For Quick Alerts
ALLOW NOTIFICATIONS  
For Daily Alerts

ಬಿಳಿಕೂದಲಿನ ಸಮಸ್ಯೆ- ಕಾರಣ ತಿಳಿದು, ಆರೈಕೆ ಶುರುಮಾಡಿ!

|

ತಲೆಯ ಮೇಲೆ ದಟ್ಟವಾದ ಮತ್ತು ಗಾಢವಾದ ಕಪ್ಪು ಕೂದಲು ರಾರಾಜಿಸುವುದು ಯಾರಿಗೆ ಬೇಕಿಲ್ಲ? ಆದರೆ ತಾರುಣ್ಯದ ದಿನಗಳುರುತ್ತಿದ್ದಂತೆಯೇ ಮಧ್ಯೆ ಮಧ್ಯೆ ಅಲ್ಲಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಸುಮಾರು ನಡುವಯಸ್ಸು ದಾಟಿದ ಮೇಲೆ ಕೂದಲು ಹಣ್ಣಾದರೆ ಹೆಚ್ಚಿನವರು ದೇವರು ಕೊಟ್ಟ ವರ ಎಂಬಂತೆ ಸಹಜವಾಗಿ ಸ್ವೀಕರಿಸಿ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಚಿಕ್ಕವಯಸ್ಸಿನಲ್ಲಿಯೇ ಕೂದಲು ನೆರೆದರೆ ಮಾತ್ರ ಆತಂಕ ಮನೆಮಾಡುವುದು ಸಹಜ. ಬಿಳಿಕೂದಲ ನಿವಾರಣೆ ಈಗ ತುಂಬಾ ಸುಲಭ

ಅಸಹಜವಾದ ವಯಸ್ಸಿನಲ್ಲಿ ಕೂದಲು ನೆರೆಯಲು ನಮ್ಮ ದಿನಂಪ್ರತಿಯ ಚಟುವಟಿಕೆ, ಆಹಾರ ಮತ್ತು ಅಭ್ಯಾಸಗಳು ಉದಾಹರಣೆಗೆ ಧೂಮಪಾನ, ಅಸಮರ್ಪಕ ಆಹಾರ, ನಿದ್ದೆ, ಒತ್ತಡ, ಆರೈಕೆಯ ಕೊರತೆ ಮೊದಲಾದವು ಅರ್ಧ ಭಾಗ ಕಾರಣವಾದರೆ ಇನ್ನರ್ಧ ಭಾಗ ದೇಹದಲ್ಲಿ ಆಗುವ ಬದಲಾವಣೆಗಳ ಮೂಲಕ, ಉದಾಹರಣೆಗೆ ವಿಟಮಿನ್ ಕೊರತೆ, ಹಾರ್ಮೋನುಗಳ ಏರುಪೇರು, ಬೇಗನೇ ಆಗಮಿಸಿದ ರಜೋ ನಿವೃತ್ತಿ ಕಾಲ ಮೊದಲಾದವುಗಳಿಂದ ಪಡೆಯುವಂತಹದ್ದಾಗಿದೆ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಹಲವು ಮಹತ್ವದ ಮಾಹಿತಿಗಳನ್ನು ನೀಡುತ್ತಿದೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ... ಬಿಳಿಕೂದಲಿನ ಸಮಸ್ಯೆಯ ಕಿರಿಕಿರಿ, ಮನೆಮದ್ದೇ ಸರಿ!

