ಚಿಕ್ಕ ವಯಸ್ಸಿನಲ್ಲಿ ಬರೋ ಬಿಳಿ ಕೂದಲಿನ ಸಮಸ್ಯೆಗೆ ಸರಳ ಮನೆಮದ್ದುಗಳು

Posted By: Deepu
Subscribe to Boldsky

ದಟ್ಟವಾದ ಕಪ್ಪು ಕೂದಲಿನ ಮಧ್ಯೆ ಒಂದು ಬಿಳಿ ಕೂದಲು ಕಾಣಿಸಿದರೂ ಚಿಂತೆ ಎನ್ನುವುದು ಮನುಷ್ಯನನ್ನು ಕಾಡುವುದು. ಅದರಲ್ಲೂ ಹದಿಹರೆಯದಲ್ಲೇ ಕೆಲವರಿಗೆ ಬಿಳಿ ಕೂದಲು ಬಂದುಬಿಡುವುದು. ವಯಸ್ಸಾಗುತ್ತಾ ಹೋದಂತೆ ಬಿಳಿ ಕೂದಲು ಬರುವುದು ಸಾಮಾನ್ಯ. ಆದರೆ ಹದಿಹರೆಯದಲ್ಲೇ ಇಂತಹ ಕೂದಲು ಬಂದರೆ ಅದು ತಲೆನೋವಿಗೆ ಕಾರಣವಾಗುತ್ತದೆ. ಹದಿಹರೆಯದ ಹುಡುಗಿಯರು ಹಾಗೂ ಹುಡುಗರಲ್ಲಿ ಇಂತಹ ಸಮಸ್ಯೆ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.

ಇದಕ್ಕೆ ಮನೆಮದ್ದನ್ನು ತಿಳಿಯುವ ಮೊದಲು ಬಿಳಿ ಕೂದಲು ಬರಲು ಕಾರಣವೇನೆಂದು ಅರಿತರೆ ಒಳ್ಳೆಯದು. ಪ್ರತಿಯೊಬ್ಬರ ಕೂದಲಿನಲ್ಲಿ ಮೆಲನಿನ್ ಎನ್ನುವ ವರ್ಣದ್ರವ್ಯವಿರುವುದು. ನಿಮಗೆ ವಯಸ್ಸಾಗುತ್ತಾ ಹೋದಂತೆ ಮೆಲನಿನ್ ಉತ್ಪತ್ತಿಯು ಕುಗ್ಗುತ್ತಾ ಹೋಗುವುದು ಮತ್ತು ಕೂದಲು ಬಿಳಿಯಾಗುವುದು. ಹದಿಹರೆಯದಲ್ಲೇ ಮೆಲನಿನ್ ಉತ್ಪತ್ತಿಯು ಕಡಿಮೆಯಾದರೆ ಆಗ ಕೂದಲು ಬಿಳಿಯಾಗುವುದು ಸಹಜ.

ಮೆಲನಿನ್ ಉತ್ಪತ್ತಿಯು ವಿವಿಧ ಕಾರಣಗಳಿಂದ ಪ್ರಭಾವಿತವಾಗುವುದು. ಧೂಮಪಾನ, ಮದ್ಯಪಾನ, ಜಂಕ್ ಫುಡ್ ಸೇವನೆ ಇತ್ಯಾದಿಗಳಿಂದ ಮೆಲನಿನ್ ಮೇಲೆ ಪರಿಣಾಮವಾಗುವುದು. ಇದು ನಿಮ್ಮನ್ನು ಅನಾರೋಗ್ಯಕಾರಿಯಾಗಿ ಮಾಡುವುದಲ್ಲದೆ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುವುದು. ಕೂದಲು ಹದಿಹರೆಯದಲ್ಲೇ ಬಿಳಿಯಾಗುವುದು ಯಾಕೆಂದು ನಿಮಗೀಗ ತಿಳಿದಿದೆ ತಾನೇ? ಹಾಗಾದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದನ್ನು ತಿಳಿಯುವ.

