For Quick Alerts
ALLOW NOTIFICATIONS  
For Daily Alerts

ತಲೆ ಕೂದಲಿನ ಹೇನಿನ ಸಮಸ್ಯೆಗೆ ಪರಿಹಾರ ಹೇಗೆ?

|

ಸಾಮಾನ್ಯವಾಗಿ ತಲೆಕೂದಲನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದರೆ ಆಗ ಪರಾವಲಂಬಿ ಜೀವಿಯಾಗಿರುವಂತಹ ಹೇನು ಕಾಣಿಸಿಕೊಳ್ಳುವುದು. ಇದು ಕೂದಲಿನಲ್ಲಿ ಕಾಣಿಸಿಕೊಳ್ಳುವ ಅತೀ ಸಣ್ಣ ಕೀಟವಾಗಿದೆ. ಇದು ಒಂದು ರೀತಿಯಲ್ಲಿ ತುಂಬಾ ಕಿರಿಕಿರಿ ಉಂಟು ಮಾಡುವುದು. ಇಂತಹ ಹೇನು ತಲೆ ಕೂದಲು, ಕಾಲಿನ ಕೂದಲು, ಕಂಕುಳಿನ ಕೂದಲು, ಎದೆ ಮೇಲಿನ ಕೂದಲು, ಹೊಟ್ಟೆ ಭಾಗ ಮತ್ತು ಬೆನ್ನು, ಗುಪ್ತಾಂಗದಲ್ಲಿನ ಕೂದಲು, ತುಂಬಾ ಅಪರೂಪದಲ್ಲಿ ಇದು ಕಣ್ಣ ರೆಪ್ಪೆ ಮತ್ತು ಹುಬ್ಬುಗಳಲ್ಲಿ ಕಾಣಿಸಿಕೊಳ್ಳುವುದು. ಈ ಪರಾವಲಂಬಿ ಜೀವಿಗಳು ಒಬ್ಬರಿಂದ ಒಬ್ಬರಿಗೆ ಹಬ್ಬುವುದು.

ಅದರಲ್ಲೂ ಮುಖ್ಯವಾಗಿ ನಾವು ಇನ್ನೊಬ್ಬರ ಬಟ್ಟೆಗಳನ್ನು ಬಳಸಿಕೊಂಡಾಗ ಮತ್ತು ದೇಹದ ಸಂಪರ್ಕದಿಂದಲೂ ಹಬ್ಬಬಹುದು. ಇವುಗಳು ಟವೆಲ್ ಮತ್ತು ಹಾಸಿಗೆಗೆ ಹಾಕುವಂತಹ ಬಟ್ಟೆ ಮೇಲೆ ಅಲ್ಪ ಕಾಲ ತನಕ ಜೀವಿಸಬಲ್ಲದು. ಇದನ್ನು ಹಂಚಿಕೊಳ್ಳುವ ಜನರಲ್ಲಿ ಇದು ಹಬ್ಬುವುದು. ಇದು ಸಾಮಾನ್ಯವಾಗಿ ಬಟ್ಟೆಗಳಲ್ಲಿ ಕೂಡ ಬದುಕುವ ಕಾರಣದಿಂದಾಗಿ ಸ್ವಿಮ್ ಸೂಟ್ ಮತ್ತು ಒಳ ಉಡುಪುಗಳನ್ನು ಅಂಗಡಿಗಳಲ್ಲಿ ಪ್ರಯತ್ನಿಸುವಾಗ ರಕ್ಷಣಾಕವಚ ಬಳಸಿ ಎನ್ನುವುದು ಸಲಹೆಯಾಗಿದೆ. ಹೇನುಗಳಿಂದ ಯಾವುದೇ ರೀತಿಯ ಲೈಂಗಿಕ ರೋಗಗಳು ಹಬ್ಬುದಿಲ್ಲವಾದರೂ ಲೈಂಗಿಕ ಸಂಪರ್ಕದಿಂದ ಈ ಸಮಸ್ಯೆಯು ಕಂಡು ಬಂದಿರುವಂತಹವರು ಬೇರೆ ರೀತಿಯ ಲೈಂಗಿಕ ಕಾಯಿಲೆಗಳು ಇದೆಯಾ ಎಂದು ಪರೀಕ್ಷೆ ಮಾಡಿಕೊಳ್ಳುವುದು ಅತೀ ಅಗತ್ಯವಾಗಿರುವುದು....

