For Quick Alerts
ALLOW NOTIFICATIONS  
For Daily Alerts

ಕೂದಲ ಬೆಳವಣಿಗೆಗೆ ಮತ್ತು ಸದೃಢ ಕೂದಲಿಗಾಗಿ ಬೇವಿನ ಎಲೆಗಳ ಬಳಕೆ ಹೇಗೆ ಗೊತ್ತೇ?

|

ಬೇವು ಬೇರೆಲ್ಲಾ ಸಸ್ಯಗಳಿಗೆ ಹೋಲಿಸಿದರೆ ಒಂದು ವಿಶಿಷ್ಟವಾದ ಔಷಧಿಗಳ ಆಗರ . ಅನಾದಿ ಕಾಲದಿಂದಲೂ ಪಂಡಿತೋತ್ತಮರು ತಮ್ಮ ಆಯುರ್ವೇದ ಪದ್ದತಿಗೆ ಮುಖ್ಯವಾಗಿ ಬಳಸುತ್ತಿದುದು ಈ ಬೇವಿನ ಎಲೆಗಳನ್ನು ಮತ್ತು ಅದರ ಬೇರುಗಳನ್ನು . ಅದರಿಂದ ಮಾಡಿದ ಕಷಾಯ ಸರ್ವ ರೋಗಗಳಿಗೂ ಮದ್ದು ಎಂಬ ಭಾವನೆ ಈಗಲೂ ಇದೆ . ಅದರಂತೆ ಕೂದಲಿನ ಆರೋಗ್ಯ ಕಾಪಾಡುವಲ್ಲೂ ಬೇವು ತನ್ನ ಹಿರಿಮೆ ಮುಡಿಗೇರಿಸಿಕೊಂಡಿದೆ.

ಆಯುರ್ವೇದ ಪದ್ಧತಿಯಲ್ಲಿ ಬೇವಿಗೆ ಮೊದಲ ಮಹತ್ವ . ಯುಗಾದಿಯ ಬೇವು ಬೆಲ್ಲ ಕೂಡ ಒಂದು ರೀತಿಯ ಔಷಧೀಯ ಮಹತ್ವ ಹೊಂದಿದೆ . ಅದರಲ್ಲಿರುವ ಅನೇಕ ಅಂಶಗಳು ಬ್ಯಾಕ್ಟೀರಿಯಾ , ವೈರಸ್ ಮತ್ತು ಫನ್ಗಿ ನಂತಹ ಕೀಟಾಣುಗಳ ಜೊತೆಗೆ ಹೋರಾಡುತ್ತವೆ . ದೇಹದ ಯಾವುದಾದರೂ ಭಾಗ ಊದಿಕೊಂಡಿದ್ದರೆ ಅಥವಾ ಉರಿಯೂತದಿಂದ ಬಳಲುತ್ತಿದ್ದರೆ ಬೇವು ಅದರಲ್ಲಿರುವ ಅನಾಲ್ಜೆಸಿಕ್ ಗುಣಗಳಿಂದ ಅದನ್ನು ಆದಷ್ಟು ಬೇಗನೆ ಗುಣಪಡಿಸುತ್ತದೆ . ಬೇವಿನ ನಿರಂತರ ಬಳಕೆಯಿಂದ ಕೂದಲೂ ಸಹ ಸಮೃದ್ಧವಾಗಿ ಬೆಳೆದು ಆರೋಗ್ಯದಿಂದ ಕೂಡಿರುತ್ತದೆ . ಹಾಗಾದರೆ ಬೇವನ್ನು ಹೇಗೆ ಉಪಯೋಗಿಸಿದರೆ ಕೂದಲಿಗೆ ಉಪಕಾರಿ ಎಂಬುದನ್ನು ನೋಡೋಣ....

Neem Leaves

ಕೂದಲಿನ ಸೊಂಪಾದ ಬೆಳವಣಿಗೆಗೆ ಬೇವನ್ನು ಹೇಗೆ ಉಪಯೋಗಿಸಬಹುದು?

