For Quick Alerts
ALLOW NOTIFICATIONS  
For Daily Alerts

ಕೂದಲು ಸೊಂಪಾಗಿ ಬೆಳೆಯಲು 'ಕಪ್ಪು ಬೀಜದ ಎಣ್ಣೆ' ಬಳಸಿ

|

ಕೂದಲು ಉದುರುವುದು, ಕೂದಲು ತುಂಡಾಗುವುದು ಹೀಗೆ ನಾನಾ ಸಮಸ್ಯೆಗಳಿಂದ ನೀವು ತುಂಬಾ ಚಿಂತೆಗೀಡಾಗಿದ್ದೀರಾ? ಹೆಚ್ಚಿನ ಎಲ್ಲಾ ತೈಲಗಳು ಹಾಗೂ ಶಾಂಪೂಗಳನ್ನು ಬಳಸಿಕೊಂಡರೂ ನಿಮ್ಮ ಸಮಸ್ಯೆಗೆ ಮಾತ್ರ ಪರಿಹಾರ ಸಿಗಲಿಲ್ಲವೇ? ಹಾಗಾದರೆ ನೀವು ಕಪ್ಪು ಬೀಜದ ಎಣ್ಣೆಯನ್ನು ಬಳಸಿಕೊಳ್ಳಬೇಕು. ಇದರಿಂದ ನೀವು ತುಂಬಾ ಉದ್ದಗಿನ, ಬಲಿಷ್ಠ ಮತ್ತು ದಪ್ಪ ಕೂದಲು ಸಿಗುವುದು. ಕೂದಲು ಉದುರುವುದು ತುಂಬಾ ಗಂಭೀರ ಸಮಸ್ಯೆಯಾಗಿದೆ.

Black Seed Oil For Hair Growth

ಇದನ್ನು ಪರಿಹರಿಸಲು ನೀವು ಪ್ರತಿನಿತ್ಯವು ಸಾರಭೂತ ತೈಲದ ಮಿಶ್ರಣವನ್ನು ಬಳಸಿಕೊಂಡು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿಕೊಳ್ಳಬೇಕು. ನೀವು ಈಗಾಗಲೇ ಹಲವಾರು ರೀತಿಯ ತೈಲಗಳನ್ನು ಬಳಸಿಕೊಂಡಿರಬಹುದು. ಆದರೆ ಕಪ್ಪು ಬೀಜದ ಎಣ್ಣೆಯನ್ನು ನೀವು ಪ್ರತಿನಿತ್ಯ ಬಳಸಿಕೊಂಡರೆ ಆಗ ಖಂಡಿತವಾಗಿಯೂ ತುಂಬಾ ಅದ್ಭುತವಾಗಿರುವ ಫಲಿತಾಂಶ ಪಡೆಯಬಹುದು. ಇದು ಹೇಗೆ ಎಂದು ತಿಳಿಯುವ ಮೊದಲು ನೀವು ಕಪ್ಪು ಬೀಜದ ಎಣ್ಣೆಯು ಕೂದಲಿನ ಬೆಳವಣಿಗೆಗೆ ಹೇಗೆ ನೆರವಾಗುವುದು ಎಂದು ತಿಳಿಯಿರಿ.

ಕೂದಲಿಗೆ ಕಪ್ಪು ಬೀಜದ ಎಣ್ಣೆಯ ಲಾಭಗಳು

ಕೂದಲಿಗೆ ಕಪ್ಪು ಬೀಜದ ಎಣ್ಣೆಯ ಲಾಭಗಳು

ಕಪ್ಪು ಬೀಜದ ಎಣ್ಣೆಯಿಂದ ಹಲವಾರು ರೀತಿಯ ಲಾಭಗಳು ಇವೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

•ಇದು ಕೂದಲಿನ ಬೆಳವಣಿಗೆ ಉತ್ತೇಜಿಸುವುದು ಮತ್ತು ಬಲಿಷ್ಠ ಹಾಗೂ ದಪ್ಪಗಿನ ಕೂದಲು ನೀಡುವುದು.

•ಕೂದಲಿನ ಕಿರುಚೀಲಗಳನ್ನು ಬಲಪಡಿಸುವುದರೊಂದಿಗೆ ಇದು ತಲೆಬುರುಡೆಯ ಆರೋಗ್ಯವನ್ನು ಕಾಪಾಡುವುದು.

•ಇದು ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳು ಇವೆ. ತಲೆಬುರುಡೆಗೆ ಆಗುವ ಸೋಂಕು ಮತ್ತು ಕಿರಿಕಿರಿಯನ್ನು ಇದು ನಿವಾರಣೆ ಮಾಡುವುದು.

