For Quick Alerts
ALLOW NOTIFICATIONS  
For Daily Alerts

ಟ್ರೆಂಡ್ ಆಗಿರುವ ಗಡ್ಡದ ಆರೈಕೆಗೆ ಕೆಲವು ಸಲಹೆಗಳು

|

ಪುರುಷರು ಹೆಚ್ಚಾಗಿ ಗಡ್ಡ ಮೀಸೆ ಬೆಳೆಸುವುದು ಒಂದು ಟ್ರೆಂಡ್ ಆಗಿದೆ. ಈ ಟ್ರೆಂಡ್ ಹಿಂದಿನಿಂದಲೂ ಇತ್ತಾದರೂ ಕೆಲವೊಂದು ಸೆಲಿಬ್ರಿಟಿಗಳು ಇದನ್ನು ಪಾಲಿಸಿಕೊಂಡು ಹೋದ ಬಳಿಕ ಜನಸಾಮಾನ್ಯರಲ್ಲೂ ಇದು ಕ್ರೇಜ್ ಉಂಟು ಮಾಡಿತು. ಗಡ್ಡ ಬೆಳೆಸುವುದು ಒಂದು ರೀತಿಯಲ್ಲಿ ತುಂಬಾ ಕಠಿಣ ಕೆಲಸ. ಯಾಕೆಂದರೆ ಗಡ್ಡ ಬೆಳೆಸಿದರೆ ಅದನ್ನು ನಿರ್ವಹಣೆ ಮಾಡುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಗಡ್ಡ ಬಿಟ್ಟವರು ಬೇರೆಯೇ ರೀತಿ ಕಾಣವರು. ಹೆಚ್ಚಿನ ಪುರುಷರು ಗಡ್ಡ ನಿರ್ವಹಣೆ ಮಾಡುವ ಬಗ್ಗೆ ಗಮನ ಹರಿಸುವುದಿಲ್ಲ. ಅದು ಯಾಕೆಂದು ಕೂಡ ಇದುವರೆಗೆ ತಿಳಿದಿಲ್ಲ. ಉದಾಸೀನ ಮನೋಭಾವದಿಂದಾಗಿ ಪುರುಷರು ಗಡ್ಡದ ನಿರ್ವಹಣೆಯಲ್ಲಿ ಹಿಂದೆ ಬಿದ್ದಿರಬಹುದು. ಗಡ್ಡ ಬೆಳೆಸುವ ಜತೆಗೆ ಅದನ್ನು ಸರಿಯಾಗಿ ತೊಳೆದು ಕಂಡೀಷನ್ ಮಾಡುವುದು ಒಳ್ಳೆಯದು. ನಾವು ನಿಮಗೆ ಗಡ್ಡ ತೊಳೆಯುವ ಮತ್ತು ಅದನ್ನು ಸರಿಯಾಗಿ ನಿರ್ವಹಣೆ ಮಾಡುವಂತಹ ಕೆಲವೊಂದು ವಿಧಾನಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಗಡ್ಡ ತೊಳೆಯುವ ಉತ್ಪನ್ನ ಬಳಸಿ

ಗಡ್ಡ ತೊಳೆಯುವ ಉತ್ಪನ್ನ ಬಳಸಿ

ಮಾರುಕಟ್ಟೆಯಲ್ಲಿ ಇಂದು ದೇಹದ ಪ್ರತಿಯೊಂದು ಅಂಗವನ್ನು ತೊಳೆಯಲು ಉತ್ಪನ್ನಗಳು ಲಭ್ಯವಿದೆ. ಇದಕ್ಕೆ ಗಡ್ಡ ಹೊರತಾಗಿಲ್ಲ. ಗಡ್ಡ ತೊಳೆಯಲು ನೀವು ಚರ್ಮದ ವಿಧವನ್ನು ಹೊಂದಿಕೊಂಡು ಉತ್ಪನ್ನ ಬಳಸಿಕೊಳ್ಳಿ. ಗಡ್ಡ ತೊಳೆಯುವ ವಿಭಾಗದಲ್ಲಿ ಘನ ಹಾಗೂ ದ್ರವ ರೂಪದ ಉತ್ಪನ್ನಗಳು ಲಭ್ಯವಿದೆ. ಇದನ್ನು ನೀವು ಅಂಗೈಗೆ ಹಾಕಿಕೊಂಡು ಸ್ವಲ್ಪ ಉಜ್ಜಿಕೊಂಡ ಬಳಿಕ ಗಡ್ಡಕ್ಕೆ ಹಚ್ಚಿಕೊಳ್ಳಿ. ನೀವು ಅತಿಯಾಗಿ ಇದರ ಬಳಕೆ ಮಾಡಬೇಡಿ.

