ಮೇಕಪ್ ಪ್ರಿಯ ಮಹಿಳೆಯರಿಗೆ ಸಿಂಪಲ್ ಟ್ರಿಕ್ಸ್! ಒಮ್ಮೆ ಪ್ರಯತ್ನಿಸಿ ನೋಡಿ...

By: Hemanth
Subscribe to Boldsky

ಮೇಕಪ್ ಮಾಡದೆ ಇರುವ ಮಹಿಳೆಯರೇ ಇಲ್ಲವೆನ್ನಬಹುದು. ಕೆಲವು ಮಹಿಳೆಯರು ತುಂಬಾ ಗಾಢವಾಗಿ ಮೇಕಪ್ ಮಾಡಿಕೊಂಡರೆ ಇನ್ನು ಕೆಲವರು ಸರಳವಾಗಿ ಮೇಕಪ್ ಮಾಡಿಕೊಳ್ಳುವರು. ಆದರೆ ಮೇಕಪ್ ಮಾಡಿಕೊಳ್ಳುವ ವೇಳೆ ಕೆಲವೊಂದು ತಪ್ಪುಗಳು ನಡೆದೇ ನಡೆಯುತ್ತದೆ.

ದುಂಡಗಿನ ಮುಖಕ್ಕೆ ಸೂಕ್ತವಾಗಿರುವ 7 ಮೇಕಪ್ ಸಲಹೆಗಳು

ಮೇಕಪ್ ವೇಳೆ ಮಹಿಳೆಯರು ಕೆಲವೊಂದು ಸಮಸ್ಯೆಗಳನ್ನು ಎದುರಿಸುವರು. ಮೇಕಪ್ ವೇಳೆ ಹೆಚ್ಚಿನ ಮಹಿಳೆಯರನ್ನು ಕಾಡುವಂತಹ ಮೂರು ಸಮಸ್ಯೆಗಳನ್ನು ಬೋಲ್ಡ್ ಸ್ಕೈ ಇಂದಿನ ಲೇಖನದಲ್ಲಿ ನಿಮ್ಮ ಮುಂದಿಡಲಿದೆ. ಮೇಕಪ್‌ನ ಸಮಸ್ಯೆಗೆ ಕೆಲವೊಂದು ಪರಿಹಾರ ಕೂಡ ಸೂಚಿಸಲಾಗಿದೆ. ನೀವು ಹೇಳಿರುವಂತಹ ಪ್ರತಿಯೊಂದು ಮೇಕಪ್ ಸಮಸ್ಯೆಗೂ ಇಲ್ಲಿ ಪರಿಹಾರವಿದೆ. ಇದರ ಬಗ್ಗೆ ತಿಳಿದುಕೊಂಡು ಮೇಕಪ್ ಸಮಸ್ಯೆ ನಿವಾರಣೆ ಮಾಡಿ. 

Lipstick

ಮೊದಲನೇ ಮೇಕಪ್ ಸಮಸ್ಯೆ

ಲಿಪ್ ಸ್ಟಿಕ್ ಸೋರುವುದು ತುಂಬಾ ಮುಜುಗರ ಉಂಟು ಮಾಡುತ್ತದೆ. ಆದರೆ ಹೆಚ್ಚಿನ ಮಹಿಳೆಯರಿಗೆ ಹೀಗೆ ಆಗುವುದು ಇದೆ. ಲಿಪ್ ಸ್ಟಿಕ್ ಸೋರಿಕೆಯಾದರೆ ಸಂಪೂರ್ಣವಾಗಿ ತುಟಿಯ ಮೇಕಪ್ ಎದ್ದು ಹೋಗುವುದು. ಇದರಿಂದ ಮುಖವು ನಿಸ್ತೇಜ ಹಾಗೂ ಕಳೆಗುಂದಿದಂತೆ ಕಾಣಬಹುದು. ಇದಕ್ಕೆ ಪರಿಹಾರವೆಂದರೆ ಬಾಯಿಗೆ ಒಂದು ಕ್ಯಾಂಡಿ ಹಾಕಿಕೊಳ್ಳಿ. ಕ್ಯಾಂಡಿಯು ಸಿಹಿ ಜ್ಯೂಸ್ ಅನ್ನು ಬಿಡುಗಡೆ ಮಾಡುವುದು. ಇದರಿಂದ ಬಾಯಿಯಲ್ಲಿ ತೇವಾಂಶ ಬಂದು ವ್ಯಸ್ಥವಾಗಿರುವಂತೆ ಮಾಡುವುದು. ಕ್ಯಾಂಡಿಯೊಂದಿಗೆ ನಾಲಗೆಯು ಆಟವಾಡುತ್ತಿರುವಂತೆ ಲಿಪ್ ಸ್ಟಿಕ್ ಹಾಗೆ ಉಳಿಯುವುದು. 

