For Quick Alerts
ALLOW NOTIFICATIONS  
For Daily Alerts

ಹೇರ್‌ ಮಾಸ್ಕ್‌ ಬಗ್ಗೆ ತಿಳಿದಿರಲೇಬೇಕಾದ ಸಂಗತಿಗಳಿವು

|

ಹೇರ್ ಮಾಸ್ಕ್ ಬಗ್ಗೆ ಕೇಳಿರುತ್ತೀರಾ, ನಿಮ್ಮಲ್ಲಿ ಕೆಲವರು ಅದರ ಪ್ರಯೋಜನಗಳ ಬಗ್ಗೆ ಕಂಡುಕೊಂಡಿರುತ್ತೀರಿ, ಮುಖದ ಅಂದಕ್ಕೆ ಹೇಗೆ ಫೇಸ್‌ ಮಾಸ್ಕ್ ಬಳಸುತ್ತೇವೋ ಹಾಗೆಯೋ ಅಂದವಾದ ಹಾಗೂ ಸೊಂಪಾದ ಕೂದಲನ್ನು ಪಡೆಯಲು ಹೇರ್ ಮಾಸ್ಕ್‌ ಬಳಸಲಾಗುವುದು.

ಕೆಲವರು ರೆಡಿಮೇಡ್‌ ಹೇರ್‌ ಮಾಸ್ಕ್ ಬಳಸಿದರೆ ಇನ್ನು ಕೆಲವರು ಮನೆಯಲ್ಲಿಯೇ ಹೇರ್‌ ಮಾಸ್ಕ್ ತಯಾರಿಸಿ ಬಳಸುತ್ತಾರೆ. ಈ ಲೇಖನದಲ್ಲಿ ಹೇರ್‌ ಮಾಸ್ಕ್‌ನ ಪ್ರಯೋಜನಗಳೇನು? ಇದನ್ನು ಬಳಸುವುದು ಹೇಗೆ ಯಾವ ಬಗೆಯ ಹೇರ್‌ ಮಾಸ್ಕ್ ನಿಮ್ಮ ಕೂದಲಿಗೆ ಒಳ್ಳೆಯದು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಮೊದಲಿಗೆ ಹೇರ್ ಮಾಸ್ಕ್‌ ಪ್ರಯೋಜನಗಳನ್ನು ತಿಳಿಯೋಣ

ಮೊದಲಿಗೆ ಹೇರ್ ಮಾಸ್ಕ್‌ ಪ್ರಯೋಜನಗಳನ್ನು ತಿಳಿಯೋಣ

  • ಹೇರ್‌ ಮಾಸ್ಕ್‌ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ
  • ಕೂದಲಿನ ಬುಡದ ಮಾಯಿಶ್ಚರೈಸರ್ ಕಾಪಾಡುತ್ತದೆ
  • ಕೂದಲು ಒಡೆಯುವುದು ತಡೆಗಟ್ಟಿ ಕೂದಲಿನ ರಕ್ಷಣೆ ಮಾಡುತ್ತದೆ
  • ಕೂದಲು ಸಿಕ್ಕಾಗುವುದನ್ನು ತಡೆಗಟ್ಟುತ್ತದೆ
  • ಕೂದಲನ್ನು ಬಲಪಡಿಸುತ್ತದೆ
  • ದೂಳು ಕೂದಲನ್ನು ಹಾಳು ಮಾಡದಂತೆ ರಕ್ಷಣೆ ಮಾಡುತ್ತದೆ.
  • ಹೇರ್‌ ಮಾಸ್ಕ್‌ಗೆ ಯಾವೆಲ್ಲಾ ವಸ್ತುಗಳನ್ನು ಬಳಸಬಹುದು?

    ಹೇರ್‌ ಮಾಸ್ಕ್‌ಗೆ ಯಾವೆಲ್ಲಾ ವಸ್ತುಗಳನ್ನು ಬಳಸಬಹುದು?

    ಮೊಟ್ಟೆ, ಬಾಳೆಹಣ್ಣು ಬೆಣ್ಣೆಹಣ್ಣು, ಜೇನು, ತೆಂಗಿನೆಣ್ಣೆ, ಆಲೀವ್ ಎಣ್ಣೆ, ಲೋಳೆಸರ ಇವುಗಳನ್ನು ಹೇರ್‌ ಮಾಸ್ಕ್ ಆಗಿ ಬಳಸಬಹುದು. ಈ ಎಲ್ಲಾ ವಸ್ತುಗಳಲ್ಲಿ ಕೂದಲಿನ ಅಂದ ಹೆಚ್ಚಿಸುವ ಹಾಗೂ ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುವ ಗುಣಗಳಿವೆ. ಕೂದಲಿನ ಪೋಷಣೆಗೆ ಅಗ್ಯತವಾದ ವಿಟಮಿನ್ ಇ, ಬಯೋಟಿನ್, ಫೋಲೆಟ್, ಕಬ್ಬಿಣದಂಶ, ಮೆಗ್ನಿಷ್ಯಿಯಂ ಇವೆಲ್ಲಾ ಸಿಗುವುದು.