ಹಾಗೆ ಬಿಡಿ

ಹಾಗೆ ಬಿಡಿ

ನೀವು ಗಡ್ಡಕ್ಕೆ ಬಳಸುವಂತಹ ಶಾಂಪೂವಿನಿಂದ ಹೆಚ್ಚಿನ ಲಾಭ ಪಡೆಯಲು ಕೆಲವು ಸಮಯ ಅದನ್ನು ಹಾಗೆ ಬಿಡಬೇಕು. ನೀವು ಇದನ್ನು ಹಚ್ಚಿಕೊಂಡು ಬಳಿಕ ಹೆಚ್ಚಿನ ತಾಳ್ಮೆ ವಹಿಸಿ ಕಾಯಬೇಕು. ಯಾಕೆಂದರೆ ಇದು ಪ್ರತಿಯೊಂದು ಕೂದಲಿನ ಕಿರುಚೀಲಗಳಿಗೆ ಸಾರಭೂತ ಎಣ್ಣೆ ಮತ್ತು ತೇವಾಂಶ ನೀಡುವುದು.

ತೊಳೆಯಿರಿ

ತೊಳೆಯಿರಿ

ಗಡ್ಡ ತೊಳೆಯಲು ಉಗುರುಬೆಚ್ಚಿನ ನೀರನ್ನು ಬಳಸಿಕೊಳ್ಳಿ. ಉಗುರುಬೆಚ್ಚಗಿನ ನೀರು ಚರ್ಮದ ರಂಧ್ರವು ತೆರೆದುಕೊಳ್ಳುವಂತೆ ಮಾಡುವುದು. ಸರಿಯಾಗಿ ಮಸಾಜ್ ಮಾಡಿಕೊಂಡು ಗಡ್ಡದಲ್ಲಿ ಉಳಿದಿರುವಂತಹ ಶಾಂಪೂವನ್ನು ತೆಗೆಯಿರಿ.

ಸ್ನಾನ ಮೊದಲಿನ ಆರೈಕೆ

ಸ್ನಾನ ಮೊದಲಿನ ಆರೈಕೆ

ಗಡ್ಡವನ್ನು ಸ್ವಲ್ಪ ಒಣಗಿಸಿ, ಆದರೆ ಅತಿಯಾಗಿ ಬೇಡ. ಒಮ್ಮೆ ಗಡ್ಡ ಒಣಗಿದ ಬಳಿಕ ನೀವು ಗಡ್ಡವನ್ನು ಸ್ಟೈಲಿಶ್ ಮಾಡಬಹುದಾದ ಎಣ್ಣೆ ಅಥವಾ ಮಲಾಮ್ ಹಚ್ಚಿಕೊಳ್ಳಬಹುದು. ಇದು ಗಡ್ಡದಲ್ಲಿ ಹಾಗೆ ಹೀರಿಕೊಳ್ಳಲು ಬಿಡಿ. ಇದು ಸಂಪೂರ್ಣ ದಿನದಲ್ಲಿ ಹೆಚ್ಚು ಕಂಡೀಷನರ್ ಆಗಿ ಇರುವಂತೆ ಮಾಡುವುದು.

ಗಡ್ಡವನ್ನು ತಯಾರಿಸಿಕೊಳ್ಳಿ

ಗಡ್ಡವನ್ನು ತಯಾರಿಸಿಕೊಳ್ಳಿ

ಗಡ್ಡಕ್ಕೆ ಕೇವಲ ನೀರು ಸಿಂಪಡಣೆ ಮಾಡಿದರೆ ಸಾಕಾಗದು. ಇದಕ್ಕೆ ನೀವು ಗಡ್ಡವನ್ನು ನೀರಿನಲ್ಲಿ ಅದ್ದಿಡಬೇಕು. ಆದರೆ ನೀವು ಇದಕ್ಕಾಗಿ ನೀರಿನ ಬಿಸಿ ನೀಡಬೇಕು. ಬಿಸಿ ನೀರು ಆರಾಮ ನೀಡಿದರೂ ಅದರಿಂದ ಕೆಲವೊಂದು ಅಡ್ಡ ಪರಿಣಾಮ ಉಂಟಾಗಬಹುದು. ಉಗುರುಬೆಚ್ಚಿನ ನೀರನ್ನು ಆಯ್ಕೆ ಮಾಡಿಕೊಂಡರೆ ಆಗ ರಕ್ತದೊತ್ತಡವು ಸರಾಗವಾಗಿ ಆಗುವುದು ಮತ್ತು ಗಡ್ಡವು ಸರಿಯಾಗಿ ಹೊಂದಿಕೊಳ್ಳುವುದು.

