For Quick Alerts
ALLOW NOTIFICATIONS  
For Daily Alerts

ಬಲಿಷ್ಠ ಕೂದಲಿಗೆ ಬೀಟ್ ರೂಟ್ - ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ

|

ಪ್ರತಿಯೊಬ್ಬರಿಗೂ ಸುಂದರ ಕೂದಲು ಮತ್ತು ಆರೋಗ್ಯಕರ ತಲೆಬುರುಡೆಯ ಭಾಗ್ಯವಿರುವುದಿಲ್ಲ. ಇದನ್ನು ಪಡೆಯಲು ತುಂಬಾ ಆರೈಕೆಯ ಅಗತ್ಯವು ಇದೆ. ತಲೆಬುರುಡೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಂಡರೆ ಆಗ ಸುಂದರ ಕುದಲು ನಿಮ್ಮದಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕಾಗಿ ನೀವು ದುಬಾರಿ ಹಣ ಖರ್ಚು ಮಾಡಬೇಕೆಂದಿಲ್ಲ. ಬೋಲ್ಡ್ ಸ್ಕೈ ನಿಮಗೆ ಮನೆಯಲ್ಲೇ ಸಿಗುವಂತಹ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡುವುದು ಹೇಗೆ ಎಂದು ತಿಳಿಸಿಕೊಡಲಿದೆ. ಇದರಲ್ಲಿ ಪ್ರಮುಖವಾಗಿರುವಂತಹ ತರಕಾರಿಯಾಗಿರುವ ಬೀಟ್ ರೂಟ್ ನಿಮ್ಮ ಕೂದಲಿನ ಆರೋಗ್ಯ ಕಾಪಾಡುವುದು. ಇದು ಹೇಗೆ ಎಂದು ಮುಂದೆ ಓದುತ್ತಾ ತಿಳಿಯಿರಿ.

Beetroot For Strong & Shiny Hair

ಕೂದಲಿನ ಆರೈಕೆಗೆ ಬೀಟ್ ರುಟ್ ಅದ್ಭುತ ಆಯ್ಕೆ ಹೇಗೆ?

ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಎ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಪೊಟಾಶಿಯಂ ಇರುವಂತಹ ಬೀಟ್ ರೂಟ್ ಕೂದಲಿನ ಆರೈಕೆಗೆ ತುಂಬಾ ಒಳ್ಳೆಯದು. ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮಾತ್ರವಲ್ಲದೆ, ಕೂದಲು ಆರೋಗ್ಯಕರ ಮತ್ತು ಬಲವಾಗಿ ಬೆಳೆಯಲು ನೆರವಾಗುವುದು. ಕೂದಲಿನ ಆರೈಕೆಯಲ್ಲಿ ವಿವಿಧ ರೀತಿಯಿಂದ ನೀವು ಬೀಟ್ ರೂಟ್ ನ್ನು ಬಳಸಬಹುದು. ಆದರೆ ಕೂದಲು ಉದುರುವಿಕೆ, ತುರಿಕೆ ಉಂಟು ಮಾಡುವ ತಲೆಬುರುಡೆ, ಕೂದಲಿನ ಬಣ್ಣ ಮತ್ತು ತಲೆಹೊಟ್ಟನ್ನು ಇದು ನಿವಾರಣೆ ಮಾಡುವುದು. ಬೀಟ್ ರೂಟ್ ನ್ನು ಕೂದಲಿಗೆ ಬಳಸುವುದು ಹೇಗೆ ಎಂದು ನೀವು ಈ ಲೇಖನವನ್ನು ಮುಂದೆ ಓದುತ್ತಾ ತಿಳಿಯಬಹುದು.