ಥೈರಾಯ್ಡ್ ಗ್ರಂಥಿಯ ಕಾಯಿಲೆ

ಥೈರಾಯ್ಡ್ ಗ್ರಂಥಿಯ ಕಾಯಿಲೆ

ಕೂದಲು ನೆರೆಯಲು ಪ್ರಮುಖ ಕಾರಣ ಥೈರಾಯ್ಡ್ ಗ್ರಂಥಿಯಾಗಿದೆ. ಒಂದು ವೇಳೆ ಈ ಗ್ರಂಥಿಯಿಂದ ಸ್ರವಿತವಾದ ರಸದೂತಗಳ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾದರೂ ಹೆಚ್ಚಾದರೂ ಕೂದಲು ಬಿಳಿಯಾಗುವುದು ಸಂಶೋಧನೆಗಳಿಂದ ಕಂಡುಬಂದಿದೆ. ಹಾಗಾಗಿ ನಿಯಮಿತ ಸಮಯದಲ್ಲಿ ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆಯನ್ನು ಸೂಕ್ತ ಪರೀಕ್ಷೆಗಳಿಂದ ತಾಳೆನೋಡುತ್ತಿದ್ದು ಅಗತ್ಯ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯುವುದರಿಂದ ಕೂದಲು ಬೇಗನೇ ಹಣ್ಣಾಗುವುದನ್ನು ತಪ್ಪಿಸಬಹುದು.

ವಿಟಮಿನ್ ಬಿ12 ಕೊರತೆ

ವಿಟಮಿನ್ ಬಿ12 ಕೊರತೆ

ನಿಮ್ಮ ಆಹಾರದ ಮೂಲಕ ಅಗತ್ಯವಿದ್ದಷ್ಟು ಪ್ರಮಾಣದ ವಿಟಮಿನ್ ಬಿ12 (ಅಥವಾ ಕೋಬಾಲಾಮಿನ್ -Cobalamin)ಪೋಷಕಾಂಶ ಲಭ್ಯವಾಗದೇ ಇದ್ದರೆ ಕೂದಲು ನೆರೆಯುವ ಸಂಭವ ಹೆಚ್ಚಾಗಿದೆ. ಕೂದಲ ಪೋಷಣೆಗೆ ವಿಟಮಿನ್ ಬಿ12 ಜೊತೆಗೇ ಸತು ಮತ್ತು ತಾಮ್ರಗಳೂ ಅವಶ್ಯವಾಗಿವೆ.

ವಿಟಮಿನ್ ಬಿ12 ಕೊರತೆ

ವಿಟಮಿನ್ ಬಿ12 ಕೊರತೆ

ಹಾಗಾಗಿ ಕೂದಲ ಆರೈಕೆಗೆ ವಿಟಮಿನ್ ಬಿ12 ಧಾರಾಳವಾಗಿರುವ ಆಹಾರಗಳನ್ನು ಸೇವಿಸುವುದು ಅಗತ್ಯವಾಗಿದೆ. ಸಾಗರ ಉತ್ಪನ್ನಗಳು, ಮೀನು, ಏಕದಳ ಧಾನ್ಯಗಳು, ಮಾಂಸ, ಹಾಲು, ಚೀಸ್, ಮೊಟ್ಟೆಗಳು ಮೊದಲಾದವುಗಳಲ್ಲಿ ಈ ಪೋಷಕಾಂಶಗಳಿರುವುದರಿಂದ ಸೂಕ್ತ ಪ್ರಮಾಣದ ಸೇವನೆ ಕೂದಲು ನೆರೆಯುವುದನ್ನು ತಡೆಯುತ್ತದೆ.

ಆನುವಂಶೀಯವಾಗಿ ಬರುವ ಸಾಧ್ಯತೆ

ಆನುವಂಶೀಯವಾಗಿ ಬರುವ ಸಾಧ್ಯತೆ

ಈ ತೊಂದರೆ ಆನುವಂಶಿಕವಾಗಿಯೂ ಬರುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ನಿಮ್ಮ ತಂದೆ ಅಥವಾ ತಾಯಿಯ ಮನೆಯವರಲ್ಲಿ ಈ ತೊಂದರೆ ಕಾಣಿಸಿದ್ದರೆ ನಿಮಗೂ ಈ ತೊಂದರೆ ಬರುವ ಸಾಧ್ಯತೆ ಹೆಚ್ಚಾಗಿದೆ.

