For Quick Alerts
ALLOW NOTIFICATIONS  
For Daily Alerts

ಕೂದಲ ಆರೋಗ್ಯಕ್ಕೆ ಮನೆಯಲ್ಲೇ ತಯಾರಿಸಿ ರಾಸಾಯನಿಕ ಮುಕ್ತ ಸೀರಮ್‌

|

ಇತ್ತೀಚೆಗೆ ಕೂದಲು ಒಡೆಯುವುದು, ತಲೆಹೊಟ್ಟು, ಚಿಕ್ಕ ವಯಸ್ಸಿಗೆ ಬಿಳಿ ಕೂದಲು, ಬಹಳ ಬಿರುಸಾಗುವುದು, ಉದುರುವುದು ಹೀಗೆ ಹಲವು ಸಮಸ್ಯೆಗಳು ಎಲ್ಲರನ್ನು ಕಾಡುತ್ತಿದೆ. ಆದರೆ ಇಂಥಾ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸೀರಮ್‌. ನಮ್ಮ ಕೂದಲ ಕಾಳಜಿಯಲ್ಲಿ ಸೀರಮ್‌ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ನಮ್ಮ ಕೇಶರಾಶಿಯ ಕಾಳಜಿಯ ಪ್ರತಿನಿತ್ಯದ ಪ್ರಮುಖ ಭಾಗವಾಗಿಸಿಕೊಳ್ಳಲೇಬೇಕು. ಅದರಲ್ಲೂ ಈಗಿನ ವಾಯುಮಾಲಿನ್ಯ, ಧೂಳು, ನಮ್ಮ ಕೂದಲ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಸೀರಮ್‌ ಬಳಸುವುದರಿಂದ ಕೂದಲನ್ನು ಮೇಲಿನ ಎಲ್ಲಾ ಸಮಸ್ಯೆಗಳಿಂದ ರಕ್ಷಿಸುತ್ತದೆ ಅಲ್ಲದೆ ಕೂದಲು ಸುಕ್ಕುಗಟ್ಟದಂತೆ ತಡೆಯುತ್ತದೆ, ಸ್ವಚ್ಛವಾದ ಆರ್ದ್ರ ಕೂದಲು ನಮ್ಮದಾಗುತ್ತದೆ. ಹೇರ್ ಸೀರಮ್‌ಗಳು ಸಾಮಾನ್ಯವಾಗಿ ಪ್ರತಿ ಕೂದಲಿನ ಎಳೆಯ ಮೇಲೆ ತೆಳುವಾದ ಪದರವನ್ನು ರೂಪಿಸುವ ಮೂಲಕ ಕೆಲಸ ಮಾಡುತ್ತವೆ, ಕೊಳಕಿನಿಂದ ರಕ್ಷಿಸುತ್ತವೆ. ಆದ್ದರಿಂದ ಉದ್ದವಾದ, ಹೊಳೆಯುವ ಕೂದಲು ನಿಮ್ಮದಾಗಲು ಸೀರಮ್ ಕಡ್ಡಾಯವಾಗಿ ಬಳಸಲೇಬೇಕು. ಅಂಗಡಿಯಲ್ಲಿ ಖರೀದಿಸುವ ಸೀರಮ್‌ಗಳಿಗಿಂತ ಮನೆಯಲ್ಲೇ ತಯಾರಿಸುವ ಸೀರಮ್‌ ಹೆಚ್ಚು ಪರಿಣಾಮಕಾರಿ ಹಾಗೂ ಯಾವುದೇ ರಾಸಾಯನಿಕ ಇರುವುದಿಲ್ಲ. ಅಲ್ಲದೇ, ಖರ್ಚು ಕಡಿಮೆ.

ಮನೆಯಲ್ಲೇ ಸೀರಮ್‌ ತಯಾರಿಸುವುದು ಹೇಗೆ, ಯಾವೆಲ್ಲಾ ವಿವಿಧ ಪ್ರಕಾರಗಳಲ್ಲಿ ಸೀರಮ್‌ ತಯಾರಿಸಬಹುದು ಮುಂದೆ ನೋಡೊಣ:

1. ದ್ರಾಕ್ಷಿ ಬೀಜದ ಎಣ್ಣೆ

1. ದ್ರಾಕ್ಷಿ ಬೀಜದ ಎಣ್ಣೆ

ಬೇಕಾಗುವ ಪದಾರ್ಥಗಳು

ದ್ರಾಕ್ಷಿ ಬೀಜದ ಎಣ್ಣೆ

ಲ್ಯಾವೆಂಡರ್ ಎಣ್ಣೆ

ವಿಟಮಿನ್ ಇ ಕ್ಯಾಪ್ಸುಲ್

ತಯಾರಿಸುವ ವಿಧಾನ

* ಗಾಜಿನ ಬಟ್ಟಲಿನಲ್ಲಿ 8 ಚಮಚ ದ್ರಾಕ್ಷಿ ಬೀಜದ ಎಣ್ಣೆಯನ್ನು ಹಾಕಿ, ಅದಕ್ಕೆ 10-12 ಹನಿ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ.

