For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಈ ರೀತಿಯಲ್ಲಿ ಕೇಶ ವಿನ್ಯಾಸ ಮಾಡಬೇಡಿ

|

ಮಳೆಗಾಲದಲ್ಲಿ ಮೇಕಪ್ ಬಗ್ಗೆ ಮಾತ್ರವಲ್ಲ, ಕೂದಲಿನ ವಿನ್ಯಾಸ ಹೇಗಿರಬೇಕೆಂದು ತಿಳಿದಿರುವುದು ಒಳ್ಳೆಯದು. ಸ್ಟೈಲೀಷ್ ಹೇರ್ ಸ್ಟೈಲ್ ಏನಿದ್ದರೂ ಬೇಸಿಗೆ, ಚಳಿಗಾಲಕ್ಕೆ ಬೆಸ್ಟ್. ಮಳೆಗಾಲದಲ್ಲಿ ಕೂದಲು ಎಣ್ಣೆಯಾಗಿ, ಒಂಥರಾ ಅಂಟು, ಅಂಟಾಗುವುದು. ಆದ್ದರಿಂದಲೇ ಪ್ರತೀದಿನ ತಲೆ ಸ್ನಾನ ಮಾಡುವುದು ಒಳ್ಳೆಯದು. ಇಲ್ಲಿ ನಾವು ಮಳೆಗಾಲಕ್ಕೆ ಯಾವ ಹೇರ್ ಸ್ಟೈಲ್ ಸೂಕ್ತ, ಯಾವ ಹೇರ್ ಸ್ಟೈಲ್ ಸೂಕ್ತವಲ್ಲ ಎಂಬ ಟಿಪ್ಸ್ ನೀಡಿದೇವೆ ನೋಡಿ:

ಮಳೆಗಾಲದಲ್ಲಿ ಮುಖ್ಯವಾಗಿ ನಮ್ಮ ಹೇರ್ ಸ್ಟೈಲ್ ಹೇಗಿರಬೇಕೆಂದರೆ ಒಂದು ವೇಳೆ ಕೂದಲು ಒದ್ದೆಯಾದರೆ ಬಿಚ್ಚಿ, ಸುಲಭವಾಗಿ ಒಣಗಿಸುವಂತೆ ಇರಬೇಕು. ಸಡಿಲವಾದ ಜುಟ್ಟು, ಜಡೆ ಬೆಸ್ಟ್. ಈ ಕೆಳಗೆ ಚಿತ್ರದಲ್ಲಿ ತೋರಿಸಿದ ಫ್ಯಾಷನಬಲ್ ಹೇರ್ ಸ್ಟೈಲ್ ಗಳನ್ನು ಮಳೆಗಾಲ ಕಳೆದ ಬಳಿಕ ಮಾಡುವುದು ಒಳ್ಳೆಯದು.

 Beehive ಹೇರ್ ಸ್ಟೈಲ್

Beehive ಹೇರ್ ಸ್ಟೈಲ್

ಇದನ್ನು Beehive ಹೇರ್ ಸ್ಟೈಲ್ ಎಂದು ಕರೆಯುತ್ತಾರೆ. ಪಫ್ ರೀತಿ ಮಾಡಿ ಮಾಚುವ ಈ ಹೇರ್ ಸ್ಟೈಲ್ ಅನ್ನು ಮಳೆಗಾಲದಲ್ಲಿ ಟ್ರೈ ಮಾಡಿದರೆ ಸರಿಯಾಗಿ ಪಫ್ ಬರುವುದಿಲ್ಲ. ಆದ್ದರಿಂದ ಇದನ್ನು ಈ ಸಮಯದಲ್ಲಿ ಟ್ರೈ ಮಾಡಬೇಡಿ.

ಸಹಸ್ರ ಜಡೆ

ಸಹಸ್ರ ಜಡೆ

ಈ ರೀತಿಯ ಜಡೆಯನ್ನು ಕೆಲವರು ಸಹಸ್ರ ಜಡೆ ಎಂದು ಕರೆದರೆ ಮತ್ತೆ ಕೆಲವರು ಫಿಶ್ ಟೇಲ್ ಬ್ರೈಡ್ ಎಂದು ಕರೆಯುತ್ತಾರೆ. ಇದು ನೋಡಲು ಆಕರ್ಷಕವಾಗಿ ಕಂಡರು ಒದ್ದೆಯಾದರೆ ನಿಮ್ಮ ಕೂದಲಿನ ಲುಕ್ ಹಾಳಾಗುವುದು ಅಲ್ಲದೆ ಜಡೆಯನ್ನು ಬಿಚ್ಚುವುದು ಕೂಡ ಕಷ್ಟವಾಗುವುದು.

ಸ್ಟೈಲೀಷ್ ತುರುಬು

ಸ್ಟೈಲೀಷ್ ತುರುಬು

ಮುಂದುಗಡೆ ಕಟ್ ಕೂದಲನ್ನು ಬಿಟ್ಟು ಎತ್ತಿ ಕಟ್ಟುವ ತುರುಬು ತುಂಬಾ ಫ್ಯಾಷನಬಲ್ ಲುಕ್ ನೀಡಿದರೂ ಮಳೆಗಾಲಕ್ಕೆ ಸೂಕ್ತವಾದ ಹೇರ್ ಸ್ಟೈಲ್ ಇದಲ್ಲ.

