For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಬಳಸುವ ಹೇರ್‌ಜೆಲ್‌‌ನ ಅಡ್ಡಪರಿಣಾಮಗಳು

|

ಸೌಂದರ್ಯದ ಕಾಳಜಿ ಇರುವಂತಹ ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ಸೌಂದರ್ಯವರ್ದಕದ ದೊಡ್ಡ ಪೆಟ್ಟಿಗೆಯನ್ನೇ ಇಟ್ಟುಕೊಂಡಿರುವರು. ಇದರಿಂದ ಅವರಿಗೆ ದಿನವಿಡಿ ತಮ್ಮ ಮುಖದ ಮೇಕಪ್, ಕೂದಲಿನ ವಿನ್ಯಾಸವನ್ನು ಕಾಪಾಡಿಕೊಳ್ಳಲು ಸಾದ್ಯವಾಗುವುದು. ಇದಕ್ಕಾಗಿ ಬ್ಯಾಗ್ ನಲ್ಲಿ ಇರುವಂತಹ ಪ್ರತಿಯೊಂದು ವಸ್ತು ಕೂಡ ಉಪಯೋಗಕ್ಕೆ ಬರುವುದು. ಮೇಕಪ್ ಹಾಳಾಗದಂತೆ ಹಾಗೂ ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಬ್ಯಾಗ್ ನಲ್ಲಿ ಬ್ಲೊಟ್ಟಿಂಗ್ ಪೇಪರ್ ಇನ್ನಿತರ ಸಾಮಗ್ರಿಗಳನ್ನು ಹಿಡಿದುಕೊಂಡು ಹೋಗುವರು. ಅದರಲ್ಲೂ ಕೂದಲನ್ನು ದಿನವಿಡಿ ಒಂದೇ ರೀತಿಯಲ್ಲಿ ಇಷ್ಟುಕೊಳ್ಳುವುದು ತುಂಬಾ ಕಠಿಣ ಕೆಲಸ. ಇದಕ್ಕಾಗಿ ಮಹಿಳೆಯರು ತಮ್ಮ ಬ್ಯಾಗ್ ನಲ್ಲಿ ಹೇರ್ ಜೆಲ್, ಬಾಚಣಿಗೆ, ಇಲಾಸ್ಟಿಕ್ ಹೇರ್ ಬ್ಯಾಂಡ್ ಮತ್ತು ಯೂ ಪಿನ್ ಗಳನ್ನು ಇಟ್ಟುಕೊಳ್ಳುವರು.

ಹೇರ್ ಜೆಲ್‌ಗಳ ಬಗ್ಗೆ ಮಾತನಾಡುವಾಗ ನಮಗೆ ಈ ಹೇರ್ ಜೆಲ್ ಎಂದರೆ ಏನು ಎಂದು ಅಚ್ಚರಿಯಾಗುವುದು. ಇದರ ಲಾಭಗಳು ಹಾಗೂ ಅಡ್ಡಪರಿಣಾಮಗಳು ಏನು? ನೀವು ಯಾವ ರೀತಿಯ ಉತ್ಪನ್ನ ಬಳಸುತ್ತಿದ್ದೀರಿ ಎನ್ನುವುದನ್ನು ತಿಳಿಯುವುದು ಅತೀ ಅಗತ್ಯ. ಅದರಲ್ಲೂ ಕೂದಲು ಹಾಗೂ ಚರ್ಮದ ವಿಚಾರದಲ್ಲಿ ನೀವು ಬಳಸುವಂತಹ ಉತ್ಪನ್ನಗಳ ಬಗ್ಗೆ ನಿಮಗೆ ಹೆಚ್ಚಿನ ಜ್ಞಾನ ಇರಬೇಕು. ಇದರ ಲಾಭಗಳು ಹಾಗೂ ಅಡ್ಡಪರಿಣಾಮಗಳ ಬಗ್ಗೆ ಸರಿಯಾಗಿ ತಿಳಿಯಿರಿ. ಹೇರ್ ಜೆಲ್ ಗಳಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಹೇರ್ ಜೆಲ್ ಗಳು ಅಂದರೇನು ಎಂದು ತಿಳಿಯುವುದು ಅತೀ ಅಗತ್ಯ. ಇದನ್ನು ಕೂದಲಿನ ವಿನ್ಯಾಸಕ್ಕೆ ಹೇಗೆ ಬಳಸಲಾಗುತ್ತದೆ ಮತ್ತು ಇದರಿಂದ ಆಗುವಂತಹ ಅಡ್ಡಪರಿಣಾಮಗಳು ಏನು ಎಂದು ತಿಳಿಯುವುದು ಮುಖ್ಯ.