eye

ಎರಡನೇ ಮೇಕಪ್ ಸಮಸ್ಯೆ

ಕಣ್ಣಿನ ಮೇಕಪ್ ಮಾಡುವ ವೇಳೆ ಕಣ್ಣಿನಿಂದ ನೀರು ಬರುವುದು. ನೀವು ಕಾಡಿಗೆ, ಐಲೈನರ್ ಅಥವಾ ಐ ಪ್ರೈಮರ್ ನ್ನು ಬಳಸಬಹುದು. ಆದರೆ ಕಣ್ಣುಗಳು ನೀರಿನಿಂದ ತುಂಬಿದರೆ ಆಗ ಮೇಕಪ್ ಉಳಿಯದು. ಇದರಿಂದ ಕಣ್ಣು ತೆರೆಯಲು ಆಗದು. ಇದು ಪ್ರತಿಯೊಬ್ಬರಿಗೂ ಆಗುವುದು. ಇದಕ್ಕೆ ಕಾಟನ್ ಬಡ್ ಬಳಸಿ. ಕಾಟನ್ ಬಡ್‌ನ್ನು ಮೂಗಿನ ಹತ್ತಿರ ಕಣ್ಣಿನ ಬದಿಯಲ್ಲಿ ತುಂಬಾ ಎಚ್ಚರಿಕೆಯಿಂದ ಇಟ್ಟುಬಿಡಿ. ಹತ್ತಿಯು ಕಣ್ಣಿನ ಹೆಚ್ಚುವರಿ ನೀರನ್ನು ಹೀರಿಕೊಳ್ಳುವುದು. ಇದರಿಂದ ಕಣ್ಣನ್ನು ಆರಾಮವಾಗಿ ತೆರೆಯಬಹುದು. ಇದರ ಬಳಿಕ ಮೇಕಪ್ ಮಾಡಿಕೊಳ್ಳಬಹುದು.

make up

ಮೂರನೇ ಮೇಕಪ್ ಸಮಸ್ಯೆ

ಮುಖಕ್ಕೆ ಹಾಕುವಂತಹ ಫೌಂಡೇಷನ್ ಸಂಪೂರ್ಣವಾಗಿ ಅಸ್ತವ್ಯಸ್ಥಗೊಳ್ಳುವುದು. ಇದರಿಂದ ಮೇಕಪ್‌ಗೆ ದೊಡ್ಡ ಸಮಸ್ಯೆಯಾಗುವುದು. ಇದರಿಂದ ಫೌಂಡೇಷನ್ ಹರಡಲು ಒಳ್ಳೆಯ ಮೇಕಪ್‌ನ ಮೂಲ ಒದಗಿಸಿಕೊಡಿ. ಫೌಂಡೇಷನ್ ಬಳಸುವ ಮೊದಲು ನೀವು ಒಳ್ಳೆಯ ಪ್ರೈಮರ್ ಬಳಸಿ. ಸಿಲಿಕಾನ್ ಪ್ರೈಮರ್ ಅನ್ನು ಬಳಸಿ. ಇದು ಮೇಕಪ್‪‌ನ ಮೂಲವಾಗಿರಲಿ. ಇದನ್ನು ಹಚ್ಚಿಕೊಂಡರೆ ಫೌಂಡೇಷನ್ ಅಸ್ತವ್ಯಸ್ತವಾಗುವುದು ತಪ್ಪುವುದು. 

ಪಾರ್ಟಿಗೆ ಹೋಗುವಾಗ ಮೇಕಪ್ ಹೇಗಿರಬೇಕು? ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಟಿಪ್ಸ್

English summary

Common Makeup Problems With The Smartest Remedies

Makeup problems do happen and are unavoidable. During the course of makeup, the popping of these problems is disturbing and it slows the effort. It's not only you, all women face makeup problems and thus, it is important to learn about their remedies.Today, we present to you three of the most common makeup problems that are troubling most of the women out there.
Subscribe Newsletter