೀಗೆ ಅನೇಕ ವಿಷಯಗಳಲ್ಲಿ ಕಾಳಜಿ ವಹಿಸಬೇಕು. ನಿತ್ಯದ ಉಡುಗೆಯ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ಇರಬೇಕಾಗುವುದು. ಕಡು ಬಣ್ಣದ ಬಟ್ಟೆ, ಎತ್ತರದ ಹಿಮ್ಮಡಿ ಇರುವ ಪಾದರಕ್ಷೆ ಧರಿಸಬೇಕು. ಹೆಚ್ಚಿನ ಗಾಳಿ ಹಾಗೂ ನೀರಿನಿಂದ ರಸ್ತೆಗಳು ಹೊಲಸಾಗಿರುವ ಕಾರಣಕ್ಕೆ ಉದ್ದದ ಲಂಗ, ಸ್ಕರ್ಟ್ ಮತ್ತು ಸಾರಿಗಳನ್ನು ಧರಿಸುವ ಹಾಗಿರುವುದಿಲ್ಲ.

  ದಿನನಿತ್ಯ ಮೇಕಪ್‌ ಮಾಡಿದರೆ, ಖಂಡಿತ ಚರ್ಮದ ಸಮಸ್ಯೆ ಕಾಡಲಿದೆ!

  ಮಳೆಗಾಲದಲ್ಲಿ ಇನ್ನೊಂದು ವಿಚಾರಕ್ಕೆ ವಿಶೇಷವಾದ ಒತ್ತನ್ನು ನೀಡಿ ಕಾಳಜಿ ವಹಿಸಬೇಕಾದ ಸಂಗತಿ ಎಂದರೆ ಮೇಕಪ್. ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆದ್ರತೆ ಮತ್ತು ತೇವಾಂಶಗಳಿರುವುದರಿಂದ, ಸಾಧಾರಣ ದಿನದಲ್ಲಿ ಮಾಡಿಕೊಳ್ಳುವ ಮೇಕಪ್ ರಕ್ತಸ್ರಾವ ಉಂಟಾಗುವಂತೆ ಮಾಡುತ್ತದೆ. ಹಾಗಂತ ನೀವೇನೂ ಭಯ ಪಡುವ ಅಗತ್ಯವಿಲ್ಲ. ಅದಕ್ಕಾಗಿ ಮೇಕಪ್ ವಿಧಾನದಲ್ಲಿ, ಉತ್ಪನ್ನಗಳ ಆಯ್ಕೆಯಲ್ಲಿ ಕೆಲವು ಮುನ್ನೆಚ್ಚರಿಕೆ ವಹಿಸಬೇಕು. ಅದು ಯಾವುದು ಎನ್ನುವ ವಿವರಣೆ ಇಲ್ಲಿದೆ ನೋಡಿ...

  ನಿತ್ಯದ ಮೇಕಪ್

  ನಿತ್ಯದ ಮೇಕಪ್

  ಮಾನ್ಸೂನ್ ಆರಂಭವಾಗುತ್ತಿದ್ದಂತೆಯೇ ಮೊದಲು ವಾಟರ್ ಪ್ರೂಫ್ ಮೇಕಪ್ ಉತ್ಪನ್ನಗಳನ್ನು ಆಯ್ಕೆಮಾಡಿಕೊಳ್ಳಬೇಕು. ಹಾಗಂತ ಮಳೆಗಾಲ ಆರಂಭವಾಗುವುದನ್ನು ಕಾಯುತ್ತಾ ಕುಳಿತರೆ ಉತ್ಪನ್ನಗಳ ಬೆಲೆ ದುಬಾರಿ ಆಗುವುದು. ಮಳೆಗಾಲದಲ್ಲಿ ಈ ಉತ್ಪನ್ನಗಳಿಂದ ಮೇಕಪ್ ಮಾಡುವುದರಿಂದ ಹೆಚ್ಚು ಕಾಲ ಮೇಕಪ್ ಮಾಸದೆ ಇರುವುದು. ಜೊತೆಗೆ ತ್ವಚೆಯ ಆರೋಗ್ಯವನ್ನು ಕಾಪಾಡಬಹುದು.

  ಕಾಡಿಗೆ ಆಯ್ಕೆ

  ಕಾಡಿಗೆ ಆಯ್ಕೆ

  ಕಪ್ಪು ಕಾಡಿಗೆಯಿಂದ ಕಣ್ಣಿನ ಮೇಕಪ್ ಮಾಡಿಕೊಂಡರೆ ಹೆಚ್ಚು ಸಮಯ ಉಳಿಯದು. ಐಲೈನರ್ ರೂಪದಲ್ಲಿ ಬಳಸಿದರೆ ಅದು ಕಣ್ಣಿನ ಸುತ್ತ ಹರಡಿಕೊಳ್ಳುವುದು. ಕೆಲವೊಮ್ಮೆ ಬಹುಬೇಗ ಮಾಸಬಹುದು. ಇದರ ಬದಲಿಗೆ ಜೆಲ್ ಲೈನರ್ ಬಳಸಿದರೆ ದೀರ್ಘಕಾಲ ಉಳಿಯುವುದು. ತೇವಾಂಶದ ವಾತಾವರಣದಲ್ಲೂ ಹೆಚ್ಚು ಸುರಕ್ಷಿತವಾಗಿಯೂ ಇರುತ್ತದೆ.