ಹೇರ್ ಜೆಲ್ ಗಳು ಎಂದರೇನು ಮತ್ತು ಇದನ್ನು ಬಳಸುವುದು ಹೇಗೆ?

ಹೇರ್ ಜೆಲ್ ಗಳು ಎಂದರೇನು ಮತ್ತು ಇದನ್ನು ಬಳಸುವುದು ಹೇಗೆ?

ಹೇರ್ ಜೆಲ್ ಎಂದರೆ ಕೂದಲನ್ನು ವಿನ್ಯಾಸಗೊಳಿಸಲು ಬಳಸುವ ಉತ್ಪನ್ನ. ಇದು ಕೂದಲನ್ನು ಗಡುಸಾಗಿಸುವುದು. ಇದರಿಂದ ನಿಮಗೆ ಬೇಕಾದಂತೆ ಕೂದಲನ್ನು ವಿನ್ಯಾಸಗೊಳಿಸಬಹುದು. ಹೇರ್ ಜೆಲ್ ನಲ್ಲಿ ಸಾಮಾನ್ಯವಾಗಿ ಪಿವಿಪಿ ಎನ್ನುವಂತಹ ಪ್ಲಾಸ್ಟಿಕ್ ಅಂಶವಿರುವುದು. ಇದನ್ನು ಪಾಲಿಮಾರ್ ಸೀಲರ್ ಎಂದು ಕರೆಯಲಾಗುತ್ತದೆ. ಹೇರ್ ಜೆಲ್ ನ ಪಿವಿಪಿಯಲ್ಲಿ ಇರುವಂತಹ ಪಾಲಿಮಾರ್ ಅಂಶವು ನೀರಿನಲ್ಲಿ ಕರಗುವುದು ಮತ್ತು ಪದರ ನಿರ್ಮಾಣ ಮಾಡಿಕೊಂಡು ಕೂದಲು ಒಂದಕ್ಕೊಂದು ಅಂಟಿಕೊಂಡಿರುವಂತೆ ಮಾಡಿ, ಕೂದಲು ಗಡುಸಾಗುವಂತೆ ಮಾಡುವುದು.

Most Read: ಡ್ಯಾಂಡ್ರಫ್ ಸಮಸ್ಯೆ ಇದೆಯೇ? ಹಾಗಾದರೆ, ಸೀಗೆಕಾಯಿ ಹೇರ್ ಮಾಸ್ಕ್ ಬಳಸಿ

ಒದ್ದೆ ಕೂದಲಿಗೆ ಹೇರ್ ಜೆಲ್

ಒದ್ದೆ ಕೂದಲಿಗೆ ಹೇರ್ ಜೆಲ್

ಒದ್ದೆ ಕೂದಲಿಗೆ ಹೇರ್ ಜೆಲ್ ನ್ನು ಹಚ್ಚಿಕೊಂಡಾಗ, ಹೇರ್ ಜೆಲ್ ನಲ್ಲಿ ಇರುವಂತಹ ಪಿವಿಪಿ ಅಂಶವು ನೀರನ್ನು ಹೀರಿಕೊಳ್ಳುವುದು. ಇದರಿಂದ ಕೂದಲು ಗಡುಸಾಗುವುದು ಮತ್ತು ನಿಮಗೆ ಯಾವ ರೀತಿಯಲ್ಲಿ ಬೇಕಿದ್ದರೂ ಇದು ಬಗ್ಗಿಸಲು ಸಾಧ್ಯವಾಗುವುದು. ಈ ಕಾರಣದಿಂದ ಹೇರ್ ಜೆಲ್ ನಿಂದ ಕೂದಲಿನ ವಿನ್ಯಾಸವು ಸುಲಭವಾಗುವುದು.

