ಇಂತಹ ಎಣ್ಣೆ ಕೂದಲಿಗೆ ಬಳಸಿ, ಕೂದಲು ಕಪ್ಪಾಗಿ, ಉದ್ದವಾಗಿ ಬೆಳೆಯುತ್ತೆ

By: Hemanth
Subscribe to Boldsky

ಕೂದಲನ್ನು ವಿವಿಧ ರೀತಿಯಿಂದ ವಿನ್ಯಾಸ ಮಾಡಿಕೊಂಡು ಅದಕ್ಕೆ ತಮಗೆ ಇಷ್ಟವಾದ ಬಣ್ಣ ಬಳಿಯುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಟ್ರೆಂಡ್ ಆಗಿದೆ. ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದರಿಂದ ಹಲವಾರು ರೀತಿಯ ರಾಸಾಯನಿಕಗಳು ನಿಮ್ಮ ಕೂದಲಿನ ಆರೋಗ್ಯವನ್ನು ಕೆಡಿಸಬಹುದು. ಎಷ್ಟೇ ಬಣ್ಣ ಬಳಿದರೂ ಸೌಂದರ್ಯದಲ್ಲಿ ಎದ್ದು ಕಾಣುವುದು ಕಪ್ಪು ಹಾಗೂ ಕಾಂತಿಯುತ ಕೂದಲು. ಕಪ್ಪು ಹಾಗೂ ಕಾಂತಿಯುತ ಕೂದಲನ್ನು ಪ್ರತಿಯೊಬ್ಬ ಮಹಿಳೆಯು ಇಂದಿನ ದಿನಗಳಲ್ಲಿ ಇಷ್ಟಪಡುತ್ತಾಳೆ. ಮಹಿಳೆಯರಿಗೆ ತಮ್ಮ ಸೌಂದರ್ಯ ತೋರಿಸಲು ಕಪ್ಪು ಹಾಗೂ ರೇಷ್ಮೆಯಂತೆ ಹೊಳೆಯುವ ಕೂದಲು ಬೇಕೇಬೇಕು.

ಆದರೆ ಇಂತಹ ಕೂದಲನ್ನು ಇಂದಿನ ದಿನಗಳಲ್ಲಿ ಪಡೆಯುವುದು ತುಂಬಾ ಕಠಿಣ ಸವಾಲು. ಕಲುಷಿತ ವಾತಾವರಣ, ಆರೈಕೆ ಹಾಗೂ ತಿನ್ನುವ ಆಹಾರ ಇತ್ಯಾದಿಗಳಿಂದ ಕೂದಲಿನ ಆರೋಗ್ಯವು ಕೆಡುವುದು. ಕೂದಲಿನ ಆರೈಕೆ ಮಾಡಲು ಕೆಲವೊಂದು ನೈಸರ್ಗಿಕ ಎಣ್ಣೆಗಳನ್ನು ಬಳಸಿಕೊಳ್ಳಬೇಕು. ಇದರಿಂದ ಕಪ್ಪು ಹಾಗೂ ಕಾಂತಿಯುತ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಕಪ್ಪು ಕೂದಲನ್ನು ಉಳಿಸಿಕೊಳ್ಳಲು ಕೆಲವೊಂದು ನೈಸರ್ಗಿಕ ಕೂದಲಿನ ಆರೈಕೆ ವಿಧಾನಗಳಿವೆ. ಇದನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ. ಇದನ್ನು ಬಳಸಿ, ಕಪ್ಪು ಹಾಗೂ ಕಾಂತಿಯುತ ಕೂದಲು ನಿಮ್ಮದಾಗಿಸಿಕೊಳ್ಳಿ.  

musturd oil

ಕಪ್ಪು ಕೂದಲಿನ ಆರೈಕೆಗೆ ಸಾಸಿವೆ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ

1. ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದನ್ನು ತಲೆಬುರುಡೆಗೆ ಸರಿಯಾಗಿ ಮಸಾಜ್ ಮಾಡಿದರೆ ಅದರಿಂದ ಕೂದಲಿನ ಬುಡಗಳಿಗೆ ಶಕ್ತಿ ಸಿಗುವುದು.

2. ಇದರ ಬಳಿಕ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳಿ.

