For Quick Alerts
ALLOW NOTIFICATIONS  
For Daily Alerts

ಸರಳ ಟಿಪ್ಸ್: ತಲೆಹೊಟ್ಟು ಸಮಸ್ಯೆಗೆ ಪವರ್‌ಫುಲ್ ಮನೆಮದ್ದುಗಳು

By Manu
|

ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು. ತಲೆಹೊಟ್ಟು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ.

ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ. ತಲೆಹೊಟ್ಟಿನ ಸಾಮಾನ್ಯವಾದ ರೋಗಲಕ್ಷಣಗಳೆ೦ದರೆ, ತಲೆಯ ಮೇಲೆ ಉರಿಯ೦ತಹ ಅನುಭವ, ತಲೆ ತುರಿಸುವಿಕೆ, ಮತ್ತು ನಿರ್ಜೀವ ತ್ವಚೆಯು ತುಣುಕುಗಳ ರೂಪದಲ್ಲಿ ತಲೆಯಿ೦ದ ಉದುರುವುದು.


ಮನೆಯಲ್ಲಿ ಹರಳೆಣ್ಣೆ ಇದ್ದರೆ ಇಷ್ಟೇ ಸಾಕು! ಕೂದಲಿನ ಸಮಸ್ಯೆಗೆ ಇದು ರಾಮಬಾಣ

ಹಾಗಾದರೆ ಇದನ್ನು ಹೇಗೆ ನಿಯಂತ್ರಣಕ್ಕೆ ತರುವುದು? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಹತೋಟಿಗೆ ತರಬಹುದು... ಅಂತಹ ಕೆಲವೊಂದು ಸರಳ ಮನೆಮದ್ದುಗಳನ್ನು ಇಲ್ಲಿ ನೀಡಿದ್ದೇವೆ ಮುಂದೆ ಓದಿ...

ಪುದೀನಾ ಎಣ್ಣೆ

ಪುದೀನಾ ಎಣ್ಣೆ

ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿದಾಗ ತುಂಬಾ ತಣ್ಣನೆಯ ಅನುಭವ ಉಂಟಾಗುತ್ತದೆ. ಇದು ತಲೆ ತುರಿಕೆಯನ್ನು ಕಮ್ಮಿ ಮಾಡುವುದರ ಜೊತೆಗೆ ತಲೆಗೆ ತಂಪಾದ ಹಿತಾನುಭವವನ್ನು ನೀಡುತ್ತದೆ ಹಾಗೂ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿಯನ್ನು ನೀಡುವುದು.

ಅಲೀವ್ ಎಣ್ಣೆ

ಅಲೀವ್ ಎಣ್ಣೆ

ಒ೦ದು ಚಮಚದಷ್ಟು ಅಲೀವ್ ಎಣ್ಣೆಯೊ೦ದಿಗೆ ಮೂರು ಟೀ ಚಮಚದಷ್ಟು ಈರುಳ್ಳಿ ರಸವನ್ನು ಬೆರೆಸಿರಿ. ಈ ಮಿಶ್ರಣವನ್ನು ನಿಮ್ಮ ತೆಲೆಗೆ ಹಾಗೂ ಕೂದಲಿಗೆ ಹಚ್ಚಿರಿ. ನೀವೊ೦ದು ಬೆಚ್ಚನೆಯ ಟವಲ್ ಅನ್ನೂ ಸಹ ಅರ್ಧ ಗಂಟೆಯ ಕಾಲ ನಿಮ್ಮ ತಲೆಗೆ ಸುತ್ತಿಕೊಳ್ಳಬಹುದು. ನ೦ತರ ಮ೦ದವಾದ ಶಾ೦ಪೂವನ್ನು ಬಳಸಿ ತಲೆಯನ್ನು ತೊಳೆದುಕೊಳ್ಳುವುದರ ಮೂಲಕ ತಲೆಹೊಟ್ಟನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

