For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೆ ಕೇಶವನ್ನು ಗುಂಗುರು ಮಾಡುವ ವಿಧಾನ

|
Curl Hair
ಮೃದುವಾದ , ಸೊಂಪಾದ ಗುಂಗುರು ಕೂದಲು ಗಾಳಿಯಲ್ಲಿ ಲಾಸ್ಯವಾಡುತ್ತಿದ್ದರೆ ಅದು ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕವಿಗಳು ಹೆಣ್ಣಿನ ಸೌಂದರ್ಯದ ಕುರಿತು ಹೇಳುವಾಗ ಗುಂಗುರು ಕೂದಲಿನ ವರ್ಣನೆ ಕಾಣಬಹುದು. ಇಂತಹ ಗುಂಗುರು ಕೂದಲು ಕೆಲವೊಂದು ಪಾರ್ಟಿಗಳಿಗೆ ಹೋಗುವಾಗ ಮಾಡಿದರೆ ಅದು ನಿಮಗೆ ಸ್ಪೆಷಲ್ ಲುಕ್ ಕೊಡುತ್ತದೆ.

ಈ ರೀತಿಯ ಗುಂಗುರು ಕೂದಲನ್ನು ಮಾಡಲು ನೀವೇನು ಪಾರ್ಲರ್ ಗೆ ಹೋಗಬೇಕಾಗಿಲ್ಲ ಮನೆಯಲ್ಲೇ ಮಾಡಬಹುದು . ಮಾಡುವ ವಿಧಾನ ನೋಡಿ ಹೀಗಿದೆ.

1. ಶ್ಯಾಂಪುವಿನಿಂದ ತಲೆ ಕೂದಲನ್ನು ತೊಳೆದ ಬಳಿಕ ಕೂದಲನ್ನು ಒಣಗಿಸಿ ನಂತರ ಬಾಚಣೆಯಿಂದ ತಲೆಕೂದಲನ್ನು ಮೇಲ್ಮುಖವಾಗಿ ಬಾಚುತ್ತಾ ಬನ್ನಿ. ನಂತರ ಕೂದಲಿಗೆ ಬೊಬಿ ಪಿನ್ ಅಥವಾ ಪೋನಿ ಟೇಲ್ ಹೋಲ್ಡರ್ ಅನ್ನು ಹಾಕಿ.

2.ನೀವೂ ಪಾಮ್ ರೋಲರ್ ಅನ್ನು ಖರೀದಿಸಿ ಅದರಿಂದ ಕೂದಲನ್ನು ಟೈಟಾಗಿ ಮೇಲ್ಮುಖವಾಗಿ ಸುತ್ತುತ್ತಾ ಬನ್ನಿ. ದೊಡ್ಡ ರೋಲರ್ ಅನ್ನು ಕೂದಲಿನ ಕೆಳಭಾಗಕ್ಕೆ ಹಾಕಿ ಸಣ್ಣ ರೋಲರ್ ನ್ನು ಕೂದಲಿನ ಮೇಲ್ಭಾಗಕ್ಕೆ ಹಾಕಿ. ನಂತರ ಹೇರ್ ಡ್ರೈಯರ್ ಅನ್ನು ಬಳಸಿ ಕೂದಲನ್ನು ಒಣಗಿಸಿ. ನಂತರ ಜೋಪಾನವಾಗಿ ರೋಲರ್ ಅನ್ನು ಬಿಚ್ಚಿ. ನಂತರ ಹೇರ್ ಪಿನ್ ಅಥವಾ ಕ್ಲಿಪ್ ಬಳಸಿ. ಈ ರೀತಿ ಮಾಡುವುದರಿಂದ ಕೂದಲು ಅಲೆ ಅಲೆಯಾಗಿ ಸುಂದರವಾಗಿ ನಿಲ್ಲುವುದು.

3. ಗಿಡ್ಡ ಕೂದಲಿನವರು ಕೂದಲನ್ನು ಬಾಚುವಾಗ ಡ್ರೈಯರ್ ಅಥವಾ ಚಿಕ್ಕ ರೋಲರ್ ನ್ನು ಉಪಯೋಗಿಸಬಹುದು. ಅದಲ್ಲದಿದ್ದರೆ ಪೇಪರ್ ಸ್ಟ್ರೈಪ್ ನ್ನು ಬಳಸಿ ಒಂದು ಗಂಟೆಯ ನಂತರ ನಿಧಾನವಾಗಿ ಬಿಚ್ಚಿದರೆ ಕೂದಲು ಗುಂಗುರಾಗಿ ಅಂದವಾಗಿ ಕಾಣುತ್ತದೆ.

English summary

Curl Your Hair at Home Only | Curl Hair Style For A Party | ಕೂದಲುನ್ನು ಗುಂಗುರಾಗಿ ಮನೆಯಲ್ಲೇ ಮಾಡುವ ವಿಧಾನ | ವಿಶೇಷ ಸಮಾರಂಭದಲ್ಲಿ ಗುಂಗುರು ಕೇಶವಿನ್ಯಾಸ

Even though straight hair is better to manage but the curl hair will give a special look in certain special occasion. If you want to curl your hair no need to go to parlor you can make it at home only. clean your hair with shampoo after that blow dry your hair by combing the ends outwards.Or else by using bobby pins, ponytail holder, paper stripes you can curl your hair. The wavy hair will give a special look try it.
Story first published: Tuesday, September 27, 2011, 12:17 [IST]
X
Desktop Bottom Promotion