For Quick Alerts
ALLOW NOTIFICATIONS  
For Daily Alerts

ಮಾಡರ್ನ್ ಹುಡುಗನಿಗೆ ಫ್ಯಾಷನೇಬಲ್ ಗಡ್ಡ

|
Most Stylish Beard Trends
ಸ್ಟೈಲ್ ವಿಷಯ ಬಂದಾಗ ಹೆಣ್ಮಕ್ಕಳಿಗೆ ಆಯ್ಕೆ ಜಾಸ್ತಿ. ಜೀನ್ಸ್, ಸೆಲ್ವಾರ್, ಸೀರೆ ಹೀಗೆ ಹತ್ತು ಹಲವು ಆಕರ್ಷಕ ಉಡುಗೆಗಳನ್ನು ಉಡುತ್ತಾರೆ. ಮುಖಕ್ಕೆ ಹಚ್ಚಲು ಬೇಕಾದಷ್ಟು ಪ್ರಸಾಧನಗಳೂ ಮಹಿಳೆಯರಿಗೆ. ಹೇರ್ ಸ್ಟೈಲ್ ವಿಷ್ಯದಲ್ಲೂ ಮಹಿಳೆಯರಿಗೆ ಅವಕಾಶ ಜಾಸ್ತಿ.

ಹಾಗಂತ ಪುರಷರೇನೂ ನಿರಾಶರಾಗುವುದಿಲ್ಲ. ಹೆಚ್ಚಿನವರಿಗೆ ನುಣ್ಣಗೆ ಮುಖ ಕ್ಷೌರ ಮಾಡುವುದು ಇಷ್ಟವಾಗುವುದಿಲ್ಲ. ಗಡ್ಡದಲ್ಲೂ ಹತ್ತು ಹಲವು ಫ್ಯಾಷನ್ ಗಳಿವೆ. ಆಧುನಿಕ ಫ್ಯಾಷನ್ ಜಗತ್ತಿನಲ್ಲಿ ಪುರಷರ ದಾಡಿ ಸ್ಟೈಲ್ ನೂರಾರು ಬಗೆಯದಾಗಿದೆ.

ಹುಡುಗರು ಗಡ್ಡವನ್ನು ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಬೋಳಿಸಿಕೊಂಡ ಮಾಡರ್ನ್ ಲುಕ್ ನಲ್ಲಿ ಕಾಣಲು ಇಷ್ಟಪಡುತ್ತಾರೆ. ಅದರಲ್ಲಿ ಕೆಲವು ಗಡ್ಡದ ವಿನ್ಯಾಸ ಹುಡುಗರನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಈ ಕೆಳಗಿನ ಗಡ್ಡ ಸ್ಟೈಲ್ ತುಂಬಾ ಫ್ಯಾಷನೇಬಲ್ ಆಗಿದ್ದು ಅವುಗಳು ಪುರುಷರಿಗೆ ಮಾಡರ್ನ್ ಲುಕ್ ಕೊಡುತ್ತದೆ. ಇಲ್ಲೊಂದಿಷ್ಟು ವಿಧದ ದಾಡಿಗಳಿವೆ.

1. ಸ್ಟಬ್ಬಲ್: ಹೆಚ್ಚಿನ ಪುರುಷರು ಈ ರೀತಿಯ ಗಡ್ಡವನ್ನು ಹೆಚ್ಚಾಗಿ ಬಳಸುತ್ತಾರೆ. ಈ ರೀತಿ ಗಡ್ಡ ಬಿಡುವವರು ಗಡ್ಡ ಬೆಳೆಯುತ್ತಿದ್ದ ಹಾಗೆ ಟ್ರಿಮ್ ಮಾಡಿದರೆ ಸಾಕು. ಅನೇಕ ಮಹಿಳೆಯರಿಗೆ ಕೂಡ ಪ್ರಿಯವಾದ ಗಡ್ಡ ವಿನ್ಯಾಸ ಇದಾಗಿದೆ.

2. ಫ್ರೆಂಚ್ ಗಡ್ಡ: ಔಪಚಾರಿಕವಾಗಿ ಉಡುಗೆಯನ್ನು ಧರಿಸುವಾಗ ಫ್ರೆಂಚ್ ಗಡ್ಡ ಬಿಡುವುದು ಉತ್ತಮ. ಈ ರೀತಿಯ ಗಡ್ಡ ಫ್ರೊಫೆಷನಲ್ ಲುಕ್ ಕೊಡುತ್ತದೆ.

3. ಕೆಳತುಟಿ ಕೆಳಗಡೆ ಚಿಕ್ಕದಾದ ಗಡ್ಡ: ಕೆಳತುಟಿ ಕೆಳಗಡೆ ಜೇಣು ಗೂಡು ಕಟ್ಟಿದ್ದಾಗೆ ಗಡ್ಡ ಬಿಡುವರಿದ್ದಾರೆ. ಹೆಚ್ಚಾಗಿ ಈ ಸ್ಟೈಲನ್ನು ಕಾಲೇಜ್ ಹುಡುಗರು ಇಷ್ಟಪಡುತ್ತಾರೆ. ಇದು ನೋಡಲು ತುಂಬಾ ಸ್ಟೈಲಿಷ್ ಲುಕ್ ಕೊಡುತ್ತದೆ.

4. ಸಾಮಾನ್ಯವಾದ ಗಡ್ಡ: ಈ ರೀತಿಯ ಗಡ್ಡವನ್ನು ಪುರುಷರು ಹೆಚ್ಚು ಇಷ್ಟಪಡುತ್ತಾರೆ. ಈ ಗಡ್ಡವನ್ನು ಆಫೀಸ್ ಹೋಗುವಾಗ ಕೂಡ ಬಿಡಬಹುದು. ಈ ರೀತಿಯ ಗಡ್ಡವನ್ನು ಹೆಚ್ಚಾಗಿ ಯುವಕರಿಗಿಂತ ಪುರುಷರು ಬಿಡುತ್ತಾರೆ.

English summary

Most Stylish Beard Trends | Tips For Men To Look Stylish | ಅತ್ಯಂತ ಸ್ಟೈಲಿಷ್ ಗಡ್ಡದ ವಿನ್ಯಾಸಗಳು | ಪುರುಷರ ಸ್ಟೈಲಿಷ್ ಲುಕ್ ಗೆ ಕೆಲ ಸಲಹೆ

Men are very particular with their beard styles. Improper or over grown beard makes them look ugly and unclean. Every year, new beard trends and styles are updated which helps a man try several looks with their beard.
Story first published: Tuesday, January 10, 2012, 14:54 [IST]
X
Desktop Bottom Promotion