For Quick Alerts
ALLOW NOTIFICATIONS  
For Daily Alerts

ಹೋಳಿ ಹಬ್ಬದಲ್ಲಿ ಈ ಬಣ್ಣಗಳನ್ನು ಎರಚಿದರೆ ಏನರ್ಥ ಗೊತ್ತೇ?

|

ಹೋಳಿ..ಹೋಳಿ..ಬಣ್ಣದ ಹೋಳಿ…ಬಣ್ಣ ಬಣ್ಣದ ರಂಗೋಲಿ…ಹೀಗೆ ಹೋಳಿ ಹಬ್ಬವನ್ನು ಸ್ಯಾಂಡಲ್ ವುಡ್ ನ ಸಿನಿಮಾವೊಂದರ ಹಾಡೊಂದರಲ್ಲಿ ವಿವರಿಸಲಾಗಿದೆ. ನೀವೆಲ್ಲರೂ ಈ ಹಾಡು ಕೇಳಿರಬಹುದು. ಹೋಳಿ ಹಬ್ಬದ ಮಜಾವೇ ಅಂತಹದ್ದು ಪರಸ್ಪರ ಬಣ್ಣ ಹಚ್ಚಿಕೊಂಡು, ಬಾಂಗ್ ಕುಡಿದು ಸುತ್ತಲಿನ ಪ್ರಪಂಚವನ್ನೇ ಮರೆಯುವಂತಹ ದಿನ. ಅದರಲ್ಲೂ ಉತ್ತರ ಭಾರತೀಯರಿಗೆ ಇದು ತುಂಬಾ ವಿಶೇಷ ಹಬ್ಬ. ಅಲ್ಲಿ ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡಿದ ಬಳಿಕ ಹೋಳಿ ಆಚರಿಸಲಾಗುತ್ತದೆ. ಈ ವೇಳೆ ಹೊಸ ಬಟ್ಟೆ, ಅತಿಥಿಗಳ ಜತೆಗೆ ಹೋಳಿ ಸಂಭ್ರಮ ಹೀಗೆ ಪ್ರತಿಯೊಂದು ವಿಶೇಷವಾಗಿರುವುದು. ಚಳಿಗಾಲದ ಕಳೆದು ವಸಂತ ಋತು ಆರಂಭವಾಗುತ್ತಿರುವ ಸಂದರ್ಭದಲ್ಲಿ ಹೋಳಿ ಹಬ್ಬ ಆಚರಿಸಲಾಗುತ್ತದೆ.

ಫಾಲ್ಗುನ ಮಾಸದ ಪೌರ್ಣಮಿಯಂದು ಆರಂಭವಾಗುವ ಹೋಳಿ ಹಬ್ಬರು ಎರಡು ದಿನಗಳ ಕಾಲ ನಡೆಯುತ್ತದೆ. ಮೊದಲು ದಿನದಂದು ಹೋಳಿಕ ದಹನ ಮತ್ತು ಎರಡನೇ ದಿನ ಬಣ್ಣ ಎರಚುವ ಹೋಳಿ ಆಚರಿಸಲಾಗುತ್ತದೆ. ಈ ವರ್ಷ ಬಣ್ಣ ಎರಚುವ ಹೋಳಿ ಹಬ್ಬವನ್ನು ಮಾರ್ಚ್ 9 ಮತ್ತು 10ರಂದು ಆಚರಿಸಲಾಗುತ್ತಿದೆ.