ಹೇನು ಎಷ್ಟು ಸಾಮಾನ್ಯವಾಗಿರುವುದು?

ಹೇನು ಎಷ್ಟು ಸಾಮಾನ್ಯವಾಗಿರುವುದು?

ಜಗತ್ತಿನಾದ್ಯಂತ ಶೇ.2ರಷ್ಟು ಜನರು ಮಾತ್ರ ಹೇನಿನ ಸಮಸ್ಯೆಗೆ ಒಳಗಾಗುವರು. ಇಂಗ್ಲೆಂಡ್ ನಲ್ಲಿ ಈ ಸಮಸ್ಯೆಗೆ ಒಳಗಾಗುವವರ ಪ್ರಮಾಣವು ಇಂದಿನ ದಿನಗಳಲ್ಲಿ ಗಣನೀಯವಾಗಿ ಕುಸಿತಕ್ಕೆ ಒಳಗಾಗುತ್ತಿದೆ. ಇಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ವರ್ಷಕ್ಕೆ 2000ಕ್ಕಿಂತಲೂ ಕಡಿಮೆ ಪ್ರಕರಣಗಳು ಕಂಡುಬರುತ್ತಿದೆ. ಸಲಹೆಗಾಗಿ ಜನರು ವೈದ್ಯರಲ್ಲಿಗೆ ತೆರಳುತ್ತಾರೆಯಾ ಅಥವಾ ಮಾರುಕಟ್ಟೆಯಲ್ಲಿ ಸಿಗುವಂತಹ ಔಷಧಿಗಳನ್ನು ಬಳಸಿಕೊಂಡು ಸ್ವ ಚಿಕಿತ್ಸೆ ಮಾಡಿಕೊಳ್ಳುತ್ತಾರೆಯಾ ಎನ್ನುವುದು ಇಲ್ಲಿ ಪರಿಗಣಿಸಲಾಗಿಲ್ಲ.

ಇದರ ಲಕ್ಷಣಗಳು ಏನು?

ಇದರ ಲಕ್ಷಣಗಳು ಏನು?

ಇದರ ಲಕ್ಷಣಗಳು ಕಾಣಿಸಿಕೊಳ್ಳಲು ಐದರಿಂದ ಕೆಲವು ವಾರಗಳು ಬೇಕಾಗುವುದು ಮತ್ತು ಕೆಲವು ಜನರಿಗೆ ಇದರಿ ಲಕ್ಷಣಗಳು ಕಂಡು ಬರುವುದೇ ಇಲ್ಲ. ಇದರ ಕೆಲವು ಸಾಮಾನ್ಯ ಲಕ್ಷಣಗಳು ಈ ಕೆಳಗಿನಂತಿವೆ. ತೀವ್ರ ತುರಿಕೆ, ಅದರಲ್ಲೂ ಹೇನು ಇರುವ ಜಾಗದಲ್ಲಿ. ಒಳ ಉಡುಪಿನಲ್ಲಿ ಕಪ್ಪು ಪುಡಿಯಂತಹ ಅಂಶ ಕಾಣಿಸುವುದು. ಹೇನಿನಿಂದ ಉಂಟಾಗಿರುವ ಕಡಿತದಿಂದಾಗಿ ದೇಹದಲ್ಲಿ ಕೆಂಪು ಅಥವಾ ನೀಲಿ ಬಣ್ಣದ ಕಲೆಗಳು ಕಾಣಿಸಿ ಕೊಳ್ಳುವುದು.ತುಂಬಾ ಸಾಮಾನ್ಯವಾಗಿರುವ ಮತ್ತು ಹೆಚ್ಚು ನಿಮ್ಮ ಗಮನಕ್ಕೆ ಬರುವಂತಹ ಅಂಶವೆಂದರೆ ಅದು ತುರಿಕೆ. ಹೇನಿನ ಜೊಲ್ಲಿನಿಂದಾಗಿ ಇದು ಪ್ರತಿಕ್ರಿಯೆ ನೀಡುವುದು. ಇದು ರಾತ್ರಿ ವೇಳೆ ಹೆಚ್ಚು ಕಾಡುವುದು. ಯಾಕೆಂದರೆ ಹೇನುಗಳು ರಾತ್ರಿ ವೇಳೆ ಚಟುವಟಿಕೆಯಲ್ಲಿ ಇರುವುದು.

