For Quick Alerts
ALLOW NOTIFICATIONS  
For Daily Alerts

ಆಕರ್ಷಕ ಗುಂಗುರು ಕೂದಲಿಗಾಗಿ ಮಲಗುವ ಮುನ್ನ ಈ ಹೇರ್‌ಸ್ಟೈಲ್ ಮಾಡಿ

|

ಸ್ವಲ್ಪ ಗುಂಗುರು-ಗುಂಗುರು ಆಗಿರುವ ಕೂದಲಿನ ಸೌಂದರ್ಯ ನೋಡುವುದೇ ಚೆಂದ, ಆ ಕೂದಲನ್ನು ಹರಡಿ ಬಿಟ್ಟಾಗ ಗಾಳಿಯ ಜತೆ ಕೂದಲಿನ ಲಾಸ್ಯ ನೋಡುವುದೇ ಆಕರ್ಷಕ. ಈ ಹಿಂದೆ ಸ್ಟ್ರೈಟ್‌ ಹೇರ್ ಟ್ರೆಂಡ್‌ ಬಂದಿತ್ತು, ಆದರೆ ಈಗ ಟ್ರೆಂಡ್‌ ಮತ್ತೆ ಬದಲಾಗಿದೆ. ಫ್ಯಾಷನ್‌ ಫ್ರಿಯರು ಸ್ವಲ್ಪ ಗುಂಗುರು-ಗುಂಗುರಾದ ಕೂದಲಿನಲ್ಲಿ ಮಿಂಚಲು ಇಷ್ಟಪಡುತ್ತಿದ್ದಾರೆ. ಸ್ಟ್ರೈಟ್‌ ಹೇರ್‌ ಬಿಟ್ಟಾಗ, ಜುಟ್ಟು ಕಟ್ಟಿದಾಗ ಮಾತ್ರ ಆಕರ್ಷಕವಾಗಿ ಕಂಡರೆ ಗುಂಗುರು ಕೂದಲು ಹಾಗೇ ಬಿಟ್ಟರೂ ಆಕರ್ಷಕ, ಇನ್ನು ತುರುಬು ಕಟ್ಟಿದರಂತೂ ತುಂಬಾ ಸೊಗಸಾಗಿ ಕಾಣುವುದು.

Try this Hairstyles for curl hair

ಇನ್ನು ಗುಂಗುರು ಕೂದಲಿನ ಸೌಂದರ್ಯಕ್ಕಾಗಿ ಪಾರ್ಲರ್‌ಗೆ ಹೋಗಿ ಹಣವೂ ಖರ್ಚು ಮಾಡಬೇಕಾಗಿಲ್ಲ. ನೀವು ಮಲಗುವ ಮುನ್ನ ಕೆಲವೊಂದು ಬ್ಯೂಟಿ ಟೆಕ್ನಿಕ್‌ ಬಳಸಿದರೆ ಸಾಕು, ಮಾರನೆಯ ದಿನ ಬೆಳಗ್ಗೆ ನೋಡಿದಾಗ, ಕೂದಲು ಸುರುಳಿ-ಸುರುಳಿಯಾಗಿ ಆಕರ್ಷಕವಾಗಿ ಕಾಣುವುದು.

ಸ್ವಲ್ಪ ಗುಂಗುರು ಕೂದಲು ಬಯಸುವವರು ಇಲ್ಲಿ ನೀಡಿರುವ ಬ್ಯೂಟಿ ಟೆಕ್ನಿಕ್ ಬಳಸಬಹುದು ನೋಡಿ:

ಎರಡು ಜಡೆ ಹಾಕಿ ಬಿಗಿಯಾಗಿ ಕಟ್ಟಿ

ತಲೆಸ್ನಾನ ಮಾಡಿದ್ದರೆ ಕೂದಲು ಸಂಪೂರ್ಣವಾಗಿ ಒಣಗಿರಬೇಕು. ನಂತರ ಕೂದಲನ್ನು ಬಾಚಿ ಕೂದಲನ್ನು ಎರಡು ಭಾಗ ಮಾಡಿ, ಮುಂದೆ ಸ್ವಲ್ಪ ಕೂದಲು ತೆಗೆದು ಜಡೆ ಹಾಕಿ, ಆ ಜಡೆಯನ್ನು ಇತರ ಕೂದಲ ಜತೆ ಸೇರಿಸಿ ಮತ್ತೆ ಜಡೆ ಹಾಕಿ, ರಬ್ಬರ್‌ ಬ್ಯಾಂಡ್‌ ಹಾಕಿ. ಎರಡು ಜಡೆಯನ್ನು ಬಿಗಿಯಾಗಿ ಕಟ್ಟಿ ಹೇರ್‌ ಪಿನ್‌ ಅಥವಾ ಕ್ಲಿಪ್‌ ಬಳಸಿ, ತುರುಬು ರೀತಿಯಲ್ಲಿ ಮಾಡಿ, ನಂತರ ಹೇರ್‌ ಸ್ಪ್ರೇ ಮಾಡಿ ಮಲಗಿ.