•ಇದು ತಲೆಬುರುಡೆಗೆ ಆಳವಾಗಿ ಮೊಶ್ಚಿರೈಸ್ ಮತ್ತು ಪೋಷಣೆ ನೀಡುವುದು.

•ಕೂದಲು ಉದುರುವುದನ್ನು ತಡೆಯುವುದು.

•ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುವುದು.

•ಕೂದಲನ್ನು ನಯ, ಮೃದು ಮತ್ತು ನಿರ್ವಹಿಸಲು ಸುಲಭವಾಗಿಸುವುದು.

•ಕೂದಲಿಗೆ ಯಾವುದೇ ರೀತಿಯ ಹಾನಿಯನ್ನು ತಡೆಯುವುದು.

Most Read: ಕೂದಲು ದಪ್ಪವಾಗಿ ಬೆಳೆಯಬೇಕೇ? ಮೊಟ್ಟೆ, ತೆಂಗಿನೆಣ್ಣೆ ಹೇರ್ ಮಾಸ್ಕ್ ಬಳಸಿ

ಕೂದಲಿನ ಬೆಳವಣಿಗೆಗೆ ಕಪ್ಪು ಬೀಜದ ಎಣ್ಣೆಯನ್ನು ಬಳಸುವುದು ಹೇಗೆ?

ಕೂದಲಿನ ಬೆಳವಣಿಗೆಗೆ ಕಪ್ಪು ಬೀಜದ ಎಣ್ಣೆಯನ್ನು ಬಳಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು

•2 ಚಮಚ ಕಪ್ಪುಬೀಜದ ಎಣ್ಣೆ

•1 ಚಮಚ ತೆಂಗಿನೆಣ್ಣೆ

•1 1/2 ಚಮಚ ಆಲಿವ್ ತೈಲ

•1 ಚಮಚ ಹರಳೆಣ್ಣೆ

•1 ಚಮಚ ಲಿಂಬೆರಸ

•1 ಚಮಚ ಜೇನುತುಪ್ಪ

ವಿಧಾನ

ವಿಧಾನ

•ಒಂದು ಪಿಂಗಾಣಿಯಲ್ಲಿ ಕಪ್ಪುಬೀಜದ ಎಣ್ಣೆಯೊಂದಿಗೆ ತೆಂಗಿನೆಣ್ಣೆ ಮತ್ತು ಆಲಿವ್ ತೈಲವನ್ನು ಹಾಕಿಕೊಳ್ಳಿ. ಎಲ್ಲವನ್ನು ಜತೆಯಾಗಿ ಮಿಶ್ರಣ ಮಾಡಿ.

•ಇದಕ್ಕೆ ಹರಳೆಣ್ಣೆ ಹಾಕಿಕೊಂಡು ಮತ್ತೆ ಮಿಶ್ರಣ ಮಾಡಿ. ಹರಳೆಣ್ಣೆಯು ಜಿಗುಟಾಗಿರುವುದು. ಇದರಿಂದ ಮಿಶ್ರಣವು ಕೂಡ ಜಿಗುಟಾಗುವುದು. ಕೂದಲಿನ ಬೆಳವಣಿಗೆಗೆ ಇದು ತುಂಬಾ ಒಳ್ಳೆಯದು.

•ಈ ಮಿಶ್ರಣಕ್ಕೆ ಜೇನುತುಪ್ಪ ಹಾಕಿಕೊಂಡು ಬಳಿಕ ಸರಿಯಾಗಿ ಬ್ಲೆಂಡ್ ಮಾಡಿಕೊಳ್ಳಿ.

•ಅಂತಿಮವಾಗಿ ಲಿಂಬೆರಸ ಹಾಕಿಕೊಂಡು ಬಳಿಕ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

•ಒಳ್ಳೆಯ ಪ್ರಮಾಣದಲ್ಲಿ ಈ ಮಿಶ್ರಣವನ್ನು ತೆಗೆದುಕೊಂಡು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು ಬೆರಳುಗಳನ್ನು ಬಳಸಿಕೊಂಡು ಸರಿಯಾಗಿ ಮಸಾಜ್ ಮಾಡಿ. 20 ನಿಮಿಷ ಕಾಲ ಮಸಾಜ್ ಮಾಡಿ ಮತ್ತು ತಲೆಬುರುಡೆ ಹಾಗೂ ಕೂದಲಿನಲ್ಲಿ ಇದು ಮುಂದಿನ 10-15 ನಿಮಿಷ ಕಾಲ ಹಾಗೆ ಇರಲಿ. ಇದರ ಬಳಿಕ ನೀವು ಬಳಸುವಂತಹ ಶಾಂಪೂ ಹಾಗೂ ಕಂಡೀಷನರ್ ಬಳಸಿಕೊಂಡು ತೊಳೆಯಿರಿ.

