For Quick Alerts
ALLOW NOTIFICATIONS  
For Daily Alerts

ಕೂದಲು ದಪ್ಪವಾಗಿ ಬೆಳೆಯಬೇಕೆ? ಎಳೆ ನೀರಿನ ಹೇರ್ ಪ್ಯಾಕ್ ಪ್ರಯತ್ನಿಸಿ!

|

ದಟ್ಟವಾದ ಕಪ್ಪಗಿನ ಹೊಳೆಯುವ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬ ಮಹಿಳೆಯ ಕನಸೂ ಕೂಡ ಉದ್ದನೆಯ ದಪ್ಪನೆಯ ಕೂದಲನ್ನು ಪಡೆಯುವುದಾಗಿದೆ. ಹೊಳಪಿನ ಕೂದಲು ಪಡೆಯ ಬೇಕೆಂದು ಎಲ್ಲ ಹೆಂಗಸರೂ ಕಸರತ್ತು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬರುವ ವಿಧ ವಿಧ ಕೇಶ ತೈಲಗಳು ಆಯುರ್ವೇದಿಕ್ ಮನೆ ಮದ್ದುಗಳನ್ನು ಬಳಸಿ ದಪ್ಪನೆಯ ಕೂದಲು ಪಡೆಯುವ ಮಹದಾಸೆಯನ್ನು ಹೊಂದಿರುತ್ತಾರೆ. ಆದರೆ ಎಷ್ಟೇ ಕರಾಮತ್ತು ಮಾಡಿದರೂ ಧೂಳು, ವಾಯುಮಾಲಿನ್ಯ ಮೊದಲಾದ ಕಾರಣಗಳಿಂದ ಕೂದಲು ತನ್ನ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತದೆ.

ಕೂದಲು ಉದುರುವುದು, ಸೀಳು ಕೂದಲು, ಕೂದಲು ತುಂಡಾಗುವಿಕೆ ಮೊದಲಾದ ಸಮಸ್ಯೆಗಳಿಗೆ ಇಂದಿನ ಹೆಚ್ಚಿನ ಮಹಿಳೆಯರು ಒಳಗಾಗುತ್ತಿದ್ದಾರೆ. ಆದರೆ ನೈಸರ್ಗಿಕವಾಗಿ ಕೂದಲಿನ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನೀವು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ತೆಂಗಿನ ನೀರು ನಿಮ್ಮ ಕೂದಲಿಗೆ ಮ್ಯಾಜಿಕ್ ಅನ್ನೇ ಮಾಡುತ್ತದೆ.

ತೆಂಗಿನ ನೀರಿನಲ್ಲಿರುವ ಹೈಡ್ರೇಟಿಂಗ್ ಅಂಶವು ನಿಮ್ಮ ಕೂದಲಿನ ತುಂಡಾಗುವಿಕೆಯನ್ನು ತಡೆಗಟ್ಟಿ ಕೂದಲನ್ನು ಸಂರಕ್ಷಿಸುತ್ತದೆ. ಅಂತೆಯೇ ನುಣುಪಾದ ಮೃದು ಕೂದಲನ್ನು ನಿಮಗೆ ನೀಡುತ್ತದೆ. ನಿಮ್ಮ ಕೂದಲು ಹೆಚ್ಚು ಉದುರುತ್ತಿದೆ ಎಂದಾದಲ್ಲಿ ಇದಕ್ಕೆ ಕಾರಣ ಡ್ಯಾಂಡ್ರಫ್ ಆಗಿರುತ್ತದೆ. ಈ ಸಮಸ್ಯೆಯನ್ನು ಕೂಡ ತೆಂಗಿನ ನೀರು ನಿವಾರಿಸಬಲ್ಲುದು. ತಲೆಹೊಟ್ಟನ್ನು ನಿವಾರಿಸಿ ಕೂದಲುದುರುವುದನ್ನು ತಡೆಯುವ ಶಕ್ತಿಯನ್ನು ತೆಂಗಿನ ನೀರು ಹೊಂದಿದೆ. ಹಾಗಿದ್ದರೆ ತೆಂಗಿನ ನೀರು ಬಳಸಿಕೊಂಡು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ....

ತೆಂಗಿನ ನೀರು

ತೆಂಗಿನ ನೀರು

ನಿಮ್ಮ ತಲೆಬುಡವನ್ನು ಹೈಡ್ರೇಟ್ ಮಾಡಿ ಕೂದಲನ್ನು ಪೋಷಿಸುವ ಕೆಲಸವನ್ನು ತೆಂಗಿನ ನೀರು ಮಾಡುತ್ತದೆ.