ಬೇವಿಗೆ ಚರ್ಮಕ್ಕೆ ಮತ್ತು ಕೂದಲಿಗೆ ಅಗತ್ಯವಾಗಿ ಬೇಕಾದ ಎಲ್ಲಾ ರೀತಿಯ ಪೌಷ್ಟಿಕಾಂಶಗಳು . ಮತ್ತು ತ್ವಚೆಯ ರಕ್ಷಣೆಯ ಗುಣಗಳನ್ನು ಚರ್ಮ ಮತ್ತು ಕೂದಲಿನ ಬೇರಿಗೆ ಬಿಡುಗಡೆ ಮಾಡುವ ಶಕ್ತಿ ಅಡಗಿದೆ . ಹಾಗಿದ್ದರೆ ಬೇವನ್ನು ಕೂದಲಿನ ರಕ್ಷಣೆಗೆ ಹೇಗೆಲ್ಲಾ ಬಳಸಬಹುದು.

ಯಾವ ಯಾವ ಸಲಹೆಗಳನ್ನು ಮತ್ತು ತಂತ್ರಗಳನ್ನು ಬಳಸಿ ಕೂದಲನ್ನು ರಕ್ಷಿಸಿಕೊಳ್ಳಬಹುದು ಎಂಬುದನ್ನು ಈಗ ನೋಡೋಣ . ಇದರಿಂದ ನಿಮ್ಮ ಕೂದಲು ಉದ್ದವಾಗಿ ನುಣುಪಾಗಿ ಮತ್ತು ಹೊಳಪಾಗಿ ಯಾವುದೇ ಕೆಮಿಕಲ್ ಇಲ್ಲದೆ ಚೆನ್ನಾಗಿ ಬೆಳೆಯುತ್ತದೆ . ಯಾರು ಎಜೆಮಾ ಇಂದ ಬಳಲುತ್ತಿರುತ್ತಾರೋ ಅವರಿಗೆ ಸಾಮಾನ್ಯವಾಗಿ ಒಣಗಿದ ಮತ್ತು ತಲೆಯ ಬುರುಡೆಯ ಮೇಲೆ ಕೆರೆತ ಉಂಟಾಗುತ್ತದೆ.

Most Read: ಇಸಬು ರೋಗದ ಸಮಸ್ಯೆ ಇದೆಯೇ? ಬೇವಿನ ಎಣ್ಣೆ ಪರ್ಫೆಕ್ಟ್ ಮನೆಮದ್ದು

ಬೇವನ್ನು ಉಪಯೋಗಿಸುವುದರಿಂದ ಈ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು . ಯಾವುದೇ ರೀತಿಯ ಕಲೆಗಳೂ ಸಹ ಸ್ವಲ್ಪವೂ ಉಳಿಯದಂತೆ ತನ್ನ ಪ್ರಭಾವ ತೋರುತ್ತದೆ . ಇದನ್ನು ತಯಾರು ಮಾಡಿ ಉಪಯೋಗಿಸುವ ಬಗೆ ಹೇಗೆಂದರೆ...

* ಬೇವಿನ ಚಕ್ಕೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ.

* ಇದೆ ನೀರಿನಲ್ಲಿ ಬೆಂದಿರುವ ಚಕ್ಕೆಯನ್ನು ಚೆನ್ನಾಗಿ ರುಬ್ಬಿಕೊಳ್ಳಿ .

* ಈ ರೀತಿ ರುಬ್ಬಿದ ಮಿಶ್ರಣದ ಪೇಸ್ಟ್ ಅನ್ನು ತಲೆಯ ಬುರುಡೆಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ.

* ಇದರಿಂದ ಎಜೆಮಾ ಸಮಸ್ಯೆ ದೂರಾಗುತ್ತದೆ

* ವಾರಕ್ಕೆ ಮೂರು ಬಾರಿ ಈ ರೀತಿ ಮಾಡುವುದರಿಂದ ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ .

* ನೀವು ಶಾಂಪೂ ಹಾಗೂ ಕಂಡೀಷನರ್ ಜೊತೆಗೂ ಈ ವಿಧಾನವನ್ನು ಬಳಸಬಹುದು.

ನಿಮಗೆ ಒಂದು ವೇಳೆ ಕೂದಲು ತುಂಬಾ ಉದುರುತ್ತಿದ್ದರೆ ಅಥವಾ ತಲೆಹೊಟ್ಟು (dandruff) ಹೆಚ್ಚಿಗೆ ಇದ್ದರೆ , ಬೇವಿನ ಎಲೆಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ಹೇಗೆಂದರೆ ಆಗ ತಾನೇ ಕಿತ್ತಿರುವ ಬೇವಿನ ಹಸಿಯಾದ ಮತ್ತು ಫ್ರೆಶ್ ಆದ ಎಲೆಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ.