•ಉತ್ತಮ ಫಲಿತಾಂಶ ಸಿಗಬೇಕಾದರೆ ನೀವು ಇದನ್ನು ವಾರದಲ್ಲಿ ಎರಡು ಸಲ ಬಳಸಿ.

ಇದು ಹೇಗೆ ಕೆಲಸ ಮಾಡುವುದು?

ಇದು ಹೇಗೆ ಕೆಲಸ ಮಾಡುವುದು?

•ಕಪ್ಪು ಬೀಜದ ಎಣ್ಣೆಯು ಕೂದಲಿನ ಕಿರುಚೀಲಗಳನ್ನು ಉತ್ತೇಜಿಸುವುದು ಮತ್ತು ಕೂದಲನ್ನು ಬಲಿಷ್ಠವಾಗಿಸುವುದು. ಇದು ಕೂದಲಿಗೆ ಬೇಕಾಗಿರುವಂತಹ ಪ್ರಮುಖ ಪೋಷಕಾಂಶಗಳನ್ನು ನೀಡುವುದು.

•ತೆಂಗಿನೆಣ್ಣೆಯಲ್ಲಿ ನೈಸರ್ಗಿಕವಾಗಿ ನುಗ್ಗುವಿಕೆ ಗುಣವು ಇರುವ ಕಾರಣದಿಂದಾಗಿ ಇದು ತಲೆಬುರುಡೆ ಮತ್ತು ಕೂದಲಿನ ಬುಡದವರೆಗೆ ತಲುಪುವುದು ಮತ್ತು ಬೇಕಾಗಿರುವಂತಹ ಪೋಷಣೆ ನೀಡುವುದು.

•ಹರಳೆಣ್ಣೆಯು ಕೂದಲಿನ ಬೆಳವಣಿಗೆಗೆ ನೆರವಾಗುವಂತಹ ಮತ್ತೊಂದು ಎಣ್ಣೆಯಾಗಿದೆ. ಇದು ಕೂದಲನ್ನು ದಪ್ಪ ಮಾಡುವುದು ಮತ್ತು ಕೂದಲು ಉದುರುವಿಕೆ ತಡೆಯುವುದು.

Most Read: ಕೂದಲಿಗೆ ರೆಡ್ ವೈನ್ ಬಳಸಿ-ಇದರಿಂದ ಸಾಕಷ್ಟು ಪ್ರಯೋಜನಗಳಿವೆ

ಇದು ಹೇಗೆ ಕೆಲಸ ಮಾಡುವುದು?

ಇದು ಹೇಗೆ ಕೆಲಸ ಮಾಡುವುದು?

•ಆಲಿವ್ ತೈಲವು ಕೂದಲನ್ನು ಕಂಡೀಷನ್ ಮಾಡುವ ಗುಣ ಹೊಂದಿದೆ ಮತ್ತು ಇದು ಕೂದಲನ್ನು ನಯ ಹಾಗೂ ರೇಷ್ಮೆಯಂತೆ ಹೊಳೆಯುವಂತೆ ಮಾಡುವುದು. ಇದು ಕೂದಲು ತುಂಡಾಗುವುದು ಮತ್ತು ಒಡೆದ ತುದಿಗಳಿಂದ ರಕ್ಷಿಸುವುದು.

•ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವಂತಹ ಲಿಂಬೆರಸವು ತಲೆಬುರುಡೆಯಲ್ಲಿ ಕಾಲಜನ್ ಮಟ್ಟವನ್ನು ಕಾಪಾಡುವುದು ಮತ್ತು ತಲೆಬುರುಡೆಯಲ್ಲಿ ಪಿಎಚ್ ಮಟ್ಟವನ್ನು ಕಾಪಾಡುವುದು. ಇದರಿಂದ ಕೂದಲು ಉದುರುವಿಕೆ ತಪ್ಪುವುದು ಮತ್ತು ಕೂದಲಿನ ಬೆಳವಣಿಗೆಯಾಗುವುದು.

•ಜೇನುತುಪ್ಪವು ಮೊಶ್ಚಿರೈಸ್ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮತ್ತು ಕಂಡೀಷನ್ ಮಾಡುವುದು. ಇದರಿಂದ ಆರೋಗ್ಯ ಕಾಪಾಡುವುದು.

English summary

Black Seed Oil For Hair Growth

Have you ever tried using black seed oil for strong, beautiful, and healthy tresses? Well, if you haven't, it is time you start including black seed oil in your daily hair care routine ans see the amazing difference for yourself with prolonged use. It stimulates hair growth and makes your hair stronger and thicker.
Story first published: Tuesday, November 27, 2018, 15:48 [IST]
X
Desktop Bottom Promotion