ಸಾಮಾಗ್ರಿಗಳು

1/2 ಕಪ್ ತೆಂಗಿನ ನೀರು

ಮಾಡುವುದು ಹೇಗೆ:

1. ವೃತ್ತಾಕಾರವಾಗಿ ತೆಂಗಿ ನೀರನ್ನು ಬಳಸಿಕೊಂಡು ಕೂದಲಿಗೆ ಮಸಾಜ್ ಮಾಡಿ

2. ಈ ಕ್ರಿಯೆಯನ್ನು 5-10 ನಿಮಿಷಗಳ ಕಾಲ ಮಾಡಿ

3. ಕೂದಲಿನ ಬುಡದಿಂದ ತುದಿಯವರೆಗೆ ಇದನ್ನು ಹಚ್ಚಿಕೊಳ್ಳಿ

4. 20 ನಿಮಿಷ ಹಾಗೆಯೇ ಬಿಡಿ.

5. 20 ನಿಮಿಷಗಳ ತರುವಾಯ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ

6. ವಾರದಲ್ಲಿ 2 ಬಾರಿ ಈ ಕ್ರಿಯೆಯನ್ನು ನಡೆಸಿ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಬಹುದು.

ಆ್ಯಪಲ್ ಸೀಡರ್ ವಿನೇಗರ್ ಮತ್ತು ತೆಂಗಿನ ನೀರು

ಆ್ಯಪಲ್ ಸೀಡರ್ ವಿನೇಗರ್ ಮತ್ತು ತೆಂಗಿನ ನೀರು

ತಲೆಬುಡದ ಪಿಎಚ್ ಮಟ್ಟವನ್ನು ಕಾಪಾಡುವುದರ ಜೊತೆಗೆ ತಲೆಬುಡದ ಕೊಳಕನ್ನು ಇದು ನಿವಾರಿಸುತ್ತದೆ.

ಸಾಮಾಗ್ರಿಗಳು

1 ಚಮಚ ಆ್ಯಪಲ್ ಸೀಡರ್ ವಿನೇಗರ್

1 ಕಪ್ ತೆಂಗಿನ ನೀರು

ಮಾಡುವ ವಿಧಾನ

1. ತೆಂಗಿನ ನೀರಿನೊಂದಿಗೆ ಆ್ಯಪಲ್ ಸೀಡರ್ ವಿನೇಗರ್ ಅನ್ನು ಮಿಶ್ರ ಮಾಡಿ

2. ಸಲ್ಫೈಟ್ ರಹಿತ ಶ್ಯಾಂಪೂವಿನ ಮೂಲಕ ಕೂದಲು ತೊಳೆದುಕೊಳ್ಳಿ

3. ಈಗ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಳ್ಳಿ ಮತ್ತು 5-10 ನಿಮಿಷ ಕಾಯಿರಿ

4. ನಂತರ ತಣ್ಣೀರಿನಿಂದ ಕೂದಲು ತೊಳೆದುಕೊಳ್ಳಿ

5. ವಾರಕ್ಕೊಮ್ಮೆ ಈ ವಿಧಾನವನ್ನು ಬಳಸಿ.

ಲಿಂಬೆ ಮತ್ತು ತೆಂಗಿನ ನೀರು

ಲಿಂಬೆ ಮತ್ತು ತೆಂಗಿನ ನೀರು

ವಿಟಮಿನ್ ಸಿ ಅನ್ನು ಒಳಗೊಂಡಿರುವ ಲಿಂಬೆ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿರುವ ಕೊಲೆಜನ್ ಉತ್ಪಾದನೆಯನ್ನು ಮಾಡುತ್ತದೆ.

