ಕೂದಲು ಉದುರುತ್ತಿದೆಯೇ? ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

Posted By: Deepu
Subscribe to Boldsky

ಹೆಣ್ಣಿನ ಸೌಂದರ್ಯವಿರುವುದು ಕೂದಲಿನಲ್ಲಿ ಎನ್ನುವ ಮಾತಿದೆ. ಸುಂದರವಾಗಿರುವ ಕೂದಲುಗಳು ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ದಪ್ಪ ಹಾಗೂ ಉದ್ದ ಕೂದಲನ್ನು ಪಡೆಯಲು ಮಹಿಳೆಯರು ಏನನ್ನಾದರೂ ಮತ್ತು ಪ್ರತಿಯೊಂದನ್ನು ಪ್ರಯತ್ನಿಸಲು ತಯಾರಿರುತ್ತಾರೆ. 

ಆದರೆ ಹೆಚ್ಚಿನ ಸಲ ಇಂತಹ ಪ್ರಯತ್ನಗಳ ಫಲಿತಾಂಶವು ಕೆಟ್ಟದಾಗಿರುತ್ತದೆ. ಕೂದಲನ್ನು ಸುಂದರವಾಗಿಡಲು ಸುರಕ್ಷಿತ ವಿಧಾನದಿಂದ ಕೂದಲಿನ ಆರೈಕೆ ಮಾಡುವುದು ತುಂಬಾ ಮುಖ್ಯ.... ಅದು ಹೇಗೆ ಎಂಬ ನಿಮ್ಮ ಪ್ರಶ್ನೆಯೇ? ತುಂಬಾ ಸಿಂಪಲ್... ಕೂದಲಿನ ಸುರಕ್ಷಿತ ಆರೈಕೆಯ ವಿಷಯಕ್ಕೆ ಬಂದಾಗ ಮನೆಯಲ್ಲಿಯೇ ಮಾಡಬಹುದಾದಂತಹ ಟಿಪ್ಸ್ ಗಳನ್ನು ಪಾಲಿಸಿದರೆ ನೀವು ನಿರೀಕ್ಷಿಸಿದ ಫಲಿತಾಂಶ ಪಡೆಯಲು ಅದು ನೆರವಾಗಲಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಕೂದಲಿನ ಆರೈಕೆಯ ಕೆಲವೊಂದು ಉತ್ಪನ್ನಗಳಲ್ಲಿ ರಾಸಾಯನಿಕಗಳಿರುವ ಕಾರಣ ನೈಸರ್ಗಿಕ ಆರೈಕೆಯು ತುಂಬಾ ಸುರಕ್ಷಿತ. ಮನೆಯಲ್ಲಿಯೇ ನೀವು ಕೆಲವೊಂದು ನಿಸರ್ಗದತ್ತವಾಗಿ ಸಿಗುವ ವಸ್ತುಗಳಿಂದಲೇ ಆರೈಕೆ ಮಾಡಿ, ಕೂದಲಿನ ಸರ್ವ ಸಮಸ್ಯೆಯನ್ನು ಹೋಗಲಾಡಿಸಬಹುದು....ಮುಂದೆ ಓದಿ...

ಮಧ್ಯಮ ಗಾತ್ರದ ದೊಡ್ಡ ಈರುಳ್ಳಿ

ಮಧ್ಯಮ ಗಾತ್ರದ ದೊಡ್ಡ ಈರುಳ್ಳಿ

ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಕೊಂಚ ನೀರು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಈರುಳ್ಳಿ ಬೆಂದು ಮೃದುವಾದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರು ತಣಿದು ಉಗುರುಬೆಚ್ಚಗಾದ ಬಳಿಕ ತಲೆಗೂದಲ ಬುಡಕ್ಕೆ ನವಿರಾದ ಮಸಾಜ್ ಮೂಲಕ ಇಡಿಯ ತಲೆಗೆ ಹಚ್ಚಿ. ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತಲೆ ತೊಳೆದುಕೊಳ್ಳಿ. ಈರುಳ್ಳಿಯ ವಾಸನೆ ಪೂರ್ಣವಾಗಿ ಹೋಗಲು ಎರಡು ಅಥವಾ ಮೂರು ಬಾರಿ ತೊಳೆದುಕೊಳ್ಳಬೇಕಾಗಿ ಬರಬಹುದು, ಇದರಿಂದ ಕೂದಲು ಈಗಿರುವುದಕ್ಕಿಂತ ಗಾಢ ಹಾಗೂ ಉತ್ತಮ ಆರೋಗ್ಯವನ್ನು ಪಡೆಯುತ್ತದೆ.