ತಲೆಹೊಟ್ಟಿಗೆ

ತಲೆಹೊಟ್ಟಿಗೆ

ಬೇಕಾಗುವ ಸಾಮಗ್ರಿಗಳು

  • ಅರ್ಧ ಕಪ್ ಬೀಟ್ ರೂಟ್
  • ಅರ್ಧ ಕಪ್ ಕಹಿಬೇವಿನ ನೀರು
  • ತಯಾರಿಸುವ ವಿಧಾನ

    ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಬೀಟ್ ರೂಟ್ ಹಾಕಿಕೊಳ್ಳಿ. ಇದಕ್ಕೆ ಕಹಿಬೇವಿನ ನೀರು ಹಾಕಿ, ಸರಿಯಾಗಿ ಮಿಶ್ರಣ ಮಾಡಿ. ಕೆಲವು ನಿಮಿಷ ಕಾಲ ಇದನ್ನು ಸರಿಯಾಗಿ ಮಿಸ್ರಣ ಮಾಡಿ ಮತ್ತು ಇದನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ.

    ಅರ್ಧಗಂಟೆ ಕಾಲ ಹಾಗೆ ಬಿಡಿ.

    ಶಾಂಪೂ ಅಥವಾ ಕಂಡೀಷನರ್ ಬಳಸಿಕೊಂಡು ತೊಳೆಯಿರಿ.

    ನಿಮಗೆ ಉತ್ತಮ ಫಲಿತಾಂಶ ಬೇಕಾದರೆ ವಾರದಲ್ಲಿ ಒಂದು ಸಲ ಇದನ್ನು ಬಳಸಿ.

    'ಬೀಟ್‌ರೂಟ್' ಫೇಸ್‌ ಮಾಸ್ಕ್- ಇನ್ನಷ್ಟು ಸುಂದರವಾಗಿ ಕಾಣುವಿರಿ!

    ಬೊಕ್ಕ ತಲೆ ನಿವಾರಣೆ ಮಾಡಲು

    ಬೊಕ್ಕ ತಲೆ ನಿವಾರಣೆ ಮಾಡಲು

    ಬೇಕಾಗುವ ಸಾಮಗ್ರಿಗಳು

    • 1 ಕಪ್ ಬೀಟ್ ರೂಟ್ ರಸ
    • 1 ಚಮಚ ತಾಜಾ ತುರಿದ ಶುಂಠಿ
    • 2 ಚಮಚ ಆಲಿವ್ ತೈಲ
    • ತಯಾರಿಸುವ ವಿಧನ

      ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ ಬೀಟ್ ರೂಟ್ ರಸ ಹಾಕಿ.

      ಇದಕ್ಕೆ ಆಲಿವ್ ತೈಲ ಮತ್ತು ಶುಂಠಿ ಹಾಕಿ.

      ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿಕೊಳ್ಳಿ.

      20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ಶಾಂಪೂ ಮತ್ತು ಕಂಡೀಷನರ್ ಬಳಸಿ ತೊಳೆಯಿರಿ.

      ವಾರದಲ್ಲಿ ಒಂದು ಸಲ ಇದನ್ನು ಬಳಸಿಕೊಳ್ಳಿ.

      ಕೂದಲಿಗೆ ಬಣ್ಣ ಬರಲು

      ಕೂದಲಿಗೆ ಬಣ್ಣ ಬರಲು

      ಬೇಕಾಗುವ ಸಾಮಗ್ರಿಗಳು

      • 1 ಕಪ್ ಬೀಟ್ ರೂಟ್ ರಸ
      • ಅರ್ಧ ಕಪ್ ಬ್ಲ್ಯಾಕ್ ಟೀ
      • ಅರ್ಧ ಕಪ್ ರೋಸ್ ವಾಟರ್
      • ತಯಾರಿಸುವ ವಿಧಾನ

        ಒಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ಬೀಟ್ ರೂಟ್ ರಸ ಹಾಕಿ. ಇದಕ್ಕೆ ರೋಸ್ ವಾಟರ್ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ.

        ಇದರ ಬಳಿಕ ಬ್ಲ್ಯಾಕ್ ಟೀ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

        ಇದನ್ನು ಕೂದಲಿಗೆ ಹಚ್ಚಿಕೊಳ್ಳುವ ಮೊದಲು ಕೆಲವು ನಿಮಿಷ ಕಾಲ ಹಾಗೆ ಬಿಡಿ. ಒಂದು ಗಂಟೆ ಕಾಲ ಹಾಗೆ ಬಿಡಿ ಬಳಿಕ ಕೂದಲು ತೊಳೆಯಿರಿ.