Most Read:ಜಪಾನ್‌ನಲ್ಲಿ ಈ ಮೀನುಗಳು ಕಂಡುಬಂದರೆ ಭೂಕಂಪ ಖಚಿತ!

ಪರಾವಲಂಬಿ ಜೀವಿಗಳು ಯಾವ ರೀತಿಯಲ್ಲಿ ಕಾಣಿಸುವುದು?

ಪರಾವಲಂಬಿ ಜೀವಿಗಳು ಯಾವ ರೀತಿಯಲ್ಲಿ ಕಾಣಿಸುವುದು?

ಇವುಗಳನ್ನು ಪತ್ತೆ ಮಾಡಲು ತುಂಬಾ ಕಷ್ಟವಾಗಿರುವುದು. ಯಾಕೆಂದರೆ ಇವುಗಳು ಸಂಪೂರ್ಣವಾಗಿ ಬೆಳೆಗಾದ ಕೇವಲ 2 ಮಿ.ಮೀ. ಉದ್ದವಾಗಿರುವುದು. ಇವುಗಳು ಕೆಂಪು ಬಣ್ಣ ದ್ದಾಗಿರುವುದು ಅಥವಾ ಕಪ್ಪು/ಹಳದಿ ಬಣ್ಣದಲ್ಲಿ ಇರುವುದು ಮತ್ತು ಆರು ಕಾಲುಗಳು ಇವುಗಳಿಗೆ ಇರುವುದು. ಇವುಗಳನ್ನು ಏಡಿಗಳು ಎಂದು ಕರೆಯಲಾಗುತ್ತದೆ. ಯಾಕೆಂದರೆ ಎದುರಿನ ಎರಡು ಕಾಲುಗಳು ಏಡಿಯಂತೆ ದೊಡ್ಡದಾಗಿರುವುದು. ಈ ಕಾಲುಗಳನ್ನು ಬಳಸಿಕೊಂಡು ಕೂದಲನ್ನು ಸರಿಸುವುದು. ಸಾಮಾನ್ಯವಾಗಿ ಹೆಣ್ಣು ಹೇನುಗಳು ಮೊಟ್ಟೆಗಳನ್ನು ಇಡುವುದು ಮತ್ತು ಈ ಮೊಟ್ಟೆಗಳ ಆಕಾರವು ಒಂದು ಪಿನ್ ನ ತಲೆಯಷ್ಟು ದೊಡ್ಡದಾಗಿರುವುದು. ಇದು ಕೂದಲಿಗೆ ಅಂಟಿಕೊಂಡಿರುವುದು. ಮೊಟ್ಟೆಗಳು ಒಡೆಯುವ ತನಕ ಕಂದು ಬಣ್ಣದಲ್ಲಿ ಇರುವುದು. ಇದು ಒಡೆದ ಬಳಿಕ ಬಿಳಿ ಬಣ್ಣಕ್ಕೆ ತಿರುಗುವುದು.

ಹೇನಿಗೆ ಚಿಕಿತ್ಸೆ ಏನು?

ಹೇನಿಗೆ ಚಿಕಿತ್ಸೆ ಏನು?