ಮೆಂತೆ ಮತ್ತು ಲಿಂಬೆ

ಮೆಂತೆ ಮತ್ತು ಲಿಂಬೆ

ಮೆಂತೆ ಕಾಳುಗಳನ್ನು ರಾತ್ರಿಯೆಲ್ಲ ನೆನೆ ಹಾಕಿ, ಬೆಳಗ್ಗೆ ಅದನ್ನು ಪುಡಿ ಮಾಡಿಕೊಳ್ಳಿ. ಇದರಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಕೂದಲು ಮತ್ತು ಕೂದಲಿನ ಬುಡಕ್ಕೆ ಲೇಪಿಸಿ. ಒಂದು ಟೇಬಲ್ ಚಮಚ ಮೆಂತೆ ಪೇಸ್ಟ್‌ಗೆ ಒಂದು ಟೀ ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಿ. ಈ ಎರಡನ್ನು ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಳ್ಳಿ. ಆಗ ಕೂದಲಿಗೆ ಪೋಷಣೆಯು ದೊರೆಯುತ್ತದೆ. ತಲೆಹೊಟ್ಟು ಮಾಯವಾಗುತ್ತದೆ.

ದಾಸವಾಳ ಹೂವು....

ದಾಸವಾಳ ಹೂವು....

ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದರಲ್ಲಿ ಪೂರ್ಣ ಮುಳುಗುವಂತೆ ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಇದರೊಂದಿಗೆ ಕೆಲವು ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಯಲು ಬಿಡಿ. ಸುಮಾರಾಗಿ ಎಲ್ಲಾ ಹೂವಿನ ದಳಗಳು ಕರಗಿವೆ ಅನ್ನಿಸಿದ ಬಳಿಕ ಇಳಿಸಿ ಹಾಗೇ ತಣಿಯಲು ಬಿಡಿ. ಬಳಿಕ ಇದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ಬಳಸಿ.

ಮೆಂತೆ-ಬೇವು

ಮೆಂತೆ-ಬೇವು

•ಮೂರರಿಂದ ನಾಲ್ಕು ಗಂಟೆಗಳ ಕಾಲ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಕೊಳ್ಳಿ.

*ನೆನೆದಿರುವ ಮೆಂತೆ ಕಾಳಿಗೆ ಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಕೆಲವು ಹನಿ ನೀರು ಹಾಕಿ ಸರಿಯಾಗಿ ಪೇಸ್ಟ್ ಮಾಡಿ.

•ಪೇಸ್ಟ್ ಮೃದುವಾದ ಬಳಿಕ ಅದಕ್ಕೆ ನಿಂಬೆರಸ ಮತ್ತು ಮೊಸರು ಹಾಕಿಕೊಳ್ಳಿ.

•ಎಣ್ಣೆಯಂಶವಿರುವ ಕೂದಲಿಗೆ ಇದನ್ನು ಹಚ್ಚಿಕೊಂಡು ಸುಮಾರು ಒಂದು ಗಂಟೆ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ.

•ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಗೋರಂಟಿ ಎಲೆಗಳು

ಗೋರಂಟಿ ಎಲೆಗಳು

ನಿಮ್ಮ ಕೂದಲ ಆರೈಕೆಗೆ ಇದು ರಾಮಬಾಣವಿದ್ದಂತೆ. ಇದು ನಿಮ್ಮ ಕೇಶದ ಬೆಳವಣೆಗೆಗೆ ನೆರವಾಗಲಿದ್ದು, ತಲೆಹೊಟ್ಟನ್ನು ನಿವಾರಿಸಿ ಬಣ್ಣವನ್ನು ಕಾಪಾಡಲು ಮಹತ್ವದ ಪಾತ್ರ ವಹಿಸುತ್ತದೆ. ಗೊರಂಟಿ ಎಲೆಗಳಿಗೆ ಸಾಸಿವೆ ಎಣ್ಣೆ ಮತ್ತು ಮೊಸರನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತಲೆಯ ಭಾಗದ ಚರ್ಮಕ್ಕೆ ನಯವಾಗಿ ತಿಕ್ಕಿ. ಅರ್ಧ ಗಂಟೆಯಾದ ಮೇಲೆ ನೀರಿನಿಂದ ಸ್ವಚ್ಛಗೊಳಿಸಿ. ಇದು ನಿಮ್ಮ ಕೂದಲನ್ನು ಹೆಚ್ಚು ನಳನಳಿಸುವಂತೆ ಮಾಡುತ್ತದೆ.