ಹೋಳಿ ಹಬ್ಬದ ವೇಳೆ ಬಣ್ಣ ಎರಚಿದ ಕಾರಣಕ್ಕೆ ನಾವು ಅವರ ಮೇಲೆ ದ್ವೇಷ ಸಾಧಿಸಬಾರದು ಎನ್ನುವ ಮಾತಿದೆ. ಹೋಳಿ ಸಂದರ್ಭದಲ್ಲಿ ಹೆಚ್ಚಾಗಿ ಗುಲಾಬಿ ಬಣ್ಣವನ್ನು ಬಳಸುವರು. ಗುಲಾಬಿ ಬಣ್ಣದ ನೀರನ್ನು ಮಾಡಿಕೊಂಡು ಅದನ್ನು ಪರಸ್ಪರ ಎರಚಿಕೊಳ್ಳುವ ಮೂಲಕ ಹೋಳಿ ಆಚರಿಸಲಾಗುತ್ತದೆ. ಅದೇ ರೀತಿಯಾಗಿ ಹಾಗೆ ಬಣ್ಣವನ್ನು ಎರಚುವರು. ನೀವು ಹೋಳಿ ಆಡಿದವರಾಗಿದ್ದರೆ ಅದೆಲ್ಲವೂ ತಿಳಿದಿರಬಹುದು. ಆದರೆ ಹೋಳಿಯ ನಿಜವಾದ ಅರ್ಥ ಮತ್ತು ಪ್ರಾಮುಖ್ಯತೆ ಏನು ಎಂದು ತಿಳಿಯಲು ನೀವು ಸ್ಕ್ರೋಲ್ ಡೌನ್ ಮಾಡುತ್ತಾ ಓದಿಕೊಂಡು ಹೋಗಿ…

1. ಕೆಂಪು ಬಣ್ಣ

1. ಕೆಂಪು ಬಣ್ಣ

ಭಾರತೀಯರು ಹಿಂದಿನಿಂದಲೂ ವಿವಾಹಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದಾರೆ. ವಿವಾಹಿತ ಮಹಿಳೆಯರು ಕುಂಕುಮವನ್ನು ಹಣೆಗಿಟ್ಟುಕೊಳ್ಳುವರು. ಅದೇ ಹೋಳಿ ದಿನದಂದು ಕೂಡ ವಿವಾಹಿತರು ಕೆಂಪು ಬಣ್ಣವನ್ನು ಹಣೆಗೆ ಇಟ್ಟುಕೊಳ್ಳೂವರು.

ಮಕ್ಕಳು ಮತ್ತು ಇತರರು ಕೆಂಪು ಬಣ್ಣವನ್ನು ತಮ್ಮ ಪ್ರೀತಿ ಪಾತ್ರರಿಗೆ ಎರಚಲು ಬಳಸುವರು. ಕೆಂಪು ಬಣ್ಣವು ಪ್ರೀತಿ, ಅನ್ಯೋನ್ಯತೆ, ಭಾವನೆ ಮತ್ತು ಉತ್ಸಾಹದ ಸಂಕೇತವಾಗಿದೆ. ಕುಟುಂಬದೊಂದಿಗೆ ಹೋಳಿ ಆಚರಿಸುತ್ತಿದ್ದರೆ ಅಥವಾ ನಿಮ್ಮ ಮನಸ್ಸಿಗೆ ತುಂಬಾ ಹತ್ತಿರವಿರುವವರ ಜತೆಗೆ ನೀವು ಹೋಳಿ ಆಚರಣೆ ಮಾಡುತ್ತಲಿದ್ದರೆ ಆಗ ನೀವು ಕೆಂಪು ಬಣ್ಣ ಬಳಸಿ.