ಸಾಮಾಗ್ರಿಗಳು

1 ಚಮಚ ಲಿಂಬೆ ರಸ

1/4 ಕಪ್ ತೆಂಗಿನ ನೀರು

ಮಾಡುವ ವಿಧಾನ

1. ಲಿಂಬೆ ರಸ ಮತ್ತು ತೆಂಗಿನ ನೀರನ್ನು ಮಿಶ್ರ ಮಾಡಿ

2. ನಿಮ್ಮ ಕೂದಲಿನ ಬುಡಕ್ಕೆ 5 ನಿಮಿಷ ಕಾಲ ಈ ನೀರನ್ನು ಮಸಾಜ್ ಮಾಡಿ

3. ಬೆಚ್ಚಗಿನ ಟವೆಲ್ ಬಳಸಿ ನಿಮ್ಮ ಕೂದಲನ್ನು ಸುತ್ತಿಕೊಳ್ಳಿ

4. 15-20 ನಿಮಿಷ ಹಾಗೆಯೇ ಇರಿ ನಂತರ ಮೃದು ಶ್ಯಾಂಪೂವಿನಿಂದ ಕೂದಲು ತೊಳೆದುಕೊಳ್ಳಿ

5. ವಾರಕ್ಕೊಮ್ಮೆ ಈ ವಿಧಾನವನ್ನು ಬಳಸಿ

ಜೇನು ಮತ್ತು ತೆಂಗಿನ ನೀರು

ಜೇನು ಮತ್ತು ತೆಂಗಿನ ನೀರು

ಕೂದಲಿನ ಹಾನಿಯನ್ನು ಮಾಡದೆಯೇ ಕೂದಲಿಗೆ ಪೋಷಣೆಯನ್ನು ಜೇನು ನೀಡುತ್ತದೆ

ಸಾಮಾಗ್ರಿಗಳು

1 ಚಮಚ ಜೇನು

1/4 ಕಪ್ ತೆಂಗಿನ ನೀರು

ಮಾಡುವ ವಿಧಾನ

1. 1 ಚಮಚ ಜೇನನ್ನು 1/4 ಕಪ್ ತೆಂಗಿನ ನೀರಿನೊಂದಿಗೆ ಮಿಶ್ರ ಮಾಡಿ.

2. ನಿಮ್ಮ ಕೂದಲಿನ ಬುಡಕ್ಕೆ ಮತ್ತು ಸಂಪೂರ್ಣ ಕೂದಲಿಗೆ ಹಚ್ಚಿ 5 ನಿಮಿಷ ಕಾಯಿರಿ

3. ನಿಮ್ಮ ಸಂಪೂರ್ಣ ಕೂದಲಿಗೆ ಇದನ್ನು ಹಚ್ಚಿ 20 ನಿಮಿಷ ಕಾಯಿರಿ

4. ಬೆಚ್ಚಗಿನ ಟವೆಲ್ ಬಳಸಿ ಕೂದಲನ್ನು ಕಟ್ಟಿಕೊಳ್ಳಿ ನಂತರ ಇದನ್ನು ನೀರಿನಿಂದ ತೊಳೆದುಕೊಳ್ಳಿ.

5. ವಾರಕ್ಕೆ ಎರಡು ಬಾರಿ ಇದನ್ನು ಮಾಡಿ ನೋಡಿ ಫಲಿತಾಂಶ ಪಡೆದುಕೊಳ್ಳಿ.

ಅಲೊವೇರಾ ಮತ್ತು ಎಳೆ ನೀರು

ಅಲೊವೇರಾ ಮತ್ತು ಎಳೆ ನೀರು

ಹಾನಿಗೊಂಡ ಮತ್ತು ಒರಟಾದ ಕೂದಲಿಗೆ ಅಲೊವೇರಾ ಉತ್ತಮವಾಗಿದೆ. ಇದು ಕೂದಲನ್ನು ಮೃದುವಾಗಿಸುವುದರ ಜೊತೆಗೆ ರಕ್ತದ ಮಟ್ಟವನ್ನು ಹೆಚ್ಚಿಸುತ್ತದೆ.

ಸಾಮಾಗ್ರಿಗಳು

2 ಚಮಚ ಅಲೊವೇರಾ ಜೆಲ್

1/4 ಕಪ್ ತೆಂಗಿನ ನೀರು

2 ಚಮಚ ಜಜೊಬಾ ಆಯಿಲ್

ಮಾಡುವ ವಿಧಾನ

1. ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ

2. ಮೃದುವಾದ ಶ್ಯಾಂಪೂ ಬಳಸಿ ಮತ್ತು ಕಂಡೀಷನರ್ ಹಚ್ಚಿಕೊಳ್ಳಿ

3. ನೀರು ತೆಗೆದ ನಂತರ ನಿಮ್ಮ ಕೂದಲಿಗೆ ತೆಂಗಿ ನೀರನ್ನು ಸ್ಪ್ರೇ ಮಾಡಿ

4. ಈ ಮಿಶ್ರಣವನ್ನು ಫ್ರಿಜ್ಡ್‌ನಲ್ಲಿ ಕೂಡ ಇರಿಸಬಹುದು

5. ವಾರಕ್ಕೆ 2-3 ಬಾರಿ ಈ ವಿಧಾನವನ್ನು ಬಳಸಿ.

ಕೂದಲು ಗಂಟುಗಂಟಾಗಿದ್ದರೆ

ಕೂದಲು ಗಂಟುಗಂಟಾಗಿದ್ದರೆ

ಕೂದಲಿಗೆ ಮಸಾಜ್ ಮಾಡಿ ಕೂದಲು ಗಂಟುಗಂಟಾಗಿದ್ದರೆ ಎಳನೀರನ್ನು ಬೆರಳುಗಳಲ್ಲಿ ಅದ್ದಿ ಕೂದಲ ಬುಡದಲ್ಲಿ ಮಸಾಜ್ ಮಾಡಿ ತುದಿಯವರೆಗೆ ಹಚ್ಚುತ್ತಾ ಬನ್ನಿ, ಇದು ಕೂದಲಿಗೆ ಆರ್ದ್ರತೆ ನೀಡುವ ಜೊತೆಗೆ ಕೂದಲು ಸಿಕ್ಕು ಸಿಕ್ಕಾಗಿದ್ದನ್ನು ಸುಲಭವಾಗಿ ಬಿಡಿಸಿಕೊಳ್ಳಲು ನೆರವಾಗುತ್ತದೆ.