ಧೂಮಪಾನ

ಧೂಮಪಾನ

ಯಾವುದೇ ಅಂಗಕ್ಕೂ ಒಳ್ಳೆಯದಲ್ಲದ ಧೂಮಪಾನ ನಿಮ್ಮ ಕೂದಲಿಗೂ ಹಾನಿಕಾರಕವಾಗಿದೆ. ಧೂಮಪಾನದಿಂದ ರಕ್ತದಲ್ಲಿ ಫ್ರೀ ರ್‍ಯಾಡಿಕಲ್ ಎಂಬ ವಿಷವಸ್ತು ರಕ್ತವನ್ನು ಪ್ರವೇಶಿಸಿ ಮೆಲನಿನ್ ಉತ್ಪಾದನೆಗೆ ಧಕ್ಕೆಯುಂಟುಮಾಡುತ್ತದೆ. ಪರಿಣಾಮವಾಗಿ ಸಾಕಷ್ಟು ಪ್ರಮಾಣದಲ್ಲಿ ಮೆಲನಿನ್ ಇಲ್ಲದೇ ಕೂದಲು ಬಿಳಿಯಾಗಿ ಬೆಳೆಯುತ್ತದೆ.

ಒತ್ತಡ

ಒತ್ತಡ

ಮಾನಸಿಕ ಒತ್ತಡ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುವಂತೆಯೇ ಕೂದಲ ಬಣ್ಣಕ್ಕೂ ಮಾರಕವಾಗಿದೆ. ಅಲ್ಲದೇ ಕೂದಲ ಉದುರುವಿಕೆಗೂ ಕಾರಣವಾಗಿದೆ. ಮಾನಸಿಕ ಆಘಾತ, ದುಃಖ, ಕಳವಳ ಮೊದಲಾದವು ರಕ್ತದಲ್ಲಿನ ರಸದೂತಗಳ ಪ್ರಮಾಣಗಳನ್ನು ಏರುಪೇರು ಮಾಡಿ ಮೆಲನಿನ್ ಉತ್ಪಾದನೆಯನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಕೂದಲು ನೆರೆಯತೊಡಗುತ್ತದೆ.

ಅಸಮರ್ಪಕ ಆಹಾರ

ಅಸಮರ್ಪಕ ಆಹಾರ

ನಿಮ್ಮ ಆಹಾರ ಸಂತುಲಿತವಾಗಿರಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಈ ಬಗ್ಗೆ ನಾವು ಗಮನ ನೀಡುವುದು ಕಡಿಮೆ. ಏಕೆಂದರೆ ನಾವೆಲ್ಲಾ ತೊಂದರೆ ಆವರಿಸುವವರೆಗೂ ರಕ್ಷಣೆಯನ್ನು ಮುಂದೂಡುವ ಸ್ವಭಾವದವರು. ಸಂತುಲಿತ ಆಹಾರದಲ್ಲಿ ನಾವು ಇಷ್ಟಪಡದ ಆಹಾರಗಳಿದ್ದರೂ ಅನಿವಾರ್ಯವಾಗಿ ಸೇವಿಸುವುದು ಅಗತ್ಯವಾಗಿದೆ. ಇದರಿಂದ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ಲಭ್ಯವಾಗಿ ಆರೋಗ್ಯದೊಂದಿಗೇ ಕೂದಲು ನೆರೆಯುವುದನ್ನೂ ತಡೆಗಟ್ಟಬಹುದು.

ಬೇಗನೇ ರಜೋನಿವೃತ್ತಿ ಕಾಲ ಬರುವುದು

ಬೇಗನೇ ರಜೋನಿವೃತ್ತಿ ಕಾಲ ಬರುವುದು

ತಮ್ಮ ಜೀವಿತಾವಧಿಯಲ್ಲಿ ಬೇಗನೇ ರಜೋನಿವೃತ್ತಿ ಪಡೆದ ಮಹಿಳೆಯರು ಈ ತೊಂದರೆಗೆ ಹೆಚ್ಚು ಒಳಗಾಗುತ್ತಾರೆ. ಇದರ ಆರೈಕೆಗೆ ವೈದ್ಯರ ಸಲಹೆ ಮೇರೆ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ.


English summary

What Causes Gray Hair - Surprising Facts About Gray Hair

Some lifestyle causes of premature greying are smoking, faulty diet, stress and unhealthy hair care methods. Other grey hair reasons are Vitamin B12 deficiency, hormonal imbalance and early menopause. As a person ages, the capability to synthesise the normal amount of melanin pigment (responsible for giving black colour to the hair) declines. This ultimately results in grey or whitening of hair. You must be aware of causes of grey hair so that you can take effective treatments..
Story first published: Monday, September 14, 2015, 15:51 [IST]
X
Desktop Bottom Promotion