ಬ್ಯೂಟಿ ಟಿಪ್ಸ್: ತರಹೇವಾರಿ ಮದರಂಗಿ ಡಿಸೈನ್‌ಗಳು

By Anuradha
Subscribe to Boldsky

ಮದರಂಗಿ ಎಂದ ಕೂಡಲೇ ಸುಂದರ ಚಿತ್ತಾಕರ್ಷಕ ವಿನ್ಯಾಸಗಳು ಕಣ್ಣ ಮುಂದೆ ಬರುತ್ತವೆ. ಮದರಿಂಗ ಇಲ್ಲದ ಮದುವೆ ನೋಡಿದ್ದೀರ? ಮದುವೆಯ ಮೆಹಂದಿ ಉತ್ಸವವಂತೂ ಸಂಪ್ರದಾಯಕ್ಕಿಂತ ಒಂದು ಫ್ಯಾಷನ್ ಟ್ರೆಂಡ್ ಆಗಿಬಿಟ್ಟಿದೆ. ಈಗೀಗ ಮದುವೆಯ ಅಕ್ಷತೆಗಿಂತ ಎಲ್ಲರೂ ಮೆಹಂದಿ ಉತ್ಸವಕ್ಕೇ ಕಾಯುತ್ತಾರೆ ಎಂದರೆ ಸುಳ್ಳಾಗಲಾರದು. ಬಣ್ಣ ಬಣ್ಣದ ಲೆಹೆಂಗ ಧರಿಸಿ ಕಿಲ ಕಿಲ ಅಂತ ಸಂಗೀತೋತ್ಸವದಲ್ಲಿ ಓಡಾಡುವದೇ ಒಂದು ಹಬ್ಬ. ಮದುವಣಗಿತ್ತಿ ಇನಿಯನ ಹೆಸರಿನ ಚಿತ್ತಾರವನ್ನು ಕೈಯಮೇಲೆ ಮೂಡಿಸಿಕೊಳ್ಳಲು ಕಾತರಳಾಗಿರುತ್ತಾಳೆ. ಉಳಿದವರೂ ಕೂಡ ನಾನೇನೂ ಕಡಿಮೆ ಇಲ್ಲ ಎಂದು ಪೈಪೋಟಿಯ ಮೇಲೆ ಗಂಟೆಗಟ್ಟಲೆ ಕುಳಿತು ಅನೇಕ ತರಹದ ಚಿತ್ತಾರಗಳುಳ್ಳ ಮದರಂಗಿ ಬಿಡಿಸಿಕೊಳ್ಳುತ್ತಾರೆ.

ಈಗಿನ ಬಾಲಿವುಡ್ ಸಿನೆಮಾಗಳಲ್ಲಂತೂ ಒಂದು ಸಂಗೀತೋತ್ಸವದ ಸೀನ್ ಇರಲೇಬೇಕಪ್ಪ, ಇಲ್ಲ ಅಂದರೆ ಸಿನೇಮಾನೆ ಅಪೂರ್ಣ ಅನ್ನಿಸಿಬಿಡುತ್ತದೆ. ನೆನೆಪಿದೆಯ ಶಾರುಖ್ ಖಾನರ ಪ್ರಸಿದ್ಧ ಮೆಹೆಂದಿ ಹಾಡು? " ಮೆಹೆಂದಿ ಲಗಾಕೆ ರಖನಾ, ಡೋಲಿ ಸಜಾಕೆ ರಖನ, ಲೇನೆ ತುಝೆ ಓ ಗೋರಿ ಆಯೇಂಗೆ ತೆರೆ ಸಜನ..."

ಬರೀ ಮದುವೆ ಸಮಾರಂಭವಷ್ಟೇ ಅಲ್ಲ, ಉತ್ತರ ಭಾರತದವರಂತೂ ಅನೇಕ ಸಂದರ್ಭಗಳಲ್ಲಿ ಮೆಹೆಂದಿ ಹಚ್ಚಿಕೊಳ್ಳುತ್ತಾರೆ. 'ಕಡ್ವಾ ಚೌತ್', 'ತೀಚ್', 'ಈದ್'  ಹೀಗೆ ಅನೇಕ ಹಬ್ಬಗಳಲ್ಲಿ ಮೆಹೆಂದಿ ತುಂಬ ಪ್ರಸಿದ್ಧವಾಗಿದೆ. 'ಹೀನಾ' ಎಂದು ಕೂಡ ಕರೆಯಲ್ಪಡುವ ಮೆಹೆಂದಿ ಮೊದಲೆಲ್ಲ ಮುಸ್ಲಿಮ್ ಬಾಂಧವರಲ್ಲಿ ಮಾತ್ರ ಪ್ರಸಿದ್ಧಿಯಲ್ಲಿತ್ತು, ಆದರೆ ಈಗ ಯಾವದೇ ಜಾತಿ ಮತಾಂತರಗಳ ಭೇದ ಭಾವವಿಲ್ಲದೆ ಎಲ್ಲರೂ ಹಚ್ಚಿಸಿಕೊಳ್ಳುತ್ತಾರೆ. ಇದು ಕೂಡ ನಮ್ಮ ರಾಷ್ಟ್ರದ ಜಾತ್ಯಾತೀತ ಐಕ್ಯತೆಯನ್ನು ಬಿಂಬಿಸುತ್ತದಲ್ಲವೆ?