ಕಡಲೆ ಹಿಟ್ಟು ಮತ್ತು ಮೊಸರು

ಕಡಲೆ ಹಿಟ್ಟು ಮತ್ತು ಮೊಸರು

1. ಸ್ವಲ್ಪ ಅರಿಶಿನ, ಕಡಲೆಹಿಟ್ಟು, ಮತ್ತು ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿರಿ

2. ಈ ಪೇಸ್ಟ್ ಅನ್ನು ಭಾದಿತ ಭಾಗಕ್ಕೆ ಲೇಪಿಸಿರಿ ಹಾಗೂ ಅದನ್ನು ಒಣಗಲು ಬಿಡಿರಿ

3. ಒಣಗಿದ ಪೇಸ್ಟ್ ಅನ್ನು ಹಾಗೆಯೇ ಸ್ವಲ್ಪ ಕಾಲ ಉಜ್ಜಿರಿ ನಂತರ ಅದನ್ನು ನಯವಾಗಿ ತೊಳೆಯಿರಿ

4. ತದನಂತರ ಸ್ವಲ್ಪ ಮಾಯಿಶ್ಚರೈಸರ್ ಅನ್ನು ಈ ಜಾಗಕ್ಕೆ ಲೇಪಿಸಿರಿ

ಮೆಂತೆ ಬೀಜ

ಮೆಂತೆ ಬೀಜ

*ಒಂದು ಲೋಟ ಮೆಂತೆ ಬೀಜಕ್ಕೆ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ನಂತೆಮಾಡಿಕೊಳ್ಳಿ

*ನಂತರ ಅದನ್ನು ತಲೆಗೆ ಹಚ್ಚಿ 40 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿ.

*ಹೀಗೆ ಒಂದು ತಿಂಗಳ ಕಾಲ ನಿರಂತರವಾಗಿ ಮಾಡಿದರೆ ಕೂದಲುದುರುವಿಕೆ ಕಡಿಮೆಯಾಗುತ್ತದೆ.

ಸಾಸಿವೆ ಎಣ್ಣೆ ಹಾಗೂ ದಾಲ್ಚಿನ್ನಿ ಪುಡಿ

ಸಾಸಿವೆ ಎಣ್ಣೆ ಹಾಗೂ ದಾಲ್ಚಿನ್ನಿ ಪುಡಿ

*ಸಾಸಿವೆ ಎಣ್ಣೆ- ಎರಡು ಟೇಬಲ್ ಚಮಚ

*ದಾಲ್ಚಿನ್ನಿ ಪುಡಿ- 2 ಟೀಚಮಚ

ತಯಾರಿಸುವ ಮತ್ತು ಬಳಸುವ ವಿಧಾನ

*ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಒಂದು ಸಣ್ಣ ಬೌಲ್‌‌ಗೆ ಹಾಕಿಕೊಂಡು ಮಿಶ್ರಣ ಮಾಡಿ.

•ಈ ಮಿಶ್ರಣವನ್ನು ಸರಿಯಾಗಿ ಕಲಸಿಕೊಳ್ಳಿ.

•ಇನ್ನು ಇದನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ. ಅದರಲ್ಲೂ ತಲೆಬುರುಡೆಗೆ ಹೆಚ್ಚು ಹಚ್ಚಿಕೊಳ್ಳಿ.

•ಕೆಲವು ನಿಮಿಷಗಳ ಕಾಲ ತಲೆಗೆ ಮಸಾಜ್ ಮಾಡಿಕೊಳ್ಳಿ.

•25 ನಿಮಿಷಗಳ ಕಾಲ ಕೂದಲನ್ನು ಹಾಗೆ ಬಿಡಿ.

•ನಂತರ ಕೂದಲನ್ನು ಉಗುರುಬೆಚ್ಚಗಿನ ನೀರು ಹಾಗೂ ಶಾಂಪೂನಿಂದ ತೊಳೆಯಿರಿ, ಉತ್ತಮ ಫಲಿತಾಂಶಕ್ಕಾಗಿ ದಿನದಲ್ಲಿ ಎರಡು ಮೂರು ಬಾರಿ ಮಾಡಿ......