ಬಿಳಿ ಕೂದಲು ಹೋಗಲಾಡಿಸಲು ನೀವು ಹಲವಾರು ಶಾಂಪೂ, ಎಣ್ಣೆಗಳನ್ನು ಬಳಸಿರಬಹುದು. ಆದರೆ ಇದು ಕೇವಲ ನಿಮ್ಮ ಕಿಸೆ ಖಾಲಿ ಮಾಡುವುದು ಮಾತ್ರ. ಹದಿಹರೆಯದಲ್ಲೇ ಕೂದಲು ಬಿಳಿಯಾದರೆ ಕೆಲವು ಮನೆಮದ್ದುಗಳನ್ನು ಬಳಸಿ. ಇದು ತುಂಬಾ ಪರಿಣಾಮಕಾರಿ ಮತ್ತು ಅಡ್ಡಪರಿಣಾಮಗಳು ಇರುವುದಿಲ್ಲ. ಹದಿಹರೆಯದಲ್ಲೇ ಕೂದಲು ಬಿಳಿಯಾಗಿದ್ದರೆ ಇಲ್ಲಿ ಕೊಟ್ಟಿರುವ ಮನೆಮದ್ದುಗಳನ್ನು ಬಳಸಿ....

ನೆಲ್ಲಿಕಾಯಿ ಮತ್ತು ದಾಸವಾಳದ ಹೂವಿನ ಪ್ಯಾಕ್

ನೆಲ್ಲಿಕಾಯಿ ಮತ್ತು ದಾಸವಾಳದ ಹೂವಿನ ಪ್ಯಾಕ್

ನೆಲ್ಲಿಕಾಯಿ ಮತ್ತು ದಾಸವಾಳದ ಹೂವಿನ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಚಮಚ ಎಳ್ಳೆಣ್ಣೆ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿ. ಇದನ್ನು ಕೂದಲಿಗೆ ಮಸಾಜ್ ಮಾಡಿ 20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಮೂರು ಸಲ ಹೀಗೆ ಮಾಡಿದರೆ ನಿಮಗೆ ಒಳ್ಳೆಯ ಫಲಿತಾಂಶ ಕಂಡುಬರುವುದು.

ಈರುಳ್ಳಿ ಬಳಸಿ

ಈರುಳ್ಳಿ ಬಳಸಿ

ಈರುಳ್ಳಿಯು ಕೇವಲ ಖಾದ್ಯಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಇದು ಬಿಳಿ ಕೂದಲನ್ನು ಕಪ್ಪು ಮಾಡುವುದು. ಮೊದಲು ಈರುಳ್ಳಿ ಜಜ್ಜಿಕೊಂಡು ಅದರ ರಸ ತೆಗೆಯಿರಿ. ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ವಾರದಲ್ಲಿ ಎರಡು ಸಲ ಹೀಗೆ ಮಾಡಿದರೆ ಫಲಿತಾಂಶ ಖಚಿತ.

ಮದರಂಗಿ ಮತ್ತು ಮೆಂತೆ ಪ್ಯಾಕ್

ಮದರಂಗಿ ಮತ್ತು ಮೆಂತೆ ಪ್ಯಾಕ್

ಮದರಂಗಿ ಹುಡಿ ಮತ್ತು ಮೆಂತೆಯ ಪೇಸ್ಟ್ ಅನ್ನು ಜತೆಯಾಗಿಸಿಕೊಳ್ಳಿ. ಇದಕ್ಕೆ ಮಜ್ಜಿಗೆ ಮತ್ತು ಸ್ವಲ್ಪ ತೆಂಗಿನೆಣ್ಣೆ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಈಗ ಇದನ್ನು ತಲೆಬುರುಡೆ ಮತ್ತು ಕೂದಲಿಗೆ ಸರಿಯಾಗಿ ಮಸಾಜ್ ಮಾಡಿ. ಮುಚ್ಚಲ ಮುಚ್ಚಿದ ಡಬ್ಬದಲ್ಲಿ ಇದನ್ನು ಹಾಕಿಕೊಂಡು ಆಗಾಗ ಬಳಸಬಹುದು.