* 2 ರಿಂದ 3 ವಿಟಮಿನ್ ಇ ಕ್ಯಾಪ್ಸುಲ್‌ಗಳನ್ನು ಹಾಕಿ ಚೆನ್ನಾಗಿ ಬೆರೆಸಿ.

* ಇದನ್ನು ಗಾಜಿನ ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ. ಈಗ ಮನೆಯಲ್ಲೇ ತಯಾರಿಸಿದ ಹೇರ್ ಸೀರಮ್ ಬಳಸಲು ಸಿದ್ಧವಾಗಿದೆ.

ಇದು ಅತ್ಯಂತ ಪರಿಣಾಮಕಾರಿ ಕೂದಲಿನ ಸೀರಮ್ ಆಗಿದ್ದು ನಿಮ್ಮ ಒಣ ಕೂದಲನ್ನು ಶುಷ್ಕವಾಗಿರಿಸುತ್ತದೆ, ಕೂದಲನ್ನು ಬಲವಾಗಿಸುತ್ತದೆ, ಆರೋಗ್ಯಕರ ಮತ್ತು ನೈಸರ್ಗಿಕವಾಗಿ ಕಾಣುವಂತೆ ಮಾಡುತ್ತದೆ.

ಹೆಚ್ಚಿನ ಪರಿಣಾಮಕ್ಕೆ ಸ್ವಚ್ಛವಾದ ಒದ್ದೆಯಾದ ಕೂದಲಿನ ಮೇಲೆ ಈ ಹೇರ್ ಸೀರಮ್ ಬಳಸಿ.

2. ಎಣ್ಣೆಗಳ ಮಿಶ್ರಣದ ಸೀರಮ್‌

2. ಎಣ್ಣೆಗಳ ಮಿಶ್ರಣದ ಸೀರಮ್‌

ಬೇಕಾಗುವ ಪದಾರ್ಥಗಳು

ಅವಕಾಡೊ ಎಣ್ಣೆ

ಜೊಜೊಬ ಎಣ್ಣೆ

ಅರ್ಗಾನ್ ಎಣ್ಣೆ

ದ್ರಾಕ್ಷಿ ಬೀಜದ ಎಣ್ಣೆ

ಬಾದಾಮಿ ಎಣ್ಣೆ

ತಯಾರಿಸುವ ವಿಧಾನ

* ಒಂದು ಸಣ್ಣ ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ 4 ಚಮಚ ಅವಕಾಡೊ ಎಣ್ಣೆಯನ್ನು ಹಾಕಿ.

* ಇದಕ್ಕೆ, 2 ಚಮಚ ಜೊಜೊಬಾ ಎಣ್ಣೆ, ಅರ್ಗಾನ್ ಎಣ್ಣೆ, ದ್ರಾಕ್ಷಿ ಬೀಜದ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸೇರಿಸಿ.

* ಇದನ್ನು ಚೆನ್ನಾಗಿ ಬೆರೆಸಿ ಈಗ ಮನೆಯಲ್ಲಿಯೇ ಹೇರ್ ಸೀರಮ್ ಸಿದ್ಧವಾಗಿದೆ.

* ಇದನ್ನು ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಬಹುದು.

ಮನೆಯಲ್ಲಿ ತಯಾರಿಸಿದ ಹೇರ್ ಸೀರಮ್ ಸಾರಭೂತ ತೈಲಗಳ ಪರಿಪೂರ್ಣ ಮಿಶ್ರಣವಾಗಿದ್ದು ಅದು ನಮ್ಮ ಕೂದಲನ್ನು ಒಳಗಿನಿಂದ ಪೋಷಿಸುಸತ್ತದೆ ಮತ್ತು ಅದರ ಮೂಲ ಹೊಳಪನ್ನು ಮರಳಿ ತರುತ್ತದೆ.

3. ಕಾಫಿ ಸೀರಮ್‌

3. ಕಾಫಿ ಸೀರಮ್‌

ಬೇಕಾಗುವ ಪದಾರ್ಥಗಳು

ಕಾಫಿ

ಜೇನು

ತಯಾರಿಸುವ ವಿಧಾನ

* ಸಣ್ಣ ಬಟ್ಟಲಿನಲ್ಲಿ 4 ಚಮಚ ಕಾಫಿ ಪುಡಿಯನ್ನು ತೆಗೆದುಕೊಳ್ಳಿ.

* ಇದಕ್ಕೆ, 2 ಚಮಚ ಜೇನುತುಪ್ಪ ಮತ್ತು 4 ಚಮಚ ಬಿಸಿ ನೀರನ್ನು ಸೇರಿಸಿ.

* ನಯವಾದ ಪೇಸ್ಟ್ ಆಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.