ತ್ವಚೆಯ ಸೌಂದರ್ಯ ವೃದ್ಧಿಗೂ ಎಳನೀರು ಬಳಸಬಹದು!

ತ್ವಚೆಯ ಸೌಂದರ್ಯ ವೃದ್ಧಿಗೂ ಎಳನೀರು ಬಳಸಬಹದು!

ತ್ವಚೆಯ ಸೌಂದರ್ಯ ವೃದ್ಧಿಗೂ ಎಳನೀರು ಬಳಸಬಹದು! ಅಚ್ಚರಿಯಾಯಿತೇ? ಹಾಗಾದರೆ ಮುಂದೆ ಓದಿ

ಎಳನೀರಿನಿಂದ ಮುಖ ತೊಳೆಯಿರಿ!

ಹೌದು ಪ್ರತಿದಿನ ಬೆಳಿಗೆ ನೀರಿನಿಂದ ಮುಖ ತೊಳೆದ ಬಳಿಕ ಕೊಂಚ ಎಳನೀರನ್ನು ಕೈಗೆ ತೆಗೆದುಕೊಂಡು ಮುಖಕ್ಕೆ ನೇರವಾಗಿ ಚಿಮುಸಿಕೊಳ್ಳಿ. ಈ ನೀರು ಹಾಗೇ ಆರಲು ಬಿಡಿ. ಇದು ದಿನವಿಡೀ ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿಸಿ ತಾಜಾ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.

ಅರಿಶಿನ, ಚಂದನ ಸೇರಿಸಿ ಮುಖಲೇಪ ತಯಾರಿಸಿ

ಅರಿಶಿನ, ಚಂದನ ಸೇರಿಸಿ ಮುಖಲೇಪ ತಯಾರಿಸಿ

ಸಮಪ್ರಮಾಣದಲ್ಲಿ ಅರಿಶಿನ ಮತ್ತು ಚಂದನದ ಪುಡಿಗಳನ್ನು ಕೊಂಚ ಎಳನೀರಿನಲ್ಲಿ ಹಾಕಿ ಮುಖಲೇಪ ತಯಾರಿಸಿ ನಿತ್ಯವೂ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ ಚರ್ಮದ ರಂದ್ರಗಳು ದೊಡ್ಡದಾಗಿ ಎಲ್ಲಾ ಕಲ್ಮಶಗಳು ಹೊರಹೋಗಲು ನೆರವಾಗುತ್ತದೆ. ಸೋಪು ಉಪಯೋಗಿಸ ಬೇಡಿ. ನಿಯಮಿತ ಬಳಕೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

 ಸೌತೆಕಾಯಿ ರಸ ಮತ್ತು ಎಳನೀರು

ಸೌತೆಕಾಯಿ ರಸ ಮತ್ತು ಎಳನೀರು

ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಚರ್ಮ ಗಾಢವಾಗಿದ್ದು ಮೊದಲಿನ ಬಣ್ಣವನ್ನು ಪಡೆಯಲು ಉತ್ಸುಕರಾಗಿದ್ದರೆ ಹಾಲು, ಸೌತೆಕಾಯಿ ರಸ ಮತ್ತು ಎಳನೀರುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಆಗಾಗ ಹಚ್ಚಿಕೊಳ್ಳುತ್ತಾ ಬನ್ನಿ. ಇದರಿಂದ ನಿಧಾನವಾಗಿ ನಿಮ್ಮ ಚರ್ಮ ತನ್ನ ಮೂಲ ಬಣ್ಣವನ್ನು ಪಡೆಯಲು ಸಾಧ್ಯವಾಗುತ್ತದೆ.

English summary

Coconut Water Solutions For Hair Growth That Actually Work

Long and healthy hair is always attractive and is something that every women long for. But growing hair seems to be a tedious task especially nowadays. Due to certain factors like increased level of environmental pollution, lifestyle problems, etc., can be some reasons for this. Hair fall, split ends, breakage, etc., adds on to the slow growth of hair. One best ingredient that can come to rescue for these problem is coconut water. Just as the same way coconut oil works well for several hair-related issues, coconut water too does a good job. Let us have a look at how to reduce hair fall and increase the hair growth using coconut water.
Story first published: Tuesday, July 10, 2018, 17:00 [IST]
X
Desktop Bottom Promotion