3. ಕೂದಲನ್ನು ಕಟ್ಟಿಕೊಳ್ಳಿ ಮತ್ತು ಸುಮಾರು ಅರ್ಧದಿಂದ ಒಂದು ಗಂಟೆ ಕಾಲ ತಲೆಬುರುಡೆಯು ಎಣ್ಣೆಯನ್ನು ಹೀರಿಕೊಳ್ಳಲು ಬಿಡಿ. ಇದರ ಬಳಿಕ ಕೂದಲನ್ನು ಶಿಖಾಕಾಯಿ ಅಥವಾ ಶಾಂಪೂವಿನಿಂದ ತೊಳೆಯಿರಿ.

4. ಕೂದಲನ್ನು ತೊಳೆಯುವ ವೇಳೆ ವಾರದಲ್ಲಿ ಎರಡು ಅಥವಾ ಮೂರು ಸಲ ಈ ಕ್ರಮವನ್ನು ಪಾಲಿಸಿಕೊಂಡು ಹೋಗಿ.

5. ಸಾಸಿವೆ ಎಣ್ಣೆಯನ್ನು ಬಿಸಿ ಮಾಡುವಾಗ ಅದಕ್ಕೆ ಕೆಲವು ಕರಿಮೆಣಸಿನ ಕಾಳುಗಳನ್ನು ಹಾಕಿಕೊಂಡರೆ ಅದರಿಂದ ಕೂದಲು ದೀರ್ಘ ಕಾಲದವರೆಗೆ ಎಣ್ಣೆಯನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ಇದು ಶೀತಕ್ಕೂ ಒಳ್ಳೆಯದು. ಮೈಗ್ರೇನ್, ಅಸ್ತಮಾ ಮತ್ತು ಸಾಮಾನ್ಯ ಶೀತ ಇತ್ಯಾದಿಗಳಿಂದ ಬಳಲುವವರು ದೀರ್ಘ ಕಾಲದವರೆಗೆ ಎಣ್ಣೆಯನ್ನು ತಲೆಯಲ್ಲಿ ಇಟ್ಟುಕೊಳ್ಳಬಾರದು. ಹೊಳೆಯುವ ಕಪ್ಪಗಿನ ಕೂದಲಿಗೆ ಇದು ಅತ್ಯುತ್ತಮವಾಗಿರುವ ನೈಸರ್ಗಿಕ ಆರೈಕೆಯಾಗಿದೆ. ಇದು ದೇಹಕ್ಕೂ ತಂಪು ನೀಡುವುದು. 

Black hair

ಕರಿಬೇವಿನ ಎಲೆಗಳು

ಭಾರತೀಯರು ಪ್ರತಿನಿತ್ಯವೂ ತಮ್ಮ ಅಡುಗೆಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಆದರೆ ಇದು ತುಂಬಾ ಪರಿಣಾಮಕಾರಿ ಕೂದಲಿನ ಆರೈಕೆಯ ಸಾಮಗ್ರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

1. ಒಂದು ಬಾಣಲೆಗೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆ ಹಾಕಿ. ಅದಕ್ಕೆ ಒಂದಷ್ಟು ಕರಿಬೇವಿನ ಎಲೆಗಳನ್ನು ಹಾಕಿಕೊಳ್ಳಿ. ಇದನ್ನು ಗ್ಯಾಸ್ಮೇಲಿಟ್ಟು ಕಡಿಮೆ ಬೆಂಕಿಯಲ್ಲಿ ಕಾಯಿಸಿರಿ. ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿದಾಗ ಎಣ್ಣೆಯನ್ನು ಗ್ಯಾಸ್ ನಿಂದ ಕೆಳಗಿಳಿಸಿ.

2. ಇದನ್ನು ತಣ್ಣಗಾಗಲು ಬಿಡಿ.

3. ಸೋಸಿಕೊಂಡ ಬಳಿಕ ಬಾಟಲಿಗೆ ಹಾಕಿ.

4. ತೆಂಗಿನೆಣ್ಣೆಯನ್ನು ಪ್ರತಿನಿತ್ಯ ಬಳಸಬಹುದು. ಅದೇ ಸಾಸಿವೆ ಎಣ್ಣೆಯನ್ನು ಕೂದಲು ತೊಳೆಯುವ ಮೊದಲು ಬಳಸಿ. ದಿನನಿತ್ಯ ಬಳಸುವುದಾದರೆ ಸ್ವಲ್ಪ ಪ್ರಮಾಣದಲ್ಲಿ ಬಳಸಿ. ಯಾಕೆಂದರೆ ಇದರ ಘಾಟು ಹೆಚ್ಚಿರುತ್ತದೆ.