ಗಡ್ಡದ ಎಣ್ಣೆ ಬಳಸಿ

ಗಡ್ಡದ ಎಣ್ಣೆ ಬಳಸಿ

ಗಡ್ಡದ ಎಣ್ಣೆಯನ್ನು ಬಳಸುವುದು ತುಂಬಾ ಕಠಿಣ. ಯಾಕೆಂದರೆ ಇದು ತುಂಬಾ ದಪ್ಪ, ಕೆಲವೊಂದು ತುಂಬಾ ಕಾಂತಿಯುತ ಮತ್ತು ಇನ್ನು ಕೆಲವು ಒಣಗುವುದು. ನೀವು ಹಲವಾರು ಉತ್ಪನ್ನಗಳನ್ನು ಪರೀಕ್ಷೆ ಮಾಡಿಕೊಂಡು ನೋಡಿ. ಇದರಿಂದ ನಿಮಗೆ ಯಾವುದು ಒಳ್ಳೆಯದು ಎಂದು ತಿಳಿದುಬರಲಿದೆ. ನೀವು ಒಂದು ಹತ್ತರಿಂದ ಹನ್ನೆರೆಡನ್ನು ಪರೀಕ್ಷೆ ಮಾಡಬೇಕು. ಜೊಜೊಬಾ ಮತ್ತು ಕೆಲವೊಂದು ನೈಸರ್ಗಿಕ ಎಣ್ಣೆಗಳನ್ನು ಇದಕ್ಕೆ ಬಳಕೆ ಮಾಡಬಹುದು.

ಗಡ್ಡ ಸುಂದರವಾಗಿ ಇಟ್ಟುಕೊಳ್ಳಿ

ಗಡ್ಡ ಸುಂದರವಾಗಿ ಇಟ್ಟುಕೊಳ್ಳಿ

ನೀವು ನಿಯಮಿತವಾಗಿ ಗಡ್ಡವನ್ನು ಟ್ರಿಮ್ ಮಾಡುತ್ತಲಿದ್ದರೆ ಆಗ ನಿಮಗೆ ಒಂದು ಸುಂದರ ವಿನ್ಯಾಸವು ಸಿಗುವುದು. ನೀವು ಇದನ್ನು ಸರಿಯಾಗಿ ಬಾಚಿಕೊಂಡು ಅದರಲ್ಲಿ ಉದುರಿರುವ ಕೂದಲನ್ನು ತೆಗೆಯಬೇಕು. ಅದು ಕೆಳಮುಖವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. ಗಡ್ಡವನ್ನು ಟ್ರಿಮ್ ಮಾಡಲು ಇರುವಂತಹ ಕೆಲವೊಂದು ಸಾಧನಗಳನ್ನು ನೀವು ಬಳಸಿಕೊಳ್ಳಬಹುದು.

ಇಂಧನ ನೀಡಿ

ಇಂಧನ ನೀಡಿ

ಯಾವುದೇ ಮನೆ ಕೂಡ ಪಂಚಾಂಗವಿಲ್ಲದೆ ನಿಲ್ಲಲು ಸಾಧ್ಯವಿಲ್ಲ. ಅದೇ ರೀತಿಯಾಗಿ ಗಡ್ಡಕ್ಕೆ ಕೂಡ ಪ್ರೋಟೀನ್ ಮತ್ತು ಕೊಬ್ಬು ಅಗತ್ಯವಾಗಿ ಬೇಕು. ಆದರೆ ಗಡ್ಡಕ್ಕೆ ಹಚ್ಚಾಗಿ ವಿಟಮಿನ್ ಬಿ5, ಬಿ3 ಮತ್ತು ಬಿ9 ಬೇಕಾಗಿದೆ. ಇದರಿಂದ ತೆಳು ಮಾಂಸ, ಬೀಜಗಳು, ಮೊಟ್ಟೆಯ ಲೋಳೆ, ಹಾಲು ಮತ್ತು ಹಸಿರೆಲೆ ತರಕಾರಿಗಳು ಅತೀ ಅಗತ್ಯವಾಗಿ ಇರುವುದು. ನೀವು ಸುಂದರವಾಗಿರುವಂತಹ ಗಡ್ಡ ಬೇಕೆಂದು ಗಂಭೀರವಾಗಿ ಚಿಂತನೆ ಮಾಡುತ್ತಲಿದ್ದರೆ ಆಗ ನೀವು ಆಹಾರ ಕ್ರಮದಲ್ಲಿ ಈ ಎಲ್ಲವನ್ನು ಸೇರಿಸಿಕೊಳ್ಳಬೇಕು.

English summary

Want a neat beard: Read these tips

Beards have become a part of daily life now, despite people thinking the trend would phase out. In reality, they'll always be around in one shape or form, but their level of style and trendiness will shift. but one of the most important things that men often forget is facial hair maintenance regimen, which requires proper wash and conditioning. Here’s your guide to washing and maintain your beard properly.
Story first published: Friday, October 4, 2019, 17:22 [IST]
X
Desktop Bottom Promotion