ತೆಂಗಿನೆಣ್ಣೆ-ಆಲೀವ್ ಆಯಿಲ್

ತೆಂಗಿನೆಣ್ಣೆ-ಆಲೀವ್ ಆಯಿಲ್

*1/2 ಕಪ್‎ನಷ್ಟು ತೆಂಗಿನೆಣ್ಣೆಗೆ ಒಂದು ಚಮಚದಷ್ಟು ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ

*5 ನಿಮಿಷಗಳ ಕಾಲ ಹಾಗೆಯೇ ಬಿಡಿ

*ಕೊಠಡಿಯ ತಾಪಮಾನಕ್ಕೆ ಈ ಮಿಶ್ರಣವನ್ನು ಹಾಗೆಯೇ ಬಿಡಿ

*ತಣ್ಣಗಾದ ನಂತರ, ನಿಮ್ಮ ತಲೆಬುರುಡೆಗೆ ಮಸಾಜ್ ಮಾಡಿ

*ಗಂಟೆಯಷ್ಟು ಕಾಲ ಹಾಗೆಯೇ ಬಿಡಿ ನಂತರ ಶಾಂಪೂ ಮಾಡಿ ಮತ್ತು ಕಂಡೀಷನ್ ಹಚ್ಚಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

*ಕೆಲವು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಜಜ್ಜಿಟ್ಟುಕೊಳ್ಳಿ.

ಬಳಿಕ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಈ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಕೆಲವು ನಿಮಿಷಗಳ ಕಾಲ ಚಿಕ್ಕ ಉರಿಯಲ್ಲಿ ಕುದಿಸಿ.

*ನಂತರ ಉರಿ ಆರಿಸಿ ತಣಿಯಲು ಬಿಡಿ. ಸುಮಾರು ಉಗುರುಬೆಚ್ಚನೆಯಷ್ಟು ತಣ್ಣಗಾದ ಬಳಿಕ ಈ ಎಣ್ಣೆಯನ್ನು ತಲೆಗೂದಲ ಬುಡಕ್ಕೆ ನಯವಾದ ಮಸಾಜ್ ಮಾಡುತ್ತಾ ಇಡಿಯ ತಲೆಗೆ ಹಚ್ಚಿ. ಸುಮಾರು ಮೂವತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಕೂದಲನ್ನು ತೊಳೆದುಕೊಳ್ಳಿ.

*ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಪುನರಾವರ್ತಿಸಿ.

ದಾಸವಾಳ

ದಾಸವಾಳ

*ದಾಸವಾಳದ ಹೂವಿನ ಕೆಲವು ದಳಗಳನ್ನು ಚೆನ್ನಾಗಿ ಜಜ್ಜಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ನುಣ್ಣಗೆ ಕಡೆಯಿರಿ.

*ಈ ಲೇಪನವನ್ನು ತಲೆಗೂದಲಿಗೆ ಹಚ್ಚಿ ಕೆಲವು ಘಂಟೆಗಳ ಕಾಲ ಹಾಗೇ ಇರಿಸಿ.

ಬಳಿಕ ತಣ್ಣೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಕಡಲೆ ಹಿಟ್ಟು ಮತ್ತು ಮೊಸರು

ಕಡಲೆ ಹಿಟ್ಟು ಮತ್ತು ಮೊಸರು

ಅವಶ್ಯಕ ಸಾಮಗ್ರಿಗಳು: ಕಡಲೆ ಹಿಟ್ಟು, ಅರಿಶಿಣ, ಮೊಸರು.

1. ಸ್ವಲ್ಪ ಅರಿಶಿನ, ಕಡಲೆಹಿಟ್ಟು, ಮತ್ತು ಮೊಸರನ್ನು ಸೇರಿಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿರಿ

2. ಈ ಪೇಸ್ಟ್ ಅನ್ನು ಭಾದಿತ ಭಾಗಕ್ಕೆ ಲೇಪಿಸಿರಿ ಹಾಗೂ ಅದನ್ನು ಒಣಗಲು ಬಿಡಿರಿ

3. ಒಣಗಿದ ಪೇಸ್ಟ್ ಅನ್ನು ಹಾಗೆಯೇ ಸ್ವಲ್ಪ ಕಾಲ ಉಜ್ಜಿರಿ ನಂತರ ಅದನ್ನು ನಯವಾಗಿ ತೊಳೆಯಿರಿ

4. ತದನಂತರ ಸ್ವಲ್ಪ ಮಾಯಿಶ್ಚರೈಸರ್ ಅನ್ನು ಈ ಜಾಗಕ್ಕೆ ಲೇಪಿಸಿರಿ

ಸಾಸಿವೆ ಮತ್ತು ಮದರಂಗಿ ಎಲೆಗಳು

ಸಾಸಿವೆ ಮತ್ತು ಮದರಂಗಿ ಎಲೆಗಳು

1. ಸಾಸಿವೆ ಎಣ್ಣೆ

2. ಮದರಂಗಿ ಎಲೆಗಳು

ವಿಧಾನ:

1. ಸ್ವಲ್ಪ ಸಾಸಿವೆ ಎಣ್ಣೆಯನ್ನು ತಳ ಆಳವಿರುವ ಪಾತ್ರೆಯಲ್ಲಿ ಕುದಿಸಿರಿ ಹಾಗೂ ಒಂದು ಚಿಟಿಕೆಯಷ್ಟು ಮದರಂಗಿ ಎಲೆಗಳನ್ನು

ಕ್ರಮಕ್ರಮವಾಗಿ ಎಲ್ಲಾ ಎಲೆಗಳೂ ಸಹ ಈ ಎಣ್ಣೆಯಲ್ಲಿ ಸುಟ್ಟು ಹೋಗುವವರೆಗೆ ಸೇರಿಸಿರಿ.

