Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲ ಕಾಂತಿಗೆ ಮೊಟ್ಟೆ ಹಾಗೂ ಆಲೀವ್ ಎಣ್ಣೆಯ ಚಿಕಿತ್ಸೆ
ಉದ್ದನೆಯ ಹೊಳೆಯುವ ಕೇಶರಾಶಿ ಪಡೆದುಕೊಳ್ಳುವುದು ಪ್ರತಿಯೊಬ್ಬ ಸ್ತ್ರೀಯ ಕನಸಾಗಿರುತ್ತದೆ. ಇದಕ್ಕಾಗಿ ಆಕೆ ಎಷ್ಟು ಬೇಕಾದರೂ ಖರ್ಚು ಮಾಡುವ ಸ್ಥಿತಿಯಲ್ಲಿರುತ್ತಾಳೆ. ಮಾರುಕಟ್ಟೆಯಲ್ಲಿ ದೊರೆಯುವ ತರೇಹವಾರಿ ಶಾಂಪೂ ಬಳಸುವುದಿರಬಹುದು, ಎಣ್ಣೆಗಳನ್ನು ಉಪಯೋಗಿಸುದಿರಬಹುದು ಆದರೆ ಫಲಿತಾಂಶ ಮಾತ್ರ ದೊರೆಯುವುದಿಲ್ಲವೆಂದು ಕೊರಗುವುದೇ ವ್ಯಥೆಯಾಗಿರುತ್ತದೆ.
ಇಷ್ಟೆಲ್ಲಾ ಬಳಕೆಗಳನ್ನು ನಿಮ್ಮ ಕೂದಲಿನ ಪೋಷಣೆಯಲ್ಲಿ ನೀವು ಮಾಡಿಯೂ ಕೂಡ ಏಕೆ ಫಲಿತಾಂಶವನ್ನು ಪಡೆಯಲಾಗುತ್ತಿಲ್ಲವೆಂದು ಚಿಂತಿಸುತ್ತಿದ್ದೀರಾ? ಏಕೆಂದರೆ ನೀವು ಮಾಡುವ ಪೋಷಣೆ ನಿಮ್ಮ ಕೂದಲಿನ ಬುಡವನ್ನು ತಲುಪದಿರುವುದೇ ಇದಕ್ಕೆ ಕಾರಣವಾಗಿದೆ. ಈ ಉತ್ಪನ್ನಗಳು ನಿಮ್ಮ ದುಡ್ಡನ್ನು ಪೋಲು ಮಾಡುತ್ತವೆಯೇ ವಿನಃ ನಿಮಗೆ ಫಲಪ್ರದವಾಗಿ ಕೆಲಸ ಮಾಡುವುದಿಲ್ಲ.

ಸರಿಯಾದ ಪೋಷಣೆ ಕೂದಲಿಗೆ ಸಿಗದಿರುವುದೇ ಇಲ್ಲಿ ನೀವು ಮಾಡುವ ತಪ್ಪಾಗಿದೆ. ಕೂದಲಿಗೆ ಚೆನ್ನಾಗಿ ಮಸಾಜ್ ಮಾಡುವುದು, ಎಣ್ಣೆ ಹಚ್ಚಿ ತಡವುದು, ನೈಸರ್ಗಿಕ ಹೇರ್ ಪ್ಯಾಕ್‌ಗಳನ್ನು ಬಳಕೆ ಮಾಡುವುದು ಹೀಗೆ ಕೂದಲಿನ ಕಾಳಜಿಯನ್ನು ನೈಸರ್ಗಿಕ ವಿಧಾಣದಲ್ಲಿ ನೀವು ಮಾಡಿದ್ದೇ ಆದರೆ ಪ್ರಯೋಜನ ಖಂಡಿತ ಸಿಕ್ಕೇ ಸಿಗುತ್ತದೆ. ಕೂದಲಿನ ಕಾಳಜಿ ನಿಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಪರಿಗಣಿತವಾದಾಗ ಮಾತ್ರವೇ ಅದನ್ನು ಚೆನ್ನಾಗಿ ಆರೈಕೆ ಮಾಡಲು ನಿಮ್ಮಿಂದ ಸಾಧ್ಯವಾಗುತ್ತದೆ. ಕೂದಲು ಉದ್ದವಾಗಿ ಬೆಳೆಯಲು ಪವರ್ ಫುಲ್ ಮನೆಮದ್ದು....