* ಈ ನೀರನ್ನು ನೀವು ಸ್ನಾನ ಮಾಡುವಾಗ ಆಂಟಿ ಡ್ಯಾನ್ ಡ್ರಫ್ ಶಾಂಪೂ ಉಪಯೋಗಿಸಿ ಚೆನ್ನಾಗಿ ತಲೆ ತೊಳೆದ ನಂತರ ಬಳಸಿ ತಲೆ ಉಜ್ಜಿಕೊಂಡರೆ ಮತ್ತೆಂದೂ ನಿಮಗೆ ಡ್ಯಾನ್ ಡ್ರಫ್ ನ ಸಮಸ್ಯೆ ಬರುವುದಿಲ್ಲಾ . ಏಕೆಂದರೆ ಬೇವಿನಲ್ಲಿ ಆಂಟಿ ಬ್ಯಾಕ್ಟೇರಿಯಾಲ್ ಮತ್ತು ಆಂಟಿ ಫನ್ಗಲ್ ಗುಣ ಲಕ್ಷಣಗಳಿರುವುದರಿಂದ ನಿಮ್ಮ ಕೂದಲು ಬಹಳ ಸೊಂಪಾಗಿ ಬೆಳೆಯುತ್ತದೆ .

ಬೇವಿನಲ್ಲಿ ನೈಸರ್ಗಿಕವಾಗಿ ಯಥೇಚ್ಛವಾದ ಔಷಧೀಯ ಗುಣಗಳಿರುವುದರಿಂದ ಬೇರೆ ಯಾವ ಕೆಮಿಕಲ್ ಯುಕ್ತ ಔಷಧಿಗಳೂ ಬೇವಿನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಾರವು .

* ನೀವು ಬಿಸಿ ಮಾಡಿದ ಬೇವಿನ ಎಣ್ಣೆಯನ್ನು ಅಷ್ಟೇ ಪ್ರಮಾಣದ ಆಲಿವ್ ಆಯಿಲ್ ಅಥವಾ ಅಲ್ಮನ್ಡ್ ಆಯಿಲ್ ಅಥವಾ ತೆಂಗಿನ ಎಣ್ಣೆಯ ಜೊತೆಗೆ ಸೇರಿಸಿ ತಲೆಗೆ ಚೆನ್ನಾಗಿ ತಿಕ್ಕಿಕೊಂಡರೆ ತಲೆಯ ನೆತ್ತಿಯವರೆಗೂ ರಕ್ತ ಸಂಚಾರ ಹೆಚ್ಚಾಗಿ ಆಗುತ್ತದೆ .

* ನೀವು ಹೆಡ್ ಲೈಸ್ ನಿಂದ ಬಳಲುತ್ತಿದ್ದರೂ ಸಹ ಬೇವಿನಲ್ಲಿರುವ ಆಂಟಿ ಪ್ಯಾರಾಸೈಟಿಕ್ ಗುಣಗಳಿಂದ ಅದು ಗುಣವಾಗುತ್ತದೆ . ನಿಮಗೆ ಗೊತ್ತೇ ಬೇವು ಒಂದು ನ್ಯಾಚುರಲ್ ಕಂಡೀಷನರ್ ಕೂಡ

ಬೇವಿನ ಅನೇಕ ಉಪಯೋಗಗಳನ್ನು ನೋಡುತ್ತಾ ಹೋದರೆ ಬೇವು ನಿಮ್ಮ ಒಣಗಿದ ಮತ್ತು ಗುಂಗುರು ಕೂದಲಿಗೆ ನೈಸರ್ಗಿಕವಾದ ಮಾಯಿಶ್ಚರೈಸರ್ ಆಗಿ ಕೂಡ ಕೆಲಸ ಮಾಡುತ್ತದೆ . ಬೇವಿನ ಕಂಡೀಷನರ್ ಅನ್ನು ನೀವೇ ಮನೆಯಲ್ಲಿ ತಯಾರು ಮಾಡಿಕೊಳ್ಳಬಹುದು .

