Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಮಕ್ಕಳ ತಲೆಹೊಟ್ಟು ಸಮಸ್ಯೆಯ ನಿವಾರಣೆ

ಮಕ್ಕಳಿಗೆ ತಲೆಹೊಟ್ಟು ಬಂದರೆ ದೊಡ್ಡವರಿಗೆ ಬಳಸುವ ಶ್ಯಾಂಪೂನಿಂದ ತಲೆ ತೊಳೆಯಬಾರದು, ಇದರಿಂದ ಮಕ್ಕಳ ತಲೆಕೂದಲು ಉದುರಲು ಆರಂಭಿಸುತ್ತವೆ.
ಮಕ್ಕಳ ತಲೆಹೊಟ್ಟು ನಿವಾರಣೆಗೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ:
1. ಸ್ನಾನ ಮಾಡಿಸುವ ಮೊದಲು ತಲೆಗೆ ಚೆನ್ನಾಗಿ ಎಣ್ಣೆ ಹಾಕಿ ಮಸಾಜ್ ಮಾಡಬೇಕು.
2.ಎಣ್ಣೆ ಹೋಗಿಸಲು ತಲೆಯನ್ನು ಶ್ಯಾಂಪೂ ಹಾಕಿ ಚೆನ್ನಾಗಿ ತಿಕ್ಕುವುದರಿಂದ ಪುನಃ ಕೂದಲಿನ ಬುಡ ಒಣಗಿ ಹೊಟ್ಟು ಉಂಟಾಗುತ್ತದೆ, ಅದರ ಬದಲು ಹರ್ಬಲ್ ಶ್ಯಾಂಪೂವನ್ನು ಬಳಸಿ.
3.ತಲೆಗೆ ವಾರಕ್ಕೊಮ್ಮೆ ಮೊಸರು, ಮೆಂತೆ ಹಾಕಿ ಒಂದು ಗಂಟೆ ಬಿಟ್ಟು ತಲೆತೊಳೆಯುವುದರಿಂದ ಇಂತಹ ಸಮಸ್ಯೆಗಳ ನಿವಾರಣೆಗೆ ಒಳ್ಳೆಯದಲ್ಲದೆ, ಕೂದಲು ಸೊಂಪಾಗಿ ಬೆಳೆಯುತ್ತದೆ.
4.ಮಕ್ಕಳಿಗಾಗಿಯೆ ತಲೆಹೊಟ್ಟು ನಿವಾರಣೆಯ ಶ್ಯಾಂಪೂ ದೊರೆಯುತ್ತದೆ, ಅದನ್ನು ಸಹ ಬಳಸಬಹುದು.
5. ತಲೆಯಲ್ಲಿ ತುರಿಕೆಯಿಂದ ಗಾಯ ಉಂಟಾದರೆ ಬೀವಿನ ಎಣ್ಣೆ ಹಾಕಬಹುದು, ಅಥವಾ ವೈದ್ಯರಿಗೆ ತೋರಿಸುವುದು ಒಳ್ಳೆಯದು.
6.ಎಣ್ಣೆ ಹಾಕಿದ ನಂತರ ತಲೆ ಬಾಚುವುದರಿಂದ ರಕ್ತ ಸಂಚಲ ಹೆಚ್ಚಾಗಿ ಕೂದಲಿಗೆ ಆರೈಕೆ ದೊರೆಯುತ್ತದೆ.
7. ಮಕ್ಕಳಿಗೆ ಬಿಗಿಯಾಗಿ ಜಡೆ ಅಥವಾ ಜುಟ್ಟು ಹಾಕಬಾರದು.
ಈ ಸಲಹೆಗಳು ಮಕ್ಕಳ ಕೂದಲ ಪೋಷಣೆಗೆ ಸಹಕಾರಿಯಾಗುತ್ತವೆ.



Click it and Unblock the Notifications