ನೆಲ್ಲಿಕಾಯಿ

ನೆಲ್ಲಿಕಾಯಿ

ಶೀಘ್ರವಾಗಿ ಬಿಳಿ ಕೂದಲನ್ನು ನಿವಾರಿಸಲು ನೆಲ್ಲಿಕಾಯಿಗಿಂತ ಇನ್ನೊಂದು ಮದ್ದಿಲ್ಲ. ಕೆಲವು ನೆಲ್ಲಿಕಾಯಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ನಿಧಾನವಾದ ಉರಿಯಲ್ಲಿ ಕಪ್ಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಬಿಳಿಯಾಗಿರುವ ಕೂದಲಿಗೆ ಹಾಗೂ ಮುಖ್ಯವಾಗಿ ಪ್ರತಿ ಕೂದಲ ಬುಡಕ್ಕೆ ನಯವಾಗಿ ಮಾಲಿಷ್ ಮಾಡಬೇಕು. ಇದು ಇತ್ತೀಚೆಗೆ ನೆರೆದಿರುವ ಕೂದಲಿಗೆ ಮತ್ತೆ ನೈಸರ್ಗಿಕ ಕಪ್ಪುಬಣ್ಣವನ್ನು ನೀಡುತ್ತದೆ. ಕೊಬ್ಬರಿ ಎಣ್ಣೆಯಲ್ಲಿ ಕುದಿಸುವ ಬದಲಿಗೆ ನೆಲ್ಲಿಕಾಯಿಯನ್ನು ಅರೆದು ಅಥವಾ ಎಣ್ಣೆ ತೆಗೆದು ಸಹಾ ಬಳಸಬಹುದು. ಶೀಘ್ರ ಪರಿಣಾಮ ಬೀರಲು ನೆಲ್ಲಿಕಾಯಿಯ ಕಷಾಯವನ್ನು ಉಪಯೋಗಿಸಬಹುದು. ಕಷಾಯ ತಯಾರಿಸಲು ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ಘಂಟೆಗಳ ಬಳಿಕ ಸ್ನಾನ ಮಾಡಬೇಕು.ನೆಲ್ಲಿಕಾಯಿಯ ರಸವನ್ನು ಸೇವಿಸುವುದರಿಂದ ಅಥವಾ ಹಸಿಯಾಗಿ ತಿನ್ನುವುದರಿಂದ ಕೂದಲ ಆರೋಗ್ಯ ಹೆಚ್ಚುವುದು ಹಾಗೂ ದೇಹದ ಇನ್ನೂ ಹಲವು ತೊಂದರೆಗಳಿಗೆ ಪರಿಹಾರ ದೊರಕುತ್ತದೆ

ಬೇವಿನ ಎಲೆಗಳು

ಬೇವಿನ ಎಲೆಗಳು

ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯೊಂದಿಗೆ ಬಳಸಿ ಕೂದಲ ಆರೈಕೆಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಕೂದಲ ಬೆಳವಣಿಗೆಯನ್ನು ಹೆಚ್ಚಿಸಲು ಕೊಂಚ ಈರುಳ್ಳಿ ರಸವನ್ನು ಬಿಸಿಮಾಡಿದ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಿಕ ತಲೆಗೆ ಹಚ್ಚಿಕೊಳ್ಳಿ. ತಲೆಗೂದಲ ಬುಡದಿಂದ ತುದಿಯವರೆಗೆ ಇದು ಆವರಿಸುವಂತೆ ನೋಡಿಕೊಳ್ಳಿ. ಸುಮಾರು ಒಂದು ಗಂಟೆ ಹಾಗೇ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಆಲೂಗಡ್ಡೆಯ ಮಾಸ್ಕ್

ಆಲೂಗಡ್ಡೆಯ ಮಾಸ್ಕ್

ನಿಮ್ಮ ಬಿಳಿಕೂದಲನ್ನು ಕಪ್ಪಗಾಗಿಸಲು, ಹಸಿ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ ನಂತರ ಆ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಒಣಗಿದ ನಂತರ ಕೂದಲಿಗೆ ಮೊಸರಿನ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ಹತ್ತು ನಿಮಿಷಗಳ ನಂತರ ಕೂದಲನ್ನು ತೊಳೆದುಕೊಳ್ಳಿ.

