For Quick Alerts
ALLOW NOTIFICATIONS  
For Daily Alerts

ಕೂದಲು ಉದುರುತ್ತಿದೆಯೇ? ಮೆಂತೆ ಹಾಗೂ ಕರಿಬೇವಿನಿಂದ ಈ ರೀತಿ ಟ್ರೈ ಮಾಡಿದ್ದೀರಾ?

|

ನಿಮ್ಮ ಕೂದಲಿನ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದೀರಾ? ಕೂದಲು ಉದುರಲು ದೂಳು, ಜೀವನಶೈಲಿ ಮಾತ್ರ ಕಾರಣವಲ್ಲ ನಮ್ಮಲ್ಲಿರುವ ಮಾನಸಿಕ ಒತ್ತಡ, ಕೂದಲಿನ ತುದಿ ಕವಲೊಡೆಯುವುದು ಇವೆಲ್ಲಾ ಕೂಡ ಒಂದು ಕಾರಣವಾಗಿದೆ.

curry leaves and fenugreek seeds

ನೀವು ನಿಮ್ಮ ಕೂದಲಿನ ಆರೈಕೆ ಕಡೆಗೆ ಸ್ವಲ್ಪ ಗಮನ ನೀಡಿದರೆ ಕೂದಲು ಉದುರುವ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ. ಅದಕ್ಕಾಗಿ ನೀವು ದುಬಾರಿ ಬೆಲೆಕೊಟ್ಟು ಎಣ್ಣೆ, ಶ್ಯಾಂಪೂ ಕೊಳ್ಳಬೇಕಾಗಿಲ್ಲ, ನಿಮ್ಮ ಅಡುಗೆ ಮನೆಯಲ್ಲಿರುವ ಮೆಂತೆಕಾಳು ಹಾಗೂ ಕರಿಬೇವಿನ ಎಲೆ ಸಾಕು ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಇದರ ಪ್ರಯೋಜನವೇನು, ಬಳಸುವುದು ಹೇಗೆ ಎಂದು ನೋಡೋಣ:

 ಕೂದಲಿಗೆ ಮೆಂತೆಯ ಪ್ರಯೋಜನಗಳು

ಕೂದಲಿಗೆ ಮೆಂತೆಯ ಪ್ರಯೋಜನಗಳು

* ಕೂದಲು ಉದುರುವುದನ್ನು ತಡೆಗಟ್ಟುತ್ತದೆ ಹಾಗೂ ಕೂದಲು ಮಂದವಾಗಿ ಬೆಳೆಯುವಂತೆ ಮಾಡುತ್ತದೆ.

* ಇದರಲ್ಲಿ ಫ್ಲೇವೋನಾಯ್ಡ್, ಆ್ಯಂಟಿಆಕ್ಸಿಡೆಂಟ್‌ ಅಂಶವಿದ್ದು, ಫೋಲಿಕ್ಲಿಸ್ ಅಂಶವಿದ್ದು ಇದು ಕೂದಲಿನ ಬುಡವನ್ನು ಬಲಪಡಿಸುತ್ತದೆ.

* ಅಲ್ಲದೆ ಇದು ಕೂದಲು ಡ್ರೈಯಾಗುವುದನ್ನು ತಪ್ಪಿಸುತ್ತದೆ ಹಾಗೂ ಕೂದಲಿಗೆ ಹೊಳಪು ಉಂಟಾಗುವುದು.

 ಕರಿಬೇವಿನ ಗುಣಗಳು

ಕರಿಬೇವಿನ ಗುಣಗಳು

* ಇದರಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶವಿದ್ದು ಇದು ಕೂದಲಿನಲ್ಲಿರುವ ಕಶ್ಮಲವನ್ನು ತೊಡೆದು ಹಾಕುತ್ತದೆ.

* ಇದರಲ್ಲಿರುವ ಬೀಟಾ ಕೆರೋಟಿನ್ ಕೂದಲನ್ನು ಬಲಪಡಿಸುತ್ತದೆ

* ಅಲ್ಲದೆ ಕೂದಲಿನ ಬುಡದಲ್ಲಿ ತುರಿಕೆ ಕಡಿಮೆ ಮಾಡುತ್ತದೆ.

 ಮೆಂತೆ ಹಾಗೂ ಕರಿಬೇವಿನಿಂದ ಕೂದಲು ತೊಳೆಯುವ ನೀರು ಮಾಡುವುದು ಹೇಗೆ?

ಮೆಂತೆ ಹಾಗೂ ಕರಿಬೇವಿನಿಂದ ಕೂದಲು ತೊಳೆಯುವ ನೀರು ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ

1/4 ಕಪ್ ಮೆಂತೆ ಬೀಜ, 20 ಕರಿಬೇವಿನ ಎಲೆ

ಮಾಡುವ ವಿಧಾನ

ಮೆಂತೆಯನ್ನು ಪುಡಿ ಮಾಡಬೇಕು, ಕರಿಬೇವನ್ನು ಕೂಡ ಕೈಯಿಂದ ಹಿಸುಕಿ ಅಥವಾ ಮಿಕ್ಸಿಯಲ್ಲಿ ಹಾಕಿ ಒಂದು ರೌಂಡ್‌ ರುಬ್ಬಿದರೆ ಆಗುತ್ತೆ.

* ಈಗ ನೀರನ್ನು ಕುದಿಸಿ.

* ಈಗ ಕುದಿಯುವ ನೀರಿಗೆ ಈ ಎರಡು ಮಿಶ್ರಣ ಹಾಕಿ 5 ನಿಮಿಷ ಬಿಡಿ.

* ನಂತರ ತಣ್ಣಗಾಗಲು ಬಿಡಿ.

* ನಂತರ ಸೋಸಿ ಆ ನೀರನ್ನು ಒಂದು ಬಾಟಲಿನಲ್ಲಿ ಹಾಕಿಡಿ.

ಬಳಸುವುದು ಹೇಗೆ

ಬಳಸುವುದು ಹೇಗೆ

* ನಿಮ್ಮ ತಲೆಯನ್ನು ಶ್ಯಾಂಪೂ ಹಚ್ಚಿ ತೊಳೆದ ಬಳಿಕ ನಂತರ ನೀರು ಹಾಕಿ ತೊಳೆಯಿರಿ.

* ನಂತರ ಈ ನೀರನ್ನು ತಲೆಗೆ ಹಾಕಿ. ನಂತರ ತಲೆ ಒರೆಸಿ ಕೂದಲು ಒಣಗಿಸಬಹುದು.

* ನಿಮಗೆ ಈ ನೀರನ್ನು ತಲೆಗೆ ಹಾಕಿದ ಬಳಿಕ ಒಂದು ಮಗ್ ನೀರು ಹಾಕ ಬಯಸುವುದಾದರೆ ಸರಿ, ಆದರೆ ಈ ನೀರು ಹಾಕಿದ ಬಳಿಕ ಕೂದಲಿಗೆ ಶ್ಯಾಂಪೂ ಹಚ್ಚಬೇಡಿ.

ಈ ವಿಧಾನ ವಾರದಲ್ಲಿ2-3 ಬಾರಿ ಮಾಡುತ್ತಾ ಬನ್ನಿ ಸೊಗಸಾದ ಕೂದಲಿನ ಸೌಂದರ್ಯವನ್ನು ಪಡೆಯಬಹುದು.

English summary

Strengthen Your Hair With Curry Leaves And Fenugreek Seeds Hair Rinse

Strengthen your hair with curry leaves and fenugreek seeds hair rinse, Have a look...
X
Desktop Bottom Promotion