5. ಕೂದಲು ತೊಳೆಯುವ ಮೊದಲು ಈ ಎಣ್ಣೆಯು ತಲೆಯಲ್ಲಿ ಸುಮಾರು 30ರಿಂದ ಒಂದು ಗಂಟೆ ಕಾಲ ಹೀರಿಕೊಳ್ಳಲು ಬಿಡಿ. ನಿಯಮಿತವಾಗಿ ಇದನ್ನು ಬಳಸಿಕೊಳ್ಳುವುದರಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲದೆ ಒಳ್ಳೆಯ ರೀತಿಯಲ್ಲಿ ಬೆಳೆಯುವುದು. 

Oil for hair

ಎಕ್ಲಿಪ್ಟಾ ಆಲ್ಬಾ ಆಯಿಲ್(ಕರಿಸಲಾಂಕನ್ನಿ)

ಇದನ್ನು ಸಾಮಾನ್ಯವಾಗಿ ಫಾಲ್ಸಿ ಡೈಸಿ ಎಂದು ಕರೆಯುತ್ತಾರೆ. ತಮಿಳಿನಲ್ಲಿ ಇದನ್ನು ಕಿರಸಲಾಂಕನ್ನಿ ಎನ್ನಲಾಗುತ್ತದೆ. ಸಸ್ಯವಿಜ್ಞಾನದ ಪ್ರಕಾರ ಇದರ ಹೆಸರು ಎಕ್ಲಿಪ್ಟಾ ಆಲ್ಬಾ.

1. ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಬಾಣಲೆಗೆ ಹಾಕಿ. ಅದಕ್ಕೆ ಎಕ್ಲಿಪ್ಟಾ ಆಲ್ಬಾ ಎಲೆಗಳನ್ನು ಸೇರಿಸಿ. ಇದನ್ನು ಗ್ಯಾಸ್ ಮೇಲಿಟ್ಟು ಕಡಿಮೆ ಉರಿಯಲ್ಲಿ ಬಿಸಿ ಮಾಡಿ.

2. ಎಲೆಗಳು ಕಪ್ಪು ಆದಾಗ ಅದನ್ನು ಎಣ್ಣೆಯನ್ನು ಗ್ಯಾಸ್ ನಿಂದ ತೆಗೆಯಿರಿ.

3. ಇದು ತಣ್ಣಗಾಗಲು ಬಿಡಿ.

4. ಸೋಸಿಕೊಂಡು ಬಾಟಲಿಗೆ ಹಾಕಿಡಿ.

5. ನಿಯಮಿತವಾಗಿ ಇದನ್ನು ಬಳಸಿಕೊಳ್ಳುವವರು ತೆಂಗಿನೆಣ್ಣೆ ಬಳಸಿ. ಕೂದಲು ತೊಳೆಯುವ ಮೊದಲು ಬಳಸುವವರು ಸಾಸಿವೆ ಎಣ್ಣೆ ಬಳಸಿ.

6. ಇದನ್ನು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಂಡು ಅರ್ಧದಿಂದ ಒಂದು ಗಂಟೆ ಕಾಲ ಹೀರಿಕೊಳ್ಳಲು ಬಿಡಿ. ಇದು

ಕೂದಲಿಗೆ ಕಡು ಕಪ್ಪು ಬಣ್ಣವನ್ನು ನೀಡುವುದು. ನಿಯಮಿತವಾಗಿ ಬಳಸುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

ಕೂದಲಿಗೆ ಈ ನೈಸರ್ಗಿಕ ಆರೈಕೆಯನ್ನು ಬಳಸುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು ಎಂದು ಇದಾಗಲೇ ಸಾಬೀತಾಗಿದೆ.

English summary

Best Natural Hair Care-Hair Oils For Black Hair

While today's trend is to have coloured hair, shiny black hair, still demands its claim. To have shiny black hair is a challenge today, as hair loses its colour owing to many factors like weather conditions, lack of maintenance etc. Hair oils have ever been the natural way for hair care. Here are some natural hair care tips, hair oils, to retain the colour of the hair.
Story first published: Saturday, September 2, 2017, 10:43 [IST]
Subscribe Newsletter