  ಲಿಕ್ವಿಡ್ ಫೌಂಡೇಶನ್

  ಲಿಕ್ವಿಡ್ ಫೌಂಡೇಶನ್

  ತೇವಾಂಶದ ಕಾರಣ ಲಿಕ್ವಿಡ್ ಫೌಂಡೇಶನ್ ಬಹುಕಾಲ ಮುಖದ ಮೇಲೆ ಉಳಿದುಕೊಳ್ಳುವುದಿಲ್ಲ. ಬದಲಿಗೆ ಬಿಬಿಕೆನೆ ಮತ್ತು ಕಾಂಪ್ಯಾಕ್ಟ್ ಪುಡಿಗಳೊಂದಿಗೆ ಬದಲಾಯಿಸಿಕೊಂಡರೆ ಹೆಚ್ಚು ಸಮಯ ಉಳಿಯುವುದು. ಹೆಚ್ಚಿನ ಕವರೇಜ್ ಅಗತ್ಯವಿದ್ದರೆ ಮ್ಯಾಟ್ ಫೌಂಡೇಶನ್‍ನ್ನು ಅನ್ವಯಿಸಿಕೊಳ್ಳಬಹುದು.

  ಲಿಪ್ ಗ್ಲಾಸ್

  ಲಿಪ್ ಗ್ಲಾಸ್

  ಮಾನ್ಸುನ್ ಕಾಲದಲ್ಲಿ ಮ್ಯಾಟ್ಟೆ ಲಿಪ್ ಸ್ಟಿಕ್ ಹೆಚ್ಚು ಉತ್ತಮವಾದದ್ದು. ಮಳೆಗಾಲದಲ್ಲಿ ತೇವಾಂಶ ಹೆಚ್ಚುವುದರಿಂದ ಲಿಕ್ವಿಡ್ ರೂಪದ ಮೇಕಪ್, ಲಿಪ್ ಗ್ಲಾಸ್ ಎಲ್ಲವೂ ಹೆಚ್ಚು ಕಾಲ ಉಳಿಯದು. ಬಹು ಬೇಗ ಮಾಸುವುದರಿಂದ ಆದಷ್ಟು ಮ್ಯಾಟ್ಟೆ ರೂಪದ ಲಿಪ್‍ಸ್ಟಿಕ್‍ಅನ್ನು ಬಳಸಬೇಕು.

  ಸೌಂದರ್ಯ ರಹಸ್ಯ, ಅದೂ ಬರೀ ಒಂದೇ ನಿಮಿಷದಲ್ಲಿ!

  ಹೇರ್ ಸ್ಪಾ

  ಹೇರ್ ಸ್ಪಾ

  ಮಳೆಗಾಲದಲ್ಲಿ ಆಗಾಗ ಸ್ಪಾಗೆ ಹೋಗುವ ಹವ್ಯಾಸವಿದ್ದರೆ ಮಳೆಗಾಲದಲ್ಲಿ ಇದಕ್ಕೆ ಸ್ವಲ್ಪ ಕಡಿವಾಣ ಹಾಕಬೇಕು. ಮಳೆಗಾಲದಲ್ಲಿ ಮಾಡುವ ಹೇರ್ ಸ್ಟೈಲ್ ಅಥವಾ ಆರೈಕೆಯನ್ನು ದೀರ್ಘಕಾಲ ಕಾಪಾಡಲು ಸಾಧ್ಯವಿಲ್ಲ. ಪದೇ ಪದೇ ಮಳೆಯಲ್ಲಿ ಕೇಶರಾಶಿಯು ತೇವಾಂಶಕ್ಕೆ ಒಳಗಾಗುವುದರಿಂದ ಸ್ಪಾ ಆರೈಕೆ ಮುಂದುವರಿಯದು. ಮಳೆಗಾಲದಲ್ಲಿ ತ್ವಚೆಯ ಆರೈಕೆಗಿಂತ ಹೆಚ್ಚು ಕೂದಲ ರಕ್ಷಣೆಯೇ ಒಂದು ದೊಡ್ಡ ಸವಾಲಾಗಿ ಬಿಡುತ್ತದೆ. ಆದಷ್ಟು ಮಳೆಗಾಲದಲ್ಲಿ ಹೇರ್ ಡ್ರೈಯರ್ ನಿಮ್ಮ ಬಳಿ ಇರುವಂತೆ ನೋಡಿಕೊಳ್ಳಬೇಕು. ಮಲಗುವ ಮುನ್ನ ನೆತ್ತಿಯ ಭಾಗದಲ್ಲಿರುವ ತೇವಾಂಶವನ್ನು ಡ್ರೈಯರ್ ಮೂಲಕ ಒಣಗಿಸಿಕೊಳ್ಳಿ. ಇಲ್ಲವಾದರೆ ಶಿಲೀಂಧ್ರದಂತಹ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

  English summary

  Makeup Products That Should Be Avoided During Monsoon

  Monsoons disrupt our lives in many ways. They make our everyday tasks difficult. We need to take the weather into consideration before planning on any outings. Also, our skin and hair go haywire. We also have to carefully choose our outfits every day. It is better to wear dark-coloured clothes and ditch those high heels during the monsoon days.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more