ಮೇಲೆ ನಾವು ತಿಳಿಸಿದಂತೆ ನೈಸರ್ಗಿಕ ಉತ್ಪನ್ನಗಳಲ್ಲಿ ಒಂದಾದ ಮೊಟ್ಟೆ ಮತ್ತು ಆಲೀವ್ ಆಯಿಲ್ ನಿಮ್ಮ ಕೂದಲಿಗೆ ಮಾಡುವ ಕಮಾಲನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ. ಈ ಅದ್ಭುತ ಹೇರ್ ಪ್ಯಾಕ್ ನಿಮ್ಮ ಕೂದಲಿಗೆ ಹೊಳೆಯುವ ಕಾಂತಿಯನ್ನು ನೀಡುವುದಲ್ಲದೆ ದಟ್ಟವಾದ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ. ಹಾಗಿದ್ದರೆ ಈ ಹೇರ್ ಪ್ಯಾಕ್ ತಯಾರಿ ಹೇಗೆ ಎಂಬುದನ್ನು ನೋಡೋಣ.
*ಮೊಟ್ಟೆಯ ಬಿಳಿ ಭಾಗ
*ಆಲೀವ್ ಆಯಿಲ್
*ಜೇನು
ಮಾಡುವ ವಿಧಾನ:
1. ಒಂದು ಪಾತ್ರೆಯಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು (ಎಗ್ ವೈಟ್) ಇದಕ್ಕೆ ಒಂದು ಚಮಚ ಆಲೀವ್ ಆಯಿಲ್ ಮತ್ತು ಒಂದು ಚಮಚ ಜೇನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
2. ಚೆನ್ನಾಗಿ ಕಲಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ.
3. ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಈ ಪೇಸ್ಟ್ ಅನ್ನು ಹಚ್ಚಿಕೊಳ್ಳಿ.
4.20 ನಿಮಿಷಗಳ ಕಾಲ ಈ ಪೇಸ್ಟ್ ನಿಮ್ಮ ಕೂದಲಿನಲ್ಲಿರಲಿ.
5.ತಣ್ಣಗಿನ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ.
6.ಮೊಟ್ಟೆಯ ಬಿಳಿ ಭಾಗದ ವಾಸನೆ ನಿವಾರಣೆಯಾಗಲು ಶಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ಕೂದಲಿನ ಸಮಸ್ಯೆಗೆ ಮೊಟ್ಟೆಯ ಶಾಂಪೂ ಬಳಸಿ ನೋಡಿ!
ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನುಸರಿಸಿ ಉತ್ತಮ ಫಲಿತಾಂಶವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇದಕ್ಕೆ ಹೆಚ್ಚಿನ ಸಮಯ ಕೂಡ ಬೇಕಾಗಿಲ್ಲ. ಥಟ್ ಅಂತ ಈ ಮೊಟ್ಟೆ ಆಲೀವ್ ಆಯಿಲ್ ರೆಸಿಪಿಯನ್ನು ನಿಮ್ಮ ಕೂದಲಿನ ಪೋಷಣೆಗಾಗಿ ಸಿದ್ಧಪಡಿಸಿಕೊಳ್ಳಬಹುದಾಗಿದೆ.
ಅಂತೆಯೇ ನೀವು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ನಿಮ್ಮ ಕೂದಲಿಗೆ ಬೇಕಾದ ಪ್ರೋಟೀನ್ ಮತ್ತು ವಿಟಮಿನ್‌ಗಳ ಪೂರೈಕೆಯನ್ನು ಮಾಡುತ್ತದೆ. ಕೂದಲಿಗೆ ನಿಯಮಿತವಾಗಿ ಎಣ್ಣೆ ಮಸಾಜ್ ಮಾಡಿ ಅಂತೆಯೇ ಹೇರ್ ಸ್ಟೈಲಿಂಗ್ ಪರಿಕರಗಳಾದ ಬ್ಲೊ ಡ್ರೈಯರ್ಸ್ ಮತ್ತು ಸ್ಟ್ರೇಟ್ನರ್‌ಗಳನ್ನು ಬಳಸದಿರಿ.



Click it and Unblock the Notifications