     ಕೂದಲು ತುಂಬಾ ಸಿಕ್ಕಾಗುತ್ತಿದ್ದರೆ ಯಾವ ಹೇರ್ ಮಾಸ್ಕ್ ಒಳ್ಳೆಯದು

    ಕೂದಲು ತುಂಬಾ ಸಿಕ್ಕಾಗುತ್ತಿದ್ದರೆ ಯಾವ ಹೇರ್ ಮಾಸ್ಕ್ ಒಳ್ಳೆಯದು

    ಬೇಕಾಗುವ ಸಾಮಾಗ್ರಿ

    1 ಚಮಚ ಜೇನು

    1 ಚಮಚ ಶುದ್ಧ

    ತೆಂಗಿನೆಣ್ಣೆಮಾಡುವುದು ಹೇಗೆ

    ಜೇನು ಮತ್ತು ತೆಂಗಿನೆಣ್ಣೆಯನ್ನು ಒಂದು ಪ್ಯಾನ್‌ನಲ್ಲಿ ಹಾಕಿ ಕುದಿಸಿ, ನಂತರ ಮಿಶ್ರಣ ತಣ್ಣಗಾಗಲು ಬಿಡಿ. ನಂತರ ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮೈಲ್ಡ್ ಶ್ಯಾಂಪೂ ಅಥವಾ ಸೀಗೆಕಾಯಿ ಹಚ್ಚಿ ಸ್ನಾನ ಮಾಡಿ.

     ಒಣ ಕೂದಲಿಗೆ

    ಒಣ ಕೂದಲಿಗೆ

    1 ಬೆಣ್ಣೆಹಣ್ಣು

    1 ಚಮಚ ಲೋಳೆಸರ

    1 ಚಮಚ ತೆಂಗಿನೆಣ್ಣೆ

    ಮಾಡುವುದು ಹೇಗೆ?

    ಈ ಮೂರು ಸಾಮಗ್ರಿ ಮಿಶ್ರ ಮಾಡಿ ತಲೆ ಬುಡಕ್ಕೆ ಚೆನ್ನಾಗಿ ಹಚ್ಚಿ 30-60 ನಿಮಿಷ ಬಿಟ್ಟು ಮೈಲ್ಡ್ ಶ್ಯಾಂಪೂ ಹಚ್ಚಿ ಸ್ನಾನ ಮಾಡಿ.

    ಕೂದಲು ತೆಳ್ಳಗಾಗುತ್ತದೆಯೇ?

    ಕೂದಲು ತೆಳ್ಳಗಾಗುತ್ತದೆಯೇ?

    ಕೂದಲು ಉದುರಿ ತುಂಬಾ ತೆಳ್ಳಗಾಗುತ್ತಿದೆಯೇ ಹಾಗಾದರೆ ಈ ಮಾಸ್ಕ್ ಮಾಡಿ ಹಚ್ಚಿ

    ಬೇಕಾಗುವ ಸಾಮಗ್ರಿ

    • 2 ಮೊಟ್ಟೆಯ ಬಿಳಿ
    • 2 ಚಮಚ ತೆಂಗಿನೆಣ್ಣೆ
    • ಮಾಡುವ ವಿಧಾನ

      ಮೊಟ್ಟೆಯ ಬಿಳಿಗೆ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಕದಡಿ, ನಂತರ ತಲೆಗೆ ಹಚ್ಚಿ 30 ನಿಮಿಷ ಬಿಡಿ.

      ನಂತರ ಶ್ಯಾಂಪೂ ಹಚ್ಚಿ ತಣ್ಣೀರಿನಲ್ಲಿ ತಲೆಸ್ನಾನ ಮಾಡಿ.