* ಚೆನ್ನಾಗಿ ರುಬ್ಬಿದ ಬೇವಿನ ಎಲೆಗಳನ್ನು ಜೇನು ತುಪ್ಪದ ಜೊತೆಗೆ ಸೇರಿಸಿ ಪೇಸ್ಟ್ ತಯಾರು ಮಾಡಿಕೊಳ್ಳಿ .

* ಹೀಗೆ ತಯಾರಿಸಿದ ಪೇಸ್ಟ್ ಅನ್ನು ತಲೆ ಕೂದಲಿನ ಎಲ್ಲ ಭಾಗಕ್ಕೂ ಸಮನಾಗಿ ಹಚ್ಚಿ 10 ನಿಮಿಷ ಒಣಗಲು ಬಿಡಿ .

* ನಂತರ ಶಾಂಪೂ ಉಪಯೋಗಿಸಿ ಸ್ನಾನ ಮಾಡಿ. ನಿಮಗೆ ಕೂದಲು ಉದುರುವ ಸಮಸ್ಯೆ ಶುರುವಾಗಿದ್ದರೆ ಅಥವಾ ಈಗಾಗಲೇ ಕೆಲವೊಂದು ಕಡೆ ಕೂದಲು ಉದುರಿ ಬೊಕ್ಕ ತಲೆಯಾಗಿದ್ದರೆ ಈ ಪೇಸ್ಟ್ ಅನ್ನು ನೀವು ಸಾಮಾನ್ಯವಾಗಿ ಉಪಯೋಗಿಸುವ ಔಷಧಿಗಳ ಜೊತೆ ಉಪಯೊಗಿಸಿದ್ದೆ ಆದರೆ ಆದಷ್ಟು ಬೇಗನೆ ಗುಣ ಕಾಣಬಹುದು .

ಬೇವು ಒಂದು ಹೇರ್ ಪ್ಯಾಕ್ ಕೂಡ

ನೀವು ಇದುವರೆಗೂ ಯಾವ ಯಾವುದೋ ಹೇರ್ ಪ್ಯಾಕ್ ಗಳನ್ನು ಉಪಯೋಗಿಸಿ ಯಾವುದೇ ಗುಣ ಕಾಣದೆ ಬೇಸರವಾಗಿದ್ದರೆ ಒಮ್ಮೆ ಬೇವಿನ ಹೇರ್ ಪ್ಯಾಕ್ ಅನ್ನು ಅತಿ ಸುಲಭವಾಗಿ ನೀವೇ ಮನೆಯಲ್ಲಿ ಮಾಡಿಕೊಂಡು ಬಳಸಿ ನೋಡಿ .

* ಮೊದಲು ಬೇವಿನ ಪುಡಿ , ಆಮ್ಲ ಪುಡಿ , ಸೀಗೆಕಾಯಿ ಪುಡಿ ಮತ್ತು ರೀತಾ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ .

* ಇದಕ್ಕೆ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ .

* ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಮತ್ತು ಕೂದಲಿನ ತುಂಬೆಲ್ಲಾ ಹಚ್ಚಿ .

* ಇದನ್ನು ಸುಮಾರು 30 ರಿಂದ 40 ನಿಮಿಷಗಳ ಕಾಲ ಆರಲು ಬಿಡಿ .

* ನಂತರ ಶಾಂಪೂ ಅಥವಾ ಕಂಡೀಷನರ್ ಉಪಯೋಗಿಸಿ ತಲೆ ತೊಳೆದುಕೊಳ್ಳಿ.

Neem Leaves Oil

ಇದು ನಿಮ್ಮ ಕೂದಲಿಗೆ ಒಳ್ಳೆ ಕಂಡೀಶನ್ ಒದಗಿಸಿ , ಕೂದಲಿನ ಬೇರುಗಳ ಫಲವತ್ತತೆಯನ್ನು ಕಾಪಾಡಿ , ತಲೆ ಕಡಿತ ಮತ್ತು ತಲೆ ಹೊಟ್ಟು ನಂತಹ ಸಮಸ್ಯೆಗಳಿಂದ ದೂರವಿಡುತ್ತದೆ . ನಿಮಗೆ ಒಂದು ವೇಳೆ ಬೋಳು ತಲೆಯಿದ್ದು ಕೂದಲು ಬೇಗನೆ ಬೆಳವಣಿಗೆ ಆಗಬೇಕೆಂಬ ಬಯಕೆ ಇದ್ದರೆ, ಖಂಡಿತ ಈ ಹೇರ್ ಪ್ಯಾಕ್ ನಿಮ್ಮ ಹೊಸ ಕೂದಲಿನ ಬೆಳವಣಿಗೆಗೆ ಬಹಳ ಸಹಕಾರಿ.