ಮೆಹೆಂದಿ ಹಚ್ಚುವವರಿಗಂತೂ 365 ದಿನಗಳೂ ಲಾಭವೇ ಲಾಭ. 'ಆಫ್ ಸೀಸನ್' ಇಲ್ಲದ ಕಸುಬು ಇದು, ಅಲ್ವಾ ? ವಿನ್ಯಾಸ ನೋಡುತ್ತಿದ್ದರೆ ಮೈಯನ್ನೇ ಮರೆತುಬಿಡುತ್ತೇವೆ, ಹಚ್ಚುವವರ ಚಾಕಚಕ್ಯತೆಯಂತೂ ಅಪೂರ್ವವಾದದ್ದು. ಸ್ವಲ್ಪವೂ ಗ್ಯಾಪ್ ಇಲ್ಲದ ಹಾಗೆ ಮನಸೂರೆಗೊಳ್ಳುವ ವಿನ್ಯಾಸ ಬರೆಯುತ್ತಾರೆ, ಅದೂ ಎಷ್ಟು ಅರ್ಥಪೂರ್ಣವಾಗಿರುತ್ತದೆ ಗೊತ್ತ?. ನಿಮಗೆ ಯಾವ ಸ್ಟೈಲ್ ಮೆಹೆಂದಿ ಹಚ್ಚಬೇಕೆಂದು ಕೇಳಿದರೆ ಹೇಳಲು ಗೊತ್ತೆ? ಇಲ್ಲವಲ್ಲ, ಬನ್ನಿ ನಿಮಗೆ ತರಹೇವಾರಿ ವಿನ್ಯಾಸಗಳ ಹೆಸರು ಮತ್ತು ಸ್ಟೈಲ್ ತಿಳಿಸಿಕೊಡುತ್ತೇವೆ, ಓದಿ ನೋಡಿ....

ಇಂಡಿಯನ್ ಮೆಹೆಂದಿ ಡಿಸೈನ್(ಭಾರತೀಯ ಶೈಲಿ)

ಇಂಡಿಯನ್ ಮೆಹೆಂದಿ ಡಿಸೈನ್(ಭಾರತೀಯ ಶೈಲಿ)

ಭಾರತೀಯ ಶೈಲಿಯ ಮೆಹೆಂದಿಯಲ್ಲಿ ಮುಖ್ಯವಾಗಿ ನಮಗೆ ಸುಂದರವಾದ ಪುಷ್ಪಗಳು, ನವಿಲಿನಂತಹ ಮನಮೋಹಕ ಪಕ್ಷಿಗಳು ಹಾಗು ಮನುಷ್ಯರ ಚಿತ್ತಾರಗಳು ನೋಡಲು ಸಿಗುತ್ತವೆ. ಅತ್ಯಂತ ಸಂಕೀರ್ಣವಾದ ಮತ್ತು ಆಕರ್ಷಕವಾದ ಈ ವಿನ್ಯಾಸಗಳು ಮನಸೂರೆಗೊಳ್ಳುತ್ತವೆ. ವಿನ್ಯಾಸದ ಗೆರೆಗಳ ಮಧ್ಯ ಸ್ವಲ್ಪವೂ ಅಂತರವಿರದಹಾಗೆ ಬಿಡಿಸುತ್ತಾರೆ.