ಹೇನುಗಳು ಸಾಮಾನ್ಯವಾಗಿರುವುದು ಮತ್ತು ಇದಕ್ಕೆ ಸುಲಭವಾಗಿ ಚಿಕಿತ್ಸೆ ಮಾಡಿಕೊಳ್ಳಬಹುದು. ಇದಕ್ಕೆ ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಇಂತಹ ಪರಿಸ್ಥಿತಿ ಬಗ್ಗೆ ತಿಳಿದಿದ್ದರೆ ಆಗ ಲೈಂಗಿಕ ಕೇಂದ್ರಗಳು ಬೇಗನೆ ಚಿಕಿತ್ಸೆ ನೀಡುವರು. ಇಲ್ಲವಾದಲ್ಲಿ ನೀವು ಹೋಗಿ ಯಾವುದೇ ಮೆಡಿಕಲ್ ಅಥವಾ ಸಾಮಾನ್ಯ ವೈದ್ಯರಿಂದಲೂ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಬಹುದು.

ಕೂದಲನ್ನು ಕತ್ತರಿಸಿಕೊಂಡು ನೀವು ಹೇನು ಹೋಗುತ್ತದೆ ಎಂದು ಭಾವಿಸಬೇಡಿ

ಕೂದಲನ್ನು ಕತ್ತರಿಸಿಕೊಂಡು ನೀವು ಹೇನು ಹೋಗುತ್ತದೆ ಎಂದು ಭಾವಿಸಬೇಡಿ

ಕೂದಲನ್ನು ಕತ್ತರಿಸಿಕೊಂಡು ನೀವು ಹೇನು ಹೋಗುತ್ತದೆ ಎಂದು ಭಾವಿಸಬೇಡಿ. ಯಾಕೆಂದರೆ ಇದು ಚಿಕಿತ್ಸೆ ನೀಡದೆ ಖಂಡಿತ ವಾಗಿಯೂ ಹೋಗದು. ನೀವು ಕೂದಲು ಕತ್ತರಿಸಿಕೊಂಡರೆ ಅದು ಹೋಗುವುದಿಲ್ಲ. ಸಣ್ಣ ಕೂದಲು ಕೂಡ ಅವುಗಳಿಗೆ ಮೊಟ್ಟೆಯನ್ನು ಇಡಲು ಸಾಕಾಗುವುದು. ಕೆಲವೊಂದು ಚಿಕಿತ್ಸೆಯನ್ನು ನಿಮ್ಮ ಸಂಪೂರ್ಣ ದೇಹಕ್ಕೆ ಅಳವಡಿಸಿ ಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಮೀಸೆ, ಗಡ್ಡೆ ಅಥವಾ ಗುಪ್ತಾಂಗದ ಭಾಗದಲ್ಲಿ ಇರುವಂತಹ ಕೂದಲಿಗೆ. ಯಾಕೆಂದರೆ ಈ ಭಾಗದಲ್ಲಿ ಹೇನು ಬೇಗನೆ ಪ್ರಸಾರವಾಗುವುದು. ಮುಖ, ತಲೆ ಅಥವಾ ಕಣ್ಣಿನ ಭಾಗವನ್ನು ಕಡೆಗಣಿಸಿ. ಚೂಪಾದ ಬಾಚಣಿಗೆಯಿಂದ ನೀವು ಕೂದಲನ್ನು ಬಾಚಿಕೊಳ್ಳಿ ಮತ್ತು ಸುಮಾರು 12-24 ಗಂಟೆಗಳ ಕಾಲ ಚಿಕಿತ್ಸೆಯು ಇರಲಿ(ನಿಮಗೆ ಸೂಚಿಸಿದಂತೆ) ಮತ್ತು ಪ್ರತೀ ಏಳು ದಿನಕ್ಕೆ ಒಮ್ಮೆ ಇದನ್ನು ಪುನರಾವರ್ತಿಸಿ.

Most Read:ತ್ವಚೆಯ ಕಾಳಜಿಗೆ ಸಲಹೆಗಳು: ಮುಂಜಾನೆ ಮತ್ತು ರಾತ್ರಿ ಈ ಟಿಪ್ಸ್ ಅನುಸರಿಸಿ ಸಾಕು!