Most Read: ಸೌಂದರ್ಯ ಪ್ರಿಯರಿಗೆ ಬೇವಿನ ಎಣ್ಣೆಯ ಬ್ಯೂಟಿ ಟಿಪ್ಸ್

ನೀವು ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಅದಕ್ಕೆ ಗಟ್ಟಿಯಾದ ಮೊಸರು ಸೇರಿಸಿ ಇದರ ಮಿಶ್ರಣವನ್ನು ಕೂಡ ಹೇರ್ ಪ್ಯಾಕ್ ಆಗಿ ಬಳಸಬಹುದು. ಇದರಲ್ಲಿ ಯಥೇಚ್ಛವಾದ ಫ್ಯಾಟಿ ಆಸಿಡ್ ನ ಅಂಶ ಇರುವುದರಿಂದ ಕೂದಲಿನ ಆರೋಗ್ಯ ಚೆನ್ನಾಗಿ ಕಾಪಾಡಿದಂತಾಗುತ್ತದೆ . ಕೂದಲು ಬಹಳ ನಯವಾಗಿ ಮತ್ತು ಸುಂದರವಾಗಿ ಬೆಳೆಯುತ್ತದೆ. ನೀವು ಹೇರ್ ಕಲರಿಂಗ್ ನ ಅಭ್ಯಾಸ ಇಟ್ಟುಕೊಂಡಿದ್ದರೆ , ನೀವು ಉಪಯೋಗಿಸುವ ಗೋರಂಟಿ ಪುಡಿಯ ಜೊತೆಗೆ ಸಮ ಪ್ರಮಾಣದಲ್ಲಿ ಬೇವಿನ ಪುಡಿ, ಕಾಫಿ ಪುಡಿ ಮತ್ತು ಒಂದು ಕಪ್ ಗಟ್ಟಿ ಮೊಸರನ್ನು ಸೇರಿಸಿ ಈ ಮಿಶ್ರಣವನ್ನು ನಿಮ್ಮ ತಲೆಗೆ ಹಚ್ಚಿದ್ದೇ ಆದರೆ ನೈಸರ್ಗಿಕವಾದ ಕೂದಲಿನ ಹೊಳಪು ನಿಮ್ಮದಾಗುತ್ತದೆ.

Hair Growth

ಬೇವಿಗೆ ನಿಸರ್ಗದತ್ತವಾಗಿ ಬಂದಿರುವ ಅನೇಕ ಔಷಧೀಯ ಶಕ್ತಿಗಳಿಂದ ಬೇರೆ ಎಲ್ಲಾ ಆಯುರ್ವೇದ ಔಷದಿಗಳಿಗಿಂತ ಮುಂಚೂಣಿಯಲ್ಲಿದೆ. ಅದರಂತೆ ಮನುಷ್ಯನ ದೇಹಕ್ಕೂ ಮತ್ತು ಕೂದಲಿಗೂ ಸ್ವಾಸ್ತ್ಯ ಒದಗಿಸುವಲ್ಲಿ ಕೂಡ ಅಗ್ರ ಸ್ಥಾನದಲ್ಲಿದೆ. ಹಾಗಾಗಿ ಬೇವನ್ನು ಕೇವಲ ಯುಗಾದಿ ಹಬ್ಬದ ದಿನ ಉಪಯೋಗಿಸಿ ಸುಮ್ಮನಾಗದೆ ನಿಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ. ನಿಮ್ಮ ದೇಹದ ಮತ್ತು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ.

English summary

How to Use Neem Leaves for Hair Growth and Strong?

Neem which is also known as the Indian Lilac tree has been a part and parcel of traditional Indian medicinal and therapeutic system called the Ayurveda. Neem leaves, fruits and bark which hold the maximum medicinal properties are available throughout the year since Neem tree rarely dries out and is more or less, evergreen. It has natural substances that act against bacteria; parasites and fungi. Also, neem has anti-inflammatory properties that help to reduce swelling and inflammation associated with different parts of the body.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more