ಬೆಳಗ್ಗೆ ಎದ್ದು ಜಡೆಯನ್ನು ಬಿಚ್ಚಿದಾಗ ಕೂದಲು ಸುರುಳಿ-ಸುರುಳಿಯಾಗಿರುತ್ತದೆ. ಈಗ ಈ ಕೂದಲನ್ನು ಹಾಗೇ ಬಿಡಬಹುದು, ಇಲ್ಲ ನಿಮಗೆ ಇಷ್ಟ ಬಂದ ವಿನ್ಯಾಸದಲ್ಲಿ ಕಟ್ಟಬಹುದು.

ಗಿಡ್ಡ ಕೂದಲಿನವರು ಗುಂಗುರು ಕೂದಲು ಪಡೆಯಲು ಟೆಕ್ನಿಕ್

ಕೂದಲು ಭುಜದವರೆಗೆ ಇದ್ದರೆ ಜಡೆ ಹಾಕಿ, ಬಿಗಿಯಾಗಿ ಕಟ್ಟಲು ಸಾಧ್ಯವಾಗುವುದಿಲ್ಲ, ಜಡೆ ಹಾಕಿದರೂ ಬಿಚ್ಚಿ ಹೋಗುತ್ತದೆ, ಅದರ ಬದಲಿಗೆ ಇಲ್ಲಿ ನೀಡಿರುವ ಟೆಕ್ನಿಕ್‌ ಬಳಸಿದರೆ ಕರ್ಲಿ ವಿಥ್‌ ಮೆಸ್ಸಿ ಲುಕ್‌ ಪಡೆಯಬಹುದು. ಸೆಲೆಬ್ರಿಟಿ ಲುಕ್‌ ನೀಡುವ ಈ ಹೇರ್‌ ಸ್ಟೈಲ್‌ ಮಾಡಲು ನೀವು ಮಾಡಬೇಕಾಗಿರುವುದು, ಸ್ವಲ್ಪ-ಸ್ವಲ್ಪ ಕೂದಲನ್ನು ತೆಗೆದು ಸುರುಳಿ ಸುತ್ತಿ ತುರುಬು ರೀತಿ ಕಟ್ಟಿ, ನಂತರ ಹೇರ್‌ ಪಿನ್‌ ಹಾಕಿ. ಈ ರೀತಿ ಚಿಕ್ಕ-ಚಿಕ್ಕ 5-6 ತುರುಬು ಮಾಡಿ, ಮಲಗಿ, ಬೆಳಗ್ಗೆ ಎದ್ದು ಹೇರ್‌ ಬಿಚ್ಚಿ, ಕೂದಲನ್ನು ಬಿಡಿಸಿದಾಗ ಆಕರ್ಷಕವಾಗಿ ಕಾಣುವುದು. ಈ ಕೂದಲನ್ನು ಬಾಚದೆ ಹಾಗೇ ಕೈಯಿಂದಲೇ ಬಿಡಿಸಿ ಹೇರ್‌ ಸ್ಟೈಲ್‌ ಮಾಡಬಹುದು, ಬಾಚುವುದಾದರೆ ದೊಡ್ಡ ಹಲ್ಲಿನ ಬಾಚಣಿಕೆ ಬಳಸಿ, ಚಿಕ್ಕ ಹಲ್ಲಿನ ಬಾಚಣಿಕೆಯಲ್ಲಿ ಬಳಸಿದರೆ ಶೇಪ್ ಹೋಗುವುದು.