2. ನಂತರ ಒಂದು ಸ್ವಚ್ಛವಾದ ಬಟ್ಟೆಯನ್ನುಪಯೋಗಿಸಿ ಈ ಎಣ್ಣೆಯನ್ನು ಸೋಸಿರಿ.

ಹಾಗಲಕಾಯಿ

ಹಾಗಲಕಾಯಿ

ಹಾಗಲಕಾಯಿಯೊ೦ದನ್ನು ಹಾಗೆಯೇ ಸುಮ್ಮನೆ ಕತ್ತರಿಸಿ, ತದನಂತರ ಹೋಳುಗಳು ಕ೦ದುಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕರಿಯಿರಿ. ಇದಾದ ಬಳಿಕ, ಆ ಹೋಳುಗಳನ್ನು ಹೊರತೆಗೆದು, ಅವುಗಳ ಸಾರವನ್ನು ಹಿ೦ಡಿ ಪಡೆದು, ಅದನ್ನು ನೆತ್ತಿಯ ಮೇಲೆ ಹಚ್ಚಿಕೊಳ್ಳಬೇಕು. ಅದನ್ನು ನೆತ್ತಿಯ ಮೇಲೆ ಮೂವತ್ತು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು, ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ನೆತ್ತಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಪುನರಾವರ್ತಿಸಿರಿ. ಹೀಗೆ ಮಾಡುವುದರಿ೦ದ ನಿಮ್ಮ ಕೇಶರಾಶಿಯು ತನ್ನ ಬಣ್ಣ ಹಾಗೂ ವಿನ್ಯಾಸವನ್ನು ಹಿ೦ಪಡೆದುಕೊಳ್ಳುವುದಷ್ಟೇ ಅಲ್ಲ, ಜೊತೆಗೆ ನಿಮ್ಮ ಕೇಶರಾಶಿಯು ಸಾಕಷ್ಟು ಕೋಮಲವಾಗುತ್ತದೆ.

ಸೀಗೆಕಾಯಿಯ ಕೋಡು

ಸೀಗೆಕಾಯಿಯ ಕೋಡು

ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು. ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಟ್ಟಿಕೊಳ್ಳಿ. ತದನಂತರ ಪ್ರತಿದಿನ ತಲೆ ಕೂದಲಿಗೆ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಿಕೊಳ್ಳಿ. ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

ಕರಿಬೇವಿನ ಎಲೆ

ಕರಿಬೇವಿನ ಎಲೆ

ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಜಜ್ಜಿ ತೆಗೆದ ರಸವನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಶಾ೦ಪೂವಿನಿ೦ದ ಇದನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಬೇವಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಹಲವು ನೈಸರ್ಗಿಕ ರಾಸಾಯನಿಕಗಳಿದ್ದು ಕೂದಲಿನ ಸಮೃದ್ಧ ಪೋಷಣೆಗೆ ನೆರವಾಗುವುದರ ಜೊತೆಗೆ ಸೀರು ಮೊದಲಾದ ಇತರ ತೊಂದರೆಗಳಿಂದಲೂ ಮುಕ್ತಿ ದೊರಕುತ್ತದೆ. ನೀವು ಮಾಡಬೇಕಾದದು ಇಷ್ಟೇ

*ಮೊದಲು ಬೇವಿನ ಎಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ

* ಈ ಎಣ್ಣೆಯಿಂದ ನಿಮ್ಮ ಕೂದಲಿನ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ

* ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಇದನ್ನು ಹಾಗೆಯೇ ಬಿಡಿ

*ನಂತರ ನಿಮ್ಮ ಕೂದಲನ್ನು ಶಾಂಪೂವಿನಿಂದ ತೊಳೆಯಿರಿ

* ಇದನ್ನು ವಾರಕ್ಕೊಮ್ಮೆ ಮಾಡಿ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ

English summary

Simple Home remedies to stop hair fall in one week

Referred to as ‘crowning glory’, tresses are a direct expression of an individual’s personality and style. Excessive hair loss can be a troublesome problem, often causing worry and affecting self-esteem, especially for women. However, if diagnosed right, you can control hair fall with certain home remedies that are natural and effective in saving your locks.
Story first published: Tuesday, January 30, 2018, 23:45 [IST]