ಕಣ್ಣಿನ ರೆಪ್ಪೆಗಳಲ್ಲಿ ಹೇನುಗಳು ಇದ್ದರೆ

ಕಣ್ಣಿನ ರೆಪ್ಪೆಗಳಲ್ಲಿ ಹೇನುಗಳು ಇದ್ದರೆ

ಕಣ್ಣಿನ ರೆಪ್ಪೆಗಳಲ್ಲಿ ಹೇನುಗಳು ಇದ್ದರೆ ಆಗ ನೀವು ಅದಕ್ಕೆ ಮನೆಯಲ್ಲೇ ಚಿಕಿತ್ಸೆ ನೀಡಲು ಹೋಗಬೇಡಿ. ನೀವು ಆಗ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ. ಅವರು ಕಣ್ಣಿಗಾಗಿ ವಿಶೇಷವಾಗಿರುವ ಕ್ರೀಮ್ ನೀಡಬಹುದು.ಚಿಕಿತ್ಸೆ ನೀಡಿದರೂ ಕೆಲವೊಂದು ಸಲ ಹೇನುಗಳು ಮತ್ತೆ ಬಂದು ಒಕ್ಕರಿಸಿಕೊಳ್ಳುವುದು. ಇಂತಹ ಸಮಯದಲ್ಲಿ ಎರಡನೇ ಸಲವೂ ನಿಮಗೆ ಚಿಕಿತ್ಸೆ ಬಳಿಕ ಹೇನು ಕಾಣಿಸಿಕೊಂಡರೆ ಆಗ ನೀವು ವೈದ್ಯರು ಅಥವಾ ಲೈಂಗಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ. ನೀವು 18ರ ಕೆಳಹರೆಯದವರು ಆಗಿದ್ದರೆ, ಗರ್ಭಿಣಿ ಅಥವಾ ಬಾಣಂತಿಯಾಗಿದ್ದರೆ ನೀವು ಸ್ವ ಚಿಕಿತ್ಸೆ ಮಾಡಿಕೊಳ್ಳಲು ಹೋಗಬೇಡಿ. ವೈದ್ಯರಿಂದ ಸಲಹೆ ಅಗತ್ಯವಾಗಿ ಪಡೆಯಿರಿ. ನಿಮಗೆ ಪದೇ ಪದೇ ತುರಿಕೆ ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಆಂಟಿಹಿಸ್ಟಮೈನ್ ಗಳನ್ನು ತೆಗೆದುಕೊಳ್ಳಿ. ಇದರಿಂದ ತುರಿಕೆ ಲಕ್ಷಣಗಳು ಕಡಿಮೆಯಾಗುವುದು

ಹೇನು ಮರಳಿ ಬರದಂತೆ ಯಾವ ಚಿಕಿತ್ಸೆ ನೀಡಬೇಕು?

ಹೇನು ಮರಳಿ ಬರದಂತೆ ಯಾವ ಚಿಕಿತ್ಸೆ ನೀಡಬೇಕು?

ನೀವು ಚಿಕಿತ್ಸೆ ಪಡೆಯುವ ಜತೆಗೆ ಮನೆಯಲ್ಲಿ ಇರುವ ಬೇರೆ ಯಾರಾದರೂ ಎಲ್ಲಾ ಬೆಡ್ ಶೀಟ್ ಮತ್ತು ಟವೆಲ್ ಗಳನ್ನು ಬಿಸಿ ನೀರಿನಲ್ಲಿ(50 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು) ಹಾಕಿಡಿ. ಒಗೆಯಲು ಕಷ್ಟವಾಗಿದ್ದರೆ ಆಗ ನೀವು ಇದನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿಡಿ. ಇದರಿಂದಲೂ ಹೇನು ಸಾಯುವುದು. ನೀವು ಅಥವಾ ನಿಮ್ಮ ಸಂಗಾತಿ ಸಂಪೂರ್ಣವಾಗಿ ಇದರಿಂದ ಮುಕ್ತಿ ಪಡೆಯುವ ತನಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ.

English summary

how to get rid from head lice

Head lice are most commonly spread via close bodily contact, but they can also live for a short time on towels and bedding and can spread between people who share them. The lice can also live on clothes, which is why it’s advised to try on swimsuits and underwear in shops with a protective layer. Although they don’t spread sexually transmitted infections (STIs), people who are infected with pubic lice through sexual contact are advised to get themselves checked for other STIs.
Story first published: Wednesday, February 6, 2019, 16:16 [IST]
X
Desktop Bottom Promotion