* ಈ ಮಿಶ್ರಣವನ್ನು ನಿಮ್ಮ ಒದ್ದೆ ಕೂದಲಿಗೆ ಹಚ್ಚಿ 15-20 ನಿಮಿಷ ಬಿಟ್ಟು ಶಾಂಪೂ ಬಳಸಿ ತೊಳೆಯಿರಿ.

* ಕಾಫಿ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲಿಗೆ ಉತ್ತಮ ಬಣ್ಣ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

* ಜೇನುತುಪ್ಪವು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ ಮತ್ತು ಅದನ್ನು ತೇವವಾಗಿರಿಸುತ್ತದೆ.

4. ಸೋಯಾ ಎಣ್ಣೆ ಸೀರಮ್‌

4. ಸೋಯಾ ಎಣ್ಣೆ ಸೀರಮ್‌

ಬೇಕಾಗುವ ಪದಾರ್ಥಗಳು

ಸೋಯಾ ಎಣ್ಣೆ

ಜೊಜೊಬ ಎಣ್ಣೆ

ತೆಂಗಿನ ಎಣ್ಣೆ

ಆಲಿವ್ ಎಣ್ಣೆ

ತಯಾರಿಸುವ ವಿಧಾನ

* ಮೇಲಿನ ಎಲ್ಲಾ ನೈಸರ್ಗಿಕ ಎಣ್ಣೆಗಳನ್ನು ತಲಾ 2 ಚಮಚ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ.

* ಬಳಕೆಗೆ ಮೊದಲು ಸ್ವಲ್ಪ ಬೆಚ್ಚಗಾಗಿಸಿ.

* ಕೂದಲಿಗೆ ಚೆನ್ನಾಗಿ ಹಚ್ಚಿ 15-20 ನಿಮಿಷ ನಂತರ ತೊಳೆಯಿರಿ.

5. ಅಲೋವೆರಾ ಸೀರಮ್‌

5. ಅಲೋವೆರಾ ಸೀರಮ್‌

ಬೇಕಾಗುವ ಪದಾರ್ಥಗಳು

ಅಲೋವೆರಾ ರಸ

ತೆಂಗಿನ ಎಣ್ಣೆ

ಜೊಜೊಬ ಎಣ್ಣೆ

ವಿಟಮಿನ್ ಇ ಎಣ್ಣೆ

ಲ್ಯಾವೆಂಡರ್ ಸಾರಭೂತ ತೈಲ

ಗೋರಂಟಿ ಎಲೆಗಳು

ತಯಾರಿಸುವ ವಿಧಾನ

* ಕಡಿಮೆ ಉರಿಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಗೋರಂಟಿ ಎಲೆಗಳನ್ನು ಹಾಕಿ.

* 20-30 ನಿಮಿಷಗಳ ನಂತರ, ತೆಂಗಿನ ಎಣ್ಣೆಯು ಕಂದು ಬಣ್ಣಕ್ಕೆ ತಿರುಗುತ್ತದೆ ಏಕೆಂದರೆ ಗೋರಂಟಿ ಎಲೆಗಳ ಸಾರವನ್ನು ತೆಂಗಿನ ಎಣ್ಣೆಯಿಂದ ಹೀರಿಕೊಳ್ಳಲಾಗುತ್ತದೆ.

* ಎಣ್ಣೆಯನ್ನು ಸೋಸಿಕೊಳ್ಳಿ ಅದನ್ನು ತಣ್ಣಗಾಗಲು ಬಿಡಿ. ಇದಕ್ಕೆ 3-4 ಚಮಚ ಅಲೋವೆರಾ ರಸ ಸೇರಿಸಿ 3 ಚಮಚ ಜೊಜೊಬಾ ಎಣ್ಣೆ, 4-5 ಹನಿ ವಿಟಮಿನ್ ಇ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

* ಇದನ್ನು ಬಾಟಲಿಯಲ್ಲಿ ಸಂಗ್ರಹಿಸಿ ಮತ್ತು ಬಳಕೆಗೆ ಮೊದಲು ಯಾವಾಗಲೂ ಚೆನ್ನಾಗಿ ಅಲ್ಲಾಡಿಸಿ.

* ನಿಮ್ಮ ಕೂದಲನ್ನು ತೊಳೆದ ನಂತರ ಈ ಕೂದಲು ಸೀರಮ್ ಬಳಸಿ. ಇದು ಕೂದಲಿನ ಮೇಲೆ ಹಗುರವಾಗಿರುತ್ತದೆ ಮತ್ತು ತುಂಬಾ ರಿಫ್ರೆಶ್ ಆಗುತ್ತದೆ.

English summary

Homemade Hair Serum Recipes to Nourish Your Hair in Kannada

Here we are discussing about Homemade Hair Serum Recipes to Nourish Your Hair in Kannada. Read more.
Story first published: Wednesday, October 6, 2021, 16:50 [IST]
X
Desktop Bottom Promotion