2. ಹಸಿರು ಬಣ್ಣ

2. ಹಸಿರು ಬಣ್ಣ

ಹೋಳಿಯು ಕೃಷಿಯ ಒಂದು ಭಾಗವಾಗಿರುವ ಕಾರಣದಿಂದಾಗಿ ಹಸಿರು ಬಣ್ಣವನ್ನು ನೆಮ್ಮದಿ, ಸುಗ್ಗಿ ಮತ್ತು ಸಕಾರಾತ್ಮಕತೆ ವ್ಯಕ್ತಪಡಿಸಲು ಬಳಸುವರು. ಹೋಳಿ ಆಚರಣೆಗೆ ಮೊದಲು ಈ ಬಣ್ಣವನ್ನು ದೇವರಿಗೆ ಅರ್ಪಿಸಲಾಗುತ್ತದೆ. ಹಸಿರು ಬಣ್ಣವು ಸಮೃದ್ಧಿ, ಹೊಸ ಆರಂಭ, ಗೌರವ ಮತ್ತು ಪ್ರಕೃತಿ ತಾಯಿಯ ಸೂಚಕ. ಹಸಿರು ಬಣ್ಣದೊಂದಿಗೆ ಆಡದೆ ಇರುವ ಜನರು ಸಿಗುವುದು ತುಂಬಾ ಕಡಿಮೆ.

3. ನೀಲಿ ಬಣ್ಣ

3. ನೀಲಿ ಬಣ್ಣ

ಹಿಂದೂ ಪುರಾಣದ ಪ್ರಕಾರ ನೀಲಿ ಬಣ್ಣವು ಕೃಷ್ಣ ದೇವರಿಗೆ ಸಂಬಂಧಿಸಿದ್ದಾಗಿದೆ. ಕೃಷ್ಣನ ಮೈ ಬಣ್ಣವು ನೀಲಿಗೆ ಸಮಾನವಾಗಿತ್ತು ಎಂದು ನಂಬಲಾಗಿದೆ. ಹೀಗಾಗಿ ಕೃಷ್ಣ ದೇವರಿಗೆ ಸಂಬಂಧಿಸಿದ ಎರಡು ನಗರಗಳಾದ ಮಥುರಾ ಮತ್ತು ವೃಂದಾವನದಲ್ಲಿ ಹೋಳಿ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಲಾಗುತ್ತದೆ. ಈ ನಗರಗಳಲ್ಲಿನ ಜನರು ಹೆಚ್ಚಾಗಿ ನೀಲಿ ಬಣ್ಣದಿಂದ ಹೋಳಿ ಆಚರಿಸಿಕೊಳ್ಳುವರು. ನೀಲಿ ಬಣ್ಣವು ಜಲಾಂಶ, ಧನಾತ್ಮಕ ಶಕ್ತಿ, ಧ್ಯೇಯ, ಆಕರ್ಷಣೆ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ.

4. ಹಳದಿ ಬಣ್ಣ

4. ಹಳದಿ ಬಣ್ಣ

ಈ ಬಣ್ಣವನ್ನು ಹೋಳಿ ಹಬ್ಬದ ಆಚರಣೆ ವೇಳೆ ಪ್ರತಿಯೊಬ್ಬರು ಬಳಸುವರು. ಈ ಬಣ್ಣವನ್ನು ಹಿಂದೂ ಧರ್ಮದಲ್ಲಿ ದೇವರ ಪೂಜೆಯ ಸಂದರ್ಭದಲ್ಲೂ ಬಳಸಲಾಗುತ್ತದೆ. ಈ ಬಣ್ಣವು ಸಂಭ್ರಮ, ಕಾಂತಿ, ಶಾಂತಿ ಮತ್ತು ಸಮೃದ್ಧಿಯ ದ್ಯೋತಕ. ಈ ಬಣ್ಣವು ಅರಶಿನಕ್ಕೆ ಸಂಬಂಧಿಸಿದ ಕಾರಣ ಇದರಲ್ಲಿ ಚಿಕಿತ್ಸಕ ಗುಣಗಳು ಇವೆ. ಹಳದಿ ಬಣ್ಣದ ಹೊರತಾಗಿ ಹೋಳಿ ಹಬ್ಬದ ಆಚರಣೆಯು ಅಪೂರ್ಣವಾಗಿರುವುದು.