      ರೆಡಿಮೇಡ್‌ ಹೇರ್‌ ಮಾಸ್ಕ್ ಬಳಸುವುದಾದರೆ ಗಮನಿಸಬೇಕಾದ ಅಂಶಗಳು

      ರೆಡಿಮೇಡ್‌ ಹೇರ್‌ ಮಾಸ್ಕ್ ಬಳಸುವುದಾದರೆ ಗಮನಿಸಬೇಕಾದ ಅಂಶಗಳು

      ಒಂದು ವೇಳೆ ಮಾರುಕಟ್ಟೆಯಲ್ಲಿ ದೊರೆಯುವ ಒಳ್ಳೆಯ ಬ್ರ್ಯಾಂಡ್‌ನ ರೆಡಿಮೇಡ್ ಹೇರ್‌ ಮಾಸ್ಕ್ ಬಳಸುವುದಾದರೆ ಅದರಲ್ಲಿ ಬಳಸಿರುವ ಎಣ್ಣೆ, ಯಾವ ಗಿಡ ಮೂಲಿಕೆ ಬಳಸಿದ್ದಾರೆ, ಅದರಲ್ಲಿ ರಾಸಾಯನಿಕವಿದೆಯೇ ಎಂಬುವುದನ್ನು ಗಮನಿಸಿ.

      ಹೇರ್‌ ಮಾಸ್ಕ್ ಹೇಗೆ ಹಚ್ಚಬೇಕು?

      ಹೇರ್‌ ಮಾಸ್ಕ್ ಹೇಗೆ ಹಚ್ಚಬೇಕು?

      • ಹೇರ್ ಮಾಸ್ಕ್‌ ಹಚ್ಚುವ ಮುನ್ನ ಹಳೆಯ ಟೀ ಶರ್ಟ್ ಧರಿಸಿ, ಇಲ್ಲದಿದ್ದರೆ ಬಟ್ಟೆಯ ಮೇಲೆ ಬೀಳುವುದು. ಈಗ ಕೂದಲನ್ನು ಬಾಚಿ.
      • ಹೇರ್ ಮಾಸ್ಕ್ ಅನ್ನು ಬೆರಳುಗಳಲ್ಲಿ ತೆಗೆದು ಕೂದಲಿನ ಬುಡದಿಂದ ಹಚ್ಚಿ, ಕೂದಲಿನ ತುದಿಯವರೆಗೆ ಹಚ್ಚಬೇಕು.
      • ಇನ್ನು ತಲೆಹೊಟ್ಟು ಇದ್ದರೆ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ.
      • ಹೇರ್ ಮಾಸ್ಕ್ ಹಚ್ಚಿದ ಬಳಿಕ ದೊಡ್ಡ ಹಲ್ಲಿನ ಬಾಚಣಿಕೆಯಿಂದ ತಲೆಬಾಚಿ.
      • ನಂತರ ಪ್ಲಾಸ್ಟಿಕ್ ಕ್ಯಾಪ್‌ ಅಥವಾ ಶವರ್‌ ಕ್ಯಾಪ್ ಹಾಕಿ, ನಂತರ ಕುತ್ತಿಗೆಗೆ ಟವಲ್ ಸುತ್ತಿ. ಇದು ಹೇರ್ ಮಾಸ್ಕ್ ಕುತ್ತಿಗೆ ಮೇಲೆ ಹರಡದಂತೆ ತಡೆಯುವುದು ಅಲ್ಲದೆ ಬೆಚ್ಚಗಿನ ಅನುಭವ ನೀಡುವುದು. ಮಾಸ್ಕ್ ಹಚ್ಚಿ 30 ನಿಮಿಷ ಬಿಡಿ.
      • ನಂತರ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಿಂದ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಬಿಸಿ ನೀರು ತಲೆಗೆ ಹಾಕಬಾರದು.
      • ಕೊನೆಯದಾಗಿ

        ಕೊನೆಯದಾಗಿ

        ಹೇರ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಕೂದಲು ನೋಡಲು ಆಕರ್ಷಕವಾಗಿರುವುದರ ಜೊತೆಗೆ ಕೂದಲು ಉದುರುವುದು, ಕೂದಲಿನ ಬುಡ ಕವಲೊಡೆಯುವುದು ಮುಂತಾದ ಸಮಸ್ಯೆ ಉಂಟಾಗುವುದಿಲ್ಲ. ಹೇರ್‌ ಮಾಸ್ಕ್ ಹಚ್ಚಿ ಕನಿಷ್ಠ ಅರ್ಧ ಗಂಟೆ ಇಡಲೇಬೇಕು. ಹೆಚ್ಚಿನ ಸಮಯವಿದ್ದರೆ 2-3 ಗಮಟೆ ಇಟ್ಟರೂ ತೊಂದರೆಯಿಲ್ಲ.

English summary

Everything You Need to Know About Using a Hair Mask in Kannada

Here are everything you need to know about using hair mask read on..
X
Desktop Bottom Promotion