For Quick Alerts
ALLOW NOTIFICATIONS  
For Daily Alerts

ಪಾರ್ಟಿಗಳಲ್ಲಿ ಆಕರ್ಷಕವಾಗಿ ಕಾಣಲು ಶಿಮ್ಮರ್ ಮೇಕಪ್

|
Tips For Do Shimmer Makeup
ಮೇಕಪ್ ಅಂದರೆ ಕೇವಲ ಕ್ರೀಮ್, ಪೌಡರ್, ಲಿಪ್ ಸ್ಟಿಕ್,ಕಾಜಲ್ ಅಷ್ಟೇ ಅಲ್ಲ. ಮೇಕಪ್ ಅನೇಕ ರೀತಿಯಲ್ಲಿ ಮಾಡಬಹುದು ಅದರಲ್ಲಿ ಶಿಮ್ಮರ್ ಮೇಕಪ್ ಕೂಡ ಒಂದು.

ಶಿಮ್ಮರ್ ಮೇಕಪ್ ಮುಖದ ಅಂದವನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸುತ್ತದೆ. ಇದನ್ನು ರಾತ್ರಿ ಪಾರ್ಟಿಗಳಿಗೆ, ಮದುವೆ ರಿಸೆಪ್ಷನ್ ಗಳಿಗೆ ಮಾಡಿಕೊಂಡು ಆಕರ್ಷಕವಾಗಿ ಕಾಣಬಹುದು. ಈ ಶಿಮ್ಮರ್ ಮೇಕಪ್ ಮುಖಕ್ಕೆ ಹಚ್ಚುವ ವಿಧಾನದ ಬಗ್ಗೆ ತಿಳಿಯಲು ಮುಂದೆ ಓದಿ.

1. ಧರಿಸುವ ಉಡುಪಿಗೆ ಸರಿಹೊಂದುವ ಮೇಕಪ್ ಶೇಡ್ ಗಳನ್ನು ಆಯ್ಕೆ ಮಾಡಬೇಕು.

2. ಹೀಗೆ ಮೇಕಪ್ ಶೇಡ್ ಗಳನ್ನು ಮೈ ಬಣ್ಣಕ್ಕೆ ಹೊಂದುವ ಹಾಗೆ ಆಯ್ಕೆ ಮಾಡಬೇಕು. ಬಿಳಿ ಬಣ್ಣದವರು ಕಂದು ಬಣ್ಣವನ್ನು ಮತ್ತು ಎಣ್ಣೆಗೆಂಪು ಮತ್ತು ಗೋಧಿ ಬಣ್ಣದ ಮೈಯವರು ಬೆಳ್ಳಿ ಬಣ್ಣದ ಮೇಕಪ್ ಶೇಡ್ ಗಳನ್ನು ಬಳಸಬೇಕು.

3. ಶಿಮ್ಮರ್ ಕ್ರೀಮ್, ಪೌಡರ್, ಲಿಕ್ವಿಡ್ ರೂಪದಲ್ಲಿ ದೊರೆಯುತ್ತದೆ. ಲಿಕ್ವಿಡ್ ಅಥವಾ ಕ್ರೀಮ್ ಅನ್ನು ಪೌಡರ್ ಶಿಮ್ಮರ್ ಜೊತೆ ಸೇರಿಸಿ ಹಚ್ಚುವುದು ಒಳ್ಳೆಯದು.

4. ಮೈ ಬಣ್ಣದ ಶಿಮ್ಮರ್ ಬಳಸಿದರೆ ನೈಸರ್ಗಿಕ ಚೆಲುವಿನಂತೆ ಕಾಣುವುದು.

5. ಶಿಮ್ಮರ್ ಅನ್ನು ಹುಬ್ಬಿನ ಕೆಳಗೆ, ಕೆನ್ನೆಗೆ, ಹಣೆಗೆ, ಮೂಗು ಮತ್ತು ಗಲ್ಲಕ್ಕೆ ಹಚ್ಚಬೇಕು.

6. ಲಿಕ್ವಿಡ್ ಶಿಮ್ಮರ್ ಹಚ್ಚುವುದಾದರೆ ಶಿಮ್ಮರ್ ಅನ್ನು ಕೈಗೆ ಹಾಕಿ ಮೆಲ್ಲನೆ ಸವರಿ ಅದನ್ನು ಮುಖಕ್ಕೆ ಮೇಲ್ಮುಖವಾಗಿ ಉಜ್ಜಬೇಕು. ನಂತರ ಶಿಮ್ಮರ್ ಪೌಡರ್ ಅನ್ನು ಬ್ರಷ್ ಬಳಸಿ ಹಾಕಬೇಕು.

7. ಶಿಮ್ಮರ್ ಅನ್ನು ಕುತ್ತಿಗೆ ಮತ್ತು ಡೀಪ್ ಡ್ರೆಸ್ ಹಾಕುವುದಾದರೆ ಎದೆಗೆ ಹಚ್ಚಬೇಕು.

8. ಕಣ್ಣಿನ ಅಲಂಕಾರ ಮಾಡುವುದಾದರೆ ಶಿಮ್ಮರ್ ಹಚ್ಚಿದ ನಂತರವಷ್ಟೆ ಮಾಡಬೇಕು.

ಪಾರ್ಟಿಗಳಿಗೆ ಹೋಗುವಾಗ ಈ ಶಿಮ್ಮರ್ ಮೇಕಪ್ ಟಿಪ್ಸ್ ಬಳಸಿ, ಮತ್ತಷ್ಟು ಆಕರ್ಷಕವಾಗಿ ಕಾಣಿ.

English summary

Tips For Do Shimmer Makeup | Party Make Up Tips | ಶಿಮ್ಮರ್ ಮೇಕಪ್ ಗೆ ಕೆಲ ಸಲಹೆ | ಪಾರ್ಟಿ ಮೇಕಪ್ ಟಿಪ್ಸ್

Shimmer makeup can add glow to your face and make you appear more gorgeous! You can apply shimmer makeup on the face and body. It is best to apply shimmer makeup during evening.
Story first published: Monday, January 23, 2012, 11:50 [IST]
X
Desktop Bottom Promotion