        ಇದು ನಿಮ್ಮ ಕೂದಲಿಗೆ ಕೆಂಪು ಬಣ್ಣವನ್ನು ನೀಡುವುದು. ಇದು 2-3 ವಾರಗಳ ಕಾಲ ಹಾಗೆ ಇರುವುದು.

        ನೀವು ಇದನ್ನು ಬೇಕಾದಷ್ಟು ಸಲ ಬಳಸಬಹುದು.

        ಇದಕ್ಕಾಗಿ ನೀವು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಳ್ಳುವ ಕಾರಣದಿಂದಾಗಿ ಯಾವುದೇ ಅಡ್ಡಪರಿಣಾಮ ಉಂಟಾಗದು.

        ತುರಿಕೆಯುಂಟು ಮಾಡುವ ತಲೆಬುರುಡೆಗೆ

        ತುರಿಕೆಯುಂಟು ಮಾಡುವ ತಲೆಬುರುಡೆಗೆ

        ಬೇಕಾಗುವ ಸಾಮಗ್ರಿಗಳು

        • ಎರಡು ತುಂಡು ಮಾಡಿಕೊಂಡಿರುವ ಒಂದು ಬೀಟ್ ರೂಟ್
        • ತಯಾರಿಸುವ ವಿಧಾನ

          ಒಂದು ತುಂಡನ್ನು ತೆಗೆದುಕೊಂದು ಅದನ್ನು ತಲೆಬುರುಡೆಗೆ ಉಜ್ಜಿಕೊಳ್ಳೀ.

          ಇದರ ರಸವು ತಲೆಬುರುಡೆಗೆ ಸರಿಯಾಗಿ ಹೀರಿಕೊಳ್ಳಲಿ. 15 ನಿಮಿಷ ಕಾಲ ಬೀಟ್ ರೂಟ್ ನ್ನು ಹಾಗೆ ಉಜ್ಜಿಕೊಳ್ಳಿ.

          ಇದು ತಲೆಬುರುಡೆಗೆ ಮೊಶ್ಚಿರೈಸ್ ಮಾಡುವುದು ಮತ್ತು ಚರ್ಮದ ಸತ್ತಕೋಶಗಳನ್ನು ತೆಗೆಯುವುದು. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಒಂದು ಸಲ ಹೀಗೆ ಮಾಡಿ.

          ಹೇರ್ ಮಾಸ್ಕ್

          ಹೇರ್ ಮಾಸ್ಕ್

          ಬೇಕಾಗುವ ಸಾಮಗ್ರಿಗಳು

          • 4 ಚಮಚ ಬೀಟ್ ರೂಟ್ ರಸ
          • 2 ಚಮಚ ಗ್ರೌಂಡ್ ಕಾಫಿ
          • ತಯಾರಿಸುವ ವಿಧಾನ

            ಒಂದು ಪಿಂಗಾಣಿ ತೆಗೆದುಕೊಂಡು ಅದಕ್ಕೆ ಗ್ರೌಂಡ್ ಕಾಫಿ ಹಾಕಿ. ಈಗ ಇದಕ್ಕೆ ಬೀಟ್ ರೂಟ್ ರಸ ಹಾಕಿಕೊಳ್ಳಿ ಮತ್ತು ಸರಿಯಾಗಿ ಎರಡನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿಕೊಂಡು ಒಂದು ಗಂಟೆ ಕಾಲ ಹಾಗೆ ಬಿಡಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ ಒಂದು ದಿನ ಇದನ್ನು ಬಳಸಿಕೊಳ್ಳಿ.

            ಬೀಟ್ ರೂಟ್ ನ್ನು ಕೂದಲಿನ ಆರೈಕೆಗೆ ಹೇಗೆ ಬಳಸುವುದು ಎಂದು ನಿಮಗೆ ಈಗಾಗಲೇ ತಿಳಿದಿದೆ. ಇದರಲ್ಲಿ ಒಂದನ್ನಾದರೂ ನೀವು ಪ್ರಯತ್ನಿಸಿ ನೋಡಿ. ಇದರಿಂದ ನೀವು ಸುಂದರ ಹಾಗೂ ಬಲಿಷ್ಠ, ಕಾಂತಿಯುತ ಕೂದಲು ಪಡೆಯಬಹುದು.