 ಜಡೆ ಹಾಕಿ ಕಟ್ಟುವ ತುರುಬು

ಜಡೆ ಹಾಕಿ ಕಟ್ಟುವ ತುರುಬು

ಉದ್ದ ಕೂದಲಿನವರು ಜಡೆ ಹಾಕಿ, ಈ ರೀತಿ ತುರುಬನ್ನು ಕಟ್ಟಬಹುದು. ಇದು ತುಂಬಾ ಕಂಫರ್ಟ್ ಆದ ಹೇರ್ ಸ್ಟೈಲ್ ಆದರೂ ಮಳೆಯಲ್ಲಿ ನೆನೆಯುವುದಾದರೆ ಈ ಹೇರ್ ಸ್ಟೈಲ್ ಬೇಡ. ಏಕೆಂದರೆ ಕೂದಲು ಒದ್ದೆಯಾದರೆ ಬಿಚ್ಚಲು ಹರಸಾಹಸ ಮಾಡಬೇಕಾಗುತ್ತದೆ.

ಸೆಕ್ಸಿ ಹೇರ್ ಸ್ಟೈಲ್

ಸೆಕ್ಸಿ ಹೇರ್ ಸ್ಟೈಲ್

ಗುಂಗುರು ಬಾಬ್ ಕೂದಲನ್ನು ಈ ರೀತಿ ಬಾಚಿದರೆ ಸೆಕ್ಸಿಯಾಗಿ ಕಂಡರೂ ಒದ್ದೆಯಾದರೆ ಲುಕ್ ಸಂಪೂರ್ಣವಾಗಿ ಹಾಳಾಗುವುದು. ಆದ್ದರಿಂದ ಈ ಹೇರ್ ಸ್ಟೈಲ್ ಮಾಡಿದರೆ ಕೂದಲು ಒದ್ದೆಯಾಗದಂತೆ ಎಚ್ಚರವಹಿಸಿ.

ಸ್ಟೈಲೀಶ್ ಕ್ಲಿಪ್

ಸ್ಟೈಲೀಶ್ ಕ್ಲಿಪ್

ಕೂದಲಿಗೆ ಆಕರ್ಷಕ ಕ್ಲಿಪ್ ಗಳನ್ನು ಹಾಕಿದರೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಮಳೆಗಾಲದಲ್ಲಿ ಅವುಗಳನ್ನು ಬಳಸಿ, ಅವಕ್ಕೆ ಸ್ವಲ್ಪ ನೀರು ತಾಗಿದರೆ ತುಕ್ಕು ಹಿಡಿಯಬಹುದು. ಆದ್ದರಿಂದ ನಿಮ್ಮ ಮೆಚ್ಚಿನ ಕ್ಲಿಪ್ ಗಳನ್ನು ಮಳೆಗಾಲದಲ್ಲಿ ಜೋಪಾನವಾಗಿ ಮೇಕಪ್ ಕಿಟ್ ನಲ್ಲಿ ಎತ್ತಿಡುವುದು ಒಳ್ಳೆಯದು.

 ಸೆಟ್ ಮಾಡಿದ ಹೇರ್ ಸ್ಟೈಲ್

ಸೆಟ್ ಮಾಡಿದ ಹೇರ್ ಸ್ಟೈಲ್

ಮಳೆಗಾಲದಲ್ಲಿ ಹೇರ್ ಸೆಟ್ ಮಾಡಿಸದಿರುವುದು ಒಳ್ಳೆಯದು. ಹೇರ್ ಸೆಟ್ ಮಾಡಿಸಿ, ಕೂದಲು ಒದ್ದೆಯಾದರೆ ಅದರ ಲುಕ್ ಹಾಳಾಗುತ್ತದೆ.

 ಓಪನ್ ಹೇರ್

ಓಪನ್ ಹೇರ್

ಕೂದಲನ್ನು ಗಾಳಿಗೆ ಹಾರಾಡಲು ಬಿಡುವುದು ಕೂಡ ಒಳ್ಳೆಯದಲ್ಲ, ಈ ರೀತಿ ಬಿಟ್ಟರೆ ಕೂದಲು ಬೇಗನೆ ಒದ್ದೆಯಾಗಿ, ಸರಿಯಾಗಿ ಒಣಗದೆ ವಾಸನೆ ಬರುವುದು. ಆದ್ದರಿಂದ ಮನೆಯಿಂದ ಹೊರಗಡೆ ಹೋಗುವಾಗ ಈ ಹೇರ್ ಸ್ಟೈಲ್ ಸದ್ಯಕ್ಕೆ ಬೇಡ.

ಮೆಸ್ಸಿ ಲುಕ್

ಮೆಸ್ಸಿ ಲುಕ್

ಮೆಸ್ಸಿ ಲುಕ್ ನೋಡಲು ಸೆಕ್ಸಿ ಆಗಿ ಕಾಣಿಸಿದರೂ ಸ್ವಲ್ಪ ಒದ್ದೆಯಾದರೂ ಮೆಸ್ಸಿ ಲುಕ್ ಹಾಳಾಗಿ ತಲೆಯೇ ಬಾಚದ ಲುಕ್ ಬರುವುದು. ಆದ್ದರಿಂದ ಮಳೆಗಾಲದಲ್ಲಿ ಸರಳವಾದ ಹೇರ್ ಸ್ಟೈಲ್ ಬೆಸ್ಟ್.

English summary

Complex Hairstyles To Avoid In Monsoon

During monsoons, whatever makeup you try gets drenched once you are exposed to the rain. Even humidity can make your hair become oily one day after washing. So, it is very important to try simple hairstyles that are not tricky and easy to care for.ಟ
X
Desktop Bottom Promotion