ಕೂದಲಿನ ವಿನ್ಯಾಸಗೊಳಿಸುವಂತಹ ಉತ್ಪನ್ನಗಳಲ್ಲಿ ಹೇರ್ ಜೆಲ್

ಕೂದಲಿನ ವಿನ್ಯಾಸಗೊಳಿಸುವಂತಹ ಉತ್ಪನ್ನಗಳಲ್ಲಿ ಹೇರ್ ಜೆಲ್

ಪ್ರಮುಖವಾಗಿರುವುದು. ಆದರೆ ಇದನ್ನು ಬಳಸುವವರು ಇದರಿಂದ ಆಗುವಂತಹ ಕೆಲವೊಂದು ರೀತಿಯ ಅಡ್ಡಪರಿಣಾಮಗಳನ್ನು ಕೂಡ ತಿಳಿದುಕೊಳ್ಳುವುದು ಅತೀ ಅಗತ್ಯವಾಗಿರುವುದು. ಹೇರ್ ಜೆಲ್ ಬಳಸುವುದರಿಂದ ಆಗುವಂತಹ ಕೆಲವೊಂದು ಅಡ್ಡಪರಿಣಾಮಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ. ಇದನ್ನು ನೀವು ತಿಳಿಯಿರಿ. ಹೇರ್ ಜೆಲ್ ನಿಂದ ಆಗುವ ಅಡ್ಡಪರಿಣಾಮಗಳು

ಒಣ ಹಾಗೂ ನಿರ್ಜಲೀಕರಣಗೊಂಡ ಕೂದಲು

ಒಣ ಹಾಗೂ ನಿರ್ಜಲೀಕರಣಗೊಂಡ ಕೂದಲು

ನೀವು ಕೂದಲಿನ ವಿನ್ಯಾಸಕ್ಕೆಂದು ಬಳಸುವಂತಹ ಹೇರ್ ಜೆಲ್ ನಲ್ಲಿ ಕೆಲವೊಂದು ರಾಸಾಯನಿಕಗಳೊಂದಿಗೆ ಆಲ್ಕೋಹಾಲ್ ಕೂಡ ಇರುವುದು. ಇದು ಕೂದಲು ಹಾಗೂ ತಲೆಬುರುಡೆಯಲ್ಲಿರುವಂತಹ ಮೊಶ್ಚಿರೈಸ್ ನ್ನು ಹೀರಿಕೊಳ್ಳುವುದು. ಇದರಿಂದಾಗಿ ಕೂದಲು ಒಣ ಹಾಗೂ ನಿರ್ಜಲೀಕರಣಗೊಳ್ಳುವುದು. ಇದರಿಂದ ಕೂದಲು ತುಂಬಾ ದುರ್ಬಲಗೊಂಡು, ಕೂದಲು ತುಂಡಾಗುವುದು. ಕೆಲವೊಂದು ಸಲ ಅತಿಯಾಗಿ ಹೇರ್ ಜೆಲ್ ಬಳಸುವವರಿಗೆ ತುರಿಕೆ ಕೂಡ ಕಾಣಿಸಿಕೊಳ್ಳಬಹುದು. ಇದರಿಂದ ತಲೆಬುರುಡೆಯು ಒಣಗಿ ಪದರ ಎದ್ದು ಬರಬಹುದು, ಕೂದಲಿಗೂ ಹಾನಿಯಾಗಿ ಉದುರಬಹುದು.