ಕೊತ್ತಂಬರಿ ಎಲೆಗಳು

ಕೊತ್ತಂಬರಿ ಎಲೆಗಳು

ನೀರನ್ನು ಬಳಸಿ ಕೊತ್ತಂಬರಿ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದರ ರಸವನ್ನು ನಿಮ್ಮ ತಲೆಯ ಭಾಗದ ಚರ್ಮಕ್ಕೆ ಹಚ್ಚಿ. ಅರ್ಧ ಘಂಟೆಯ ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಗುಣವು ಚರ್ಮದ ಉತ್ಕರ್ಷಣವನ್ನು ನಿಯಂತಿಸುವುದಲ್ಲದೇ, ಜೀವಕೋಶಗಳ ಹಾನಿಯನ್ನು ತಡೆಯುತ್ತದೆ. ಇದರಿಂದ ನಿಮ್ಮ ಕೇಶವು ಸದೃಢಗೊಂಡು ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಕಹಿಬೇವು

ಕಹಿಬೇವು

ಬೇವಿನಲ್ಲಿರುವ ಶಿಲೀಂಧ್ರನಿವಾರಕ ಗುಣ ತಲೆಹೊಟ್ಟು ನಿವಾರಿಸಲೂ ಸಮರ್ಥವಾಗಿದೆ. ಅಲ್ಲದೇ ಬೇವು ಒಂದು ಉತ್ತಮ ರಕ್ತ ಶುದ್ದೀಕಾರಕವಾಗಿದ್ದು ತಲತಲಾಂತರದಿಂದ ಭಾರತದಲ್ಲಿ ಹಲವು ರೋಗಗಳಿಗೆ ಔಷಧದ ರೂಪದಲ್ಲಿ ಬಳಕೆಯಲ್ಲಿದೆ. ತಲೆಹೊಟ್ಟು ನಿವಾರಿಸಲು ಕೆಲವು ಕಹಿಬೇವಿನ ಎಲೆಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ಬಳಿಕ ಈ ನೀರನ್ನು ತಣಿಯಲು ಬಿಡಿ. ಸುಮಾರು ಉಗುರು ಬೆಚ್ಚಗಾಗುವಷ್ಟು ತಣ್ಣಗಾದ ಬಳಿಕ ಸೋಸಿ ಒಂದು ಪಾತ್ರೆಯಲ್ಲಿ ಸಂಗ್ರಹಿಸಿ. ನಂತರ ಸ್ನಾನ ಮಾಡಿ ಒದ್ದೆಯಾದ ತಲೆಗೂದಲಿಗೆ ಈ ನೀರನ್ನು ಹಾಕಿಕೊಂಡು ಇಳಿಯಲು ಬಿಟ್ಟು ಬಳಿಕ ಒರೆಸದೇ ಹಾಗೇ ಒಣಗಲು ಬಿಡಿ. ಒಂದೇ ದಿನದಲ್ಲಿ ತಲೆಹೊಟ್ಟು ಇಲ್ಲವಾಗುತ್ತದೆ. ತಲೆಹೊಟ್ಟಿನ ಜೊತೆ ತುರಿಕೆ ಇದ್ದವರಿಗೆ ಈ ವಿಧಾನ ಸೂಕ್ತವಾಗಿದೆ.