ಅರೇಬಿಕ್ ಮೆಹೆಂದಿ ಡಿಸೈನ್

ಅರೇಬಿಕ್ ಮೆಹೆಂದಿ ಡಿಸೈನ್

ಇದು ಈಗೀಗ ತುಂಬ ಫ್ಯಾಷನ್‌ದಲ್ಲಿದೆ. ಸಿಂಪಲ್ ಆಂಡ್ ಸ್ವೀಟ್ ಪ್ಯಾಟರ್ನ್ ಎಂದು ಹೇಳಬಹುದು. ಬಳ್ಳಿಗಳು, ಎಲೆಗಳು, ಹೂವಿನ ಚಿತ್ತಾರವಿರುತ್ತದೆ, ಅಷ್ಟೆ ಅಲ್ಲದೆ ಬಹಳ ದಟ್ಟವಾದ ವಿನ್ಯಾಸವಿರುತ್ತದೆ. ಇದು ಹಸ್ತಗಳನ್ನು ಪೂರ್ತಿಯಾಗಿ ಆವರಿಸಿಕೊಳ್ಳುವ ಡಿಸೈನ್ ಅಲ್ಲ, ಔಟ್‌ಲೈನೆ ಮಾಡಿದ ತರಹವಿರುತ್ತದೆ.

ಪಾಕಿಸ್ತಾನಿ ಮೆಹೆಂದಿ ಡಿಸೈನ್

ಪಾಕಿಸ್ತಾನಿ ಮೆಹೆಂದಿ ಡಿಸೈನ್

ಪಾಕಿಸ್ತಾನಿ ಡಿಸೈನಿಗೆ ಇಂಡಿಯನ್ ಮತ್ತು ಅರೇಬಿಕ್ ಡಿಸೈನುಗಳ ಮೇಳ ಎಂದರೆ ತಪ್ಪಾಗಲಾರದು. ಸುಂದರವಾದ ಹೂವು, ಬಳ್ಳಿಗಳ ಜೊತೆಗೆ ಅನೇಕ ರೇಖಾಗಣಿತದ ಚಿತ್ರಗಳು ಬೆರೆತು ಬಹಳ ಆಕರ್ಷಕವಾಗಿ ಕಾಣುತ್ತವೆ. ಈ ವಿನ್ಯಾಸಗಳು ಬಹಳ ಭಾರೀಯೂ ಅಲ್ಲ ಹಾಗೆಯೆ ತುಂಬ ಸಿಂಪಲ್ ಕೂಡ ಇರುವದಿಲ್ಲ. ನೋಡಲು ಮಾತ್ರ ಮನಸೆಳೆಯುವಹಾಗಿರುತ್ತವೆ. ಯಾವದೇ ಶುಭ ಸಂದರ್ಭಕ್ಕೂ ಒಪ್ಪಿಗೆಯಾಗುವಹಾಗೆ ಇರುತ್ತವೆ.

 ಇಂಡೋ - ಅರೇಬಿಕ್ ಮೆಹೆಂದಿ ಡಿಸೈನ್

ಇಂಡೋ - ಅರೇಬಿಕ್ ಮೆಹೆಂದಿ ಡಿಸೈನ್

ಹೆಸರೇ ಸೂಚಿಸಿವಂತೆ ಈ ವಿನ್ಯಾಸಗಳು ಭಾರತೀಯ ಮತ್ತು ಅರೇಬಿಕ್ ಶೈಲಿಯ ಮಿಳಿತವಾಗಿವೆ. ಸಂಪ್ರದಾಯ ಮತ್ತು ಫಾಶನ್ ಬೆರೆತ ವಿನ್ಯಾಸ ಭಾರತೀಯ ಮದುವೆಗಳಲ್ಲಿ ಈಗೀಗ ತುಂಬ ಪ್ರಸಿದ್ಧವಾಗಿದೆ.

ಮೊರೊಕ್ಕನ್ ಮೆಹೆಂದಿ ಡಿಸೈನ್

ಮೊರೊಕ್ಕನ್ ಮೆಹೆಂದಿ ಡಿಸೈನ್

ಇದು ಸೌದಿ ರಾಷ್ಟ್ರಗಳಲ್ಲಿ ಬಹಳ ಪ್ರಚಲಿತವಾಗಿರುವ ವಿನ್ಯಾಸ. ಈ ಪ್ಯಾಟರ್ನ್ ಮತ್ತು ಇಂಡೋ - ಅರೇಬಿಕ್ ಶೈಲಿಯಲ್ಲಿ ಸ್ವಲ್ಪ ಸಾಮ್ಯತೆಗಳು ಕಂಡು ಬಂದರೂ, ಎರಡಕ್ಕೂ ಅವುಗಳದೇ ವೈಶಿಷ್ಠ್ಯತೆಯಿದೆ. ಈ ವಿನ್ಯಾಸದಲ್ಲಿ ಸುಂದರ ಪುಷ್ಪಗಳೊಂದಿಗೆ , ರೇಖಾಗಣಿತದ ಚೌಕ, ಆಯತ, ತ್ರಿಕೋನಗಳ ಮೇಳವಿರುತ್ತದೆ. ಇದನ್ನು ಯಾವದೇ ತರಹದ ಸಾಟಿಯಿಲ್ಲದ ವಿನ್ಯಾಸವೆಂದೇ ಹೇಳಬಹುದು.

