ಸೋಪು-ಶಾಂಪೂ ಪಕ್ಕಕ್ಕಿಡಿ-ಮೆಹೆಂದಿ 'ಹೇರ್ ಪ್ಯಾಕ್' ಮಾತ್ರ ಬಳಸಿ!

By: manu
Subscribe to Boldsky

ಔಷಧೀಯ ಸಸ್ಯಗಳ ಬಗ್ಗೆ ಭಾರತೀಯರಿಗೆ ತಿಳಿದಷ್ಟು ವಿಶ್ವದ ಬೇರೆ ಯಾವುದೇ ದೇಶದ ಜನರಿಗೆ ತಿಳಿದಿಲ್ಲವೆಂದರೆ ಅದರಲ್ಲಿ ಅಹಂ ಖಂಡಿತವಾಗಿಯೂ ಕಾಣಿಸದು. ಯಾಕೆಂದರೆ ಸಾವಿರಾರು ವರ್ಷಗಳಿಂದಲೂ ಭಾರತೀಯರು ಔಷಧೀಯ ಸಸ್ಯಗಳನ್ನು ಗುರುತಿಸಿಕೊಂಡು ಅದನ್ನು ಬಳಕೆ ಮಾಡುತ್ತಾ ಬರುತ್ತಿದ್ದಾರೆ. ಆಯುರ್ವೇದದಲ್ಲೂ ಭಾರತೀಯರು ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸುತ್ತಾ ಇದ್ದಾರೆ. ಇಂತಹ ಒಂದು ಸಸ್ಯವೆಂದರೆ ಮದರಂಗಿ. ಇದು ತುಂಬಾ ತಂಪನ್ನು ಉಂಟುಮಾಡುವ ಸಸ್ಯ. ಹಿಂದಿನಿಂದಲೂ ಮದರಂಗಿಯನ್ನು ತಲೆಗೆ ಹಚ್ಚಿಕೊಳ್ಳುವ ಸಂಪ್ರದಾಯ ಭಾರತೀಯರಲ್ಲೂ ಇದೆ. ಮೆಹೆಂದಿ -ಕೇವಲ ಅಲಂಕಾರಿಕವಲ್ಲ, ಆರೋಗ್ಯಕರವೂ ಕೂಡಾ

ಇಷ್ಟು ಮಾತ್ರವಲ್ಲದೆ ಮದುವೆ ಸಂದರ್ಭದಲ್ಲಿ ಮದರಂಗಿ ಅಥವಾ ಮೆಹೆಂದಿಯನ್ನು ಕೈಗಳಿಗೂ ಇಡುತ್ತಾರೆ. ಮದರಂಗಿಯು ತಲೆಬುರುಡೆ ಹಾಗೂ ಕೂದಲಿಗೆ ಸಂಬಂಧಪಟ್ಟ ಪ್ರತಿಯೊಂದು ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಇದು ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡುವ ಜತೆ ಕೂದಲಿನ ಹಾನಿ, ಒಣ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ!

ತಲೆಹೊಟ್ಟು, ತುರಿಕೆ ಮತ್ತು ಇತರ ಹಲವಾರು ಸಮಸ್ಯೆಯನ್ನು ನಿವಾರಣೆ ಮಾಡಿ ತಲೆಬುರುಡೆಗೆ ತೇವಾಂಶವನ್ನು ನೀಡುವುದು. ಮದರಂಗಿಯು ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ಮನೆಯಲ್ಲಿ ತಯಾರಿಸಿ ಬಳಸಬಹುದಾದ ಮದರಂಗಿಯ ಹಲವಾರು ಕೂದಲಿನ ಮಾಸ್ಕ್ ಬಗ್ಗೆ ನಿಮಗೆ ತಿಳಿಸಿಕೊಡಲಾಗುವುದು... ಮುಂದೆ ಓದಿ\

ಮದರಂಗಿ ಮತ್ತು ಗ್ರೀನ್ ಟೀ ಹೇರ್ ಮಾಸ್ಕ್

ಮದರಂಗಿ ಮತ್ತು ಗ್ರೀನ್ ಟೀ ಹೇರ್ ಮಾಸ್ಕ್

ತಲೆಬುರುಡೆಯಲ್ಲಿ ತುರಿಕೆ ಉಂಟಾಗಿದ್ದರೆ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಬೇಕಾದರೆ ಮದರಂಗಿ ಮತ್ತು ಗ್ರೀನ್ ಟೀ ಮಾಸ್ಕ್ ನಿಮಗೆ ನೆರವಾಗಲಿದೆ. ಈ ಮಾಸ್ಕ್ ಕೂದಲಿನ ಕಂಡೀಷನರ್ ಆಗಿ ಕೆಲಸ ಮಾಡಿ ನಯ ಹಾಗೂ ರೇಷ್ಮೆಯಂತಹ ಕೂದಲು ನೀಡುವುದು. ಎರಡು ಚಮಚ ಗ್ರೀನ್ ಟೀ ತೆಗೆದುಕೊಂಡು ಒಂದು ಕಪ್ ನೀರಿನಲ್ಲಿ ಕುದಿಸಿ. ಕೆಲವು ನಿಮಿಷ ಕುದಿಸಿದ ಬಳಿಕ ನೀರನ್ನು ಸೋಸಿ ತೆಗೆಯಿರಿ. ನೀರು ತಂಪಾಗಲು ಬಿಡಿ. 2-3 ಚಮಚ ಮದರಂಗಿ ಹುಡಿಯನ್ನು ಗ್ರೀನ್ ಟೀಯ ನೀರಿಗೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡ ಬಳಿಕ ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಂಪಾದ ನೀರಿನಿಂದ ಕೂದಲು ತೊಳೆಯಿರಿ.