ಲಿ೦ಬೆಯ ರಸ

ಲಿ೦ಬೆಯ ರಸ

ಲಿ೦ಬೆರಸದ ಸೂಕ್ಷ್ಮಾಣು ಪ್ರತಿಬ೦ಧಕ ಗುಣ ಲಕ್ಷಣಗಳು, ನಿಮ್ಮ ತಲೆಯ ತ್ವಚೆಯನ್ನು ಸ್ವಚ್ಚಗೊಳಿಸುವಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ. ನಿಮ್ಮ ತಲೆಯ ಮೇಲೆ ಕೆಲವು ಹನಿಗಳಷ್ಟು ಲಿ೦ಬೆಹಣ್ಣಿನ ರಸವನ್ನು ಹಾಕಿಕೊ೦ಡು ಅದನ್ನು ಸುಮಾರು 20 ರಿ೦ದ 30 ನಿಮಿಷಗಳವರೆಗೆ ಹಾಗೆಯೇ ಇರಗೊ‍ಟ್ಟರೆ ಪರಿಣಾಮ ಅದ್ಭುತವಾಗಿರುತ್ತದೆ. ಆದರೆ, ಇದಾದ ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ನಿಮ್ಮ ತಲೆಯನ್ನು ಸ್ವಚ್ಚವಾಗಿ ತೊಳೆದುಕೊಳ್ಳುವುದನ್ನು ಮಾತ್ರ ಮರೆಯಬೇಡಿರಿ. ಹೀಗೆ ಮಾಡುವುದರಿ೦ದ ತಲೆಹೊಟ್ಟಿನ ನಿವಾರಣೆಯಾಗುತ್ತದೆ ಮತ್ತು ಅದರ ಜೊತೆಗೆ ನಿಮ್ಮ ತ್ವಚೆಯೂ ಸಹ ಮೊಡವೆಗಳಿ೦ದ ಮುಕ್ತವಾಗುತ್ತದೆ.

 ಲೋಳೆಸರ ಮತ್ತು ಮೆಂತೆ

ಲೋಳೆಸರ ಮತ್ತು ಮೆಂತೆ

ಸುಮಾರು ಒಂದು ಚಮಚದಷ್ಟು ಮೆಂತೆಕಾಳುಗಳನ್ನು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ನೆನೆದ ಕಾಳುಗಳನ್ನು ಅರೆದು ನುಣ್ಣನೆಯ ಮಿಶ್ರಣ ತಯಾರಿಸಿ. ಇದಕ್ಕೆ ಲೋಳೆಸರದ ಒಂದು ಚಿಕ್ಕ ಕೋಡನ್ನು ಸೇರಿಸಿ ಮತ್ತೊಮ್ಮೆ ಅರೆದು ನುಣ್ಣಗಿನ ಪೇಸ್ಟ್ ನಂತೆ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮೇಲಿನ ವಿಧಾನದಂತೆಯೇ ಹಚ್ಚಿ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ತಲೆಯಲ್ಲಿರುವ ಹೆಚ್ಚುವರಿ ಎಣ್ಣೆ ಮತ್ತು ಬೂಸು ನಿವಾರಣೆಯಾಗುತ್ತದೆ. ಈ ವಿಧಾನದಲ್ಲಿ ಸ್ವಲ್ಪ ತಡವಾಗಿ ಫಲಿತಾಂಶ ಬರುವುದರಿಂದ ಕೊಂಚ ತಾಳ್ಮೆ ಅಗತ್ಯ.

