Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತಲೆಹೊಟ್ಟಿಗೆ ಗುಡ್ ಬೈ ಹೇಳುವ ಎಣ್ಣೆಗಳು
ತಲೆ ಹೊಟ್ಟು ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ತಲೆಹೊಟ್ಟಿನ ಸಮಸ್ಯೆ ಸಾಧಾರಣ ಸಮಸ್ಯೆಯಾದರೂ ಇದರಿಂದ ಅನುಭವಿಸಬೇಕಾದ ತೊಂದರೆ ಮಾತ್ರ ಸಾಧಾರಣವಾದದ್ದು ಅಲ್ಲ. ತಲೆಹೊಟ್ಟು ಇದ್ದರೆ ತಲೆ ತುರಿಕೆ, ಕೂದಲು ಉದುರುವುದು, ತಲೆಯಲ್ಲಿ ಚಿಕ್ಕ-ಚಿಕ್ಕ ಗುಳ್ಳೆಗಳು ಏಳುವುದು, ಹಣೆಯಲ್ಲಿ ಮೊಡವೆ ಮುಂತಾದ ಸಮಸ್ಯೆ ಕಂಡು ಬರುವುದು.
ತಲೆಹೊಟ್ಟಿನ ಪರಿಹಾರಕ್ಕೆ ಕೆಮಿಕಲ್ ಇರುವ ಶ್ಯಾಂಪೂ ಬಳಸುವ ಬದಲು ಎಣ್ಣೆ ಮಸಾಜ್ ಮಾಡಿದರೆ ತಲೆಹೊಟ್ಟು ಕಡಿಮೆಯಾಗುವುದು. ಅದರಲ್ಲೂ ಈ ಕೆಳಗಿನ ಎಣ್ಣೆಗಳು ತಲೆಹೊಟ್ಟನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ:

ಟೀ ಟ್ರೀ ಎಣ್ಣೆ
ತಲೆಹೊಟ್ಟನ್ನು ನಿವಾರಿಸುವಲ್ಲಿ ಈ ಎಣ್ಣೆ ಪರಿಣಾಮಕಾರಿಯಾಗಿದೆ. ಇದರಲ್ಲಿರುವ ಆಂಟಿ ಸೆಪ್ಟಿಕ್ ಗುಣ ತಲೆ ತುರಿಕೆ, ಗುಳ್ಳೆಗಳು ಏಳುವುದನ್ನು ತಡೆಗಟ್ಟುತ್ತದೆ.

ರೋಸ್ ಮೆರಿ ಎಣ್ಣೆ
ಇದು ತಲೆಹೊಟ್ಟನ್ನು ನಿವಾರಣೆ ಮಾಡುವುದು ಮಾತ್ರವಲ್ಲ, ಕೂದಲು ಸೊಂಪಾಗಿ ಬೆಳೆಯುವಲ್ಲಿಯೂ ಸಹಕಾರಿ. ಇದನ್ನು ತಲೆಗೆ ಹಚ್ಚುವ ಇತರ ಎಣ್ಣೆಯ ಜೊತೆ ಮಿಕ್ಸ್ ಮಾಡಿ ಹಚ್ಚಿ.

ಲ್ಯಾವೆಂಡರ್ ಎಣ್ಣೆ
ತುಂಬಾ ತಲೆ ತುರಿಕೆ ಇದ್ದರೆ 15-29 ಹನಿ ಲ್ಯಾವೆಂಡರ್ ಎಣ್ಣೆಯನ್ನು ಬಾದಾಮಿ ಎಣ್ಣೆ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ತಲೆಹೊಟ್ಟು ಕಡಿಮೆಯಾಗುವುದು.

ಪುದೀನಾ ಎಣ್ಣೆ
ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿದಾಗ ತುಂಬಾ ತಣ್ಣನೆಯ ಅನುಭವ ಉಂಟಾಗುತ್ತದೆ. ಇದು ತಲೆ ತುರಿಕೆಯನ್ನು ಕಮ್ಮಿ ಮಾಡುತ್ತದೆ, ತಲೆಗೆ ತಂಪಾದ ಹಿತಾನುಭವವನ್ನು ನೀಡುತ್ತದೆ ಹಾಗೂ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿಯನ್ನು ನೀಡುವುದು.

ಕ್ಯಮೊಮೈಲ್ ಎಣ್ಣೆ
ಬೇಬಿ ಆಯಿಲ್ ಜೊತೆ ಕ್ಯಮೊಮೈಲ್ ಆಯಿಲ್ ಮಿಕ್ಸ್ ಮಾಡಿ ತಲೆಗೆ ಮಸಾಜ್ ಮಾಡಿ, ಅರ್ಧ ಗಂಟೆಯ ಬಳಿಕ ಮೈಲ್ಡ್ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ಈ ರೀತಿ ಮಾಡುವುದರಿಂದಲೂ ತಲೆಹೊಟ್ಟನ್ನು ಹೋಗಲಾಡಿಸಬಹುದು.

ನೀಲಗಿರಿ ಎಣ್ಣೆ
7-8 ಹನಿ ನೀಲಗಿರಿ ಎಣ್ಣೆಯನ್ನು ನೀವು ತಲೆಗೆ ಬಳಸುವ ಎಣ್ಣೆ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ, ಇದು ತಲೆ ಕೆರೆದಾಗ ಆದ ಗಾಯವನ್ನು ಒಣಗಿಸುತ್ತದೆ ಹಾಗೂ ತಲೆ ತುರಿಕೆಯನ್ನು ಕಮ್ಮಿ ಮಾಡುತ್ತದೆ.
ಮಕ್ಕಳಲ್ಲಿ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ಇಲ್ಲಿ ನೋಡಿ.



Click it and Unblock the Notifications