ಮದರಂಗಿ ಮತ್ತು ಸಾಸಿವೆ ಎಣ್ಣೆ

ಮದರಂಗಿ ಮತ್ತು ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ ಮತ್ತು ಮದರಂಗಿಯ ಮಾಸ್ಕ್ ಕೂದಲಿನ ಬೆಳವಣಿಗೆ ಹಾಗೂ ಕೂದಲಿನ ಬುಡದಲ್ಲಿರುವ ಕಿರುಚೀಲಗಳನ್ನು ಬಲಗೊಳಿಸುತ್ತದೆ. ಒಂದು ಕಪ್ ಮದರಂಗಿ ಹುಡಿಗೆ ಸ್ವಲ್ಪ ಸಾಸಿವೆ ಎಣ್ಣೆ ಹಾಕಿಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಒಂದು ಚಮಚ ನಿಂಬೆ ರಸ ಮತ್ತು ಎರಡು ಚಮಚ ಮೊಸರು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕೂದಲಿಗೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಂಪಾದ ನೀರಿನಿಂದ ತೊಳೆಯಿರಿ.

ಮದರಂಗಿ ಮತ್ತು ಮೆಂತೆ ಕಾಳು

ಮದರಂಗಿ ಮತ್ತು ಮೆಂತೆ ಕಾಳು

ಮದರಂಗಿ ಮತ್ತು ಮೆಂತೆ ಕಾಳಿನ ಮಾಸ್ಕ್ ತಲೆಯಲ್ಲಿ ತಲೆಹೊಟ್ಟನ್ನು ತಡೆಯುತ್ತದೆ. ಮೆಂತ್ಯೆ ಕಾಳಿನಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಅಡಗಿವೆ. ಇದು ತಲೆಬುರುಡೆಯಲ್ಲಿರುವ ತಲೆಹೊಟ್ಟನ್ನು ನಿವಾರಣೆ ಮಾಡುವುದು. ಒಂದು ಕಪ್ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ರಾತ್ರಿ ನೆನೆಸಿಟ್ಟ ಮೆಂತೆ ಕಾಳುಗಳನ್ನು ಬೆಳಿಗ್ಗೆ ರುಬ್ಬಿಕೊಂಡು ಪೇಸ್ಟ್ ಮಾಡಿ.

ಮದರಂಗಿ ಮತ್ತು ಮೆಂತೆ ಕಾಳು

ಮದರಂಗಿ ಮತ್ತು ಮೆಂತೆ ಕಾಳು

ಇದಕ್ಕೆ ಒಂದು ಕಪ್ ಮದರಂಗಿ ಹುಡಿ ಹಾಕಿಕೊಳ್ಳಿ. ಸ್ವಲ್ಪ ಮೊಸರು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಸ್ವಲ್ಪ ಸಮಯ ಹಾಗೆ ಬಿಡಿ. ಈ ಮಾಸ್ಕ್ ನ್ನು ಕೂದಲಿಗೆ ಹಚ್ಚಿಕೊಂಡು 15 ನಿಮಿಷ ಬಿಟ್ಟು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.ಕಳೆಗುಂದಿದ ಮೆಹೆಂದಿ ಬಣ್ಣವನ್ನು ನಿವಾರಿಸಲು ಸರಳ ಟಿಪ್ಸ್

ಕೂದಲು ಉದುರುತ್ತಿದ್ದರೆ....

ಕೂದಲು ಉದುರುತ್ತಿದ್ದರೆ....

ಸ್ವಲ್ಪ ಸಾಸಿವೆ ಎಣ್ಣೆಯನ್ನು ಒಂದು ಬಾಣಲೆ ಅಥವಾ ಕಾವಲಿಯಲ್ಲಿ ಬಿಸಿಮಾಡಿ ಇದಕ್ಕೆ ಕೊಂಚ ಹಸಿ ಮೆಹೆಂದಿ ಎಲೆಗಳನ್ನು ಸೇರಿಸಿ. ಎಲೆಗಳು ಬಿಸಿಎಣ್ಣೆಯಲ್ಲಿ ಸೋಕಿದರೆ ಮಾತ್ರ ಸಾಕು, ಕುದಿಸುವ ಅಗತ್ಯವಿಲ್ಲ. ಎಲೆಗಳು ಕೊಂಚವೇ ಮುದುಡಿದ ಬಳಿಕ ಎಲೆಗಳಿಂದ ಹೆಚ್ಚುವರಿ ಎಣ್ಣೆಯನ್ನು ಹಿಂಡಿ ನಿವಾರಿಸಿ ತಣಿಯಲು ಬಿಡಿ. ತಣಿದ ಬಳಿಕ ನುಣ್ಣನೆ ಅರೆದು ತಲೆಗೂದಲಿಗೆ ನಿಯಮಿತವಾಗಿ ಹಚ್ಚಿಕೊಳ್ಳುತ್ತಾ ಬಂದರೆ ಕೂದಲು ಉದುರುವುದು ನಿಂತು ಬಕ್ಕತನ ಆವರಿಸುವುದರಿಂದ ರಕ್ಷಣೆ ಪಡೆಯಬಹುದು.

English summary

Different Henna Hair Masks That Can Help To Pamper Your Hair

Henna is a traditional ingredient that is used in India since ages. It has been regarded as the best natural ingredient that can help to pamper your hair in many ways. Henna is one among the versatile ingredients that helps to treat all kinds of scalp and hair-related issues. From conditioning your hair to treating hair damage and dry hair, henna hair masks have always been there to pamper your hair.
Subscribe Newsletter