ಲೋಳೆಸರ ಮತ್ತು ನೀಲಗಿರಿ ಎಣ್ಣೆ

ಲೋಳೆಸರ ಮತ್ತು ನೀಲಗಿರಿ ಎಣ್ಣೆ

ಲೋಳೆಸರದ ಒಂದು ಚಿಕ್ಕ ಕೋಡನ್ನು ಕೆಲವು ಹನಿ ನೀಲಗಿರಿ ಎಣ್ಣೆಯೊಂದಿಗೆ ಸೇರಿಸಿ ಅರೆಯಿರಿ. ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ ಸುಮಾರು ಒಂದು ಗಂಟೆ ಕಾಲ ಹಾಗೇ ಒಣಗಲು ಬಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದು ಸ್ವಚ್ಛವಾಗ ಟವೆಲ್ಲಿನಿಂದ ಒರೆಸಿಕೊಳ್ಳಿ. ಇದರಿಂದ ಲೋಳೆಸರ ಕೂದಲ ಬುಡಗಳ ಆಳಕ್ಕೆ ಇಳಿದು ತಲೆಹೊಟ್ಟಿಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಹಾಗೂ ಕೂದಲ ಬುಡಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡುತ್ತದೆ. ಸುಮಾರು ಎರಡರಿಂದ ಮೂರು ವಾರಗಳಲ್ಲಿ ತಲೆಹೊಟ್ಟು ಪೂರ್ಣವಾಗಿ ನಿವಾರಣೆಯಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಶಾಂಪೂ ಅಥವಾ ಸೋಪನ್ನು ಉಪಯೋಗಿಸಬಾರದು.

ಲೋಳೆಸರ ಮತ್ತು ಹರಳೆಣ್ಣೆ

ಲೋಳೆಸರ ಮತ್ತು ಹರಳೆಣ್ಣೆ

ಲೋಳೆಸರವನ್ನು ಅರೆದು ಅರ್ಧ ಕಪ್ ನಷ್ಟು ತುಂಬಿಸಿ. ಇದಕ್ಕೆ ಎರಡು ಚಿಕ್ಕ ಚಮಚದಷ್ಟು ಹರಳೆಣ್ಣೆ ಸೇರಿಸಿ (ಸುಂಗಧವುಳ್ಳ ಹರಳೆಣ್ಣೆ ಬೇಡ, ಅಪ್ಪಟವಾದ ಹರಳೆಣ್ಣೆ ಇರಲಿ). ಈ ಎರಡನ್ನೂ ಚೆನ್ನಾಗಿ ಮಿಶ್ರಣಗೊಳಿಸಿ ತಲೆಗೆ ಹಚ್ಚಿ. ಇದು ಕೂದಲನ್ನು ಆವರಿಸಿ ದಪ್ಪನಾಗಿ ಬರುವಂತೆ ಇಡಿಯ ತಲೆಗೆ ಲೇಪಿಸಿ. ತಲೆಗೊಂದು ಪ್ಲಾಸ್ಟಿಕ್ಕಿನ ಟೊಪ್ಪಿಯನ್ನು ಧರಿಸಿ (ಸ್ನಾನ ಮಾಡುವಾಗ ತೊಡುವ ಶವರ್ ಕ್ಯಾಪ್) ಮಲಗಿಬಿಡಿ. ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತಲೆಯನ್ನು ನಿಧಾನವಾಗಿ ತೋಯಿಸುತ್ತಾ ತೊಳೆದುಕೊಳ್ಳಿ. ಅಗತ್ಯವಿದ್ದರೆ ಸ್ವಲ್ಪವೇ ಸ್ವಲ್ಪ ಮೃದುವಾದ ಶಾಂಪೂ ಉಪಯೋಗಿಸಿ. ಈ ವಿಧಾನವನ್ನು ವಾರಕ್ಕೊಮ್ಮೆಯಂತೆ ನಾಲ್ಕೈದು ವಾರ ಅನುಸರಿಸಿ. ಶೀಘ್ರದಲ್ಲಿಯೇ ಕೂದಲ ಬುಡದಿಂದ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೇ ಹೊಸ ಕೂದಲು ಹುಟ್ಟಲು ಮತ್ತು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

English summary

Ways To Get Rid Of Dandruff At Home

There are many common home ingredients that one can utilize in order to get rid of dandruff from the scalp. These are easily used as they use common ingredients which are harmless. Most are actually beneficial for the skin as well. Thus, the main advantage of opting for a home remedy is that, not only is the problem addressed, one will be able to nourish their scalp and hair as well
Story first published: Saturday, October 21, 2017, 19:25 [IST]
X
Desktop Bottom Promotion