Most Read: ಬರೀ ಹದಿನೈದೇ ದಿನಗಳಲ್ಲಿ ಬಿಳಿ ಕೂದಲನ್ನು ಕಪ್ಪು ಮಾಡುವ ಮನೆಮದ್ದುಗಳು

ತಲೆಹೊಟ್ಟು

ತಲೆಹೊಟ್ಟು

ಅತಿಯಾಗಿ ಹೇರ್ ಜೆಲ್ ಬಳಕೆ ಮಾಡುವುದರಿಂದ ತಲೆಹೊಟ್ಟು ಬರಬಹುದು. ಒಣ ಹಾಗೂ ಹಾನಿಗೀಡಾದ ತಲೆಬುರುಡೆಯಿಂದಾಗಿ ಸೋಂಕು, ತುರಿಕೆ ಮತ್ತು ಸತ್ತ ಚರ್ಮದ ಪದರವು ಕಿತ್ತು ಬರಬಹುದು. ಇದರಿಂದ ತಲೆಹೊಟ್ಟು ಬರಬಹುದು. ಹೇರ್ ಜೆಲ್ ನಿಂದ ತಲೆಹೊಟ್ಟು ಬರಲು ಮತ್ತೊಂದು ಪ್ರಮುಖ ಕಾರಣವೆಂದರೆ ಹೇರ್ ಜೆಲ್ ಕೂದಲಿನಲ್ಲಿ ಇರುವಂತಹ ಮೊಶ್ಚಿರೈಸ್ ನ್ನು ಹೀರಿಕೊಳ್ಳುವುದು. ಇದರಿಂದ ಮೇಧೋಗ್ರಂಥಿ ಸ್ರಾವ ಸರಿಯಾಗಿ ಆಗದೆ ಇರಬಹುದು, ಅನಾರೋಗ್ಯಕರ ತಲೆಬುರುಡೆ ಮತ್ತು ಕೂದಲಿನ ಬುಡವು ದುರ್ಬಲವಾಗವುದು. ಇದರಿಂದ ತಲೆಬುರುಡೆಯಲ್ಲಿ ತುರಿಕೆ ಮತ್ತು ತಲೆಹೊಟ್ಟು ಕಂಡುಬರುವುದು.