ಪೇಪರ್‌ ಟವಲ್ ಬಳಸಿ ಗುಂಗುರು ಕೂದಲು ಪಡೆಯಿರಿ

ನಿಮ್ಮ ಕೂದಲು ಸ್ವಲ್ಪ ಉದ್ದವಾಗಿದ್ದರೆ ಈ ಟಿಪ್ಸ್ ಬಳಸಿ ಆಕರ್ಷಕವಾದ ಹೇರ್‌ಸ್ಟೈಲ್‌ ಪಡೆಯಬಹುದು. ಈ ಟಿಪ್ಸ್ ತುಂಬಾ ಸುಲಭ. ಅಡುಗೆ ಮನೆಯಲ್ಲಿರುವ ಪೇಪರ್‌ ಟವಲ್, ಅಥವಾ ಉದ್ದದ ಟಿಶ್ಯೂ ಪೇಪರ್‌ ತೆಗೆದು ಅದನ್ನು ಒಂದು ಇಂಚು ಅಗಲಕ್ಕೆ ಮಡಚಿ, ನಂತರ ಕುದಲನ್ನು ಅದರಲ್ಲಿ ಸುತ್ತಿ, ಕೊನೆಗೆ ಪೇಪರ್‌ ಟವಲ್‌ ಅನ್ನು ಗಂಟು. ನಿಮ್ಮ ಕೂದಲಿನ ದಪ್ಪಕ್ಕೆ ಅನುಗುಣವಾಗಿ 5-6 ಪೇಪರ್‌ ಟವಲ್ ಬಳಸಿ. ಈ ರೀತಿ ಮಾಡಿ ಒಂದೆರಡು ತಾಸು ಬಿಟ್ಟರೂ ಸಾಕು, ಕೂದಲು ಅಲೆ-ಅಲೆಯಾಗಿ ಆಕರ್ಷಕವಾಗಿ ಕಾಣುವುದು.

ಗುಂಗುರು ಕೂದಲಿನಿಂದ ರೆಡ್‌ ಕಾರ್ಪೆಟ್ ಲುಕ್‌ ಪಡೆಯಬೇಕೆ?

ಈ ಹೇರ್‌ ಸ್ಟೈಲ್‌ ತುಂಬಾ ಸುಲಭವಾಗಿ ಮಾಡಬಹುದು. ಈ ರೀತಿ ಮಾಡಿದರೆ ಕೂದಲು ತುಂಬಾ ಗುಂಗುರು ಆಗುವುದಿಲ್ಲ, ಸ್ವಲ್ಪ ಸುರುಳಿಯಾಗಿ ಆಕರ್ಷಕವಾಗಿ ಕಾಣುವುದು. ಈ ಲುಕ್‌ಗಾಗಿ ಕೂದಲನ್ನು ಬಾಚಿ ಎರಡು ಭಾಗವಾಗಿ ಮಾಡಿ ಸುರುಳಿ-ಸುರುಳಿ ಸುತ್ತಿ, ರಬ್ಬರ್‌ ಬ್ಯಾಂಡ್‌ ಹಾಕಿ, ಮಲಗಿ, ಬೆಳಗ್ಗೆ ಎದ್ದಾಗ ನೀವು ಬಯಸಿದಂತೆ ಕೂದಲು ಅಲೆ-ಅಲೆಯಾಗಿ ಗ್ಲಾಮರಸ್‌ ಲುಕ್‌ ನೀಡುವುದು ನೋಡಿ.

ಕೂದಲು ತುಂಬಾ ಗುಂಗುರು ಕಾಣಬೇಕೆ?

ಪಾರ್ಲರ್‌ನಲ್ಲಿ ಕರ್ಲಿಂಗ್ ಮಾಡಿಸಿದಷ್ಟು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದಾದರೆ ಕರ್ಲ್‌ಫಾರ್ಮರ್ಸ್ ಬಳಸಿದರೆ ಸಾಕು. ಪಾರ್ಲರ್‌ನಲ್ಲಾದರೆ ಕೂದಲಿಗೆ ಕರ್ಲಿಂಗ್‌ ಮಾಡುವಾಗ ಕೂದಲು ಬಿಸಿಯಾಗುವುದು, ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೆ ಕರ್ಲ್‌ಫಾರ್ಮರ್ಸ್ ಬಳಸಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಹಾಗೂ ಕೂದಲು ಕೂಡ ತುಂಬಾ ಆಕರ್ಷಕವಾಗಿ ಕಾಣುವುದು.

ಕರ್ಲ್‌ಫಾರ್ಮರ್‌ ಬೇರೆ-ಬೇರೆ ಗಾತ್ರದಲ್ಲಿ ದೊರೆಯುತ್ತದೆ, ನಿಮಗೆ ಸೂಕ್ತವಾಗಿದ್ದನ್ನು ಬಳಸಬಹುದು, ಕೂದಲನ್ನು ತುಂಬಾ ಭಾಗಗಳಾಗಿ ಮಾಡಿ, ನಂತರ ಕರ್ಲ್‌ಫಾರ್ಮರ್‌ ಬಳಸಿ, ಮಲಗಿ, ಬೆಳಗ್ಗೆ ಎದ್ದು ನೋಡಿದಾಗ ಕೂದಲ ಸೌಂದರ್ಯ ನೋಡಿ ವಾವ್‌ ಎನ್ನುವವರು ನೋಡಿ.

English summary

Try this Hairstyles Tonight To Wake Up With Perfect Curls

If you want to flash with curl hairstyle, Here are some easy overnight hairstyles, which will not only easy to get curl but save your time. Take a look.
X
Desktop Bottom Promotion