ಹಾಗಲಕಾಯಿ ಮಾಸ್ಕ್

ಹಾಗಲಕಾಯಿ ಮಾಸ್ಕ್

ನಿಮ್ಮ ಬಿಳಿ ಕೂದಲನ್ನು ಕಪ್ಪಗಾಗಿಸಲು ಈ ಸರಳ ಟಿಪ್ಸ್ ಅನ್ನು ನಿಮ್ಮದಾಗಿಸಿ ಕೊಳ್ಳಬಹುದಾಗಿದೆ. ತೆಂಗಿನ ಎಣ್ಣೆಯೊಂದಿಗೆ ಹಾಗಲಕಾಯಿಯನ್ನು ಬೇಯಿಸಿಕೊಳ್ಳಿ ಬೆಂದ ನಂತರ ಅದನ್ನು ಎಣ್ಣೆಯೊಂದಿಗೆ ಹಿಸುಕಿಕೊಳ್ಳಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ. ಐದು ಬಾರಿ ಪ್ರಯೋಗ ಮಾಡಿದ ನಂತರ ನೀವು ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳುವುದು ಖಂಡಿತ.

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಮಸಾಜ್ ತೆಂಗಿನೆಣ್ಣೆಯ ನಂತರ, ನಿಮ್ಮ ಕೂದಲಿಗೆ ಬಳಸಬಹುದಾದ ಉತ್ತಮ ಎಣ್ಣೆ ಎಂದರೆ ಅದು ಬಾದಾಮಿ ಎಣ್ಣೆಯಾಗಿದೆ. ಈ ಎಣ್ಣೆಯನ್ನು ಬಳಸಿ ಕೂದಲಿನ ಬುಡ ಮತ್ತು ಕೂದಲಿನ ತುದಿಗೆ ಚೆನ್ನಾಗಿ ಮಸಾಜ್ ಮಾಡಿ. ಬಾದಾಮಿ ಎಣ್ಣೆಯನ್ನು ಬಿಸಿ ಮಾಡಿ ನಂತರ ಹಚ್ಚಿಕೊಳ್ಳುವುದರಿಂದ ಕೂಡ ಹೆಚ್ಚಿನ ಫಲಿತಾಂಶ ನಿಮಗೆ ದೊರೆಯಲಿದೆ. ವಿಟಮಿನ್ ಇ ಈ ಎಣ್ಣೆಯಲ್ಲಿದ್ದು ಕೂದಲಿನ ಬೆಳವಣಿಗೆಯನ್ನು ಇದು ಮಾಡುವುದರ ಜೊತೆಗೆ ದಪ್ಪನೆಯ ಕಪ್ಪು ಕೂದಲನ್ನು ನೀಡುತ್ತದೆ.

ಕರಿಬೇವು+ 200 ಮಿ.ಗ್ರಾಂ. ಶುದ್ಧ ತೆಂಗಿನ ಎಣ್ಣೆ

ಕರಿಬೇವು+ 200 ಮಿ.ಗ್ರಾಂ. ಶುದ್ಧ ತೆಂಗಿನ ಎಣ್ಣೆ

1.ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ. ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ.

2.ಒಣಗಿದ ಎಲೆಗಳನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ.

3.ಸಣ್ಣ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ. ಅದಕ್ಕೆ ನಾಲ್ಕು ಚಮಚ ಕರಿಬೇವಿನ ಹುಡಿಯನ್ನು ಹಾಕಿ. ಎಣ್ಣೆ ಸರಿಯಾಗಿ ಕುದಿಯಲಿ.

4.ಎಣ್ಣೆಯನ್ನು ತಣ್ಣಗಾಗಲು ಬಿಡಿ. ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ. ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ.

English summary

Home Remedies For Grey Hair In Teenage

Those only drain your money and give you various side effects. Try to use some home remedies for white hair in teenage. Such remedies are almost free from any side effects and you don’t need to give much effort to follow. So, do you have white hair in teenage? Then go through the following remedies for white hair in teenage-