ಮುಘಲಾಯಿ ಮೆಹೆಂದಿ ಡಿಸೈನ್

ಮುಘಲಾಯಿ ಮೆಹೆಂದಿ ಡಿಸೈನ್

ಮುಘಲಾಯಿ ಊಟಕ್ಕೆ ಮುಗಿಬೀಳದ ಮಾಂಸಹಾರಿ ಇಷ್ಟಪಡುವ ಜನರೇ ಇರಲಿಕ್ಕಿಲ್ಲ. ಹಾಗೆಯೇ ಮುಘಲಾಯಿ ಮೆಹೆಂದಿ ವಿನ್ಯಾಸ ಕೂಡ ಬಹಳ ಟ್ರೆಂಡಿ ಹಾಗು ಫ್ಯಾಷನೇಬಲ್ ಆಗಿದೆ. ಕೆಲವೊಮ್ಮೆ ಮುಘಲರ ಇಮಾರತ್ತುಗಳಲ್ಲಿನ ಸಾಮ್ಯತೆ ಈ ವಿನ್ಯಾಸಗಳಲ್ಲಿ ಕಂಡುಬಂದರೂ ಅಚ್ಚರಿ ಪಡಬೇಕಾಗಿಲ್ಲ. ಈ ವಿನ್ಯಾಸದಲ್ಲಿ ಚುಕ್ಕೆ ಮತ್ತು ಸುರುಳಿಯಾಕಾರದ ಚಿತ್ತಾರಗಳೆ ಮುಖ್ಯವಾಗಿ ಕಂಡುಬರುತ್ತವೆ. ಈ ವಿನ್ಯಾಸಗಳು ಬಹಳ ಪುರಾತನ ಕಲೆಯನ್ನು ಎತ್ತಿ ತೋರಿಸುತ್ತವೆ, ಮುಘಲ ರಾಣಿಯರ ಅಭಿರುಚಿ ಕೂಡ ಕಂಡುಬರುತ್ತದೆ.

ಬ್ರೈಡಲ್ ಮೆಹೆಂದಿ ಡಿಸೈನ್(ವಧುವಿನ ಸಿಂಗಾರದ ಮದರಂಗಿ ಶೈಲಿ)

ಬ್ರೈಡಲ್ ಮೆಹೆಂದಿ ಡಿಸೈನ್(ವಧುವಿನ ಸಿಂಗಾರದ ಮದರಂಗಿ ಶೈಲಿ)

ಮದುವೆಯಲ್ಲಿ ವಧುವಿನ ಮೆಹೆಂದಿ ಎಲ್ಲರಿಗಿಂತ ಸ್ಪೆಶಲ್‌ಆಗಿ ಕಾಣಬೇಕಲ್ಲವೆ? ವಧುವಿನ ಸಂಪೂರ್ಣ ಕೈಯನ್ನು, ಅಂದರೆ ಭುಜದಿಂದ ಹಸ್ತದ ವರೆಗೆ ಮೆಹೆಂದಿಯಲ್ಲಿ ಸಿಂಗರಿಸಲಾಗುತ್ತದೆ. ಅನೇಕ ಹೂಬಳ್ಳಿಗಳ ಜೊತೆಗೆ ವಧು, ವರರನ್ನು ಬಿಂಬಿಸುವ ಹುಡುಗಿ, ಹುಡುಗನ ಚಿತ್ತಾರವನ್ನೂ ಬರೆಯಲಾಗುತ್ತದೆ. ವಧುವಿನ ಮೇಕಪ್ಪಿಗಿಂತ ಮೆಹೆಂದಿಯೇ ಮನಸೆಳೆಯುವದು ಎಂದರೆ ತಪ್ಪಾಗಲಿಕ್ಕಿಲ್ಲ.

ಕ್ರಿಸ್-ಕ್ರಾಸ್ಸ್ ಮೆಹೆಂದಿ ಡಿಸೈನ್

ಕ್ರಿಸ್-ಕ್ರಾಸ್ಸ್ ಮೆಹೆಂದಿ ಡಿಸೈನ್

ಇದು ಬಹಳ ಅಪರೂಪದ ವಿಶಿಷ್ಟವಾದ ವಿನ್ಯಾಸವಾಗಿದೆ. ಅನೇಕ ತ್ರಿಕೋನಾಕೃತಿಗಳನ್ನು ಬರೆದು ಅವುಗಳ ಮಧ್ಯೆ ವಿಶಿಷ್ಟವಾದ ಮೋಟೀಫ್‌ಗಳನ್ನು(ಅಲಂಕಾರಿಕ ಚಿಹ್ನೆಗಳು) ಬರೆಯಲಾಗುತ್ತದೆ.