ಬಣ್ಣ ಕಳೆದುಕೊಳ್ಳುವುದು

ಬಣ್ಣ ಕಳೆದುಕೊಳ್ಳುವುದು

ಹೇರ್ ಜೆಲ್ ನಿಂದ ಆಗುವಂತಹ ಕೆಲವೊಂದು ಪ್ರಮುಖ ಹಾನಿಯೆಂದರೆ ಕೂದಲಿಗೆ ಹಾನಿ, ಕೂದಲು ಉದುರುವಿಕೆ, ಒಣ ತಲೆಬುರುಡೆ, ದುರ್ಬಲ ಕೂದಲು ಇತ್ಯಾದಿಗಳು. ಹೇರ್ ಜೆಲ್ ನಿಂದ ಆಗುವಂತಹ ಮತ್ತೊಂದು ದೊಡ್ಡ ಮಟ್ಟದ ಅಡ್ಡಪರಿಣಾಮವೆಂದರೆ ಅದು ಕೂದಲಿನ ಬಣ್ಣ ಕಳೆದುಕೊಳ್ಳುವುದು. ಹೇರ್ ಜೆಲ್ ಕೂದಲಿನ ಪೋಷಕಾಂಶಗಳನ್ನು ಹೀರಿಕೊಂಡು, ಪಿಎಚ್ ಮಟ್ಟದ ಅಸಮತೋಲನಕ್ಕೆ ಕಾರಣವಾಗುವುದು. ಇದರಿಂದ ಕೂದಲು ಅನಾರೋಗ್ಯಕರ ಹಾಗೂ ದುರ್ಬಲವಾಗುವುದು. ಹೇರ್ ಜೆಲ್ ನಲ್ಲಿ ಇರುವಂತಹ ಕೆಲವೊಂದು ಹಾನಿಕಾರಕ ರಾಸಾಯನಿಕಗಳು ಕೂದಲಿನ ಬಣ್ಣವು ಮಾಸುವಂತೆ ಮಾಡುವುದು. ಇದರಿಂದ ಕೂದಲು ಕಳೆಗುಂದಿದಂತೆ ಆಗಬಹುದು. ಕೂದಲಿನ ಬಣ್ಣ ಕಳೆದುಕೊಳ್ಳುವುದು ಹೇರ್ ಜೆಲ್ ನಿಂದ ಆಗುವ ಪ್ರಮುಖ ಅಡ್ಡಪರಿಣಾಮವಾಗಿದೆ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ಹೇರ್ ಜೆಲ್ ನಿಂದಾಗಿ ಕೂದಲು ತುಂಬಾ ದುರ್ಬಲ ಹಾಗೂ ಒಡೆದುಹೋಗುವುದು. ಇದರಿಂದ ಕೂದಲಿಗೆ ಹಾನಿಯಾಗಬಹುದು ಮತ್ತು ಕೂದಲು ತುಂಡಾಗಬಹುದು. ಹೇರ್ ಜೆಲ್ ತಲೆಬುರುಡೆಯನ್ನು ನಿರ್ಜಲೀಕರಣಗೊಳಿಸಬಹುದು ಮತ್ತು ಒಣಗುವಂತೆ ಮಾಡುವುದು. ಇದರಿಂದ ಕೂದಲಿನ ಬುಡವು ದುರ್ಬಲವಾಗುವುದು. ಕೂದಲಿನ ಬುಡವು ದುರ್ಬಲವಾದ ಕಾರಣ ಕೂದಲಿನ ಬೆಳವಣಿಗೆಯಾಗದು ಮತ್ತು ಇರುವ ಕೂದಲು ಕೂಡ ಹಾನಿಗೀಡಾಗುವ ಸಾಧ್ಯತೆ ಇರುವುದು. ಅತಿಯಾದ ಮತ್ತು ದೀರ್ಘಕಾಲದ ತನಕ ಹೇರ್ ಜೆಲ್ ಬಳಸುವುದು ಕೂದಲಿಗೆ ಒಳ್ಳೆಯದಲ್ಲ. ಮುಂದಿನ ಸಲ ನೀವು ಹೇರ್ ಜೆಲ್ ಖರೀದಿಸಲು ಹೋಗುವಾಗ ಅದರಿಂದ ಆಗುವಂತಹ ಲಾಭ ಹಾಗೂ ಅಡ್ಡಪರಿಣಾಮಗಳನ್ನು ಸರಿಯಾಗಿ ತಿಳಿಯಿರಿ. ಇದರ ಬಳಿಕ ನೀವು ಹೇರ್ ಜೆಲ್ ಖರೀದಿ ಮಾಡಿ ಬಳಸಿಕೊಳ್ಳಬಹುದು. ಯಾಕೆಂದರೆ ಹೇರ್ ಜೆಲ್ ನಿಂದ ಆಗುವ ಲಾಭಕ್ಕಿಂತಲೂ ನಷ್ಟವೇ ಹೆಚ್ಚು ಎಂದು ಹೇಳಬಹುದು. ನಿಮ್ಮ ಕೂದಲಿನ ಆರೋಗ್ಯವು ಅತೀ ಮುಖ್ಯ. ಈ ಕಾರಣದಿಂದ ನೀವು ಒಳ್ಳೆಯ ಗುಣಮಟ್ಟದ ಹೇರ್ ಜೆಲ್ ಬಳಸಿದರೂ ಅದು ಮಿತವಾಗಿರಲಿ.

English summary

side effects of hair gels

Hair gels are basically hair styling products that are meant to harden your hair in order to style it for a particular hairstyle. While hair gels are most preferred hair styling products, they have some side-effects you must be aware of. They can make your hair dry and damaged, leading to hair loss and problems like split ends, discolouration of hair, and dandruff.
X
Desktop Bottom Promotion