            ಬೀಟ್ ರೂಟ್ ಹೇರ್ ಪ್ಯಾಕ್ ಮಾಡುವ ಇನ್ನೊಂದು ವಿಧಾನ

            *ಸ್ವಲ್ಪ ಬೀಟ್‌‌ರೂಟ್ ಎಲೆಗಳನ್ನು ತೆಗೆದುಕೊಂಡು, ಅದನ್ನು ನೀರಿನಲ್ಲಿ ಹಾಕಿ ಬೇಯಿಸಿ, ನೀವು ಹಾಕಿರುವ ನೀರಿನ ಅರ್ಧ ಭಾಗ ಬರುವವರೆಗೆ ಅದನ್ನು ಕಾಯಿಸಿ.

            *ಆಮೇಲೆ ಅವುಗಳನ್ನು ಶೋಧಿಸಿ, ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ರೀತಿ ರುಬ್ಬಿಕೊಳ್ಳಿ.

            *ಇನ್ನು ಇದಕ್ಕೆ ಒಂದು ಟೇಬಲ್ ಸ್ಪೂನ್ ಮೆಹಂದಿಯನ್ನು ಬೆರೆಸಿಕೊಂಡು ನಿಮ್ಮ ಕೂದಲ ಬುಡಕ್ಕೆ ಚೆನ್ನಾಗಿ ಲೇಪಿಸಿಕೊಳ್ಳಿ, ತದನಂತರ ಮೃದುವಾಗಿ ಮಸಾಜ್ ಮಾಡಿ.

            *ಇಷ್ಟೆಲ್ಲಾ ಆದ ನಂತರ ಸುಮಾರು 20-25 ನಿಮಿಷ ಬಿಟ್ಟು ಮೆದುವಾದ ಶಾಂಪೂವಿನಿಂದ ತಲೆಗೆ ಸ್ನಾನ ಮಾಡಿ. *ಶೀಘ್ರವಾಗಿ ಇದರ ಫಲಿತಾಂಶವನ್ನು ನೋಡಲು 3-4 ಬಾರಿ ಇದನ್ನು ಪ್ರಯತ್ನಿಸಿ ನೋಡಿ.

            ಬೀಟ್‌ರೂಟ್‌ನಲ್ಲಿ ವಿಟಮಿನ್ ಬಿ ಮತ್ತು ಸಿ, ರಂಜಕ, ಕ್ಯಾಲ್ಸಿಯಂ ಮತ್ತು ಪ್ರೋಟಿನ್ ಅಧಿಕ ಪ್ರಮಾಣದಲ್ಲಿದ್ದು, ಇವೆಲ್ಲವೂ ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಈ ಎಲ್ಲಾ ಪೋಷಕಾಂಶಗಳು ಕೂದಲ ಬುಡವನ್ನು ಉತ್ತೇಜಿಸುವುದರ ಜೊತೆಗೆ ಕೂದಲ ಬೆಳವಣಿಗೆಗೆ ಕೂಡ ಸಹಕರಿಸುತ್ತವೆ.

            ಬೀಟ್‌ರೂಟಿನಲ್ಲಿ ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳಿದ್ದು, ಕೂದಲಿಗೆ ಸ್ವಾಭಾವಿಕ ಹೊಳಪನ್ನು ನೀಡುತ್ತವೆ, ಅಲ್ಲದೆ ಕೂದಲಿನ ಬುಡದಲ್ಲಿರುವ ರಂಧ್ರಗಳನ್ನು ಬಿಗಿಗೊಳಿಸುವ ಮೂಲಕ ಕೂದಲು ಉದುರದಂತೆ ಕಾಪಾಡುತ್ತದೆ.

English summary

Beetroot For Strong & Shiny Hair

Beetroot Loaded with antioxidants, vitamin A, vitamin C, calcium, iron, and potassium, beetroot is one of the choicest options for hair care. There are many ways in which you can use beetroot for hair care, but the main problems that it addresses are hair fall, itchy scalp, hair colour, as well as dandruff - and it really works!
Story first published: Monday, September 10, 2018, 15:42 [IST]
X
Desktop Bottom Promotion