5. ಗುಲಾಬಿ ಬಣ್ಣ

5. ಗುಲಾಬಿ ಬಣ್ಣ

ಹೆಚ್ಚಾಗಿ ಗುಲಾಬಿ ಬಣ್ಣವು ಮಹಿಳೆಯರು ಬಳಸುವಂತಹ ಬಣ್ಣ ಎಂದು ಪರಿಗಣಿಸಲಾಗಿದೆ. ಆದರೆ ಈ ಬಣ್ಣವು ಸಂತೋಷ ಹಾಗೂ ಸಂಭ್ರಮ ವ್ಯಕ್ತಪಡಿಸುವ ಸೂಚಕ. ಗುಲಾಬಿ ಬಣ್ಣದಿಂದಾಗಿ ಹೋಳಿಯು ಮತ್ತಷ್ಟು ಬಣ್ಣ ಪಡೆಯುವುದು. ಇದು ಸ್ನೇಹ ಮತ್ತು ಪ್ರೀತಿಯ ಸಂಕೇತ ಕೂಡ. ನೀವು ಸ್ನೇಹವನ್ನು ಮರಳಿ ಪಡೆಯಲು ಬಯಸುತ್ತಿದ್ದರೆ ಆಗ ಗುಲಾಬಿ ಬಣ್ಣವನ್ನು ಬಳಸಿಕೊಳ್ಳಿ.

6. ಕಿತ್ತಳೆ ಬಣ್ಣ

6. ಕಿತ್ತಳೆ ಬಣ್ಣ

ಈ ಕಡು ಬಣ್ಣವು ಧನಾತ್ಮಕತೆ ಮತ್ತು ಶಕ್ತಿಯನ್ನು ಸೂಚಿಸುವುದು. ಇದು ಸೂರ್ಯ ದೇವರ ಬಣ್ಣವಾಗಿದೆ. ಕಿತ್ತಳೆ ಬಣ್ಣವು ಜ್ಞಾನ, ಆಧ್ಯಾತ್ಮ ಮತ್ತು ಹೊಸ ಆರಂಭದ ಸೂಚಕವಾಗಿರುವ ಕಾರಣದಿಂದಾಗಿ ಹೋಳಿ ಸಂದರ್ಭದಲ್ಲಿ ಪ್ರತಿಯೊಬ್ಬರು ಕಿತ್ತಳೆ ಬಣ್ಣ ಎರಚುವರು.

7. ನೇರಳೆ ಬಣ್ಣ

7. ನೇರಳೆ ಬಣ್ಣ

ನೇರಳೆ ಬಣ್ಣವನ್ನು ಕೂಡ ಹೋಳಿ ಸಂದರ್ಭದಲ್ಲಿ ಜನರು ಬಳಸಿಕೊಳ್ಳುವರು. ನೇರಳೆ ಬಣ್ಣವು ರಾಜತ್ವ, ಸಂಪತ್ತು, ನಮ್ರತೆ ಮತ್ತು ಉದಾತ್ತತೆಯ ಸಂಕೇತ. ಕಡು ಹಾಗೂ ಹೊಳೆಯುವ ಬಣ್ಣವು ಹಬ್ಬದ ವೇಳೆ ಅದ್ಭುತವಾಗಿ ಕಾಣಿಸುವುದು ಮತ್ತು ಹೆಚ್ಚಿನ ಜನರು ತಮ್ಮ ಮುಖಕ್ಕೆ ನೇರಳೆ ಬಣ್ನ ಹಚ್ಚಿಕೊಂಡಿರುವುದನ್ನು ನೀವು ನೋಡಬಹುದು.

ನಿಮಗೆ ಇಷ್ಟದ ಬಣ್ಣವನ್ನು ಆಯ್ಕೆ ಮಾಡಿ ಹೋಳಿ ಸಂಭ್ರಮದಿಂದ ಆಚರಿಸಿ. ಹೋಳಿ ಹಬ್ಬದ ಶುಭಾಶಯಗಳು.

English summary

Holi 2020, Meaning And Significance Of Diferent Color

Holi is a festival of color, here we have given meaning And significance Of diferent Color for holi celebration, take a look.
Story first published: Saturday, March 7, 2020, 13:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X