ಫ್ಲೋರಲ್ ಮೆಹೆಂದಿ ಡಿಸೈನ್

ಫ್ಲೋರಲ್ ಮೆಹೆಂದಿ ಡಿಸೈನ್

ಹೆಸರೇ ಸೂಚಿಸುವಂತೆ ಈ ವಿನ್ಯಾಸದಲ್ಲಿ ಹೂವು ಬಳ್ಳಿಗಳ ಚಿತ್ತಾರವೇ ಹೆಚ್ಚಾಗಿರುತ್ತದೆ. ಈಗೀಗ ಮದುವೆ ಸಮಾರಂಭಗಳಲ್ಲಿ ಈ ಡಿಸೈನ್ ತುಂಬ ಪ್ರಸಿದ್ಧಿಪಡೆಯುತ್ತಿದೆ. ಉಚ್ಚ ವರ್ಗದ ಜನರು ಈ ಶೈಲಿಗೆ ಬಹಳವಾಗಿ ಮಾರುಹೋಗುತ್ತಿದ್ದಾರೆ.

ರಾಜಸ್ಥಾನಿ ಮೆಹೆಂದಿ ಡಿಸೈನ್

ರಾಜಸ್ಥಾನಿ ಮೆಹೆಂದಿ ಡಿಸೈನ್

ಈ ವಿನ್ಯಾಸವು ಭಾರತೀಯ ಶೈಲಿಯನ್ನೇ ಹೋಲುತ್ತದೆ. ಹೂವು, ಬಳ್ಳಿ, ಸುಂದರವಾದ ಪಕ್ಷಿಗಳದ ನವಿಲಿನಿಂದ ಸಿಂಗರಿಸಲಾಗುತ್ತದೆ. ಸಂಪೂರ್ಣ ಮೊಳಕೈವರೆಗೆ ಬಿಡಿಸಲಾಗುವ ಚಿತ್ತಾರ ಅತ್ಯಾಕರ್ಷಕವಾಗಿರುತ್ತದೆ. ಮೆಹೆಂದಿಯ ಗೆರೆಗಳ ಮಧ್ಯ ಸ್ವಲ್ಪವೂ ಅಂತರವಿರದ ಹಾಗೆ ಬಿಡಿಸುವ ಕಲೆ ಅಚ್ಚರಿಗೊಳಿಸದೆ ಇರುವದಿಲ್ಲ. ಯುವತಿಯರಿಂದ, ಹಿರಿಯ ಮಹಿಳೆಯರ ಮನಸೆಳೆಯುವ ಮದರಂಗಿ, ಅನೇಕರಿಗೆ ಹೊಟ್ಟೆ ಹೊರೆಯಲು ಒಳ್ಳೆಯ ಕಸುಬು ಕೂಡ ಆಗಿದೆ ಎಂದರೆ ತಪ್ಪಗಲಾರದು. ಕಲೆಗೂ ಕೂಡ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಬೆಂಗಳೂರಿನ ಮಾಲ್‌ಗಳಲ್ಲಿ, ಜಯನಗರದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸುಂದರ ಮೆಹೆಂದಿ ಹಚ್ಚುವದು ಗೋಚರಿಸುತ್ತದೆ, ನೀವು ಒಮ್ಮೆ ಹಚ್ಚಿಸಿಕೊಂಡು ಸಂಭ್ರಮಿಸಿ ನೋಡಿ, ಯಾವದೇ ಹಬ್ಬಕ್ಕೇ ಕಾಯಬೇಕೆಂಬ ನಿಯಮವೇನಿಲ್ಲವಲ್ಲ...!

Image Source -Book Your Mehendi Appointments Here

For Quick Alerts
ALLOW NOTIFICATIONS
For Daily Alerts

    English summary

    Best Mehendi Designs For mehandi Ceremony

    Marriages and sangeet ceremonies are important occasions in one's life when all the family members come together to spend time with each other. Sangeet ceremonies are functions where all the women dance and sing together. The designs for Mehendi are beautiful. The designs include patterns of flowers or peacocks with elegant curves, twirls, and curls. There is little or no
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more